Friday, 19th October 2018  

Vijayavani

ನಾಡಿನೆಲ್ಲೆಡೆ ವಿಜಯದಶಮಿ ಸಡಗರ-ಐತಿಹಾಸಿಕ ಜಂಬೂಸವಾರಿಗೆ ಕ್ಷಣಗಣನೆ-ಸಾಂಸ್ಕೃತಿಕ ನಗರಿಯತ್ತ ಜನಸ್ತೋಮ        ತೂಕ ಹೆಚ್ಚಿಸಿಕೊಂಡ ಅರ್ಜುನ & ಟೀಂ-ಅಂಬಾರಿ ಹೊರಲು ಕ್ಯಾಪ್ಟನ್ ಗ್ರೀನ್‌ ಸಿಗ್ನಲ್-ಮೈಸೂರು ನಗರಿಗೆ ಬಿಗಿ ಬಂದೋಬಸ್ತ್​​​        ಡಿಕೆಶಿ ತಪ್ಪೊಪ್ಪಿಗೆಗೆ ಕಾಂಗ್ರೆಸ್​​​​​​ನಲ್ಲಿ ಭಿನ್ನಮತ-ಕನಕಪುರ ನಾಯಕನ ವಿರುದ್ಧ ದಿಗ್ಗಜರ ಆಕ್ರೋಶ        ಶಬರಿಮಲೆ ಸುತ್ತ ನಿಲ್ಲದ ಪ್ರತಿಭಟನೆ-ಸುಪ್ರೀಂಗೆ ಅರ್ಜಿ ಸಲ್ಲಿಸಲು ಮತ್ತೊಮ್ಮೆ ಸಭೆ-ಅಯ್ಯಪ್ಪನ ಪೂಜೆಗೆ ಕರ್ನಾಟಕದ ಅರ್ಚಕ ನೇಮಕ        ಅಮೆರಿಕ ಅಧ್ಯಕ್ಷನಿಂದ ಮತ್ತೊಂದು ಶಾಕ್​-ಎಚ್​​1 ಬಿ ವೀಸಾ ನಿಯಮ ಮತ್ತಷ್ಟು ಬಿಗಿ ಮಾಡಲು ಸಿದ್ಧತೆ-ಅನಿವಾಸಿ ಭಾರತೀಯರಿಗೆ ಶಾಕ್​        ಕಲೆಕ್ಷನ್​​​​​​ನಲ್ಲಿ ಧೂಳೆಬ್ಬಿಸುತ್ತಿದ್ಧಾನೆ ವಿಲನ್​-ಮೊದಲ ದಿನವೇ ಇಪ್ಪತ್ತುವರೆ ಕೋಟಿ ಸಂಗ್ರಹ​-ಸ್ಯಾಂಡಲ್​​​ವುಡ್​​​​ ದಾಖಲೆಗಳೆಲ್ಲ ಪೀಸ್​ ​​       
Breaking News

ಜೆರುಸಲೆಂಗೆ ರಾಜಧಾನಿ ಪಟ್ಟ

Thursday, 07.12.2017, 3:00 AM       No Comments

ಜೆರುಸಲೆಂ ಅನ್ನು ಇಸ್ರೇಲ್​ನ ರಾಜಧಾನಿಯಾಗಿ ಅಮೆರಿಕ ಸದ್ಯದಲ್ಲಿಯೇ ಅಧಿಕೃತವಾಗಿ ಮಾನ್ಯ ಮಾಡಲಿದ್ದು, ಟೆಲ್ ಅವಿವ್​ನಲ್ಲಿರುವ ತನ್ನ ದೂತಾವಾಸವನ್ನು ಈ ‘ಪವಿತ್ರ ನಗರಿ’ಗೆ ವರ್ಗಾಯಿಸುವ ಕಾರ್ಯಕ್ಕೆ ಚಾಲನೆ ನೀಡಲಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಔಪಚಾರಿಕ ಹೇಳಿಕೆ ಬಿಡುಗಡೆ ಮಾಡುವುದು ಬಾಕಿ ಇದೆ. ಈ ಬೆಳವಣಿಗೆ ಅಂತಾರಾಷ್ಟ್ರೀಯ ವಲಯದಲ್ಲಿ ಭಾರಿ ಕುತೂಹಲ ಮತ್ತು ಸಂಚಲನ ಮೂಡಿಸಿದೆ.

