Wednesday, 18th July 2018  

Vijayavani

ಬಜೆಟ್​​ನಲ್ಲಿ ಅನ್ನಭಾಗ್ಯ ಅಕ್ಕಿ ಕಡಿತ ವಿಚಾರ - 5 ಕೆಜಿ ಅಲ್ಲ, ನಾವು 7 ಕೆಜಿ ಕೊಡುತ್ತೇವೆ - ಆಹಾರ ಸಚಿವ ಜಮೀರ್ ಅಹಮ್ಮದ್ ಹೇಳಿಕೆ        ಲೋಕಸಭೆ ಅಧಿವೇಶನ, ಬಿಜೆಪಿ ಸಭೆ ಹಿನ್ನೆಲೆ- ಜುಲೈ 28ರಂದು ರಾಜ್ಯಕ್ಕೆ ಅಮಿತ್ ಷಾ ಬರೋದು ಡೌಟ್- ದಿಲ್ಲಿಯಲ್ಲೇ ಉಳೀತಾರಾ ಬಿಜೆಪಿ ರಾಷ್ಟ್ರಾಧ್ಯಕ್ಷ?        ಸಚಿವ ಡಿಕೆಶಿ ಒಬ್ಬ ಹುಚ್ಚು ದೊರೆ - ಮೊಹಮ್ಮದ್ ಬಿನ್ ತುಘಲಕ್ ರೀತಿ ಆಡ್ತಿದ್ದಾರೆ - ಮಿನಿಸ್ಟರ್ ವಿರುದ್ಧ ಗುಡುಗಿದ ಮಾಜಿ ಸಂಸದ ಬಸವರಾಜು        ಮಡಿಕೇರಿಯಲ್ಲಿ ಮುಂದುವರಿದ ವರುಣನ ಆರ್ಭಟ - ಹಾರಂಗಿಯಿಂದ ಭಾರಿ ಪ್ರಮಾಣದಲ್ಲಿ ನದಿಗೆ ನೀರು - ಶಾಲಾ ಕಾಲೇಜ್‌ಗಳಿಗೆ ರಜೆ ಮುಂದುವರಿಕೆ        ನಾಳೆಯಿಂದ ಸಂಸತ್ ಮುಂಗಾರು ಅಧಿವೇಶನ - ಪಾರ್ಲಿಮೆಂಟ್​ನಲ್ಲಿ ಪ್ರಧಾನಿ ಸರ್ವ ಪಕ್ಷ ಸಭೆ - ಸುಗಮ ಕಲಾಪಕ್ಕೆ ಸಹಕರಿಸುವಂತೆ ಮನವಿ        ಯುವತಿಗೆ ಕಿರುಕುಳ ನೀಡಿದ ಹೋಮ್‌ಗಾರ್ಡ್‌ - ಆರೋಪಿಯನ್ನ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿತ - ಯುವತಿ ಹೊಡಿತಕ್ಕೆ ಹೋಮ್‌ಗಾರ್ಡ್‌ ಹಣ್ಣುಗಾಯಿ ನೀರ್‌ಗಾಯಿ       
Breaking News

ಜೀವನ-ವಿಧಾನ ಎಂಬುದಕ್ಕಿಂತ ಮಿಗಿಲಾದುದೇ ಹಿಂದೂ ಧರ್ಮ

Wednesday, 13.09.2017, 3:00 AM       No Comments

ಕಾನೂನು ಮತ್ತು ಭಾಷೆಯ ಕಟ್ಟುನಿಟ್ಟುಗಳು ಹಾಗೂ ತಾಂತ್ರಿಕ ಪರಿಭಾಷೆಗಳು, ಸ್ವತಃ ಜೀವನಕ್ಕೇ ಕೇಡು ತರುವಂತಾಗುವ ರೀತಿಯಲ್ಲಿ ಬದುಕನ್ನು ನಿಯಂತ್ರಿಸುವಂತಾಗುವುದಕ್ಕೆ ಅವಕಾಶ ನೀಡಬಾರದು. ಬದಲಿಗೆ, ಆತ್ಮಸಾಕ್ಷಿ ಮತ್ತು ಆಲೋಚನಾ ಸ್ವಾತಂತ್ರ್ಯಗಳು ಚಿಗುರಿ ಪರಿಪೂರ್ಣ ಸ್ವರೂಪಕ್ಕೆ ಬೆಳೆಯುವುದಕ್ಕೆ ಅವಕಾಶವಿರಬೇಕು.

 

