Sunday, 18th February 2018  

Vijayavani

ಶಾಸಕ ಹ್ಯಾರಿಸ್ ಪುತ್ರನ ಗೂಂಡಾಗಿರಿ ಕೇಸ್ - ಪ್ರಕರಣ ಸಂಬಂಧ ಐವರು ಅರೆಸ್ಟ್ - ಮಹಮ್ಮದ್‌ ಬಂಧನ ಯಾವಾಗ?        ಮಕ್ಕಳಂದ್ರೆ ಹಿಂಗೆ ಬೆಳಸ್ಪೇಕು ನೋಡಿ - ಹ್ಯಾರಿಸ್‌ ಪುತ್ರನನ್ನು ಹೊಗಳಿದ್ದ ಪ್ರಕಾಶ್ ರೈ - ಘಟನೆ ಬಳಿಕ ಉಲ್ಟಾ ಹೊಡೆದ ನಟ.        ವಿಂದ್ಯಗಿರಿಯಲ್ಲಿ ಮಹಾಮಸ್ತಕಾಭಿಷೇಕ ಸಂಭ್ರಮ - ನಾಳೆ ಮೋದಿಯಿಂದ ಜೈನಮುನಿಗಳಿಗೆ ನಮನ - ಶ್ರವಣಬೆಳಗೊಳದಲ್ಲಿ ಬಿಗಿ ಬಂದೋಬಸ್ತ್.        ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗುದ್ದಲಿಪೂಜೆ ಗುದ್ದಾಟ - ಸಿಎಂ ಪುತ್ರ ಯತೀಂದ್ರಗೆ ಘೇರಾವ್‌ - ಜೆಡಿಎಸ್‌ ಕಡೆಗಣಿಸಿದ್ದಕ್ಕೆ ಆಕ್ರೋಶ.        ತಮಿಳುನಾಡು ರಾಜಕೀಯದಲ್ಲಿ ಮಹಾಪರ್ವ - ತಲೈವಾ ಭೇಟಿ ಮಾಡಿದ ಕಮಲ್‌ - ಮೈತ್ರಿ ಕುರಿತು ಮಹತ್ವದ ಚರ್ಚೆ.       
Breaking News

ಜುಲೈನಿಂದ ಜಿಎಸ್​ಟಿ ಅನುಷ್ಠಾನ ಖಚಿತ

Tuesday, 21.03.2017, 7:47 AM       No Comments

ನವದೆಹಲಿ: ಮಹತ್ವಾಕಾಂಕ್ಷೆಯ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಅನುಷ್ಠಾನಕ್ಕೆ ಪೂರಕವಾಗಿರುವ ನಾಲ್ಕು ಮಸೂದೆಗಳಿಗೆ ಕೇಂದ್ರ ಸಚಿವ ಸಂಪುಟ ಸೋಮವಾರ ಅನುಮೋದನೆ ನೀಡಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಕೇಂದ್ರೀಯ ಸರಕು ಮತ್ತು ಸೇವೆಗಳ ತೆರಿಗೆ ವಿಧೇಯಕ 2017(ಸಿಜಿಎಸ್​ಟಿ ಮಸೂದೆ), ಸಮಗ್ರ ಸರಕು ಮತ್ತು ಸೇವೆಗಳ ತೆರಿಗೆ ವಿಧೇಯಕ 2017 (ಐಜಿಎಸ್​ಟಿ ಮಸೂದೆ), ಕೇಂದ್ರಾಡಳಿತ ಪ್ರದೇಶಗಳ ಸರಕು ಮತ್ತು ಸೇವೆಗಳ ತೆರಿಗೆ ವಿಧೇಯಕ 2017 (ಯುಟಿಜಿಎಸ್​ಟಿ ಮಸೂದೆ), ಸರಕು ಮತ್ತು ಸೇವೆಗಳ ತೆರಿಗೆ (ರಾಜ್ಯಗಳಿಗೆ ಪರಿಹಾರ) ವಿಧೇಯಕ 2017(ಪರಿಹಾರ ಮಸೂದೆ) – ಎಂಬ ನಾಲ್ಕು ಪೂರಕ ಜಿಎಸ್​ಟಿ ಮಸೂದೆಗಳಿಗೆ ಅನುಮೋದನೆ ನೀಡಲಾಗಿದೆ. ಇದೇ ವಾರ, ಈ ಮಸೂದೆಗಳನ್ನು ಸಂಸತ್ತಿನಲ್ಲಿ ಹಣಕಾಸು ಮಸೂದೆಯಾಗಿ ಮಂಡಿಸಲು ಕೇಂದ್ರ ಸಚಿವ ಸಂಪುಟ ತೀರ್ವನಿಸಿದೆ. ಹೀಗಾಗಿ ಇದು ಬಹುಬೇಗ ಅನುಮೋದನೆಗೊಂಡು ಅನುಷ್ಠಾನಕ್ಕೆ ಬರಲಿದೆ.

