Friday, 20th July 2018  

Vijayavani

ಶೀರೂರು ಶ್ರೀಗಳ ಸಾವು ಕೊಲೆಯಲ್ಲ - ಅವರಿಗೆ ಮೊದಲಿಂದಲೂ ಅನಾರೋಗ್ಯ ಇತ್ತು - ಉಡುಪಿಯಲ್ಲಿ ಪೇಜಾವರ ಶ್ರೀ ಸ್ಪಷ್ಟನೆ        ರಾಹುಲ್‌ ಅಪ್ಪುಗೆಗೆ ಬಿಜೆಪಿ ಸಿಡಿಮಿಡಿ - ಸದನದಲ್ಲಿನ ವರ್ತನೆ ಬಗ್ಗೆ ಕೋಪ - ರಾಹುಲ್‌ಗೆ ಸ್ಪೀಕರ್‌ ನೀತಿಪಾಠ        ಭಾಷಣಕ್ಕಿಂತ ರಾಹುಲ್‌ ಕಣ್ಣೇಟು ಫೇಮಸ್‌ - ಪ್ರಿಯಾ ವಾರಿಯರ್‌ ವಿಡಿಯೋಗೆ ಲಿಂಕ್‌ - ಸಾಮಾಜಿಕ ಜಾಲತಾಣಗಳಲ್ಲಿ ಫುಲ್‌ವೈರಲ್‌        ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿದ ಸಿಎಂ - ಕಾವೇರಿಗೆ ಮುಖ್ಯಮಂತ್ರಿ ದಂಪತಿಯಿಂದ ಪೂಜೆ - ಸಚಿವ ಡಿಕೆಶಿ, ಮಹೇಶ್‌ ಸಾಥ್‌        ಸಿಬ್ಬಂದಿ ಒತ್ತಾಯದಿಂದ ಅಲ್ಲಿಗೆ ಹೋಗಿದ್ದೆ - ಮೊಗಸಾಲೆಯಲ್ಲಿ ಬರ್ತಡೇ ಪಾರ್ಟಿ ತಪ್ಪು - ಕ್ಷಮೆ ಕೋರಿದ ವಿಧಾನಸಭೆ ಕಾರ್ಯದರ್ಶಿ        ನಿನ್ನೆ ಬೌಬೌ ಬಿರಿಯಾನಿ - ಇಂದು ಮಿಯಾಂವ್‌ ಮಿಯಾಂವ್‌ ಮಸಾಲ - ಬೆಂಗಳೂರಿನ ವಿಜಯನಗರದಲ್ಲಿ ಬೆಕ್ಕು ನಾಯಿ ಭಕ್ಷ       
Breaking News

ಟೀಮ್ ಇಂಡಿಯಾಗೆ ಸ್ವಂತ ವಿಮಾನ!

Monday, 11.09.2017, 3:02 AM       No Comments

ನವದೆಹಲಿ: ಈಗಿನ ದಿನಗಳಲ್ಲಿ ಟೀಮ್ ಇಂಡಿಯಾ ಸತತವಾಗಿ ಸರಣಿಗಳನ್ನು ಆಡುತ್ತವೆ. ಇದರಿಂದ ಆಟಗಾರರನ್ನು ಸಾಕಷ್ಟು ಪ್ರಯಾಣದ ಬಳಲಿಕೆ ಕಾಡುತ್ತಿರುತ್ತದೆ. ಇದನ್ನು ತಪ್ಪಿಸಲು ಮಾಜಿ ಕಪಿಲ್ ದೇವ್ ಅವರೊಂದು ಹೊಸ ಉಪಾಯ ಕಂಡುಕೊಂಡಿದ್ದಾರೆ. ಅದುವೇ, ಟೀಮ್ ಇಂಡಿಯಾಗೆ ಸ್ವಂತ ವಿಮಾನ ಖರೀದಿಸುವುದು!