‘ಮೊಹಮ್ಮದೀಯರ ಆಕ್ರಮಣವಾಗುವುದಕ್ಕೂ ಮುಂಚಿನ ಭಾರತದ ಇತಿಹಾಸವನ್ನೆಲ್ಲ ಜಾಲಾಡಿದರೆ, ‘ಏಜ್ಞಿಛ್ಠ ್ಕ್ಝಜಜಿಟ್ಞ‘ ಎಂಬ ಪರಿಕಲ್ಪನೆಯ ಮಾತಿರಲಿ ‘ಹಿಂದೂ‘ ಎಂಬ ಪದವೂ ನಿಮಗೆಲ್ಲೂ ಕಾಣುವುದಿಲ್ಲ. ಇಂಥದೊಂದು ದಾಖಲೆಯನ್ನು ಆದ್ಯಂತವಾಗಿ ಶೋಧಿಸಿದರೂ ‘ಛ್ಝಿಜಿಜಜಿಟ್ಞ‘ ಎಂಬಂಥ ಪದವೊಂದು ಕಾಣಸಿಗದು. ಆಧುನಿಕ ದೇಶೀಯಭಾಷೆ ಅಥವಾ ಜನಸಾಮಾನ್ಯರ ಭಾಷೆಗಳಲ್ಲಿ ಅದರ ಸಮಾನಾರ್ಥಕವಾಗಿ ಬಳಸಲಾಗಿರುವ ‘ಧರ್ಮ‘ ಎಂಬ ಪದವು, ಮೊಹಮ್ಮದೀಯ-ಪೂರ್ವ ಭಾರತದಲ್ಲಿ ‘ಛ್ಝಿಜಿಜಜಿಟ್ಞ‘ ಎಂಬರ್ಥದಲ್ಲೇ ಎಂದೂ ಬಳಸಲ್ಪಟ್ಟಿರಲಿಲ್ಲ. ಕಾರಣ, ಇಂಥದೊಂದು ಹೆಸರು ಅನ್ವಯವಾಗುವಂಥ ಯಾವುದೇ ಪರಿಕಲ್ಪನೆಯನ್ನು ರಿಲಿಜನ್ ಎಂಬುದು ಎಂದಿಗೂ ಉತ್ತೇಜಿಸಲಿಲ್ಲವಾದ್ದರಿಂದ, ಅದಕ್ಕೆ ಅಂಥ ಯಾವ ಹೆಸರಿರಲಿಲ್ಲ. ಮಿಕ್ಕ ಜನರಿಗಾದರೆ, ರಿಲಿಜನ್ ಎಂಬುದು ಜೀವನದ ಒಂದು ಭಾಗವಷ್ಟೇ; ಲೌಕಿಕ ಮತ್ತು ಜಾತ್ಯತೀತವಾದ ಸಂಗತಿಗಳೂ ಅಲ್ಲಿವೆ. ಹಿಂದೂವಿನ ವಿಷಯದಲ್ಲಿ ಹೇಳುವುದಾದರೆ, ಅವನ ಒಂದಿಡೀ ಜೀವನವೇ ರಿಲಿಜನ್ ಆಗಿತ್ತು‘- ಬಂಕಿಮ ಚಂದ್ರ ಚಟರ್ಜಿ

ಮತತತ್ತ್ವದ ಪರಿಪಾಠಗಳ ನಿಷ್ಠಾವಂತ ಅನುಸರಣೆಯು ಸಾಂಪ್ರದಾಯಿಕ ಶಿಷ್ಟಾಚಾರಗಳನ್ನು ಅಚ್ಚೊತ್ತಬಹುದಾದರೂ, ಅದರಲ್ಲಿ ಅಂತರ್ಗತವಾಗಿರುವ ಆಳವನ್ನು ಕಂಡುಕೊಳ್ಳಲು ಆಳಕ್ಕಿಳಿದು ಶೋಧಿಸಬೇಕಾಗುತ್ತದೆ. ಐತಿಹಾಸಿಕ, ಸಾಂಪ್ರದಾಯಿಕ ಮತ್ತು/ಅಥವಾ ಧಾರ್ವಿುಕ ಆಚರಣೆಗಳ ಹಿಂದಿರುವ ಮೌಲ್ಯ, ಮಹತ್ವ ಹಾಗೂ ಕಾರಣವನ್ನು ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ಮಾರ್ಗಾಂತರದ ನಿರ್ಧಾರಣೆ ಮತ್ತು ಅನ್ವೇಷಣೆಯ ದಾಹ ಮೊದಲಾದವು ಗಮನಾರ್ಹ ಪಾತ್ರ ವಹಿಸುತ್ತವೆ.

ಜೀವನದ ಅರ್ಥದ ಕುರಿತು ನಮ್ಮ ಪ್ರತ್ಯೇಕ ಹುಡುಕಾಟಗಳು, ನಮ್ಮ ನಮ್ಮ ಸ್ವಾತಂತ್ರ್ಯದೊಂದಿಗೆ ಹೆಣೆದುಕೊಂಡಿವೆ. ಹೀಗೆ ಅಗಾಧ ಸಂಖ್ಯೆಯ ಜನರು ಮಹತ್ತರ ಸ್ವಾತಂತ್ರ್ಯವನ್ನು ಕಂಡುಕೊಳ್ಳುವ ಹುಡುಕಾಟದಲ್ಲಿ ತೊಡಗಿಸಿಕೊಳ್ಳುವುದರಿಂದಾಗಿ, ಜ್ಞಾನಸಾಗರವೇ ಸೃಷ್ಟಿಯಾಗುತ್ತದೆ ಮತ್ತು ಅದು ವಿಶಿಷ್ಟವಾಗಿ ದಾಖಲಿಸಲ್ಪಡುತ್ತದೆ; ಧೈರ್ಯ, ತಾಳ್ಮೆ, ತ್ಯಾಗ ಮತ್ತು ಸಹನಶಕ್ತಿಯಂಥ ಸದ್ಗುಣಗಳನ್ನು ಹಿಡಿದಿಟ್ಟುಕೊಂಡಿರುವ ಪ್ರಸಂಗಗಳನ್ನು ಈ ಜ್ಞಾನಸಾಗರ ಒಳಗೊಂಡಿರುತ್ತದೆ. ಆದ್ದರಿಂದ, ಇತಿಹಾಸ ಅಥವಾ ಗತಕಾಲವು ತನ್ನ ಚಿಕಿತ್ಸಕ ಮೌಲ್ಯ ಹಾಗೂ ಸಾಂಸ್ಕೃತಿಕ ಸಾಕ್ಷ್ಯಾಧಾರದ ಜತೆಜತೆಗೆ ಮಹತ್ತರವಾದ ಬೋಧಪ್ರದ ಮೌಲ್ಯವನ್ನೂ ಒಳಗೊಂಡಿರುತ್ತದೆ.

