Saturday, 20th October 2018  

Vijayavani

ಚೀಪ್ ಮೆಂಟಾಲಿಟಿ ನನಗಿಲ್ಲ - ಇದರ ಹಿಂದೆ ಕೈವಾಡ ಇರಬಹುದು - ನಟಿ ಶ್ರುತಿ ಹರಿಹರನ್ ಆರೋಪ ತಳ್ಳಿಹಾಕಿದ ಅರ್ಜುನ್ ಸರ್ಜಾ        ಸ್ಯಾಂಡಲ್​ವುಡ್​​ನಲ್ಲಿ ಮೀ ಟೂ - ನಾಳೆ ಸುದ್ದಿಗೋಷ್ಠಿಯಲ್ಲಿ ಶ್ರುತಿ ಹಾಕ್ತಾರಾ ಬಾಂಬ್ - ನಟಿ ವಿರುದ್ಧ ಗುಡುಗಿದ ಅರ್ಜುನ್ ಸರ್ಜಾ ಅತ್ತೆ        ಧರ್ಮ ವಿಚಾರದಲ್ಲಿ ಡಿಕೆಶಿ ಕ್ಷಮೆಯಾಚನೆಗೆ ಸಿದ್ದು ಸಿಟ್ಟು - ಒಂದೇ ವೇದಿಯಲ್ಲಿದ್ರೂ ಮುಖ ಮುಖ ನೋಡಲಿಲ್ಲ - ಜಂಟಿ ಸುದ್ದಿಗೋಷ್ಠಿಯಲ್ಲಿ ನಾಯಕರ ಮಹಾ ಮುನಿಸು        ಜೆಡಿಎಸ್‌, ಕಾಂಗ್ರೆಸ್‌ನ ಸುದ್ದಿಗೋಷ್ಠಿ - ಕಾಂಗ್ರೆಸ್‌, ಜೆಡಿಎಸ್‌ ಜಂಟಿ ಸಮರಕ್ಕೆ ಬಿಜೆಪಿ ವ್ಯಂಗ್ಯ- ಟ್ವೀಟ್‌ ಮೂಲಕ ಟಾಂಗ್‌        ಒಂದೇ ಮನಸ್ಸು ಎರಡು ದೇಹ ಅಂದ್ರು ಸಿಎಂ - ಈ ಜನ್ಮದಲ್ಲಿ ಗೌಡ್ರು-ಸಿದ್ದು ಒಂದಾಗಲ್ಲ ಅಂದ್ರು ಕಾರಜೋಳ - ದೋಸ್ತಿಗಳಿಗೆ ಬಿಜೆಪಿ ನಾಯಕರ ಟಕ್ಕರ್        ಗದಗಿನ ತೋಂಟದಾರ್ಯ ಶ್ರೀಗಳು ಲಿಂಗೈಕ್ಯ - ಹೃದಯಾಘಾತದಿಂದ ಗದಗ್‌ನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶ - ನಾಳೆ ಗದಗದಲ್ಲಿ ಅಂತ್ಯಕ್ರಿಯೆ       
Breaking News

ಜ.7ಕ್ಕೆ ವೀರಶೈವ ಮಹಾಸಭಾ ಸಭೆ

Friday, 29.12.2017, 3:01 AM       No Comments

ಬೆಂಗಳೂರು: ಪ್ರತ್ಯೇಕ ಧರ್ಮದ ವಿಚಾರದಲ್ಲಿ ಗೊಂದಲ ನಿರ್ಮಾಣ ವಾಗಿರುವ ಸಂದರ್ಭದಲ್ಲಿ ವೀರಶೈವ ಮಹಾಸಭಾ ಜ.7ರಂದು ಆರ್.ಟಿ.ನಗರದ ತರಳಬಾಳು ಕೇಂದ್ರ ಸಭಾಂಗಣದಲ್ಲಿ ಸರ್ವಸದಸ್ಯರ ಸಭೆ ಆಯೋಜಿಸಿದೆ.