ಶ್ರೀಮಂತ ಕ್ರಿಕೆಟ್ ಸಂಸ್ಥೆ ಬಿಸಿಸಿಐಗೆ ಇದು ಕಷ್ಟದ ಕೆಲಸವೂ ಅಲ್ಲ ಎಂಬುದು ಅವರ ವಾದ. ‘ಬಿಸಿಸಿಐ ಬಳಿ ಈಗ ಸಾಕಷ್ಟು ಹಣವಿದೆ. ಅದು ತನ್ನದೇ ವಿಮಾನ ಹೊಂದಬಹುದಾಗಿದೆ. ಇದರಿಂದ ಆಟಗಾರರಿಗೆ ಸಾಕಷ್ಟು ಸಮಯ ಉಳಿಸಿಕೊಟ್ಟಂತಾಗುತ್ತದೆ. ವಿಮಾನ ಖರೀದಿಸುವ ಶಕ್ತಿಯೂ ಬಿಸಿಸಿಐಗೆ ಇದೆ. 5 ವರ್ಷ ಹಿಂದೆಯೇ ಇದನ್ನು ಮಾಡಬಹುದಿತ್ತು. ವಿಮಾನದ ರ್ಪಾಂಗ್ ಮತ್ತು ನಿರ್ವಹಣಾ ವೆಚ್ಚವನ್ನು ಭರಿಸುವ ಸಾಮರ್ಥ್ಯವೂ ಬಿಸಿಸಿಐಗೆ ಇದೆ’ ಎಂದು 1983ರ ವಿಶ್ವಕಪ್ ವಿಜೇತ ನಾಯಕ ಕಪಿಲ್ ಹೇಳಿದ್ದಾರೆ. ಪಾಶ್ಚಾತ್ಯ ಕ್ರೀಡಾಕ್ಷೇತ್ರದಲ್ಲಿರುವ ಸ್ವಂತ ವಿಮಾನ ಖರೀದಿಯ ಸಂಸ್ಕೃತಿಯಿಂದ ತಂಡದ ಪ್ರಯಾಣ ವೇಳಾಪಟ್ಟಿ ಸರಳವಾಗುತ್ತದೆ ಮತ್ತು ಲಾಜಿಸ್ಟಿಕ್ಸ್ ನಿರ್ವಹಣೆಯೂ ಸುಲಭವಾಗುತ್ತದೆ. ಆಟಗಾರರಿಗೆ ಪಂದ್ಯದ ನಡುವೆ ಹೆಚ್ಚಿನ ವಿಶ್ರಾಂತಿ ಸಿಗುತ್ತದೆಎಂಬುದು ಕಪಿಲ್ ವಾದವಾಗಿದೆ.

ವಿಮಾನಕ್ಕೆ -ಠಿ;500 ಕೋಟಿ: ನೂರು ಜನರನ್ನು ಹೊತ್ತೊ ಯ್ಯುವ ಸಾಮರ್ಥ್ಯವಿರುವ ಏರ್​ಬಸ್ ಎ318 ವಿಮಾನದ ಬೆಲೆ ಸುಮಾರು 500 ಕೋಟಿ ರೂ. ಇರುತ್ತದೆ. ಕಪಿಲ್ 3 ವರ್ಷಗಳ ಹಿಂದೆಯೇ ಈ ಯೋಜನೆಯ ಬಗ್ಗೆ ಬಿಸಿಸಿಐ ಅಧಿಕಾರಿಗಳಿಗೆ ತಿಳಿಸಿದ್ದರು. ಜತೆಗೆ ಆಯ್ದ ನಗರಗಳಲ್ಲಿ ಕ್ರಿಕೆಟ್ ತಂಡದ ವಾಸ್ತವ್ಯಕ್ಕಾಗಿ ಗೆಸ್ಟ್ ಹೌಸ್ ನಿರ್ವಿುಸುವ ಮೂಲಕ ದುಬಾರಿ ಹೋಟೆಲ್ ಬಿಲ್ ತಪ್ಪಿಸುವ ಬಗ್ಗೆಯೂ ಬಿಸಿಸಿಐಗೆ ಸಲಹೆ ನೀಡಿದ್ದರೂ ಪ್ರಯೋಜನವಾಗಿಲ್ಲ. –ಏಜೆನ್ಸೀಸ್

ಕ್ರಿಕೆಟಿಗರಿಗೂ ಸ್ವಂತ ವಿಮಾನ?

ಅಮೆರಿಕದ ಅಗ್ರ ಗಾಲ್ಪ್ ಆಟಗಾರರು ಸ್ವಂತ ವಿಮಾನ ಹೊಂದಿರುವುದನ್ನು ಉಲ್ಲೇಖಿಸಿರುವ ಕಪಿಲ್, ಭಾರತದ ಕ್ರಿಕೆಟಿಗರೂ ಸ್ವಂತ ವಿಮಾನ ಖರೀದಿಸುವ ದಿನಗಳು ಬರುವುದನ್ನು ಎದುರು ನೋಡುತ್ತಿದ್ದೇನೆ ಎಂದಿದ್ದಾರೆ. ಕೋಟ್ಯಂತರ ರೂ. ಸಂಪಾದಿಸುತ್ತಿರುವ ಕ್ರಿಕೆಟಿಗರು ಸ್ವಂತ ವಿಮಾನ ಖರೀದಿಯಿಂದ ಸಾಕಷ್ಟು ಸಮಯ ಉಳಿಸಿಕೊಳ್ಳಬಹುದು ಎಂದಿದ್ದಾರೆ. ಬ್ರೆಜಿಲ್ ಫುಟ್​ಬಾಲ್ ತಾರೆ ನೇಮರ್, ಕ್ರಿಶ್ಚಿಯಾನೊ ರೊನಾಲ್ಡೊ, ಡೇವಿಡ್ ಬೆಕ್​ಹ್ಯಾಂ, ಬಾಕ್ಸರ್ ಫ್ಲಾಯ್್ಡ ಮೇವೆದರ್ ಖಾಸಗಿ ಜೆಟ್ ಹೊಂದಿರುವ ಪ್ರಮುಖ ಕ್ರೀಡಾತಾರೆಯರಾಗಿದ್ದಾರೆ.

Leave a Reply

Your email address will not be published. Required fields are marked *

Back To Top