ಸಮಗ್ರತಾ ದೃಷ್ಟಿಯ ಇತಿಹಾಸ ಅಧ್ಯಯನವೊಂದು (ಅದು ಧಾರ್ವಿುಕವೇ ಇರಲಿ ಅಥವಾ ಮತ್ತೇನೇ ಇರಲಿ), ಸುಸಂಘಟಿತ ಮತ್ತು ಹಂತಹಂತವಾದ ಅರಿವು ಅಥವಾ ಜ್ಞಾನೋದಯಕ್ಕಿರುವ ಮಹಾನ್ ಅವಕಾಶವೊಂದನ್ನು ವೈಯಕ್ತಿಕವಾಗಿಯೂ ಸಾಮಾಜಿಕವಾಗಿಯೂ ಒದಗಿಸುತ್ತದೆ. ಕಾಲಾನಂತರದಲ್ಲಿ, ತನ್ನ ಪರಿಸರದೊಂದಿಗೆ ಒಂದು ಬದಲಾಯಿಸಬಹುದಾದ ಸಮತೋಲನಪ್ರಜ್ಞೆಯೊಂದಿಗೆ ಜೀವಿಸುವಂತಾಗಲು ಹಾಗೂ ಧರ್ಮನಿಷ್ಠತೆ/ನ್ಯಾಯಶೀಲತೆ, ಸಂಪತ್ತು, ಐಹಿಕ ಸುಖ ಮತ್ತು ವಿಮೋಚನಾ ಸ್ಥಿತಿಯಂಥ ಹಂತಗಳನ್ನು ಅತಿಶಯಿಸಲು ಇಂಥ ಪಥವು ಪ್ರತಿಯೊಬ್ಬ ಮಾನವಜೀವಿಯನ್ನೂ ಸಶಕ್ತನನ್ನಾಗಿಸುತ್ತದೆ.

ನನ್ನ ಪ್ರಕಾರ, ಇದು ಕೂಡ ಹಿಂದೂಧರ್ಮದ ಮೂಲತತ್ತ್ವ, ಜೀವಾಳ. ಇತರರಿಂದ ಕಲಿಯುವ ಮತ್ತು ಕಲಿಯದಿದ್ದವರಿಗೆ ಕಲಿಸುವ ಪರಿಕಲ್ಪನೆಯೇ ಆಧಾರಸಿದ್ಧಾಂತವಾದ ಒಂದು ಜೀವನಮಾರ್ಗವಾಗಿರುವ ಹಿಂದೂಧರ್ಮವು ಈ ವೈಶಿಷ್ಟ್ಯದ ಕಾರಣದಿಂದಾಗಿಯೇ, ಇತರ ಬಹುತೇಕ ಧರ್ಮಗಳಲ್ಲಿ ಕಾಣಬರುವ ಸಂಪ್ರದಾಯಬದ್ಧತೆಯ ಕಟ್ಟುನಿಟ್ಟು ಅಥವಾ ಅತಿ ನಿಯಮನಿಷ್ಠೆಯಿಂದ ಪ್ರತ್ಯೇಕವಾಗಿ ನಿಲ್ಲುತ್ತದೆ. ಮೇಲಾಗಿ, ಆಯ್ಕೆಮಾಡಿಕೊಳ್ಳುವಿಕೆಯ ಮತ್ತು ಅಭಿಪ್ರಾಯಭೇದದ ಸಾಧ್ಯತೆಯಲ್ಲಿಯೇ ಇದರ ಹೊಂದಿಕೊಳ್ಳುವ ಸ್ವರೂಪ ಅನಾವರಣಗೊಳ್ಳುತ್ತದೆ. ಉದಾಹರಣೆಗೆ, ‘ಧರ್ಮಶಾಸ್ತ್ರ ವಿರೋಧೆ ತೊ ಯುಕ್ತಿಯುಕ್ತಾ ವಿಧೇ ಸ್ಮೃತಾ‘ ಅಂದರೆ, ‘ಧರ್ಮಶಾಸ್ತ್ರಗಳು ಅಥವಾ ಸಮಾನಾಧಿಕಾರದ ನಿಯಮಗಳ ನಡುವೆ ಪರಸ್ಪರ ಘರ್ಷಣೆ ತಲೆದೋರಿದಲ್ಲಿ ಅಥವಾ ಅವು ಒಂದಕ್ಕೊಂದು ಅಸಂಗತವಾಗಿದ್ದಲ್ಲಿ, ಅವುಗಳ ಪೈಕಿ ಸಮಂಜಸವಾಗಿ ಕಾಣುವಂಥದಕ್ಕೆ ಅಥವಾ ಹೆಚ್ಚು ಸಮಂಜಸವಾಗಿರುವುದಕ್ಕೆ ಆದ್ಯತೆ ನೀಡಿ ಅನುಸರಿಸಬೇಕು‘ ಎಂದರ್ಥ.

