Monday, 19th February 2018  

Vijayavani

ಮೈಸೂರಲ್ಲಿ ಮೋದಿ ಮೇನಿಯಾ - ಕನ್ನಡದಲ್ಲಿ ಮಾತು ಆರಂಭಿಸಿದ ಪ್ರಧಾನಿ -ಮಹಾಪುರುಷರ, ವಸ್ತುಗಳ ಸ್ಮರಿಸಿದ ನಮೋ.        ಬಡವರ ಅವಶ್ಯಕತೆ ಪೂರೈಕೆಗೆ ರೈಲ್ವೆ ಅವಶ್ಯಕ - ಜೋಡಿ ಮಾರ್ಗ ಉದ್ಘಾಟಿಸಿ ನಮೋ ಮಾತು - ಹಿಂದಿನ ಸರ್ಕಾರಗಳ ವಿರುದ್ಧ ವಾಗ್ದಾಳಿ.        ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಿಡಿ - ಸಿಎಂ ವಿರುದ್ಧ ಪ್ರತಾಪಸಿಂಹ ವಾಕ್ಪ್ರಹಾರ - ಮೋದಿಗೆ ಸ್ಮರಣಿಕೆ ನೀಡಿದ ಮುಖಂಡರು.        ಶಾಸಕ ಹ್ಯಾರಿಸ್ ಪುತ್ರನಿಂದ ಹಲ್ಲೆ ಕೇಸ್​ - ಆರೋಪಿಗಳಿಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್​​ - ಶಿವಾಜಿನಗರದ ಬೌರಿಂಗ್​ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್.        ಸರ್ವಸಂಘ ಪರಿತ್ಯಾಗಿಗೆ ಮಹಾಮಜ್ಜನ - ಶ್ರವಣಬೆಳಗೊಳದಲ್ಲಿ ಭಕ್ತ ಸಾಗರ - ಆಸ್ಪತ್ರೆ, ಬೆಟ್ಟದ ಮೆಟ್ಟಿಲು ಲೋಕಾರ್ಪಣೆ.       
Breaking News

ಜಿಎಸ್​ಟಿ ಅನುಷ್ಠಾನದ ಸವಾಲು

Tuesday, 08.08.2017, 3:00 AM       No Comments

ರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಪದ್ಧತಿಯಲ್ಲಿ ಕ್ರೀಡಾ ಬಳಕೆಯ ವಾಹನಗಳು (ಎಸ್​ಯುುವಿ) ಮತ್ತು ಹೆಚ್ಚಿನ ಸೌಕರ್ಯವಿರುವ ಐಷಾರಾಮಿ ಕಾರುಗಳ ಮೇಲಿನ ಕರ ನಿರ್ಧಾರಣೆಯ ವೇಳೆ ಉಂಟಾಗಿದ್ದ ಗೊಂದಲವನ್ನು ಸರಿಪಡಿಸಲು, ಇಂಥ ಕಾರುಗಳ ಮೇಲೆ ಶೇ. 15ರಿಂದ 25ರಷ್ಟು ಹೆಚ್ಚುವರಿ ಸುಂಕ ವಿಧಿಸುವ ಚಿಂತನೆ ನಡೆದಿದೆ ಎನ್ನಲಾಗಿದೆ. ಒಂದೊಮ್ಮೆ ಇದು ಕಾರ್ಯರೂಪಕ್ಕೆ ಬಂದಲ್ಲಿ ಒಟ್ಟಾರೆ ತೆರಿಗೆ ಪ್ರಮಾಣ ಶೇ. 43ರಿಂದ 53ರವರೆಗೆ ಏರಲಿದ್ದು, ಎಸ್​ಯುುವಿ ಮತ್ತು ಐಷಾರಾಮಿ ಕಾರುಗಳು ಮತ್ತಷ್ಟು ತುಟ್ಟಿಯಾಗಲಿರುವುದಂತೂ ಹೌದು. ಸುಂಕ ಹೆಚ್ಚಳದಿಂದಾಗಿ ಕ್ರೋಡೀಕರಣಗೊಳ್ಳುವ ಹೆಚ್ಚುವರಿ ಆದಾಯವನ್ನು, ಜಿಎಸ್​ಟಿ ಅನುಷ್ಠಾನದಿಂದಾಗಿ ಕೆಲ ರಾಜ್ಯಗಳಿಗಾಗುತ್ತಿರುವ ನಷ್ಟವನ್ನು ಭರಿಸಲು ಸಾಧ್ಯವಾಗುತ್ತದೆ ಎಂಬ ಆಶಯವೂ ಇಂಥದೊಂದು ತಜ್ಞಚಿಂತನೆಯ ಹಿಂದಿರಲಿಕ್ಕೂ ಸಾಕು.

