Friday, 20th April 2018  

Vijayavani

ಬಿಜೆಪಿ ಅಭ್ಯರ್ಥಿಗಳ 3 ನೇ ಪಟ್ಟಿ ರಿಲೀಸ್​- 59 ಅಭ್ಯರ್ಥಿಗಳ ಹೆಸರು ಪ್ರಕಟ- ವರುಣಾ, ಬಾದಾಮಿ ಇನ್ನೂ ನಿಗೂಢ        ಜೆಡಿಎಸ್​ನಿಂದ ಸೆಕೆಂಡ್​ ಲಿಸ್ಟ್​ ರಿಲೀಸ್​- ಕೈ, ಕಮಲ ರೇಬಲ್​ಗಳಿಗೆ ಮಣೆ- 57 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ        ಎಚ್​ಡಿಕೆ ಆಸ್ತಿ ವಿವರ ಘೋಷಣೆ- ಕುಮಾರಸ್ವಾಮಿ 12 ಕೋಟಿ ಒಡೆಯ- ಗುತ್ತೇದಾರ್​ಗಿಂತ ಪತ್ನಿ ಶ್ರೀಮಂತೆ        ನಟಿ ಉಮಾಶ್ರೀ ಆಸ್ತಿ ವಿವರ ಘೋಷಣೆ- ಸಾಕವ್ವ 1 ಕೆ.ಜಿ ಚಿನ್ನಾಭರಣದ ಒಡತಿ- ಅವಲಂಬಿತರು ಯಾರು ಇಲ್ಲವೆಂದು ಪ್ರಮಾಣಪತ್ರ        ಚಾಮುಂಡೇಶ್ವರಿಯಲ್ಲಿ ಸಿಎಂ, ವರುಣಾದಲ್ಲಿ ಯತೀಂದ್ರ- ಅಪ್ಪ-ಮಗ ನಾಮಪತ್ರ ಸಲ್ಲಿಕೆ- ಭಾರಿ ಬೆಂಬಲಿಗರ ಜತೆ ತೆರಳಿ ನಾಮಿನೇಷನ್​​​​​​        ಬೆಂಗಳೂರಿನಲ್ಲಿ ಗಾಳಿ ಸಹಿತ ಮಳೆ- ಮನೆಗೆ ಹೋಗಲು ವರುಣನ ಅಡ್ಡಿ- ಸಂಜೆಯ ಮಳೆಗೆ ವಾಹನ ಸವಾರರು ಕಂಗಾಲು       
Breaking News

ಜಿಎಸ್​ಟಿ ಜಾರಿಗೆ ಮುಗಿಯದ ವಿಘ್ನ

Tuesday, 13.12.2016, 3:19 AM       No Comments

ನವದೆಹಲಿ: ಮುಂದಿನ ವರ್ಷ ಏಪ್ರಿಲ್ 1ರಿಂದ ದೇಶಾದ್ಯಂತ ಏಕರೂಪ ತೆರಿಗೆ ಜಾರಿಗೆ ತರಬೇಕೆಂಬ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಹಿನ್ನಡೆಯಾಗಿದೆ. ಸರಕು ಮತ್ತು ಸೇವಾ ತೆರಿಗೆ(ಜಿಎಸ್​ಟಿ)ಯ ಕೆಲ ಅಂಶಗಳಿಗೆ ಸಂಬಂಧಿಸಿ ರಾಜ್ಯಗಳ ಹಣಕಾಸು ಸಚಿವರ ಮಧ್ಯೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಶನಿವಾರ ನಡೆದ ಜಿಎಸ್​ಟಿ ಕೌನ್ಸಿಲ್ ಸಭೆಯಲ್ಲಿ ವಿಧೇಯಕದ ಕರಡು ಅಂತಿಮವಾಗಿಲ್ಲ. ಹೀಗಾಗಿ ಬುಧವಾರದಿಂದ 3 ದಿನ ನಡೆಯಲಿರುವ ಸಂಸತ್ ಅಧಿವೇಶನ ದಲ್ಲಿ ವಿಧೇಯಕ ಮಂಡನೆ ಮಾಡಿ ಅನುಮೋದನೆ ಪಡೆ ಯಲು ಸಾಧ್ಯವಿಲ್ಲ.