ಸ್ವಾರಸ್ಯಕರ ಸಂಗತಿಯೆಂದರೆ, ಸವೋಚ್ಚ ನ್ಯಾಯಾಲಯದ ತೀರ್ಪಗಳ ಪೈಕಿ ಯಾವುದನ್ನು ‘ನಿರ್ಬಂಧಕ್ಕೊಳಪಡಿಸುವಂಥದ್ದು‘ ಎಂದು ಪರಿಗಣಿಸಬೇಕು ಎಂಬುದನ್ನು ನಿರ್ಧರಿಸುವಾಗ, ಅದರಲ್ಲೂ ನಿರ್ದಿಷ್ಟವಾಗಿ ಸರಿಸಮಾನ ಅಧಿಕಾರದ ವಿಭಿನ್ನ ನ್ಯಾಯಪೀಠಗಳ ವಿಧ್ಯುಕ್ತ ತೀರ್ಪಗಳು ತದ್ವಿರುದ್ಧವಾಗಿರುವ ಸಂದರ್ಭದಲ್ಲಿ, ಇಂಥದೇ ನಿಯಮವನ್ನು ಅನುಸರಿಸಬೇಕು ಎಂದು ಕೆಲವರು ವಾದಿಸಿದ್ದಾರೆ. ಪ್ರಸಿದ್ಧ ನ್ಯಾಯಶಾಸ್ತ್ರಜ್ಞ ಎಚ್.ಎಂ. ಸೀರ್ವಾಯ್ ಹೀಗೆನ್ನುತ್ತಾರೆ: ‘ಪರಸ್ಪರ ಸುಸಂಗತವಾಗಿಲ್ಲದ ಸವೋಚ್ಚ ನ್ಯಾಯಾಲಯದ ತೀರ್ಪಗಳು, ಉಚ್ಚ ನ್ಯಾಯಾಲಯಗಳು ಮತ್ತು ಅಧೀನ ನ್ಯಾಯಾಲಯಗಳ ಪಾಲಿಗೆ ಗಂಭೀರ ಸಮಸ್ಯೆಯಾಗಿ ಪರಿಣಮಿಸುತ್ತವೆ. ಇಂಥ ಸಂದರ್ಭಗಳಲ್ಲಿ, ಅಸಂಗತವಾಗಿರುವ ಮತ್ತೊಂದು ತೀರ್ಪಿಗೆ ಹೋಲಿಸಿದಾಗ, ಕಾನೂನನ್ನು ಸ್ಪಷ್ಟವಾಗಿ ವಿಶದೀಕರಿಸುವ ನಿಟ್ಟಿನಲ್ಲಿ ನ್ಯಾಯಾಲಯಕ್ಕೆ ಕರಾರುವಾಕ್ಕಾಗಿ ಕಾಣಿಸುವಂಥ ಅಥವಾ ಹೆಚ್ಚು ಕರಾರುವಾಕ್ಕಾಗಿರುವಂಥ ತೀರ್ಪನ್ನು ಅನುಸರಿಸುವುದು ಸರಿಯಾದ ನಡೆಯಾಗಿರುತ್ತದೆ‘.