ಜುಲೈ 1ರಿಂದ ಜಾರಿಗೆ: ತೆರಿಗೆ ವ್ಯವಸ್ಥೆ ಸುಧಾರಣಾ ಕ್ರಮವಾದ ಜಿಎಸ್​ಟಿಯನ್ನು ಜುಲೈ 1ರಿಂದಲೇ ಜಾರಿಗೊಳಿಸುವುದಕ್ಕೆ ಜಿಎಸ್​ಟಿ ಕೌನ್ಸಿಲ್ ತೀರ್ವನಿಸಿದೆ. ಇದು ದೇಶದ ಬಹುದೊಡ್ಡ ತೆರಿಗೆ ಸುಧಾರಣಾ ಕ್ರಮವಾಗಿದ್ದು, ಶೀಘ್ರವೇ ದೇಶಾದ್ಯಂತ ಜಾರಿಗೊಳ್ಳಲಿದೆ. ಈ ಹಿನ್ನೆಲೆಯಲ್ಲೆ ನಾಲ್ಕು ಪೂರಕ ಜಿಎಸ್​ಟಿ ಮಸೂದೆಗಳನ್ನು ಕಳೆದ ತಿಂಗಳು ನಡೆದ ಎರಡು ಸಭೆಯಗಳಲ್ಲಿ ಕೌನ್ಸಿಲ್ ಅಂಗೀಕರಿಸಿತ್ತು. ಸಂಸತ್ತು ಈ ಮಸೂದೆಗಳನ್ನು ಅಂಗೀಕರಿಸಬೇಕು ಹಾಗೆಯೇ ಎಲ್ಲ ರಾಜ್ಯಗಳೂ ಪ್ರತ್ಯೇಕ ಮಸೂದೆಯನ್ನು ಅಂಗೀಕರಿಸಿದಾಗ, ಒಂದು ದೇಶ ಒಂದು ತೆರಿಗೆ ವ್ಯವಸ್ಥೆ ಜಾರಿಗೆ ಬರಲಿದೆ. ಈ ವ್ಯವಸ್ಥೆಯಲ್ಲಿ ಅಬಕಾರಿ ಸುಂಕ, ಸೇವಾ ಸುಂಕ ಮತ್ತು ರಾಜ್ಯಮಟ್ಟದಲ್ಲಿ ವಿಧಿಸುವ ವ್ಯಾಟ್ ಇತ್ಯಾದಿಗಳು ಸೇರ್ಪಡೆಗೊಂಡಿರುತ್ತವೆ. ಜಿಎಸ್​ಟಿ ಕೌನ್ಸಿಲ್ ಈಗಾಗಲೇ ಶೇಕಡ 5, 12, 18 ಮತ್ತು 28 ನಾಲ್ಕು ಸ್ತರದ ತೆರಿಗೆ ವ್ಯವಸ್ಥೆಗೆ ಅನುಮೋದನೆ ನೀಡಿದೆ. ಯಾವ್ಯಾವ ವಸ್ತುಗಳು, ಸೇವೆಗಳಿಗೆ ಯಾವ ಸ್ತರದ ತೆರಿಗೆ ಎಂಬುದನ್ನು ನಿರ್ಣಯಿಸುವ ಕೆಲಸ ಮುಂದಿನ ತಿಂಗಳಿಂದ ಆರಂಭವಾಗಲಿದೆ.

– ಏಜೆನ್ಸೀಸ್

Leave a Reply

Your email address will not be published. Required fields are marked *

Back To Top