ಡಿಸೆಂಬರ್ 22- 23ರಂದು ಜಿಎಸ್​ಟಿ ಮಂಡಳಿಯ ಮುಂದಿನ ಸಭೆ ನಡೆಯಲಿದೆ. ಒಂದು ವೇಳೆ ಅಲ್ಲಿ ಕೇಂದ್ರ ಹಾಗೂ ರಾಜ್ಯಗಳ ನಡುವೆ ಒಮ್ಮತ ಮೂಡಿದರೆ ಏಪ್ರಿಲ್ 1ಕ್ಕೆ ಜಾರಿಗೆ ತರುವ ನಿಟ್ಟಿನಲ್ಲಿ ಕೊನೆಯ ಪ್ರಯತ್ನ ಮಾಡಬಹುದಾಗಿದೆ. ಏಕೆಂದರೆ ಈ ಬಾರಿ ಬಜೆಟ್ ಅಧಿವೇಶನವನ್ನು ಜನವರಿ ಅಂತ್ಯದಲ್ಲೇ ಇಟ್ಟುಕೊಳ್ಳಲು ನಿರ್ಧರಿಸಲಾಗಿದ್ದು, ವಿಧೇಯಕ ಅನುಮೋದನೆಗೊಂಡರೆ ಕಾನೂನು ಜಾರಿ ಮಾಡುವ ನಿಟ್ಟಿನಲ್ಲಿ ಬೇಕಿರುವ ಸಿದ್ಧತೆಗೆ ಸುಮಾರು ಒಂದೂವರೆ ತಿಂಗಳ (ಫೆಬ್ರವರಿ 15ರಿಂದ ಮಾರ್ಚ್ 31) ಕಾಲಾವಧಿ ಸಿಗಲಿದೆ ಎಂದು ಅರುಣ್ ಜೇಟ್ಲಿ ಅಭಿಪ್ರಾಯಪಟ್ಟಿದ್ದಾರೆ.

ಉದಾಹರಣೆಗೆ 5 ಕೋಟಿ ರೂ. ವಹಿವಾಟಿದ್ದರೆ ಸಂಗ್ರಹಿಸುವ ತೆರಿಗೆಯಲ್ಲಿ ಶೇ.5 ರಾಜ್ಯಗಳಿಗೆ ಸಂದಾಯವಾಗಬೇಕು ಎಂಬ ಪ್ರಸ್ತಾಪವನ್ನು ಪಶ್ಚಿಮ ಬಂಗಾಳ ಹಣಕಾಸು ಸಚಿವ ಅಮಿತ್ ಮಿತ್ರಾ ಮುಂದಿಟ್ಟಿದ್ದಾರೆ. ಈ ಮಾದರಿಯಲ್ಲಿ ವಿವಿಧ ಸ್ತರಗಳ (10 ಕೋಟಿ ರೂ., 15 ಕೋಟಿ ರೂ. ಇತ್ಯಾದಿ) ಪ್ರತಿ ಹಂತಕ್ಕೂ ಕೇಂದ್ರ ಮತ್ತು ರಾಜ್ಯಗಳ ನಡುವೆ ಭಿನ್ನ ಪ್ರಮಾಣದಲ್ಲಿ ತೆರಿಗೆ ಹಣ ಹಂಚಿಕೆಯಾಗಬೇಕು ಎಂಬುದು ಈ ರಾಜ್ಯಗಳ ಬೇಡಿಕೆ. ಈ ಹಿನ್ನೆಲೆಯಲ್ಲಿ ಶನಿವಾರ ನಡೆದ ಜಿಎಸ್​ಟಿ ಮಂಡಳಿಯ 6ನೇ ಸಭೆಯೂ ಯಾವುದೇ ನಿರ್ಧಾರವಿಲ್ಲದೆ ಅಂತ್ಯಗೊಂಡಿದೆ.

ಭಿನ್ನಮತಕ್ಕೆ ಕಾರಣವೇನು?