ಹಿಂದೂಧರ್ಮದ ಅಂತಃಸತ್ವವೇ ‘ಧರ್ಮ‘ ಎಂಬುದು ಕೆಲವರ ಪರಿಗಣನೆ. ‘ಸತ್ಕಾರ್ಯಗಳನ್ನು ಎಸಗಿದವರು ಉತ್ತಮರೆನಿಸಿಕೊಳ್ಳುತ್ತಾರೆ, ಕುಕೃತ್ಯಗಳನ್ನೆಸಗಿದವರು ಕೆಟ್ಟವರೆನಿಸಿಕೊಳ್ಳುತ್ತಾರೆ‘ ಎಂಬುದು ಧರ್ಮ ಎಂಬುದನ್ನು ಸರಳವಾಗಿ ವಿವರಿಸುವುದಕ್ಕಿರುವ ಒಂದು ವ್ಯಾಖ್ಯೆ. ಭಾರತದ 4ನೇ ಮುಖ್ಯ ನ್ಯಾಯಮೂರ್ತಿ, ನ್ಯಾ.ಬಿ.ಕೆ. ಮುಖ್ರೇಜಾ ಮಾತುಗಳಲ್ಲೇ ಹೇಳುವುದಾದರೆ, ‘ಆಧುನಿಕ ಕಾಲಘಟ್ಟದ ಜನಪ್ರಿಯ ಹಿಂದೂ ಧರ್ಮವು, ವೇದಗಳ ಕಾಲದಲ್ಲಿ ಕಾಣಬರುತ್ತಿದ್ದ ಧರ್ಮದ ರೀತಿಯಲ್ಲಿಲ್ಲ; ಇಷ್ಟಾಗಿಯೂ ಹಿಂದುಗಳಿಗೆ ಪವಿತ್ರವಾದ, ಎಲ್ಲದರ ಸವೋತ್ಕ ೃ್ಟ ಮೂಲ ಮತ್ತು ಪ್ರಮಾಣಗ್ರಂಥವಾಗಿ ವೇದಗಳು ಈಗಲೂ ಪರಿಗಣಿಸಲ್ಪಡುತ್ತವೆ. ಹಿಂದೂ ಧರ್ಮವು ತನ್ನ ಬೆಳವಣಿಗೆಯ ಪಥದಲ್ಲಿ ಹಲವಾರು ಬದಲಾವಣೆಗಳಿಗೆ ಒಡ್ಡಿಕೊಂಡಿದ್ದು, ಇವು ಸಾಮಾಜಿಕ ವ್ಯವಸ್ಥೆಯ ಮೇಲೂ ಪರಿಣಾಮ ಬೀರಿದವು ಮತ್ತು ಸಾಮಾಜಿಕ-ಧಾರ್ವಿುಕ ಸ್ಥಾಪಿತ ಪದ್ಧತಿಗಳಲ್ಲಿ ಅನುಗುಣವಾದ ಬದಲಾವಣೆಗಳನ್ನೂ ಪರಿಚಯಿಸಿದವು. ಆದರೆ, ಆಯಾ ಕಾಲಘಟ್ಟದಲ್ಲಿ ಏನೇ ಬದಲಾವಣೆಗಳಾದರೂ, ಹಿಂದೂ ಧರ್ಮದ ಹಾಗೂ ಧರ್ವರ್ಥದ ಸ್ಥಾಪಿತ ಪದ್ಧತಿಯ ಬೇರುಗಳಲ್ಲಿ ಸ್ಥಿತವಾಗಿರುವ ಹಿಂದೂಗಳ ಮೂಲಭೂತ, ನೈತಿಕ ಮತ್ತು ಧಾರ್ವಿುಕ ಪರಿಕಲ್ಪನೆಗಳು ಬದಲಾಗದೆ ಹಾಗೇ ಉಳಿದವು; ಅಷ್ಟೇ ಅಲ್ಲ, ನಮ್ಮ ಸುತ್ತಮುತ್ತ ನಾವಿಂದು ಕಾಣುತ್ತಿರುವ ಪದ್ಧತಿ/ವ್ಯವಸ್ಥೆಯು, ವಿಭಿನ್ನ ರೂಪದ ಸಾಂಸ್ಕೃತಿಕ ಬೆಳವಣಿಗೆಯ ಮೂಲಕ ಹಾದುಬಂದ ನಂಬಿಕೆಯ ಒಂದು ವಿಕಾಸಾತ್ಮಕ ಉತ್ಪನ್ನವಾಗಿದೆ ಎನ್ನಲಡ್ಡಿಯಿಲ್ಲ‘.

‘ಧರ್ಮ‘ ಮತ್ತು ‘ರಿಲಿಜನ್‘ ನಡುವಿನ ಒಂದು ವೈಲಕ್ಷಣ್ಯವನ್ನು ಕ್ರಮಬದ್ಧವಾಗಿ ಪ್ರತಿಪಾದಿಸಲು, ಸವೋಚ್ಚ ನ್ಯಾಯಾಲಯವು ವಿಭಿನ್ನ ರೀತಿಯಲ್ಲಿ ಯತ್ನಿಸಿದೆ ಎಂಬುದೂ ಇಲ್ಲಿ ಉಲ್ಲೇಖನೀಯ. ‘ಎ.ಎಸ್. ನಾರಾಯಣ ದೀಕ್ಷಿತುಲು ವರ್ಸಸ್ ಆಂಧ್ರಪ್ರದೇಶ ಸರ್ಕಾರ, (1996)‘ ಪ್ರಕರಣದಲ್ಲಿ ಸವೋಚ್ಚ ನ್ಯಾಯಾಲಯದ ಅಭಿಪ್ರಾಯ ಹೀಗಿತ್ತು: ‘ರಿಲಿಜನ್ ಎಂಬುದು ಅವಾಸ್ತವಿಕ ವಿಧಾನಶಾಸ್ತ್ರ ಹಾಗೂ ಮತಧರ್ಮಶಾಸ್ತ್ರದಿಂದ ಸಮೃದ್ಧವಾಗಿದ್ದರೆ, ನೇರ ಅನುಭವದ ಸಾಮ್ರಾಜ್ಯದಲ್ಲಿ ಧರ್ಮವು ಅರಳುತ್ತದೆ ಎಂದು ಹೇಳುವ ಮೂಲಕವೂ ರಿಲಿಜನ್ ಮತ್ತು ಧರ್ಮದ ನಡುವಿನ ವೈಲಕ್ಷಣ್ಯ/ಭಿನ್ನತೆಯನ್ನು ವಿವರಿಸಲಾಗಿದೆ. ಸಂಸ್ಕೃತಿಯೊಂದರ ಬದಲಾಗುತ್ತಿರುವ ಅವಸ್ಥೆಗಳಿಗೆ ರಿಲಿಜನ್ ಕೊಡುಗೆ ನೀಡಿದರೆ, ಆಧ್ಯಾತ್ಮಿಕತೆಯ ಸೊಬಗನ್ನು ಧರ್ಮವು ವರ್ಧಿಸುತ್ತದೆ. ದೇವರಿಗಾಗಿ ಒಂದು ನಾಜೂಕಾದ, ನಶ್ವರ ನೆಲೆಯನ್ನು ರೂಪಿಸುವುದಕ್ಕೆ ರಿಲಿಜನ್ ಎಂಬುದು ಓರ್ವರಿಗೆ ಸ್ಪೂರ್ತಿ ನೀಡಬಹುದು; ಆದರೆ ಹೃದಯದೊಳಗೇ ಶಾಶ್ವತ ದೇಗುಲವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಧರ್ಮ ನೆರವಾಗುತ್ತದೆ‘.