ಜವಳಿ ಉದ್ಯಮ ಹಾಗೂ ಟ್ರಾ್ಯಕ್ಟರ್ ಬಿಡಿಭಾಗಗಳ ಮೇಲಿನ ಜಿಎಸ್​ಟಿ ಕಡಿತಗೊಳಿಸುವ ತೀರ್ವನವನ್ನು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ನೇತೃತ್ವದ ಜಿಎಸ್​ಟಿ ಮಂಡಳಿ ಸಭೆಯಲ್ಲಿ ಶನಿವಾರ (ಆ. 5) ಕೈಗೊಳ್ಳಲಾಗಿತ್ತು. ಈ ಉಪಕ್ರಮದಿಂದಾಗಿ ಟ್ರಾ್ಯಕ್ಟರ್ ಬಿಡಿಭಾಗಗಳ ಮೇಲಿನ ತೆರಿಗೆ ಶೇ. 28ರಿಂದ 18ಕ್ಕೂ, ಎಂಬ್ರಾಯ್ಡರಿ, ಸ್ಟಿಚಿಂಗ್​ನಂಥ ಜವಳಿ ಉದ್ಯಮದ ಉಪಕಸುಬುಗಳಿಗೆ ನಿಗದಿಪಡಿಸಲಾಗಿದ್ದ ಶೇ. 18ರ ತೆರಿಗೆಯು ಶೇ. 5ಕ್ಕೂ ಇಳಿಯುವಂತಾಯಿತು ಎಂಬುದಿಲ್ಲಿ ಸ್ಮರಣಾರ್ಹ.

