Thursday, 19th April 2018  

Vijayavani

ಬಿಜೆಪಿ ಕಚೇರಿಯಲ್ಲಿ ಅಮಿತ್‌ ಷಾ ಮೀಟಿಂಗ್ - ಸೋಶಿಯಲ್‌ ಮೀಡಿಯಾ ಬಗ್ಗೆ ಫುಲ್‌ ಮಾರ್ಕ್ಸ್‌ - ಎಚ್ಚರಿಕೆ ಹೆಜ್ಜೆ ಇಡಲು ಸಲಹೆ        ಒಂಟಿಸಲಗದ ಮನೆಗೆ ಬಂತು ಬಿ ಫಾರಂ ​​ - ಅಂಬಿ ಷರುತ್ತುಗಳಿಗೆ ಒಪ್ಪಿದ ಪರಂ - ಪಕ್ಷದ ನಡೆ ಬಗ್ಗೆ ರೆಬೆಲ್‌ಸ್ಟಾರ್‌ ಗರಂ        ಕೈ ಟಿಕೆಟ್​ ತಪ್ಪಿದ್ದಕ್ಕೆ ಶಶಿಕುಮಾರ್ ಅಸಮಾಧಾನ​ - ದೇವೆಗೌಡರ ಭೇಟಿಯಾದ ಕೊಲ್ಲೂರ ಕಾಳ - ಪದ್ಮನಾಭ ನಗರದ ನಿವಾಸದಲ್ಲಿ ಜೆಡಿಸ್​ ಸೇರ್ಪಡೆ        ಟಿಕೆಟ್​ಗಾಗಿ ಹೆಚ್ಚಿದ ಕಣ್ಣೀರಧಾರೆ - ಮಾಯಕೊಂಡದಲ್ಲಿ ಕಣ್ಣೀರಿಟ್ಟ ಮಾಜಿ ಶಾಸಕ - ತರೀಕೆರೆಯಲ್ಲಿ ಶಿವಶಂಕರಪ್ಪ ಭಾವುಕ        ಭವಾನಿ ಸೋಲಿಸಿ ಎಂದಿದ್ದು ನನ್ನನ್ನಲ್ಲ - ಕೈ ಅಭ್ಯರ್ಥಿ ವಿರುದ್ಧ ಮಾತನಾಡಿದ್ದಾರೆ - ಭವಾನಿ ವಿಡಿಯೋ ಬಗ್ಗೆ ಸಾ.ರಾ ಮಹೇಶ್‌ ಸ್ಪಷ್ಟನೆ        ರಾಜ್ಯ ಸರ್ಕಾರಿ ನೌಕರರಿಗೆ ಸಿಹಿಸುದ್ದಿ - 6ನೇ ವೇತನ ಆಯೋಗದ ಶಿಫಾರಸು ಜಾರಿಗೆ ಗ್ರೀನ್​ಸಿಗ್ನಲ್ - ಚುನಾವಣಾ ಆಯೋಗದಿಂದ ಒಪ್ಪಿಗೆ       
Breaking News

ಟೀಸರ್​ನಲ್ಲಿ ಮಹಾನಟಿ ಮಿಂಚಿಂಗ್

Monday, 16.04.2018, 3:05 AM       No Comments

ಪ್ಪು-ಬಿಳುಪಿನ ಕಾಲದ ಟಾಪ್ ಹೀರೋಯಿನ್ ಸಾವಿತ್ರಿ ಅವರ ಕುರಿತು ಸಿದ್ಧವಾಗುತ್ತಿರುವ ‘ಮಹಾನಟಿ’ ಚಿತ್ರದಲ್ಲಿ ಕೀರ್ತಿ ಸುರೇಶ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರು ಸಾವಿತ್ರಿಯ ಪಾತ್ರವನ್ನು ಹೇಗೆ ನಿಭಾಯಿಸಲಿದ್ದಾರೆ ಎಂಬ ಕುತೂಹಲ ಪ್ರೇಕ್ಷಕರಲ್ಲಿತ್ತು. ಟೀಸರ್ ಮೂಲಕ ಆ ಕುತೂಹಲವನ್ನು ನೀಗಿಸಿದೆ ಚಿತ್ರತಂಡ.

‘ಒಂದು ಕಾಲದಲ್ಲಿ ಮಹಾನಟಿಯಾಗಿದ್ದರು’ ಎಂಬ ಹಿನ್ನೆಲೆ ಧ್ವನಿಯೊಂದಿಗೆ ಆರಂಭವಾಗುವ ಟೀಸರ್​ನಲ್ಲಿ ಸಾವಿತ್ರಿ ಅವತಾರ ತಾಳಿದ್ದಾರೆ ಕೀರ್ತಿ ಸುರೇಶ್. ಟೀಸರ್​ನಲ್ಲಿ ಕಪ್ಪು-ಬಿಳುಪು ದೃಶ್ಯಗಳನ್ನು ತೋರಿಸಲಾಗಿದೆ. ಸಾವಿತ್ರಿ ಪತಿ ಜೆಮಿನಿ ಗಣೇಶ್ ಪಾತ್ರದಲ್ಲಿ ದುಲ್ಖರ್ ಸಲ್ಮಾನ್ ಮಿಂಚಿದ್ದಾರೆ. ಸಮಂತಾ ಅಕ್ಕಿನೇನಿ ಮತ್ತು ವಿಜಯ್ ದೇವರಕೊಂಡ ಪತ್ರಕರ್ತರಾಗಿ ಕಾಣಿಸಿಕೊಂಡಿದ್ದಾರೆ.

ಟೀಸರ್​ನಲ್ಲಿ ಕೀರ್ತಿ ಸುರೇಶ್ ಅವತಾರ ನಡ ೋಡಿ ಪ್ರೇಕ್ಷಕರು ಫಿದಾ ಆಗಿದ್ದಾರೆ. ಟೀಸರ್ ಬಿಡುಗಡೆಯಾಗಿ ಒಂದು ದಿನಕ್ಕೆ ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ. ಚಿತ್ರದ ಮೇಲಿನ ನಿರೀಕ್ಷೆಗೆ ಟೀಸರ್ ಸಾಕಷ್ಟು ಮೈಲೇಜ್ ನೀಡುವ ಲಕ್ಷಣಗಳು ಗೋಚರವಾಗಿವೆ. ಮೇ 9ರಂದು ಚಿತ್ರ ತೆರೆಕಾಣಲಿದೆ ಎಂಬ ವಿಚಾರವನ್ನೂ ಉಲ್ಲೇಖಿಸಲಾಗಿದೆ. ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿದ ಖ್ಯಾತಿ ಸಾವಿತ್ರಿ ಅವರಿಗಿದೆ. ಸುಮಾರು 3 ದಶಕಗಳ ಕಾಲ ಅವರು ಸಿನಿಮಾ ಇಂಡಸ್ಟ್ರಿಯನ್ನು ಆಳಿದ್ದರು. ನಿರ್ದೇಶಕ ನಾಗ್ ಅಶ್ವಿನ್ ಈ ಬಯೋಪಿಕ್ ಮಾಡುತ್ತಿದ್ದಾರೆ. ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಸಿದ್ಧವಾಗುತ್ತಿರುವ ಈ ಚಿತ್ರಕ್ಕೆ ಅಶ್ವಿನಿ ದತ್ ಹಣ ಹೂಡುತ್ತಿದ್ದಾರೆ. -ಏಜೆನ್ಸೀಸ್

Leave a Reply

Your email address will not be published. Required fields are marked *

Back To Top