ಅನೇಕ ದೇಶಗಳ ದೂತಾವಾಸಗಳಿರುವ ಟೆಲ್ ಅವಿನ್ ಬದಲು ಜೆರುಸಲೆಂನಲ್ಲೇ ಇಸ್ರೇಲ್​ನ ಸಂಸತ್ತು ಹಾಗೂ ಅದರ ಹಲವು ಸರ್ಕಾರಿ ಸಚಿವಾಲಯಗಳು ನೆಲೆಗೊಂಡಿದ್ದು, ಟ್ರಂಪ್ ಒಂದೊಮ್ಮೆ ಹಸಿರು ನಿಶಾನೆ ತೋರಿದ್ದೇ ಆದಲ್ಲಿ, ಜೆರುಸಲೆಂಗೆ ತನ್ನ ದೂತಾವಾಸವನ್ನು ವರ್ಗಾಯಿಸಿದ ಮೊದಲ ದೇಶವೆಂಬ ಹೆಗ್ಗಳಿಕೆ ಅಮೆರಿಕದ್ದಾಗಲಿದೆ.

ಜೆರುಸಲೆಂಗೆ ರಾಜಧಾನಿಯ ಮಾನ್ಯತೆ ನೀಡುವ ವಿಷಯವು ಟ್ರಂಪ್​ರ ಚುನಾವಣಾ ಪ್ರಚಾರದಲ್ಲಿನ ಒಂದು ಭರವಸೆಯಾಗಿತ್ತಾದರೂ, ಈ ಕುರಿತಾದ ಘೋಷಣೆಗೆ ಅವರು ಮುಂದೂಡಿಕೊಂಡೇ ಬಂದಿದ್ದರು. ಹಾಗೆ ನೋಡಿದರೆ ಇದು 1995ರಿಂದಲೂ ಅನುಸರಣೆಯಾಗುತ್ತಿರುವ ಪರಿಪಾಠವೆನ್ನಬೇಕು; ಜೆರುಸಲೆಂ ಕುರಿತಾಗಿ ಗಟ್ಟಿನಿಲುವು ತಳೆಯುವುದನ್ನು ಅಮೆರಿಕದ ಹಿಂದಿನ ಅಧ್ಯಕ್ಷರುಗಳೂ ಮತ್ತೆಮತ್ತೆ ಮುಂದೂಡಿಕೊಂಡೇ ಬಂದಿರುವುದು ಇದಕ್ಕೆ ಸಾಕ್ಷಿ. ಬಿಲ್ ಕ್ಲಿಂಟನ್ ಅಮೆರಿಕ ಅಧ್ಯಕ್ಷರಾಗಿದ್ದಾಗ, ರಾಷ್ಟ್ರೀಯ ಭದ್ರತೆಯ ಕಾರಣಗಳನ್ನು ಉಲ್ಲೇಖಿಸಿ ಸೇನೆಯ ಪ್ರಧಾನ ದಂಡನಾಯಕರು ಮುಂದೂಡಿಕೆಗೆ ಶಿಫಾರಸು ಮಾಡದ ಹೊರತು ಅಮೆರಿಕದ ರಾಯಭಾರಿ ಕಚೇರಿಯನ್ನು ಜೆರುಸಲೆಂಗೆ ವರ್ಗಾಯಿಸುವುದನ್ನು ಕಡ್ಡಾಯವಾಗಿಸುವ ಕಾನೂನೊಂದಕ್ಕೆ ಅಂಕಿತ ಹಾಕಿದ್ದರು.