ಅಧ್ಯಕ್ಷ ಶ್ಯಾಮನೂರು ಶಿವಶಂಕರಪ್ಪ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಲಿಂಗಾಯತ ಪ್ರತ್ಯೇಕ ಧರ್ಮದ ಸಂಬಂಧ ತಜ್ಞರ ಸಮಿತಿ ರಚನೆ, ಧರ್ಮ ರಚನೆ ಬಗ್ಗೆ ಸರ್ಕಾರದ ಅತ್ಯಾಸಕ್ತಿ ವಿಚಾರಗಳು ಸಭೆಯಲ್ಲಿ ಪ್ರಸ್ತಾಪವಾಗಲಿವೆ. ‘ಮಹಾಸಭೆಯಲ್ಲಿ ಯಾವೆಲ್ಲ ವಿಷಯ ರ್ಚಚಿಸಬೇಕೆಂಬ ಕುರಿತು ಅಜೆಂಡಾ ನಿರ್ಧಾರವಾಗಿದೆ’ ಎಂದು ಸಚಿವ ಹಾಗೂ ಮಹಾಸಭಾ ಮಹಾ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಸಂವಿಧಾನ ತಿದ್ದುಪಡಿ ಗುಟ್ಟೇನು? ಮಹಾಸಭೆಯ ಸಂವಿಧಾನ ತಿದ್ದುಪಡಿ ಕುರಿತು ಸಭೆಯಲ್ಲಿ ತೀರ್ವನವಾಗಲಿರುವುದು ವಿಶೇಷ. ಸದ್ಯದ ಮಾಹಿತಿ ಪ್ರಕಾರ ಮಹಾಸಭೆ ಚುನಾವಣೆ ಪದ್ಧತಿ ಸರಳೀಕರಣ ಮಾಡುವುದು, ಮಾಜಿ ಅಧ್ಯಕ್ಷರನ್ನು ಗೌರವ ಅಧ್ಯಕ್ಷರೆಂದು ಪರಿಗಣಿಸುವುದರ ಬಗ್ಗೆ ಪ್ರಸ್ತಾಪವಾಗಲಿದೆ. ಅಧ್ಯಕ್ಷರನ್ನು ನೇರವಾಗಿ ಮತದಾರರೇ ಆಯ್ಕೆ ಮಾಡುವ ಬಗ್ಗೆಯೂ ಪ್ರಸ್ತಾಪವೊಂದು ಮಂಡನೆಯಾಗಲಿದೆ. ಕಾಲಕ್ಕನುಗುಣವಾಗಿ ಮಹಾಸಭೆ ಸಂವಿಧಾನದಲ್ಲಿ ಆಗಬೇಕಾಗಿರುವ ಬದಲಾವಣೆ ಬಗ್ಗೆ ಪ್ರಸ್ತಾಪ ಮಂಡನೆಯಾಗಲಿದ್ದು, ಈ ಪ್ರಸ್ತಾವನೆಗೂ ಪ್ರತ್ಯೇಕ ಧರ್ಮ ವಿವಾದಕ್ಕೂ ಸಂಬಂಧವಿದೆಯೇ ಎಂಬ ಚರ್ಚೆ ಸಹ ಆರಂಭವಾಗಲಿದೆ.

ನಾಳೆ ಹುಬ್ಬಳ್ಳಿಯಲ್ಲಿ ಸಂವಾದ

ಹುಬ್ಬಳ್ಳಿ: ಮೂರುಸಾವಿರ ಮಠದಲ್ಲಿ ಡಿ.30ರಂದು ಸಂಘಟಿಸಿರುವ ವೀರಶೈವ- ಲಿಂಗಾಯತ ಧರ್ಮ ಕುರಿತ ಸಂವಾದ ಕಾರ್ಯಕ್ರಮಕ್ಕೆ ಮತ್ತೊಂದು ಗುಂಪಿನ ಸದಸ್ಯರನ್ನು ಘೋಷಿಸಲಾಗಿದೆ. ಬೈಲೂರಿನ ನಿಷ್ಕಲ ಮಂಟಪದ ಶ್ರೀ ನಿಜಗುಣಾನಂದ ಸ್ವಾಮೀಜಿ, ಸಾಹಿತಿ ಡಾ.ರಂಜಾನ್ ದರ್ಗಾ, ಡಾ.ವೀರಣ್ಣ ರಾಜೂರ, ಡಾ. ಮಹದೇವಪ್ಪ, ವಿಶ್ವರಾಧ್ಯ ಸತ್ಯಂಪೇಟ ಪಾಲ್ಗೊಳ್ಳಲಿದ್ದಾರೆ. ಶ್ರೀ ದಿಂಗಾಲೇಶ್ವರ ಸ್ವಾಮಿಗಳು ವೀರಶೈವ ಧರ್ಮದ ಪ್ರತಿಪಾದನೆಗೆ ತಜ್ಞರ ಹೆಸರನ್ನು ಮಾಧ್ಯಮದ ಮೂಲಕ ತಿಳಿಸಬೇಕೆಂದು ಈ ತಂಡ ಕೋರಿದೆ.

Leave a Reply

Your email address will not be published. Required fields are marked *

Back To Top