Thursday, 21st September 2017  

Vijayavani

1. ಆಸೀಸ್‌ ಬಗ್ಗುಬಡಿದ ಟೀಂಇಂಡಿಯಾ- ಈಡನ್‌ ಗಾರ್ಡನ್‌ನಲ್ಲಿ ಭಾರತಕ್ಕೆ ದಿಗ್ವಿಜಯ- ಹ್ಯಾಟ್ರಿಕ್‌ ಸಾಧನೆ ಮಾಡಿ ಕುಲ್ದೀಪ್‌ ಕಿಲಕಿಲ 2. ಶಿವರಾಮ ಕಾರಂತ ಲೇಔಟ್ ಡಿನೋಟಿಫೈ ಪ್ರಕರಣ- ಎಸಿಬಿ ಅಧಿಕಾರಿಗಳ ತುರ್ತು ಸಭೆ- ಮುಂದಿನ ನಡೆ ಬಗ್ಗೆ ಸುದೀರ್ಘ ಚರ್ಚೆ 3. ಬಳ್ಳಾರಿಯ ಮುದೇನೂರು ಕೆರೆ ಬಿರುಕು- ಯಾವುದೇ ಕ್ಷಣದಲ್ಲೂ ಕೆರೆ ಒಡೆಯೋ ಸಾಧ್ಯತೆ- ಆತಂಕದಲ್ಲಿ ಹೂವಿನಹಡಗಲಿ ಜನ 4. ಸಂಜೀವಿನಿ ಪರ್ವತ ಹೊತ್ತು ತಂದ ಹನುಮಂತ- ಕ್ರೇನ್‌ ಕೈಕೊಟ್ಟು ರಪ್‌ ಅಂತ ನೆಲಕ್ಕೆ ಬಿದ್ದ- ಆಸ್ಪತ್ರೆ ಸೇರಿದ ಆಂಜನೇಯ 5. ಅಖಾಡದಲ್ಲಿ ಕುಸ್ತಿ ಮಸ್ತಿಯ ಕಲರವ- ಅರಮನೆ ಆವರಣದಲ್ಲಿ ಕಲಾಶ್ರೀಮಂತಿಕೆಯ ವೈಭವ- ಮೈಸೂರಿನಲ್ಲಿ ಮೇಳೈಸಿದೆ ನಾಡಹಬ್ಬದ ಸಂಭ್ರಮ
Breaking News :

ಜಿಎಸ್​ಟಿ ತಂದ ಬದಲಾವಣೆ ಪರ್ವ

Saturday, 09.09.2017, 3:02 AM       No Comments

| ಅಭಿಲಾಷ್ ಪಿಲಿಕೂಡ್ಲು ಬೆಂಗಳೂರು

ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್​ಟಿ) ಕೇಂದ್ರ ಸರ್ಕಾರ ಜಾರಿಗೊಳಿಸಿದಿಂದಾಗಿನಿಂದ ಹಲವು ಕ್ಷೇತ್ರಗಳಲ್ಲಿ ಬದಲಾವಣೆಯ ಪರ್ವ ಪ್ರಾರಂಭವಾಗಿದೆ. ಪಾರದರ್ಶಕವಾದ, ವಂಚನೆ ಮುಕ್ತ ತೆರಿಗೆ ವ್ಯವಸ್ಥೆ ಕನಸು ಜಿಎಸ್​ಟಿ ಮೂಲಕ ನನಸಾಗಿದೆ.

ಹಲವು ತೆರಿಗೆಗಳ ಬಲೆಯಲ್ಲಿ ಸಿಲುಕಿದ್ದ ಕೆಲ ಕ್ಷೇತ್ರಗಳನ್ನು ಸರಳವಾದ ಏಕ ರೂಪ ತೆರಿಗೆ ಮೂಲಕ ಜಿಎಸ್​ಟಿ ಬಿಡಿಸಿದೆ. ಇದಕ್ಕೆ ರಿಯಲ್ ಎಸ್ಟೇಟ್ ಕ್ಷೇತ್ರವೂ ಹೊರತಲ್ಲ. ಈ ಹಿಂದಿನ ತೆರಿಗೆ ವ್ಯವಸ್ಥೆಯಲ್ಲಿ ರಿಯಲ್ ಎಸ್ಟೇಟ್ ಯೋಜನೆಗಳಲ್ಲಿ ಪ್ರತಿ ಗುತ್ತಿಗೆದಾರ ಹಾಗೂ ಮಾರಾಟಗಾರ ವಾಲ್ಯೂ ಆಡೆಡ್ ಟ್ಯಾಕ್ಸ್(ವ್ಯಾಟ್) ಮತ್ತು ಸೇವಾ ತೆರಿಗೆ ಹೊರಿಸುತ್ತಿದ್ದರು. ಜತೆಯಲ್ಲಿ ಸರಕುಗಳ ಸಾಗಣೆಯ ವೇಳೆ ಆಕ್ಟ್ರಾಯ್ ಶುಲ್ಕ, ಪ್ರವೇಶ ತೆರಿಗೆ ವಿಧಿಸಲಾಗುತ್ತಿತ್ತು. ಈ ಎಲ್ಲ ತೆರಿಗೆಗಳು ಇದೀಗ ಜಿಎಸ್​ಟಿಯೊಳಗೇ ಅಂತರ್ಗತವಾಗಿದೆ.