ಕ್ರಿಶ್ಚಿಯನ್, ಮುಸ್ಲಿಂ ಮತ್ತು ಯೆಹೂದಿಗಳ ಪುಣ್ಯಕ್ಷೇತ್ರಗಳಿಗೆ ನೆಲೆಯಾಗಿರುವ ಜೆರುಸಲೆಂ, ಇಸ್ರೇಲ್-ಪ್ಯಾಲೆಸೆôನ್ ತಿಕ್ಕಾಟಗಳ ಕೇಂದ್ರಬಿಂದುವೂ ಹೌದು. ಆದರೆ ಜಾಗತಿಕ ಸಮುದಾಯ ಈ ಒಂದಿಡೀ ನಗರವನ್ನು ಇಸ್ರೇಲ್​ನ ಅಂಗಭಾಗ ಎಂದು ಅಧಿಕೃತವಾಗಿ ಮಾನ್ಯ ಮಾಡಿಲ್ಲದ ಕಾರಣ, ಅಮೆರಿಕ ಅಂಥದೊಂದು ಮಾನ್ಯತೆ ನೀಡಿದ ಮೊದಲ ದೇಶ ಎಂದಾಗುವುದಕ್ಕೆ ಟ್ರಂಪ್ ಕ್ರಮ ಅನುವುಮಾಡಿಕೊಡಲಿದೆ. ಅಮೆರಿಕವು ಇಸ್ರೇಲ್​ನ ರಾಜಧಾನಿಯಾಗಿ ಜೆರುಸಲೆಂಗೆ ಮಾನ್ಯತೆ ನೀಡುವುದರಿಂದಾಗಿ, ಅಮೆರಿಕಕ್ಕಿರುವ ‘ನಿಷ್ಪಕ್ಷಪಾತಿ ಸಂಧಾನಕಾರನ ಪಾತ್ರ’ದ ಮಹತ್ವವು ತಗ್ಗಲಿದೆ. ಕಾರಣ, ಜೆರುಸಲೆಂ ಸ್ಥಾನಮಾನದ ವಿಷಯವು ಇಸ್ರೇಲ್-ಪ್ಯಾಲೆಸೆôನ್ ನಡುವಿನ ಮಾತುಕತೆಗಳ ಮೂಲಕವೇ ಇತ್ಯರ್ಥವಾಗಬೇಕು ಎಂದು ಅಮೆರಿಕ ಇತ್ತೀಚಿನವರೆಗೂ ಸಮರ್ಥಿಸಿಕೊಂಡೇ ಬಂದಿತ್ತು.

ಸಂಘರ್ಷ ಏರ್ಪಡುವ ಸಾಧ್ಯತೆ

ಜೆರುಸಲೆಂ ಮೇಲೆ ಹತೋಟಿ ಹೊಂದುವಂತಾಗುವುದಕ್ಕೆ ಇಸ್ರೇಲ್​ಗೆ ಅನುವುಮಾಡಿಕೊಟ್ಟಲ್ಲಿ ಅದನ್ನು ಇಸ್ರೇಲ್ ಸ್ವಾಗತಿಸಲಿದೆಯಾದರೂ, ಮಧ್ಯಪ್ರಾಚ್ಯ ವಲಯದಲ್ಲಿ ತಲ್ಲಣ, ಹಿಂಸಾಚಾರಗಳಿಗೆ ಈ ಕ್ರಮ ಚಿತಾವಣೆ ನೀಡಬಹುದು ಎಂಬ ಗ್ರಹಿಕೆಯೂ ತೀವ್ರವಾಗಿದೆ. ಇದಕ್ಕೆ ಕಾರಣ ಬಹಳ ವರ್ಷಗಳಿಂದ ಅಲ್ಲಿ ಗುಪ್ತಗಾಮಿನಿಯಾಗಿರುವ ಹಿತಾಸಕ್ತಿಗಳ ಘರ್ಷಣೆ. ಒಂದಿಡೀ ಜೆರುಸಲೆಂ ತನ್ನ ರಾಜಧಾನಿಯಾಗಬೇಕು ಎಂದು ಇಸ್ರೇಲ್ ಹಕ್ಕು ಸಾಧಿಸುತ್ತಿದ್ದರೆ, 1967ರ ಮಧ್ಯಪ್ರಾಚ್ಯ ಯುದ್ಧದಲ್ಲಿ ಇಸ್ರೇಲ್ ವಶಪಡಿಸಿಕೊಂಡ ಜೆರುಸಲೆಂನ ಪೂರ್ವ ವಲಯವು, ಭವಿಷ್ಯದ ಸ್ವತಂತ್ರ ರಾಜ್ಯವೊಂದರ ರಾಜಧಾನಿಯಾಗಬೇಕೆಂಬುದು ಪ್ಯಾಲೆಸೆôನ್ ಜನಗಳ ಸಮರ್ಥನೆ. ಹೀಗೆ ದಶಕಗಳಷ್ಟು ಸುಧೀರ್ಘವಾಗಿರುವ ಇಸ್ರೇಲ್-ಪ್ಯಾಲೆಸೆôನ್ ತಿಕ್ಕಾಟಕ್ಕೆ ಎದುರಾಳಿಗಳ ಈ ಹಕ್ಕುದಾರಿಕೆಗಳು ಕೇಂದ್ರಬಿಂದುವಾಗಿಬಿಟ್ಟಿದೆ.