ಹೀಗೆ, ಕಳೆದ ತಿಂಗಳಷ್ಟೇ ಜಾರಿಯಾಗಿರುವ ಜಿಎಸ್​ಟಿಯ ಸಾಧಕ-ಬಾಧಕಗಳು ದಿನಗಳೆದಂತೆ ತೆರಿಗೆದಾರರ/ಫಲಾನುಭವಿಗಳ ಅನುಭವಕ್ಕೆ ಬರಲಿದೆ. ಹಲವು ಸ್ತರದ ತೆರಿಗೆ ಮತ್ತು ಸುಂಕಗಳನ್ನು ಒಳಗೊಂಡು ಬಿಡಿಸಲಾಗದ ಬಲೆಯೇ ಆಗಿದ್ದ ದೇಶದ ಸಂಕೀರ್ಣ ತೆರಿಗೆ ವ್ಯವಸ್ಥೆಗೆ ಇತಿಶ್ರೀ ಹಾಡುವ ಏಕರೂಪದ ಸರಳೀಕೃತ ತೆರಿಗೆ ಪದ್ಧತಿ ಇದಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ರೂಢಿಗತ ವ್ಯವಸ್ಥೆಯ ಜಾಗವನ್ನು ಹೊಸದು ಆಕ್ರಮಿಸಿಕೊಂಡಾಗ, ಅದಕ್ಕೆ ಒಗ್ಗಿಕೊಳ್ಳುವುದದಕ್ಕೆ ಮತ್ತು ಪಳಗಿಸಿಕೊಳ್ಳುವುದಕ್ಕೆ ಕೆಲ ಕಾಲ ಹಿಡಿಯುವುದರ ಜತೆಗೆ ಅನುಷ್ಠಾನದ ವಿಷಯದಲ್ಲಿ ತಲೆದೋರಬಹುದಾದ ಗೊಂದಲಗಳೂ ಜತೆಯಲ್ಲೇ ಸಾಗುವುದು ಸಾಮಾನ್ಯ. ವಲಯವಾರು ಜಿಎಸ್​ಟಿ ನಿಗದಿ ಮತ್ತು ಅನುಷ್ಠಾನಕ್ಕೆ ಸಂಬಂಧಿಸಿದಂತೆ ಜಿಎಸ್​ಟಿ ಮಂಡಳಿಯ ತೀರ್ವನವೇ ನಿರ್ಣಾಯಕವಾದರೂ, ಭಾಷೆ-ಬಣ್ಣ-ಜನ ಸಮುದಾಯದ ವಿಷಯದಲ್ಲಿ ವೈವಿಧ್ಯವನ್ನು ಮೈಗೂಡಿಸಿಕೊಂಡಿರುವ ಭಾರತದಂಥ ಒಕ್ಕೂಟ ವ್ಯವಸ್ಥೆಯಲ್ಲಿ ಪ್ರಾದೇಶಿಕ ಬೇಡಿಕೆ ಅಥವಾ ದನಿಗಳನ್ನೂ ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಇದು ವಲಯವಾರು ಉತ್ಪನ್ನಗಳಿಗೂ ಅನ್ವಯವಾಗುವ ಮಾತು. ಹೀಗಾಗಿ ಜಿಎಸ್​ಟಿ ಅನುಷ್ಠಾನ ಸಂಬಂಧಿತ ಗೊಂದಲಗಳು ಹಾಗೂ ಪ್ರದೇಶವಾರು ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಮಾರ್ಪಾಡು ಅಥವಾ ತಿದ್ದುಪಡಿಯ ಅಗತ್ಯವೂ ತಲೆದೋರಬಹುದು. ಇಂಥ ಸಂದರ್ಭಗಳಲ್ಲಿ ಜಿಗುಟುತನ ಬಿಟ್ಟು, ಹೀಗೆ ಬದಲಾವಣೆಗೆ ಸಮ್ಮತಿಸುವುದು ಭಾರತದಂಥ ಒಕ್ಕೂಟ ವ್ಯವಸ್ಥೆಯ ಸಾಮಾಜಿಕ ಹಾಗೂ ಆರ್ಥಿಕ ಸಾಮರಸ್ಯಕ್ಕೆ ಪೂರಕವಾಗಬಲ್ಲದು ಎಂಬುದರಲ್ಲಿ ಎರಡು ಮಾತಿಲ್ಲ. ಹೀಗೆ ತತ್ತ್ವಶಃ ಅನುಷ್ಠಾನನದೆಡೆಗೆ ಮಾತ್ರವಲ್ಲದೆ, ಅನುಭವದ ಆಧಾರದ ಮೇಲೆ ತಲೆದೋರುವ ಸವಾಲು-ಸಮಸ್ಯೆಗಳ ಕಡೆಗೂ ಗಮನಹರಿಸಿ, ಕಂಡುಬರಬಹುದಾದ ನ್ಯೂನತೆಗಳನ್ನು ಸರಿಪಡಿಸಿಕೊಂಡು ಮುನ್ನಡೆದರೆ ತೆರಿಗೆ ವಿಧಿಸುವ ಪ್ರಾಧಿಕಾರಗಳೂ, ತೆರಿಗೆದಾರರೂ ಮತ್ತು ಅಂತಿಮ ಫಲಾನುಭವಿಗಳೂ ಇಂಥ ಉಪಕ್ರಮಕ್ಕೆ ಮತ್ತಷ್ಟು ಹುರುಪಿನಿಂದ ಸ್ಪಂದಿಸುವುದರಲ್ಲಿ ಅನುಮಾನವಿಲ್ಲ.

Leave a Reply

Your email address will not be published. Required fields are marked *

Back To Top