ಡಿಸೆಂಬರ್ 10 ಮತ್ತು 11ರಂದು ಎರಡು ದಿನಗಳ ಜಿಎಸ್​ಟಿ ಸಭೆ ನಡೆಯಬೇಕಿತ್ತು. ಆದರೆ ರಾಜ್ಯ-ಕೇಂದ್ರಗಳ ಪಾಲು ಹಂಚಿಕೆಗೆ ಸಂಬಂಧಿಸಿ ಉಂಟಾದ ಭಿನ್ನಮತದಿಂದಾಗಿ ಸಭೆ ಒಂದೇ ದಿನಕ್ಕೆ ಮೊಟಕುಗೊಂಡಿದೆ. ವಾರ್ಷಿಕ 1.5 ಕೋಟಿ ರೂ.ಗಿಂತ ಕಡಿಮೆ ವಹಿವಾಟು (ಟರ್ನ್ ಓವರ್) ಇರುವ ಉದ್ಯಮಗಳನ್ನು ರಾಜ್ಯಗಳ ವ್ಯಾಪ್ತಿಗೆ ಮತ್ತು 1.5 ಕೋಟಿ ರೂ.ಗಿಂತ ಹೆಚ್ಚಿನ ವಹಿವಾಟು ಇರುವ ಉದ್ಯಮಗಳನ್ನು ಕೇಂದ್ರ ತೆರಿಗೆ ಮಂಡಳಿ ವ್ಯಾಪ್ತಿಗೆ ತರಬೇಕು ಎಂಬ ಪ್ರಸ್ತಾವನೆ ಜಿಎಸ್​ಟಿ ವಿಧೇಯಕದಲ್ಲಿದೆ. ಬಿಜೆಪಿಯೇತರ ಸರ್ಕಾರ ಇರುವ ರಾಜ್ಯಗಳು ಈ ನಿಯಮ ವನ್ನು ವಿರೋಧಿಸುತ್ತಿವೆ. ವಹಿವಾಟು ಆಧರಿಸಿ ತೆರಿಗೆ ಹಂಚಿಕೆಯಾಗಲಿ ಎನ್ನುತ್ತಿವೆ.

ಸೆಪ್ಟೆಂಬರ್​ನಲ್ಲಿ ಜಾರಿ ಸಾಧ್ಯತೆ

ಬಜೆಟ್ ಅಧಿವೇಶನಕ್ಕಿಂತ ಮುನ್ನ ಸಹಮತ ಮೂಡಿದರೂ ಜಿಎಸ್​ಟಿ ಬಹುತೇಕ ಸೆಪ್ಟೆಂಬರ್ ಬಳಿಕವೇ ಜಾರಿಗೆ ಬರಲಿದೆ. ಜಿಎಸ್​ಟಿಯಿಂದ ಪೊಟ್ಟಣ ಗಳಲ್ಲಿರುವ ಆಹಾರಪದಾರ್ಥ, ದೂರವಾಣಿ, ವಿಮಾನ ಟಿಕೆಟ್ ಮುಂತಾದವು ಕೊಂಚ ತುಟ್ಟಿಯಾಗುವ ಸಾಧ್ಯತೆಯಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ನೋಟು ನಿಷೇಧಕ್ಕೂ ಅಡ್ಡಗಾಲು

ಕೇಂದ್ರ ಸರ್ಕಾರ ಯಾವುದೇ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಮುನ್ನ ಎಲ್ಲ ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಸಾಮಾನ್ಯ. ಆದರೆ ಕಾಳಧನಿಕರಿಗೆ ಬರೆ ಎಳೆಯಬೇಕು ಎಂಬ ಹಿನ್ನೆಲೆಯಲ್ಲಿ ನೋಟು ನಿಷೇಧಗೊಳಿಸುವ ನಿರ್ಧಾರವನ್ನು ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ ಏಕಾಏಕಿ ಘೊಷಿಸಿದ್ದಾರೆ. ಇದರಿಂದಾಗಿ ಬಹುತೇಕ ರಾಜ್ಯಗಳಲ್ಲಿ ಕರೆನ್ಸಿ ಕೊರತೆ ಸೃಷ್ಟಿಯಾಗಿದೆ. ಕೇರಳದ ಬ್ಯಾಂಕಿಂಗ್ ವಹಿವಾಟಿನಲ್ಲಿ ಮೂರನೇ ಒಂದು ಭಾಗದಷ್ಟಿರುವ ಸಹಕಾರಿ ಬ್ಯಾಂಕಿಂಗ್ ವಲಯ ಸಂಪೂರ್ಣ ನೆಲಕಚ್ಚಿದೆ. ಇಂಥ ಪರಿಸ್ಥಿತಿಯಲ್ಲಿ ಜಿಎಸ್​ಟಿಗೆ ಸಹಮತ ಸೂಚಿಸುವುದು ಹೇಗೆ ಸಾಧ್ಯ ಎಂದು ಕೇರಳ ಹಣಕಾಸು ಸಚಿವ ಐಸಾಕ್ ಥಾಮಸ್ ಪ್ರಶ್ನಿಸಿದ್ದಾರೆ.

-ಏಜೆನ್ಸೀಸ್

 

Leave a Reply

Your email address will not be published. Required fields are marked *

Back To Top