ಜೆರುಸಲೆಂ ನಗರದ ಮೇಲೆ ಇಸ್ರೇಲ್​ಗೆ ಹತೋಟಿಯಿದ್ದು, ಅದರ ಸರ್ಕಾರ ಎಲ್ಲೇ ನೆಲೆಗೊಂಡಿದೆಯಾದರೂ, ಆಕ್ರಮಣ ಮಾಡಿ ವಶಪಡಿಸಿಕೊಳ್ಳಲಾದ ಪೂರ್ವ ಜೆರುಸಲೆಂಗೆ ಅಂತಾರಾಷ್ಟ್ರೀಯ ಮಾನ್ಯತೆಯಿನ್ನೂ ದಕ್ಕಿಲ್ಲ. ಜೆರುಸಲೆಂನ ಅಂತಿಮ ಸ್ಥಾನಮಾನವು ಪರಸ್ಪರ ಸಂಧಾನದ ಮಾತುಕತೆಗಳ ಮೂಲಕವೇ ಇತ್ಯರ್ಥವಾಗಬೇಕೆಂದು ಅಂತಾರಾಷ್ಟ್ರೀಯ ಸಮುದಾಯ ಒತ್ತಿಹೇಳುತ್ತಿರುವುದು ಈ ಕಾರಣಕ್ಕೇ.

ಇಲ್ಲಿ ಮತ್ತೊಂದು ‘ಧರ್ಮಸೂಕ್ಷ್ಮ’ವನ್ನೂ ಗಮನಿಸಬೇಕು. ಯೆಹೂದಿ, ಕ್ರಿಶ್ಚಿಯನ್ ಮತ್ತು ಮುಸ್ಲಿಂರ ಮಹತ್ವದ ಪುಣ್ಯಕ್ಷೇತ್ರಗಳಿಗೆ ನೆಲೆಯಾಗಿರುವ ಜೆರುಸಲೆಂನ ’ಣ್ಝಛ ಇಜಿಠಿಢ’ ಎಂದೇ ಕರೆಯಲ್ಪಡುವ ತಾಣದ ಮೇಲೆ, ಅದರಲ್ಲೂ ನಿರ್ದಿಷ್ಟವಾಗಿ ಯೆಹೂದಿಗಳು ಮತ್ತು ಮುಸ್ಲಿಮರು ಪೂಜ್ಯಭಾವನೆಯಿಂದ ಕಾಣುವ ಬೆಟ್ಟದ ನೆತ್ತಿಯ ಮೇಲಿನ ಆವರಣದ ಮೇಲೆ ಎಲ್ಲ ತಿಕ್ಕಾಟಗಳೂ ಕೇಂದ್ರೀಕೃತವಾಗಿವೆ. ಯೆಹೂದಿಗಳು ‘ಟೆಂಪಲ್ ಮೌಂಟ್’ ಎಂದೇ ಕರೆಯುವ ಈ ಆವರಣವು, ಬೈಬಲ್ ಸಂಬಂಧಿತ ಯೆಹೂದಿ ದೇಗುಲಗಳಿಗೆ ಸಾವಿರಾರು ವರ್ಷಗಳ ಹಿಂದೆ ನೆಲೆಯಾಗಿದ್ದ ತಾಣವಾಗಿದೆ ಮತ್ತು ಯೆಹೂದಿ ಧರ್ಮದಲ್ಲಿ ಇದನ್ನು ಪರಮ ಪವಿತ್ರ ಸ್ಥಳವೆಂದು ಪರಿಗಣಿಸಲಾಗಿದೆ. ಇಂದು ಈ ತಾಣವು, ಇಸ್ಲಾಂ ಧರ್ವಿುಯರ ಪಾಲಿಗೆ ಮೂರನೇ ಅತಿಪವಿತ್ರ ಸ್ಥಳವಾಗಿರುವ ‘ಅಲ್ ಅಕ್ಸಾ ಮಸೀದಿ’ಗೆ ಹಾಗೂ ಬಂಡೆಯ ಮೇಲೆ ರೂಪುಗೊಂಡಿರುವ ಬಂಗಾರಲೇಪಿತ ಸ್ಮಾರಕಕ್ಕೆ ನೆಲೆಯಾಗಿದೆ.

ಟ್ರಂಪ್ ಇಂಥ ನಿರ್ಣಯಕ್ಕೆ ಮುಂದಾಗಿರುವುದೇಕೆ?

ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ, ಇಸ್ರೇಲ್ ಪರವಾದ ಬಲವಾದ ನಿಲುವು ತಳೆದ ಟ್ರಂಪ್, ಬಹುತೇಕ ದೇಶಗಳ ರಾಯಭಾರ ಕಚೇರಿಗಳಿರುವ ಟೆಲ್ ಅವಿವ್​ನಿಂದ ಅಮೆರಿಕ ರಾಯಭಾರ ಕಚೇರಿಯನ್ನು ಜೆರುಸಲೆಂಗೆ ಬದಲಿಸುವುದಾಗಿ ಆಶ್ವಾಸನೆಯಿತ್ತರು. ಆದರೆ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ, ಇಂಥ ಕ್ರಮದ ಕುರಿತು ಮಾತಾಡುವುದು ಸುಲಭ, ಆದರೆ ನೆರವೇರಿಸುವುದು ಕಷ್ಟ ಎಂಬುದು ಟ್ರಂಪ್​ಗೆ ಅರಿವಾಯಿತು. ಅಮೆರಿಕದ ಕಾನೂನಿನ ಅನುಸಾರ, ಅಧ್ಯಕ್ಷರೆನಿಸಿಕೊಂಡವರು ಪ್ರತಿ ಆರು ತಿಂಗಳಿಗೊಮ್ಮೆ ‘ಹಕ್ಕುವರ್ಜನ ಪತ್ರವೊಂದಕ್ಕೆ’ (ಗಚಜಿಡಛ್ಟಿ) ಸಹಿಹಾಕಬೇಕಾಗುತ್ತದೆ ಮತ್ತು ಇದರನುಸಾರ ಅಮೆರಿಕ ದೂತಾವಾಸವು ಟೆಲ್ ಅವಿವ್​ನಲ್ಲೇ ಉಳಿದುಕೊಳ್ಳುತ್ತದೆ. ತಮ್ಮ ಪೂರ್ವವರ್ತಿಗಳೇನಕರು ಮಾಡಿದಂತೆ ಪ್ರಸಕ್ತ ವರ್ಷದ ಜೂನ್​ನಲ್ಲಿ ಈ ವರ್ಜನಪತ್ರವನ್ನು ಟ್ರಂಪ್ ನವೀಕರಿಸಿದ್ದರು. ಆದರೆ ಅವರು ಅದನ್ನು ಮರುನವೀಕರಿಸದೆಯೇ ಮತ್ತೆ ಆರು ತಿಂಗಳ ಗಡುವು ಈ ವಾರದಲ್ಲಿ ಮುಗಿದಿದೆ.

ಅಮೆರಿಕದ ಅಧಿಕಾರಿ ವಲಯದ ಅಭಿಪ್ರಾಯದಂತೆ, ಟ್ರಂಪ್ ಈ ದಸ್ತಾವೇಜಿಗೆ ಮತ್ತೊಮ್ಮೆ ಸಹಿಹಾಕಲಿದ್ದಾರಾದರೂ, ಜೆರುಸಲೆಂಗೆ ಅಮೆರಿಕ ದೂತಾವಾಸವನ್ನು ವರ್ಗಾಯಿಸಬೇಕೆಂಬ ಬಹುವರ್ಷಗಳ ಪ್ರಕ್ರಿಯೆಯನ್ನು ಶುರುಮಾಡಿಕೊಳ್ಳುವಂತೆ ಸಂಬಂಧಪಟ್ಟ ಇಲಾಖೆಗೆ ಸೂಚನೆಯನ್ನೂ ನೀಡಲಿದ್ದಾರೆ. ‘ರಾಜಧಾನಿ’ ಹಣೆಪಟ್ಟಿಯ ಮಾನ್ಯತೆ ಹೀಗೆ ಜೆರುಸಲೆಂಗೆ ದಕ್ಕಲಿರುವುದರ ಹಿಂದಿರುವುದು ಈ ನಗರಕ್ಕಿರುವ ‘ಐತಿಹಾಸಿಕ ಮತ್ತು ವರ್ತಮಾನದ ವಾಸ್ತವಿಕತೆ’ಯೇ ವಿನಾ, ಯಾವುದೇ ರಾಜಕೀಯ ಲೆಕ್ಕಾಚಾರವಲ್ಲ; ಹಾಗಂತ ದೂತಾವಾಸದ ಬದಲಾವಣೆಯು ತತ್​ಕ್ಷಣವೇ ಜರುಗುವಂಥ ಪ್ರಕ್ರಿಯೆಯಲ್ಲ ಎನ್ನುತ್ತಾರೆ ಈ ಅಧಿಕಾರಿಗಳು.

