Thursday, 19th July 2018  

Vijayavani

ಶಬರಿಮಲೆ ಪ್ರವೇಶಕ್ಕೆ ಮಹಿಳೆಯರಿಗೆ ಅನುಮತಿ - ಕೇರಳ ಸರ್ಕಾರದಿಂದ ಗ್ರೀನ್​ಸಿಗ್ನಲ್        ಕೇಂದ್ರದಿಂದ ನೆರವಿನ ಮಹಾಪೂರ - ಕೃಷಿ ಯೋಜನೆ, ಮೆಗಾ ಡೈರಿ ಆರಂಭಕ್ಕೆ 900 ಕೋಟಿ ನೆರವು        ಸ್ಮಶಾನ ಜಾಗದ ವಿಚಾರವಾಗಿ ಜಟಾಪಟಿ - ಎರಡು ಗುಂಪುಗಳ ಮಧ್ಯೆ ಮಾರಾಮಾರಿ - ಘರ್ಷಣೆಯಲ್ಲಿ 50 ಮಂದಿಗೆ ಗಾಯ        ಕೃಷ್ಣಾ ನದಿಯಲ್ಲಿ ಪ್ರವಾಹದ ನರ್ತನ - ಯಾದಗಿರಿಯ ನೀಲಕಂಠನದೊಡ್ಡಿ ಗ್ರಾಮಕ್ಕೆ ಜಲದಿಗ್ಬಂಧನ - ಗ್ರಾಮಸ್ಥರು ತಲ್ಲಣ        ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಜಿಟಿಡಿ - ಬಳ್ಳಾರಿಗೆ ಕಳಿಸೋದಾಗಿ ಅಧಿಕಾರಿಗಳಿಗೆ ವಾರ್ನಿಂಗ್- ಚಪ್ಪಾಳೆ ಹೊಡೆದ ಸ್ಟೂಡೆಂಟ್ಸ್        ಎಲ್ಲೆಡೆ ಕೇಳಿಬರ್ತಿದೆ ಧೋನಿ ನಿವೃತ್ತಿ ವಿಷಯ - ಲೀಡ್ಸ್​​ನಲ್ಲಿ ಅಂಪೈರ್ ಬಳಿ ಬಾಲ್ ಪಡೆದಿದ್ದೇಕೆ - ಕ್ರಿಕೆಟಿಗೆ ಗುಡ್​​ಬೈ ಹೇಳ್ತಾರಾ ಮಾಹಿ       
Breaking News

ಟಿಎಂ ಬ್ಯಾಂಕ್​ಗೆ 221 ಕೋಟಿ ರೂ. ಲಾಭ

Wednesday, 27.06.2018, 3:02 AM       No Comments

ಬೆಂಗಳೂರು: ತಮಿಳುನಾಡು ಮರ್ಕಂಟೈಲ್ ಬ್ಯಾಂಕ್ (ಟಿಎಂಬಿ) 2017-18ನೇ ಆರ್ಥಿಕ ವರ್ಷದಲ್ಲಿ 221.9 ಕೋಟಿ ರೂ.ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕ್ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕ ಕೆ.ವಿ. ರಾಮಮೂರ್ತಿ ತಿಳಿಸಿದ್ದಾರೆ.

ಬ್ಯಾಂಕ್ ಒಟ್ಟು ವಹಿವಾಟು ಶೇ.3.76 ಏರಿಕೆಯಾಗಿದ್ದು, 56,197 ಕೋಟಿ ರೂ. ವಹಿವಾಟು ನಡೆಸಿದೆ. ಠೇವಣಿ ಮೊತ್ತ 32,428 ಕೋಟಿ ರೂ.ಗಳಾಗಿದ್ದು, 23,768 ಕೋಟಿ ರೂ. ಸಾಲ ನೀಡಲಾಗಿದೆ. ಕಳೆದ ಸಾಲಿಗೆ ಹೋಲಿಸಿದರೆ ಬ್ಯಾಂಕ್​ನ ಆಪರೇಟಿಂಗ್ ಲಾಭ ಶೇ.14.89 ಹೆಚ್ಚಳವಾಗಿ 875.63 ಕೋಟಿ ರೂ.ನಿಂದ 1,005.99 ಕೋಟಿ ರೂ.ತಲುಪಿದೆ ಎಂದು ವಿವರಿಸಿದರು.