ಇದರಿಂದಾಗಿ ಡೆವಲಪರ್ಸ್ ಹಾಗೂ ಗುತ್ತಿಗೆದಾರರಿಗೆ ಸಾಕಷ್ಟು ಲಾಭವಾಗಿದೆ. ಆದರೆ ಈ ಲಾಭಾಂಶವನ್ನು ಗ್ರಾಹಕನೂ ಪಡೆಯಬಲ್ಲನೇ ಎನ್ನುವುದು ಈಗ ಉಳಿದಿರುವ ಪ್ರಶ್ನೆಯಾಗಿದೆ.

ಜಿಎಸ್​ಟಿ ಪರಿಣಾಮವೇನು?

ಈ ಹಿಂದೆ ತೆರಿಗೆ ವ್ಯವಸ್ಥೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಪ್ರಾಪರ್ಟಿ ಖರೀದಿಗೆ ಗ್ರಾಹಕನು ವ್ಯಾಟ್, ಸೇವಾ ತೆರಿಗೆ, ಸ್ಟಾ್ಯಂಪ್ ಡ್ಯೂಟಿ ಮತ್ತು ನೋಂದಣಿ ಶುಲ್ಕವನ್ನು ಪಾವತಿಸಬೇಕಾಗಿತ್ತು. ರಾಜ್ಯದಿಂದ ರಾಜ್ಯಕ್ಕೆ ತೆರಿಗೆಗಳು ಬದಲಾಗುತ್ತಿದ್ದ ಕಾರಣ ಗ್ರಾಹಕರು ಸಾಕಷ್ಟು ಗೊಂದಲ ಹಾಗೂ ಸಮಸ್ಯೆ ಅನುಭವಿಸುತ್ತಿದ್ದರು. ಜಿಎಸ್​ಟಿ ಜಾರಿ ನಂತರ ಇದೆಲ್ಲವೂ ಸರಳವಾಗಿದೆ. ನಿರ್ಮಾಣ ಹಂತದಲ್ಲಿರುವ ಯೋಜನೆಗಳಿಗೆ ಪ್ರಾಪರ್ಟಿ ಮೊತ್ತದ ಶೇ.12 ನಿಗದಿಪಡಿಸಲಾಗಿದೆ. ನಿರ್ವಣವಾಗಿರುವ ಮತ್ತು ಬಳಕೆಗೆ ಸಜ್ಜಾಗಿರುವ ಯೋಜನೆಗಳಿಗೆ ಯಾವುದೇ ಅಪ್ರತ್ಯಕ್ಷ ತೆರಿಗೆಗಳು ಅನ್ವಯವಾಗುವುದಿಲ್ಲ.

ಇನ್​ಪುಟ್ ಟ್ಯಾಕ್ಸ್ ಕ್ರೆಡಿಟ್ ವ್ಯವಸ್ಥೆ ಅನುಷ್ಠಾನವಾಗಿರುವುದರಿಂದ ತೆರಿಗೆಯಲ್ಲಿ ಇಳಿಕೆಯಾಗಿದ್ದು ಡೆವಲಪರ್ಸ್ ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಜಿಎಸ್​ಟಿ ಕಾನೂನಿನ ಪ್ರಕಾರ ನ್ಯಾಯಯುತವಾದ ವ್ಯವಸ್ಥೆ ನಿರ್ವಣದ ಹಿನ್ನೆಲೆಯಲ್ಲಿ ಜಿಎಸ್​ಟಿಯಿಂದಾಗಿ ಲಾಭ ಪಡೆದವರು ಲಾಭಾಂಶವನ್ನು ಕಡಿಮೆ ಬೆಲೆ ನೀಡುವ ಮೂಲಕ ಗ್ರಾಹಕರಿಗೂ ನೀಡಬೇಕು ಎಂದಿದೆ. ಇದನ್ನು ಖಾತ್ರಿ ಪಡಿಸುವ ನಿಟ್ಟಿನಲ್ಲಿ ಜಿಎಸ್​ಟಿ ಕಾನೂನಿನಲ್ಲಿ ಸರ್ಕಾರ ‘ ಆಂಟಿ -ಪ್ರಾಫಿಟರಿಂಗ್’ ಕಲಂ ಅಳವಡಿಸಿದೆ. ಈ ಮೂಲಕ ಅಂತಿಮವಾಗಿ ಗ್ರಾಹಕರಿಗೆ ಲಾಂಭಾಂಶವನ್ನು ಡೆವಲಪರ್ಸ್ ನೀಡುತ್ತಿರುವುದರ ಬಗ್ಗೆ ಸರ್ಕಾರ ನಿಗಾ ವಹಿಸಿದೆ. ಹೀಗಾಗಿ ಗ್ರಾಹಕರಿಗೆ ಲಾಭಾಂಶ ಸಿಗುವುದು ಖಚಿತವಾಗಿದೆ.