ಟ್ರಂಪ್​ರ ನಿರ್ಣಯಕ್ಕಿರುವ ಮತ್ತೊಂದು ಆಯಾಮವನ್ನೂ ಇಲ್ಲಿ ಗಮನಿಸಬೇಕು. ಜೆರುಸಲೆಂಗೆ ಇಸ್ರೇಲ್ ರಾಜಧಾನಿಯ ಮಾನ್ಯತೆ ನೀಡುವುದರಿಂದಾಗಿ, ಚುನಾವಣಾ ಪ್ರಚಾರದ ಸಂದರ್ಭದಲ್ಲಿ ತಾವು ನೀಡಿದ್ದ ಭರವಸೆಯ ಈಡೇರಿಕೆಯಾಗಿದೆ ಎಂದು ಹೇಳಿಕೊಳ್ಳುವುದಕ್ಕೆ ಟ್ರಂಪ್​ಗೊಂದು ಅವಕಾಶ ಸಿಗುತ್ತದೆ. ಅಷ್ಟೇ ಅಲ್ಲ, ಜಾಗತಿಕ ರಂಗದಲ್ಲಿ ಟ್ರಂಪ್​ರ ಅತಿದೊಡ್ಡ ಬೆಂಬಲಿಗರಲ್ಲಿ ಒಬ್ಬರೆನಿಸಿರುವ ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ್ ನೇತನ್ಯಾಹು ಅವರಿಗೂ ಇದು ಪುಳಕವನ್ನುಂಟುಮಾಡುತ್ತದೆ.

ಈ ನಡೆಯಿಂದಾಗುವ ಬದಲಾವಣೆಯೇನು?

ಜೆರುಸಲೆಂನಲ್ಲಿ ಹೇಳಿಕೊಳ್ಳುವಂಥ ಬದಲಾವಣೆಯೇನೂ ಆಗುವುದಿಲ್ಲ. ಕಾರಣ, ನೇತನ್ಯಾಹು ಕಚೇರಿ ಹಾಗೂ ಅಧಿಕೃತ ನಿವಾಸ, ದೇಶದ ಸಂಸತ್ತು, ಸವೋಚ್ಚ ನ್ಯಾಯಾಲಯ ಮತ್ತು ವಿದೇಶಾಂಗ ಖಾತೆ ಮೊದಲಾದವು ಜೆರುಸಲೆಂನಲ್ಲೇ ನೆಲೆಗೊಂಡಿವೆ. ಇಸ್ರೇಲಿ ಅಧಿಕಾರಿಗಳೊಂದಿಗಿನ ಸಭೆಗಳು/ಚರ್ಚೆಗಳಿಗಾಗಿ ಭೇಟಿ ನೀಡುವ ವಿಶ್ವ ನಾಯಕರು ಜೆರುಸಲೆಂಗೆ ನೇರವಾಗಿ ಪಯಣಿಸಬೇಕಾಗುತ್ತದೆ.