‘ಇಂದಿರಾ ನೆಹರು ಗಾಂಧಿ ವರ್ಸಸ್ ರಾಜ್ ನಾರಾಯಣ್, (1975)‘ ಪ್ರಕರಣದಲ್ಲಿ ಸವೋಚ್ಚ ನ್ಯಾಯಾಲಯ, ‘ಧರ್ಮ‘ ಮತ್ತು ‘ಕಾನೂನು‘ ನಡುವಿನ ಎಲ್ಲೆಯನ್ನೂ ಸ್ಪಷ್ಟವಾಗಿ ಗುರುತಿಸಿದೆ. ಇಂದಿರಾ ಗಾಂಧಿಯವರ ಆಯ್ಕೆಯನ್ನು ಅಸಿಂಧುಗೊಳಿಸಿದ ಅಲಹಾಬಾದ್ ಉಚ್ಚ ನ್ಯಾಯಾಲಯದ ತೀರ್ಪು ಮತ್ತು ಆದೇಶದ ಕಾರ್ಯಾಚರಣೆಗೆ ತಡೆಯೊಡ್ಡುವಾಗ, ರಜಾಕಾಲದ ನ್ಯಾಯಾಧೀಶರಾಗಿ ಏಕಾಂಗಿಯಾಗಿ ಕಾರ್ಯನಿರ್ವಹಿಸಿದ ನ್ಯಾ. ವಿ.ಆರ್. ಕೃಷ್ಣ ಅಯ್ಯರ್ ವ್ಯಕ್ತಪಡಿಸಿದ ಅಭಿಪ್ರಾಯ ಹೀಗಿತ್ತು: ‘ನ್ಯಾಯಬದ್ಧತೆ ಎಂಬುದು ನ್ಯಾಯಾಲಯದ ಕಾರ್ಯಕ್ಷೇತ್ರದ ವ್ಯಾಪ್ತಿಯೊಳಗೆ ವಿಧಿಬದ್ಧ ವಿಷಯ. ಆದರೆ ರಾಜಕೀಯ ಶಿಷ್ಟಾಚಾರ ಮತ್ತು ಪ್ರಜಾಸತ್ತಾತ್ಮಕ ಧರ್ಮವೆಂಬ ಮಾನದಂಡಗಳು ವಿವಾದಾತ್ಮಕ ಚರ್ಚಾವಿಷಯಗಳಾಗಿದ್ದು, ಇವುಗಳ ಕುರಿತು ನ್ಯಾಯಾಂಗವು ಮೌನತಳೆಯಬೇಕೆಂಬುದು ‘ಸುವರ್ಣ ಸೂತ್ರ‘ ಅಥವಾ ಮೂಲಭೂತ ತತ್ತ್ವವಾಗಿದೆ‘.

ಇಂಥ ಪಥಬದಲಾವಣೆಗಳೇನೇ ಇರಲಿ, ತನಗೆ ಯುಕ್ತವೆಂದು ತೋರಿದ ರೀತಿಯಲ್ಲಿ ತನ್ನ ಜೀವನವನ್ನು ರೂಪಿಸಿಕೊಳ್ಳುವುದಕ್ಕೆ ಧರ್ಮ ಮತ್ತು ಹಿಂದೂಧರ್ಮದ ಅನಿಷ್ಕೃಷ್ಟ ಸ್ವರೂಪವು ವ್ಯಕ್ತಿಗೆ ಅವಕಾಶವೀಯುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಇಂಥದೊಂದು ಸ್ವಾತಂತ್ರ್ಯವನ್ನು ಕಾಪಿಡುವುದರ ಜತೆಜತೆಗೆ, ಮತ್ತೆರಡು ಅಂಶಗಳನ್ನೂ ಧರ್ಮ ಮತ್ತು ಹಿಂದೂಧರ್ಮದ ಜೀವಾಳವು ಖಾತ್ರಿಪಡಿಸುತ್ತದೆ. ಅವೆಂದರೆ-

1) ಎಲ್ಲ ಕಾಲಗಳಲ್ಲೂ, ಏನಿಲ್ಲವೆಂದರೂ ಅಗತ್ಯವಿರುವ ಕನಿಷ್ಠ ಮಟ್ಟದ ಪರಸ್ಪರ ಗೌರವದ ಸಂರಕ್ಷಣೆ;

2) ಪ್ರೀತಿ ಮತ್ತು ಪರಸ್ಪರ ಗೌರವದ ಬೆಳವಣಿಗೆಗಾಗಿರುವ ಹೆಚ್ಚೆಚ್ಚು ಮಾಗೋಪಾಯಗಳನ್ನು ಮುಕ್ತವಾಗಿರಿಸುವಿಕೆ.