ಸಾಲದ ಪ್ರಮಾಣ ಹೆಚ್ಚಳ: 2016-17ರಲ್ಲಿ 12,960 ಕೋಟಿ ರೂ.ಸಾಲ ವಿತರಣೆಯಾಗಿತ್ತು. 2017-18ರಲ್ಲಿ 14,651 ಕೋಟಿ ರೂ. ಸಾಲ ನೀಡಲಾಗಿದೆ. ಇದರಲ್ಲಿ ಕೃಷಿ ಕ್ಷೇತ್ರಕ್ಕೇ 5,153 ಕೋಟಿ ರೂ. ಸಾಲ ನೀಡಲಾಗಿದೆ ಎಂದವರು ಮಾಹಿತಿ ನೀಡಿದರು.

ದೇಶಾದ್ಯಂತ 509 ಶಾಖೆ: ದೇಶಾದ್ಯಂತ ಟಿಎಂಬಿ 509 ಶಾಖೆ ಹೊಂದಿದೆ. 12 ಪ್ರಾದೇಶಿಕ ಕಚೇರಿಗಳಿದ್ದು, 40 ಲಕ್ಷ ಗ್ರಾಹಕರನ್ನು ಹೊಂದಿದೆ. 2017-18ರಲ್ಲಿ 68 ಹೊಸ ಎಟಿಎಂ ಸ್ಥಾಪಿಸಿದ್ದು, ಒಟ್ಟು 1,131 ಎಟಿಎಂ, 23 ಇ-ಲಾಬಿ ಕೇಂದ್ರಗಳನ್ನು ಹೊಂದಿದೆ.

ಬ್ಯಾಂಕ್ ಅಧ್ಯಕ್ಷ ಎಸ್.ಅಣ್ಣಾಮಲೈ ಮತ್ತು ನಿರ್ದೇಶಕ ಮಂಡಳಿ ಸದಸ್ಯರು ಹಾಜರಿದ್ದರು.

ತಂತ್ರಜ್ಞಾನದಲ್ಲಿ ಮುನ್ನಡೆ

ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಉತ್ತೇಜಿಸಲು ಚೆನ್ನೈ, ಕೊಯಂಬತ್ತೂರು ಮತ್ತು ತೂತುಕುಡಿಯಲ್ಲಿ ಹೊಸ ಎಂಎಸ್​ಎಂಇ ಘಟಕ ಸ್ಥಾಪಿಸಿದೆ. ಡಿಜಿಟಲ್ ವಿಲೇಜ್ ಯೋಜನೆಯಡಿ ಕೊಟ್ಟಂಪುಳ್ಳಿ ಮತ್ತು ಕನ್ನಿರಾಜಪುರಂ ಗ್ರಾಮ ಆಯ್ಕೆ ಮಾಡಿಕೊಂಡಿದೆ. ಟಿಎಂಬಿ ಮೈ ಡಿಲೈಟ್ ಡೆಬಿಟ್ ಕಾರ್ಡ್, ಎಂಎಸ್​ಎಂಇ ಪ್ರಿವಿಲೇಜ್ ಗೋಲ್ಡ್ ಕಾರ್ಡ್, ಇಂಟರ್​ನೆಟ್ ಬ್ಯಾಂಕಿಂಗ್​ನಲ್ಲಿ ಐಎಂಪಿಎಸ್ ಸೌಲಭ್ಯ, ಎಲ್ಲ ಶಾಖೆಗಳಲ್ಲಿ ತಕ್ಷಣದಲ್ಲೇ ಖಾತೆ ತೆರೆಯಲು ಇ-ಕೆವೈಸಿ ವ್ಯವಸ್ಥೆ, ಶಿಕ್ಷಣ ಸಂಸ್ಥೆಗಳಿಗೆ ಆನ್​ಲೈನ್​ನಲ್ಲೇ ಶುಲ್ಕ ಪಾವತಿ ವ್ಯವಸ್ಥೆ ಕಲ್ಪಿಸಿದೆ.

ಟಿಎಂಬಿ 2018-19ನೇ ಸಾಲಿನಲ್ಲಿ 71,500 ಕೋಟಿ ರೂ. ವಹಿವಾಟು ನಡೆಸುವ ಗುರಿ ಹೊಂದಿದೆ. ಠೇವಣಿ 40,800 ಕೋಟಿ ರೂ. ದಾಟುವ ನಿರೀಕ್ಷೆ ಇದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ 520 ಕೋಟಿ ರೂ. ನಿವ್ವಳ ಲಾಭಗಳಿಸುವ ಗುರಿ ಹೊಂದಿದೆ.

| ಕೆ.ವಿ.ರಾಮಮೂರ್ತಿ, ಮರ್ಕಂಟೈಲ್ ಬ್ಯಾಂಕ್ ಸಿಇಒ

Leave a Reply

Your email address will not be published. Required fields are marked *

Back To Top