ಮಧ್ಯಪ್ರಾಚ್ಯ ರಾಷ್ಟ್ರಗಳ ಪ್ರತಿಕ್ರಿಯೆ

ಟ್ರಂಪ್ ನಿರ್ಣಯಕ್ಕೆ ಅಲ್ಲಲ್ಲಿ ಪ್ರತಿರೋಧಗಳೂ ಎದುರಾಗುತ್ತಿರುವುದು ಗಮನಿಸಬೇಕಾದ ಸಂಗತಿ. ಸೌದಿ ಅರೇಬಿಯಾದ ರಾಜ ಸಲ್ಮಾನ್ ಈ ಕುರಿತು ಪ್ರತಿಕ್ರಿಯಿಸುತ್ತ, ‘ಟ್ರಂಪ್ ನಿರ್ಣಯದಿಂದಾಗಿ ಶಾಂತಿ ಸಂಧಾನದ ಮಾತುಕತೆಯ ಪ್ರಕ್ರಿಯೆಗೆ ಧಕ್ಕೆಯಾಗಲಿದೆ ಮತ್ತು ಈ ಪ್ರದೇಶದಲ್ಲಿನ ತಲ್ಲಣ ಮತ್ತಷ್ಟು ಹೆಚ್ಚಲಿದೆ; ಜತೆಗೆ ವಿಶ್ವದೆಲ್ಲಡೆಯ ಎಲ್ಲ ಮುಸ್ಲಿಮರನ್ನು ಇದು ಕೆರಳಿಸುವುದಂತೂ ದಿಟ’ ಎಂದಿದ್ದಾರೆ. ಅಮೆರಿಕದ ದೂತಾವಾಸವನ್ನು ವರ್ಗಾಯಿಸುವುದರಿಂದಾಗಿ, ಶಾಂತಿಸಂಧಾನದ ಯತ್ನಗಳು ದಾರಿತಪು್ಪವುದರ ಜತೆಗೆ ಮಧ್ಯಪ್ರಾಚ್ಯ ವಲಯದಲ್ಲಿ ಭದ್ರತೆ ಮತ್ತು ಸ್ಥಿರತೆಗೆ ಸಂಕಷ್ಟ ಒದಗಲಿದೆ ಎಂದು ಪಾಲೆಸೆôನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಹಾಗೂ ಜೋರ್ಡಾನ್​ನ ರಾಜ ಎರಡನೇ ಅಬ್ದುಲ್ಲಾ, ಟ್ರಂಪ್​ಗೆ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ಟ್ರಂಪ್ ನಿರ್ಣಯದಿಂದಾಗಿ ಹಲವು ನೆಲೆಗಟ್ಟಿನ ಪರೋಕ್ಷ ಪರಿಣಾಮಗಳಾಗುವುದರಿಂದ, ಅದರ ಮರುಪರಿಶೀಲನೆಗೆ ಮುಂದಾಗುವಂತೆ ಅರಬ್ ಲೀಗ್ ಸಂಘಟನೆಯ ಮುಖ್ಯಸ್ಥ ಅಹಮದ್ ಅಬೌಲ್-ಘೀಟ್ ಟ್ರಂಪ್​ರನ್ನು ಒತ್ತಾಯಿಸಿದ್ದಾರೆ. ಅಮೆರಿಕ ಇಂಥ ಅತಿರೇಕದ ನಿರ್ಣಯಕ್ಕೆ ಕಟ್ಟುಬೀಳುವುದರಿಂದಾಗಿ, ಇಸ್ರೇಲ್​ನೊಂದಿಗೆ ಟರ್ಕಿ ಹೊಂದಿರುವ ರಾಜತಾಂತ್ರಿಕ ಬಾಂಧವ್ಯಗಳು ಕಡಿದುಹೋಗಬಹುದು ಎಂದು ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೆಗನ್ ಸಂಸತ್ತಿನಲ್ಲಿ ಪ್ರತಿಕ್ರಿಯಿಸಿದ್ದಾರೆ.

ಭೌಗೋಳಿಕ ಮತ್ತು ಸಾಮಾಜಿಕ ವಸ್ತುಸ್ಥಿತಿ

ಜೆರುಸಲೆಂನ ಬಹುತೇಕ ಭಾಗವು ಒಂದು ಮುಕ್ತನಗರವಾಗಿದ್ದು, ಯೆಹೂದಿಗಳು ಹಾಗೂ ಪ್ಯಾಲೆಸೆôನಿಯನ್ನರು ಸ್ವತಂತ್ರವಾಗಿ ಓಡಾಡಿಕೊಂಡಿರಬಹುದಾಗಿದೆ; ಆದರೆ ಒಂದು ದಶಕಕ್ಕೂ ಹಿಂದೆ ಇಸ್ರೇಲ್ ನಿರ್ವಿುಸಿದ ‘ಬೇರ್ಪಡಿಕೆಯ ತಡೆಗೋಡೆ’ಯು ಅನೇಕ ಅರಬ್ ನೆರೆಹೊರೆಗಳನ್ನು ತುಂಡರಿಸುವುದರಿಂದಾಗಿ, ಜೆರುಸಲೆಂ ನಗರದ ಕೇಂದ್ರಭಾಗವನ್ನು ತಲುಪಲು ಹತ್ತಾರು ಸಾವಿರ ಪ್ಯಾಲೆಸೆôನಿಯನ್ನರು ದಟ್ಟಣೆಯಿರುವ ತಪಾಸಣಾತಾಣಗಳ ಮೂಲಕ ಹಾದುಹೋಗಬೇಕಾಗುತ್ತದೆ. ಯೆಹೂದಿಗಳು ಮತ್ತು ಪ್ಯಾಲೆಸೆôನಿಯನ್ನರ ನಡುವೆ ಹೇಳಿಕೊಳ್ಳುವಂಥ ಅನ್ಯೋನ್ಯತೆಯೇನೂ ಇಲ್ಲ. ಜತೆಗೆ ಯೆಹೂದಿ ಸಮುದಾಯದವರಲ್ಲಿ ಸಂಪತ್ತು ತುಂಬಿ ತುಳುಕುತ್ತಿದ್ದರೆ, ಪ್ಯಾಲೆಸೆôನಿಯನ್ನರಲ್ಲಿ ಬಡತನ ತಾಂಡವವಾಡುತ್ತಿದ್ದು ಅಸಮಾನತೆ ಕಣ್ಣಿಗೆ ರಾಚುವಂತಿದೆ. ಜತೆಗೆ, ಜೆರುಸಲೆಂನಲ್ಲಿರುವ 3 ಲಕ್ಷಕ್ಕೂ ಹೆಚ್ಚಿನ ಪ್ಯಾಲೆಸೆôನಿಯನ್ನರಲ್ಲಿ ಬಹುತೇಕರು ಅಲ್ಲಿನ ‘ನಿವಾಸಿಗಳೇ’ ವಿನಾ, ಇಸ್ರೇಲಿ ಪೌರತ್ವವನ್ನು ಹೊಂದಿಲ್ಲ. ಆದರೆ, ಈ ಪರಸ್ಪರ ತಿಕ್ಕಾಟಕ್ಕೆ ಕಾರಣವಾಗಿರುವ ಪ್ರಮುಖ ಸಮಸ್ಯೆಗಳಲ್ಲೊಂದಕ್ಕೆ, ಪರಿಹಾರೋಪಾಯವನ್ನು ಸೂಚಿಸುವ ಮೂಲಕ ಅಮೆರಿಕದ ಈ ನಿರ್ಣಯವು ಗಾಢ ಸಾಂಕೇತಿಕ ಅರ್ಥವನ್ನು ಧ್ವನಿಸಲಿದೆ ಎಂಬುದು ಬಲ್ಲವರ ಅಭಿಮತ.