ಮೂಲಭೂತ ಮತ್ತು ಕಾನೂನುಬದ್ಧ ಹಕ್ಕುಗಳ ಸ್ವರೂಪವನ್ನು ಗುರುತಿಸಿ ಅರ್ಥೈಸಿಕೊಳ್ಳುವುದಕ್ಕೆ ಸಂಬಂಧಿಸಿದ ವಿಭಿನ್ನ ದೃಷ್ಟಿಕೋನವೊಂದನ್ನು ಕೂಡ ಧರ್ಮ ಮತ್ತು ಹಿಂದೂಧರ್ಮ ಒದಗಿಸುತ್ತವೆ. ಉದಾಹರಣೆಗೆ, ಖಾಸಗಿತನದ ಮೇಲಿನ ಆಕ್ರಮಣ ಹೆಚ್ಚುತ್ತಿರುವ ಕಾರಣದಿಂದಾಗಿ ಏಕಾಂತತೆಯನ್ನು ಸಂರಕ್ಷಿಸಿಕೊಳ್ಳಬೇಕಾದ ಅಗತ್ಯ ಉದ್ಭವವಾಯಿತು ಎಂಬುದಾಗಿ ಪಾಶ್ಚಾತ್ಯ ನ್ಯಾಯಶಾಸ್ತ್ರ ಸೂಚಿಸುತ್ತದೆ. ಆದರೆ ಹಿಂದೂ/ಧರ್ಮದ ನ್ಯಾಯಶಾಸ್ತ್ರ ಇದಕ್ಕೆ ತೀರಾ ತದ್ವಿರುದ್ಧವಾಗಿರುವಂಥದ್ದು; ವ್ಯಕ್ತಿಯೊಬ್ಬರು ‘ಖಾಸಗಿತನ‘ವನ್ನು ಕಾರ್ಯತಃ ಸಾಧಿಸುವಿಕೆಯ ಒಂದು ಅವಶ್ಯ ಅಂಗಭಾಗವಾಗಿ ಪ್ರಾಯಶಃ ಗುರುತಿಸಿಕೊಳ್ಳಬಹುದೇ ವಿನಾ, ಖಾಸಗಿತನದ ಸಾಮ್ರಾಜ್ಯದ ಮೇಲೆ ಹೆಚ್ಚುತ್ತಿರುವ ಆಕ್ರಮಣಕ್ಕಿರುವ ಒಂದು ಪ್ರತಿವರ್ತನೆಯಾಗಿ ಅಲ್ಲ ಎಂಬುದು ಇದರ ಅಭಿಮತ. ಏಕಾಂತತೆಯಲ್ಲಿ ಕೈಗೊಳ್ಳುವ ಧ್ಯಾನವು, ಅಸ್ತಿತ್ವದ ಉನ್ನತ ಸ್ಥಿತಿಗೆ ಸಾಧನ ಎಂದು ಗ್ರಹಿಸಲ್ಪಟ್ಟಿತ್ತು. ಅಷ್ಟೇ ಅಲ್ಲ, ಏಕಾಂತ ಜೀವನವು ವಿಮೋಚನೆ ಅಥವಾ ಮೋಕ್ಷ ಸಾಧನೆಗಾಗಿರುವ ಒಂದು ‘ಪೂರ್ವಾರ್ಹತೆ‘ಯಾಗಿ ಗುರುತಿಸಲ್ಪಟ್ಟಿತ್ತು. ಅಷ್ಟೇ ಅಲ್ಲ, ಮಹಿಳೆಯರು ಸಮಾಜದ ವಿರುದ್ಧವಾಗಿ ಮಾತ್ರವಲ್ಲದೆ ತಂತಮ್ಮ ಗಂಡಂದಿರ ವಿರುದ್ಧವಾಗಿಯೂ ಖಾಸಗಿತನದ ಹಕ್ಕನ್ನು ಸಮರ್ಥಿಸಿಕೊಳ್ಳಬಹುದಿತ್ತು. ವ್ಯಂಗ್ಯವೆಂದರೆ, ನಮ್ಮ ಸಮಕಾಲೀನ ಕಾನೂನು ವ್ಯವಸ್ಥೆಯು ವೈವಾಹಿಕ ಅತ್ಯಾಚಾರವನ್ನು ‘ಅಪರಾಧ‘ ‘ಕಾನೂನು-ಬಾಹಿರ‘ ಎಂಬುದಾಗಿ ಘೋಷಿಸುವಲ್ಲಿ ವಿಫಲವಾಗಿದ್ದರೆ, ನಮ್ಮ ಪ್ರಾಚೀನ ಮೂಲಗ್ರಂಥಗಳು ಇದನ್ನು ಅನುಜ್ಞಾರ್ಹವೆಂದು ಪರಿಗಣಿಸುವುದಕ್ಕೆ ಯೋಗ್ಯವೆಂದು ಭಾವಿಸಿಲ್ಲ.

