Friday, 22nd September 2017  

Vijayavani

1. ಸಮಾವೇಶಕ್ಕೆ ಲಕ್ಷ ಮಂದಿ ಸೇರಿಸೋ ಟಾರ್ಗೆಟ್​- ಬರದಿದ್ರೆ ಅಕ್ಕಿ ಕಟ್​​, ಬ್ಯಾಂಕ್​ ಸಬ್ಸಿಡಿಗೆ ಬ್ರೇಕ್​- ಫಲಾನುಭವಿಗಳಿಗೆ ಕೈ ಕಾರ್ಯಕರ್ತರ ಬೆದರಿಕೆ 2. ಕೊಟ್ಟ ಮಾತು ಮರೆತ ಸಿಎಂ ಸಿದ್ದರಾಮಯ್ಯ- 8 ತಿಂಗಳಾದ್ರೂ ಕುಟುಂಬಸ್ಥರಿಗೆ ಸಿಗದ ಪರಿಹಾರ- ಇದೇನಾ ನುಡಿದಂತೆ ನಡೆಯುವ ಸರ್ಕಾರ..? 3. ಎಸ್​​.ಎಂ.ಕೃಷ್ಣ ಅಳಿಯನ ಮನೆ ಕಚೇರಿ ತಲಾಷ್​​- ಎರಡನೇ ದಿನವೂ ಮುಂದುವರಿದ ಪರಿಶೀಲನೆ- ಹುಡುಕಿದಷ್ಟು ಪತ್ತೆಯಾಗ್ತಿದೆ ದಾಖಲೆ ಪತ್ರ 4. ಗದಗದಲ್ಲಿ ಹನಿ ನೀರಿಗಾಗಿ ಹೋರಾಟ- 6 ಸಾವಿರ ಜನಕ್ಕೆ ಟ್ಯಾಂಕರ್​ ನೀರೇ ಆಧಾರ- ಜನರ ಸಮಸ್ಯೆಗೆ ಸ್ಪಂದಿಸಬೇಕಿದೆ ಸರ್ಕಾರ 5. ಮೈಸೂರು ದಸರಾಗೆ ಜನವೋ ಜನ- ಅತ್ತೆ, ಸೊಸೆ ಜೊತೆ ಜೊತೆ ಮಾಡಿದ್ರು ನಳಪಾಕ- ಕೆಲವೇ ಕ್ಷಣಗಳಲ್ಲಿ ಯುವ ದಸರಾಗೆ ಚಾಲನೆ
Breaking News :

ಟೈಗರ್ಸ್ ಓಟಕ್ಕೆ ಬುಲ್ಸ್ ಬ್ರೇಕ್

Monday, 11.09.2017, 3:04 AM       No Comments

ಅವಿನಾಶ್ ಜೈನಹಳ್ಳಿ

ಮೈಸೂರು: ಅಭಿಷೇಕ್ ಸಕುಜ (21ಕ್ಕೆ 4) ಮಾರಕ ದಾಳಿಯ ನಡುವೆಯೂ ಮೊಹಮದ್ ತಾಹ (83 ರನ್, 45 ಎಸೆತ, 4 ಬೌಂಡರಿ, 9 ಸಿಕ್ಸರ್) ಭರ್ಜರಿ ಅರ್ಧಶತಕದ ನೆರವಿನಿಂದ 6ನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಟಿ20 ಟೂರ್ನಿಯಲ್ಲಿ ಮಾಜಿ ಚಾಂಪಿಯನ್ ಬಿಜಾಪುರ ಬುಲ್ಸ್ ತಂಡ ಸತತ 2 ನೇ ಜಯ ಪಡೆಯಿತು. ಇಲ್ಲಿನ ಮಾನಸ ಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ಭಾನುವಾರ ನಡೆದ ಮೊದಲ ಪಂದ್ಯದಲ್ಲಿ ವಿನಯ್ಕುಮಾರ್ ಸಾರಥ್ಯದ ಹುಬ್ಬಳ್ಳಿ ಟೈಗರ್ಸ್ ವಿರುದ್ಧ 4 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿತು. ಇದರೊಂದಿಗೆ ಹ್ಯಾಟ್ರಿಕ್ ಗೆಲುವು ದಾಖಲಿಸಿದ್ದ ಹಾಲಿ ರನ್ನರ್​ಅಪ್ ಹುಬ್ಬಳ್ಳಿ ಲೀಗ್​ನಲ್ಲಿ ಮೊದಲ ಸೋಲು ಕಂಡಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಹುಬ್ಬಳ್ಳಿ ಟೈಗರ್ಸ್ ತಂಡ 8 ವಿಕೆಟ್​ಗೆ 159 ರನ್ ಪೇರಿಸಿತು. ಪ್ರತಿಯಾಗಿ ಬಿಜಾಪುರ ಬುಲ್ಸ್ 18.4 ಓವರ್​ಗಳಲ್ಲಿ 162 ರನ್​ಗಳಿಸಿ ಗೆಲುವು ಪಡೆಯಿತು.

ಹುಬ್ಬಳ್ಳಿ ಟೈಗರ್ಸ್ : 8 ವಿಕೆಟ್​ಗೆ 159 (ಮಯಾಂಕ್ 33, ಸಿದ್ಧಾರ್ಥ್ 34, ವಿನಯ್ಕುಮಾರ್ 13, ಪ್ರವೀಣ್ ದುಬೆ 16, ಕ್ರಾಂತಿ ಕುಮಾರ್ 27, ಮಿಥುನ್ 39 ಕ್ಕೆ 1, ರೋನಿತ್ ಮೋರೆ 27 ಕ್ಕೆ 2, ಎಂ.ಜಿ. ನವೀನ್ 13ಕ್ಕೆ 2) ಬಿಜಾಪುರ ಬುಲ್ಸ್: 6 ವಿಕೆಟ್​ಗೆ 162 (ತಾಹ 83, ಎಂ.ನಿಧೇಶ್ 29, ಸಕುಜ 21ಕ್ಕೆ 4, ನಜೀರ್ 21 ಕ್ಕೆ 2).

