Friday, 19th January 2018  

Vijayavani

ರಾಜ್ಯದಲ್ಲಿ ಶುರುವಾಗಿದೆ ಪಕ್ಷಾಂತರ ಪರ್ವ - ಮೂರು ಪಕ್ಷದೊಳಗೆ ಆಪರೇಶನ್​​ ಪಾಲಿಟಿಕ್ಸ್​​ - ಗೆಲುವಿಗಾಗಿ ಹೊಂದಾಣಿಕೆಗೂ ಸೈ ಎಂದ ನಾಯಕರು        ಮತ್ತೆ ಅನಂತಕುಮಾರ್​ ಹೆಗಡೆ ಉದ್ಧಟತನ - ಮಹಾಭಾರತದ ಜತೆ ವಿರೋಧಿಗಳ ಹೋಲಿಕೆ - ಹೆಗಡೆ ವಿರುದ್ಧ ಕ್ರಮಕ್ಕೆ ಆಗ್ರಹ        ಪ್ಲಾಸ್ಟಿಕ್​​ ಕವರ್​​ನಲ್ಲಿ ರಾಶಿ ರಾಶಿ ತಲೆ ಬುರುಡೆ - ಮೈಸೂರಿನ ರಸ್ತೆ ಬದಿ ತಲೆಬುರುಡೆಗಳು ಪತ್ತೆ - ಬುರುಡೆಗಳ ರಾಶಿ ಕಂಡು ಜನರಲ್ಲಿ ಆತಂಕ        ಗಡಿಯಲ್ಲಿ ಪಾಕ್​​ ಮತ್ತೆ ಪುಂಡಾಟ - ಅಪ್ರಚೋದಿತ ದಾಳಿಗೆ ಇಬ್ಬರು ಸಾವು - ಭಾರತದ ಯೋಧರಿಂದಲೂ ಪ್ರತಿ ದಾಳಿ         ಪದ್ಮಾವತ್​ ಚಿತ್ರಕ್ಕೆ ತಪ್ಪದ ಸಂಕಷ್ಟ - ಒವೈಸಿಯಿಂದಲೂ ಚಿತ್ರ ಬಿಡುಗಡೆಗೆ ವಿರೋಧ - ಚಿತ್ರತಂಡದ ಅರ್ಜಿ ತಳ್ಳಿ ಹಾಕಿದ ಸುಪ್ರೀಂಕೋರ್ಟ್​​​​       
Breaking News :

ಜಿಎಸ್​ಟಿ ವಿರುದ್ಧ ರಾಹುಲ್ ಗಾಂಧಿ ಗುಡುಗು

Sunday, 12.11.2017, 3:01 AM       No Comments

ಅಹಮದಾಬಾದ್: ದಿನಬಳಕೆಯ ಸುಮಾರು 200 ಸರಕುಗಳ ಜಿಎಸ್​ಟಿ ಇಳಿಕೆಯಾದ ಬೆನ್ನಲ್ಲೇ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೊಸ ತೆರಿಗೆ ನೀತಿ ಕುರಿತಂತೆ ಕೇಂದ್ರ ಸರ್ಕಾರ ವಿರುದ್ಧ ಹರಿಹಾಯ್ದಿದ್ದಾರೆ.

ಶನಿವಾರ ಗುಜರಾತ್​ನಲ್ಲಿ ಮಾತನಾಡಿದ ಅವರು, ಜಿಎಸ್​ಟಿ ಗಬ್ಬರ್ ಸಿಂಗ್ ಟ್ಯಾಕ್ಸ್ ಎಂದು ಲೇವಡಿ ಮಾಡಿದರು. ದೇಶಕ್ಕೆ ಐದು ವಿಧದ ಸ್ಲ್ಯಾಬ್ ತೆರಿಗೆ ದರ ಅಗತ್ಯವಿಲ್ಲ. 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ಶೇ. 18ರಂತೆ ಒಂದೇ ಸ್ಲ್ಯಾಬ್ ತೆರಿಗೆ ಜಾರಿಗೆ ತರಲಿದೆ ಎಂದಿದ್ದಾರೆ.

ಅಕ್ಷರಧಾಮದಲ್ಲಿ ರಾಹುಲ್: ಗುಜರಾತ್​ನಲ್ಲಿ ಬಿರುಸಿನ ಚುನಾವಣೆ ಪ್ರಚಾರ ನಡೆಸುತ್ತಿರುವ ರಾಹುಲ್​ಗಾಂಧಿ ಶನಿವಾರ ಅಹಮದಾಬಾದ್​ನ ಅಕ್ಷರಧಾಮ ದೇವಾಲಯಕ್ಕೆ ಭೇಟಿ ನೀಡಿದರು. ಅಲ್ಲಿನ ಪೂಜಾರಿಗಳೊಂದಿಗೆ ಮಾತುಕತೆ ನಡೆಸಿದ ಅವರು, ದೇವಾಲಯದಲ್ಲಿ ಕೆಲಕಾಲ ಕಳೆದರು.

ಆಯೋಗ ವಿರುದ್ಧ ದೂರು

ಚುನಾವಣೆ ಸಮೀಪಿಸುತ್ತಿರುವಾಗ ತೆರಿಗೆ ಕಡಿತ ಮಾಡಿರುವುದು ರಾಜಕೀಯ ಪ್ರೇರೇಪಿತ ಹಾಗೂ ಅಕ್ರಮ ಎಂದು ಆರೋಪಿಸಿ ಸಂದೀಪ್ ಶರ್ಮ ಎಂಬುವವರು ಚುನಾವಣಾ ಆಯೋಗ ಹಾಗೂ ಜಿಎಸ್​ಟಿ ಕೌನ್ಸಿಲ್ ಅಧ್ಯಕ್ಷರ ವಿರುದ್ಧ ಗುಜರಾತ್ ಹೈಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಗುಜರಾತ್​ಗೆ ಧನ್ಯವಾದ!

ಜಿಎಸ್​ಟಿ ಕಡಿತಗೊಳಿಸಿ ರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಪಿ. ಚಿದಂಬರಂ ವ್ಯಂಗ್ಯವಾಗಿ ಟ್ವೀಟ್ ಮಾಡಿ, ಗುಜರಾತ್​ಗೆ ಧನ್ಯವಾದ ಎಂದಿದ್ದಾರೆ. ಗುಜರಾತ್ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಎಸ್​ಟಿ ದರ ಕಡಿಮೆ ಮಾಡಲಾಗಿದೆ ಎಂಬ ಅರ್ಥದಲ್ಲಿ ಟ್ವೀಟ್ ಮಾಡಿದ್ದಾರೆ.

Leave a Reply

Your email address will not be published. Required fields are marked *

Back To Top