ಸ್ವಾರಸ್ಯಕರ ಸಂಗತಿಯೆಂದರೆ, ‘ಮೀರಾ ಧುಂಗಣ ವರ್ಸಸ್ ಎಚ್​ಎಂಜಿ (2001)‘ ಪ್ರಕರಣದಲ್ಲಿ ನೇಪಾಳದ ಸವೋಚ್ಚ ನ್ಯಾಯಾಲಯವು ಈ ರೀತಿ ಅಭಿಪ್ರಾಯಪಟ್ಟಿದೆ: ‘ವೈವಾಹಿಕ ಜೀವನದಲ್ಲಿ ಪರಿಶುದ್ಧತೆ, ನಿರ್ಮಲತೆ ಹಾಗೂ ಉತ್ತಮ ವಿಶ್ವಾಸಕ್ಕೆ ಹಿಂದೂಧರ್ಮವು ಒತ್ತುನೀಡಿರುವುದರಿಂದ, ತನ್ನ ಪತ್ನಿಯನ್ನೇ ಬಲಾತ್ಕರಿಸುವಂಥ ಅಮಾನವೀಯ ಕೃತ್ಯವನ್ನು ಪತಿಯು ಎಸಗುವುದಕ್ಕೆ ಅದು ಅನುಮತಿಸುತ್ತದೆ ಎಂದು ಘೋಷಿಸುವುದು ಸ್ವೀಕಾರಾರ್ಹವಲ್ಲ. ಆದರೆ ಗಂಡ ಮತ್ತು ಹೆಂಡತಿಯ ನಡುವಿನ ಲೈಂಗಿಕ ಸಂಬಂಧಗಳಿಗೆ ಪರಸ್ಪರ ಒಪ್ಪಿಗೆಯ ಅಗತ್ಯವಿರುತ್ತದೆ ಎಂಬುದು ಸಹಜ ಗ್ರಹಿಕೆ. ಯಾರನ್ನೇ ನೋಯಿಸದಿರುವುದು ಅಥವಾ ತುಚ್ಛವಾಗಿ ಕಾಣುದಿರುವುದು ಧರ್ಮದ ಉದ್ದೇಶವಾಗಿರುವುದರಿಂದ, ಧರ್ಮಶಾಸ್ತ್ರಗಳು ಇಂಥ ಕೃತ್ಯಗಳನ್ನು ಎಂದಿಗೂ ಸಮರ್ಥಿಸುವುದಿಲ್ಲ, ನ್ಯಾಯಸಮ್ಮತವಾಗಿಸುವುದಿಲ್ಲ. ವೈವಾಹಿಕ ಅತ್ಯಾಚಾರವನ್ನು ಒಂದು ಅಪರಾಧವೆಂದು ಘೋಷಿಸುವುದರಿಂದಾಗಿ ಕೌಟುಂಬಿಕ ಜೀವನಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ; ಬದಲಿಗೆ ಪ್ರೀತಿ ಮತ್ತು ಸೌಹಾರ್ದವನ್ನು ಅದು ವರ್ಧಿಸುತ್ತದೆ‘.

ಕಾನೂನು ಮತ್ತು ಭಾಷೆಯ ಕಟ್ಟುನಿಟ್ಟುಗಳು ಹಾಗೂ ತಾಂತ್ರಿಕ ಪರಿಭಾಷೆಗಳು, ಸ್ವತಃ ಜೀವನಕ್ಕೇ ಕೇಡು ತರುವಂತಾಗುವ ರೀತಿಯಲ್ಲಿ ಜೀವನವನ್ನು ನಿಯಂತ್ರಿಸುವಂತಾಗುವುದಕ್ಕೆ ಅವಕಾಶ ನೀಡಬಾರದು. ಬದಲಿಗೆ, ಆತ್ಮಸಾಕ್ಷಿ ಮತ್ತು ಆಲೋಚನಾ ಸ್ವಾತಂತ್ರ್ಯಗಳು ಚಿಗುರಿ ಪರಿಪೂರ್ಣ ಸ್ವರೂಪಕ್ಕೆ ಬೆಳೆಯುವುದಕ್ಕೆ ಅವಕಾಶವಿರಬೇಕು. ನಮ್ಮ ನೈತಿಕತೆ ಹಾಗೂ ಸಾಂವಿಧಾನಿಕ ಗುಣವಿಶೇಷಗಳಿಗೆ ವ್ಯತಿರಿಕ್ತವಾಗಿರುವಂಥ ಸಲಹೆ-ಸೂಚನೆಗಳು ಹಾಗೂ ಪಂಕ್ತಿಗಳನ್ನು ನಮ್ಮ ಅನೇಕ ಪವಿತ್ರ ಗ್ರಂಥಗಳು ಒಳಗೊಂಡಿವೆ ಎಂಬುದು ನಿಜ. ಅವಶ್ಯವೆಂದು ಒಬ್ಬರು ಪರಿಭಾವಿಸಿದ್ದ ಕಾನೂನುಗಳು ಮಾತ್ರವೇ ಈಗ ದಮನಕಾರಿಯಾಗಿವೆ ಎಂಬುದನ್ನು ಅವು ನಮಗೆ ನೆನಪಿಸುವಂತಾಗಲಿ ಎಂದಷ್ಟೇ ಹೇಳಬಹುದು.

(ಲೇಖಕರು ಖ್ಯಾತ ಹಿರಿಯ ನ್ಯಾಯವಾದಿ, ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್)

Leave a Reply

Your email address will not be published. Required fields are marked *

Back To Top