ಟ್ರಂಪ್​ಗಾಗುವ ಪ್ರಯೋಜನವೇನು?

ರಾಜಕೀಯ ಲೆಕ್ಕಾಚಾರಗಳ ಹೊರತಾಗಿ, ಈ ನಡೆಯು ಟ್ರಂಪ್ ಪ್ರಭಾವವನ್ನು ಮತ್ತಷ್ಟು ವರ್ಧಿಸುವ ಲಕ್ಷಣ ಗಳು ತೋರುತ್ತಿವೆ. ಇಸ್ರೇಲಿ-ಪ್ಯಾಲೆಸೆôನಿ ಶಾಂತಿ ಒಪ್ಪಂದವನ್ನು ‘ಅಂತಿಮ ಅಥವಾ ನಿರ್ಣಾಯಕ ಕರಾರು’ ಎಂದೇ ಕರೆಯಲಿಚ್ಛಿಸುವ ಟ್ರಂಪ್, ಭವಿಷ್ಯದ ಶಾಂತಿ ನೆಲೆಗೊಳಿ ಸುವ ಉಪಕ್ರಮವೊಂದಕ್ಕೆ ಸಂಬಂಧಿಸಿದಂತೆ ಗಮನಾರ್ಹ ಯತ್ನದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಅಳಿಯ ಮತ್ತು ನಿಕಟ ಸಲಹೆಗಾರ ಜೇರ್ಡ್ ಕುಷ್ನರ್ ಈ ಯತ್ನದ ನಾಯಕತ್ವ ವಹಿಸಿಕೊಂಡಿದ್ದರೆ, ಮತ್ತೋರ್ವ ನಿಕಟ ಸಹವರ್ತಿ ಜಾಸನ್ ಗ್ರೀನ್​ಬ್ಲಾಟ್, ಇಸ್ರೇಲಿಗಳು, ಪ್ಯಾಲೆಸೆôನಿಯನ್ನರು ಹಾಗೂ ಇತರ ಅರಬ್ ನಾಯಕರೊಂದಿ ಗಿನ ಮಾತುಕತೆಗಳಿಗೆ ಸಂಬಂಧಿಸಿ ಮಧ್ಯಪ್ರಾಚ್ಯ ವಲಯದಲ್ಲಿ ವ್ಯಾಪಕವಾಗಿ ಸಂಚರಿಸಿದ್ದಾರೆ. ಈ ಎಲ್ಲ ವಿದ್ಯಮಾನಗಳಿಂದ ಟ್ರಂಪ್ ವರ್ಚಸ್ಸು ಮತ್ತಷ್ಟು ಹೆಚ್ಚುವ ಸಾಧ್ಯತೆಯಿದೆ.

Leave a Reply

Your email address will not be published. Required fields are marked *

Back To Top