ಡೆವಲಪರ್ಸ್​ಗಿರುವ ಸವಾಲುಗಳೇನು?

ಸದ್ಯ ಬಿಲ್ಡರ್​ಗಳಿಗಿರುವ ಅತಿ ದೊಡ್ಡ ಸವಾಲೆಂದರೆ ಹಳೆಯ ತೆರಿಗೆ ವ್ಯವಸ್ಥೆಯಿದ್ದಾಗ ಪ್ರಾರಂಭವಾಗಿರುವ ಯೋಜನೆಗಳ ಬಗ್ಗೆ. ಇವುಗಳೀಗ ಜಿಎಸ್​ಟಿ ವ್ಯಾಪ್ತಿಗೆ ಬರಲಿದ್ದು, ಈ ಕುರಿತಂತೆ ಡೆವಲಪರ್ಸ್​ಗಳು ಅನುಸರಿಸಬೇಕಾದ ಸ್ಪಷ್ಟವಾದ ಮಾನದಂಡಗಳ ಬಗ್ಗೆ ಸರ್ಕಾರ ಯಾವುದೇ ಮಾಹಿತಿ ನೀಡಿರುವುದಿಲ್ಲ. ಇದರಿಂದಾಗಿ ಡೆವಲಪರ್ಸ್​ಗಳು ಕೊಂಚ ನಷ್ಟ ಅನುಭವಿಸುವ ಸಾಧ್ಯತೆಯಿದೆ.

ಬಿಲ್ಡರ್ಸ್​ಗೆ ಇಲ್ಲಿದೆ ಟಿಪ್ಸ್

ಜಿಎಸ್​ಟಿ ಜಾರಿ ನಂತರದಲ್ಲಿ ಡೆವಲಪರ್ಸ್​ಗಳು ಕೂಡಾ ಸಿದ್ಧರಾಗಬೇಕಿದೆ. ಜಿಎಸ್​ಟಿ ಸರಕು ಪಟ್ಟಿ(ಇನ್ವಾಯ್್ಸ ನೀಡುವಂತೆ ತಮ್ಮ ಐಟಿ ಸಿಸ್ಟಂಗಳನ್ನು ಡೆವಲಪರ್ಸ್​ಗಳು ಅಪ್​ಡೇಟ್ ಮಾಡಿಕೊಳ್ಳಬೇಕು. ಪ್ರತಿ ಇನ್ವಾಯ್್ಸಳು ಡೆವಲಪರ್ಸ್ ಹೆಸರು, ವಿಳಾಸ ಮತ್ತು ಜಿಎಸ್​ಟಿಐಎನ್ ನಂಬರ್ ಹೊಂದಿರಲೇಬೇಕು. ಇಷ್ಟೇ ಅಲ್ಲದೆ ಆಂಟಿ-ಪ್ರಾಫಿಟಿರಿಂಗ್ ವಿರುದ್ಧ ಬಿಲ್ಡರ್​ಗಳ ವಿರುದ್ಧ ಕ್ರಮಕ್ಕೆ ಜಿಎಸ್​ಟಿ ಕಾನೂನಿನಲ್ಲಿ ಸೆಕ್ಷನ್ 71 ರಚನೆಯಾಗಿರುವ ಕಾರಣ ಬಿಲ್ಡರ್-ಗ್ರಾಹಕರ ನಡುವಿನ ಒಪ್ಪಂದಗಳು ಜಿಎಸ್​ಟಿಗೆ ಹೊಂದಿಕೊಂಡಂತಿರಬೇಕು. ಜಿಎಸ್​ಟಿ ನಿಯಮದಂತೆ ಹಿಂದಿನ ತಿಂಗಳ ಮಾರಾಟ ಇನ್ವಾಯ್್ಸಳನ್ನು ತಿಂಗಳ 10ರೊಳಗೆ ಹಾಗೂ ಖರೀದಿ ಇನ್ವಾಯ್್ಸಳನ್ನು ತಿಂಗಳ 15ರೊಳಗೆ ಸಲ್ಲಿಸಬೇಕು.

Leave a Reply

Your email address will not be published. Required fields are marked *

Back To Top