 ಇಂದಿನ ಪಂದ್ಯ

ಬೆಂಗಳೂರು ಬ್ಲಾಸ್ಟರ್ಸ್-ನಮ್ಮ ಶಿವಮೊಗ್ಗ

ಎಲ್ಲಿ: ಒಡೆಯರ್ ಮೈದಾನ, ಮೈಸೂರು

ಆರಂಭ: ಸಂ. 7 ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 1

ತಾಹ ಸ್ಪೋಟಕ ಬ್ಯಾಟಿಂಗ್

ಸ್ಪಿನ್ನರ್ ಅಭಿಷೇಕ್ ಸಕುಜ ಮಾರಕ ದಾಳಿಯಿಂದಾಗಿ ಸೋಲಿನತ್ತ ಮುಖಮಾಡಿದ್ದ ಬುಲ್ಸ್​ಗೆ ತಾಹ ಆಸರೆಯಾದರು. ಒಂದೆಡೆ ವಿಕೆಟ್ ಬೀಳುತ್ತಿದ್ದರೂ, ಮತ್ತೊಂದೆಡೆ ಬಿರುಸಿನ ಆಟ ಪ್ರದರ್ಶಿಸಿದ ಆರಂಭಿಕ ತಾಹ 5ನೇ ವಿಕೆಟ್​ಗೆ ಎಂ. ನಿಧೇಶ್(29) ಜತೆಗೂಡಿ 78 ರನ್ ಪೇರಿಸಿ ಬುಲ್ಸ್ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದರು. 4 ಬೌಂಡರಿ, 9 ಸಿಕ್ಸರ್ ಸಿಡಿಸುವ ಮೂಲಕ ಕ್ರೀಡಾಭಿಮಾನಿಗಳ ಗಮನಸೆಳೆದರು.

ವಾರಿಯರ್ಸ್​ಗೆ ರಾಜು ಆಸರೆ

ನಾಯಕ ಸುನೀಲ್ ರಾಜು (78*ರನ್, 51 ಎಸೆತ, 1 ಬೌಂಡರಿ, 5 ಸಿಕ್ಸರ್) ಏಕಾಂಗಿ ಹೋರಾಟದ ನೆರವಿನಿಂದ ಆತಿಥೇಯ ಮೈಸೂರು ವಾರಿಯರ್ಸ್ ತಂಡ ಹಾಲಿ ಚಾಂಪಿಯನ್ ಬಳ್ಳಾರಿ ಟಸ್ಕರ್ಸ್ ತಂಡಕ್ಕೆ ಸ್ಪರ್ಧಾತ್ಮಕ ಮೊತ್ತದ ಸವಾಲು ನೀಡಿದೆ. ದಿನದ ಎರಡನೇ ಪಂದ್ಯದಲ್ಲಿ ಟಾಸ್ ಜಯಿಸಿದ ಬ್ಯಾಟಿಂಗ್ ಮಾಡಿದ ಮೈಸೂರು ತಂಡ 6 ವಿಕೆಟ್​ಗೆ 161 ರನ್ ಕಲೆಹಾಕಿತು. ವಾರಿಯರ್ಸ್ ಪರ ಅರ್ಜುನ್ ಹೊಯ್ಸಳ (23) ಹಾಗೂ ಕೆಸಿ ಅವಿನಾಶ್ (15) ಉತ್ತಮ ಆರಂಭ ನೀಡಿದರು. ನಾಯಕ ಅಮಿತ್ ವರ್ಮ (41ಕ್ಕೆ 2) ಹಾಗೂ ಜಹೂರ್ ಫಾರೂಕಿ (30ಕ್ಕೆ 2) ವಾರಿಯರ್ಸ್​ಗೆ ಕಡಿವಾಣ ಹಾಕಿದರು. ಮೈಸೂರು ವಾರಿಯರ್ಸ್: 6 ವಿಕೆಟ್​ಗೆ 161 (ಅರ್ಜುನ್ ಹೊಯ್ಸಳ 23, ಸುನೀಲ್ ರಾಜು 78*, ಶ್ರೀಜಿತ್ 16, ಜಹೂರ್ ಫಾರೂಕಿ 30ಕ್ಕೆ 2, ಅಮಿತ್ ವರ್ಮ 41ಕ್ಕೆ 2).

ಮೊಹಮದ್ ತಾಹ ಸಿಡಿಸಿದ 9 ಸಿಕ್ಸರ್ ಕೆಪಿಎಲ್ ಇನಿಂಗ್ಸ್​ವೊಂದರಲ್ಲಿ ಸರ್ವಾಧಿಕವೆನಿಸಿದೆ. 2015ರಲ್ಲಿ ಮಯಾಂಕ್ ಅಗರ್ವಾಲ್ ಬೆಳಗಾವಿ ಪ್ಯಾಂಥರ್ಸ್ ಪರ 7 ಸಿಕ್ಸರ್ ಸಿಡಿಸಿದ್ದು ಹಿಂದಿನ ಕೆಪಿಎಲ್ ದಾಖಲೆ.

Leave a Reply

Your email address will not be published. Required fields are marked *

Back To Top