Sunday, 21st October 2018  

Vijayavani

ಅರ್ಜುನ್‌ ಸರ್ಜಾಕಡೆಯಿಂದ ಬೆದರಿಕೆ ಕರೆ - ಕಾನೂನು ಹೋರಾಟದ ಬಗ್ಗೆ ದಾಖಲೆ ಸಂಗ್ರಹ - ಸುದ್ದಿಗೋಷ್ಠಿಯಲ್ಲಿ ಶ್ರುತಿ ಗಂಭೀರ ಆರೋಪ        ಭಾವೈಕ್ಯತೆ ಶ್ರೀಗಳಿಗೆ ಕಣ್ಣೀರ ವಿದಾಯ - ಕ್ರಿಯಾಸಮಾಧಿಯಲ್ಲಿ ಸಿದ್ದಲಿಂಗ ಶ್ರೀ ಲೀನ - ಭಕ್ತಸಾಗರದಿಂದ ತೋಂಟದಾರ್ಯರಿಗೆ ಅಂತಿಮ ನಮನ        ಡಿಕೆಶಿ ಶೋ ಮಾಡೋದು ಬಿಡ್ಬೇಕು - ಪಕ್ಷದ ಪರ ಕೆಲಸ ಮಾಡ್ಬೇಕು - ಬಳ್ಳಾರಿ ಪ್ರಚಾರದಲ್ಲಿ ಬಯಲಾಯ್ತು ಜಾರಕಿಹೊಳಿ ಸಿಟ್ಟು        ಸಿಎಂ ಎಚ್‌ಡಿಕೆ ಮತ್ತೆ ಟೆಂಪಲ್‌ರನ್‌ - ಶಕ್ತಿ ದೇವತೆ ಸನ್ನಿಧಿಗೆ ಕುಮಾರಸ್ವಾಮಿ - ಮಹಾರಾಷ್ಟ್ರದ ತುಳಜಾ ಭವಾನಿ ದೇಗುಲಕ್ಕೆ ಭೇಟಿ        ಶಿರಡಿ ಸಾಯಿ ಸಮಾಧಿ ಶತಮಾನೋತ್ಸವ ಹಿನ್ನೆಲೆ - ಸಾಯಿ ಸನ್ನಿಧಿಗೆ ಭಕ್ತ ಸಾಗರ - ನಾಲ್ಕು ದಿನದಲ್ಲಿ 5 ಕೋಟಿ ರೂಪಾಯಿ ಕಾಣಿಕೆ        ರೋಡ್ ರೋಲರ್​ನ್ನೂ ಬಿಡದ ಕಳ್ಳರು - ವರ್ತೂರು ಬಳಿ ನಿಲ್ಲಿಸಿ ಎಸ್ಕೇಪ್ ಆದ ಚೋರರು - ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ       
Breaking News

ಜಮೀನು ಜಲಾವೃತ, ದೇವಸ್ಥಾನಕ್ಕೆ ನುಗ್ಗಿದ ನೀರು

Wednesday, 13.06.2018, 5:05 AM       No Comments

ಸಕಲೇಶಪುರ: ತಾಲೂಕಿನಲ್ಲಿ ಮಂಗಳವಾರ ಮಳೆಯ ಪ್ರಮಾಣ ಕಡಿಮೆಯಾದರೂ ನೆರೆ ಹಾವಳಿ ಮುಂದá-ವರಿದಿದೆ. ವ್ಯಾಪಕ ಮಳೆಯಿಂದಾಗಿ ಅಪಾರ ನಷ್ಟ ಸಂಭವಿಸಿದೆ.

ಎರಡು ದಿನಗಳ ಕಾಲ ನಿರಂತರವಾಗಿ ಸುರಿದ ಭಾರಿ ಮಳೆಯಿಂದಾಗಿ ನದಿ, ಹಳ್ಳ-ಕೊಳ್ಳಗಳು ತುಂಬಿ ಹರಿದಿವೆ. ತಗ್ಗು ಪ್ರದೇಶದ ಕಾಫಿತೋಟ, ಭತ್ತದ ಗದ್ದೆಗಳು ಜಲಾವೃತ್ತವಾಗಿವೆ. ಹಲವೆಡೆ ಭೂಕುಸಿತ ಉಂಟಾಗಿದ್ದು, ಮರಗಳು ಧರೆಗುರುಳಿವೆ.

ಹೊಂಗಡಹಳ್ಳ ಸಮೀಪ ಭೂಕುಸಿತ ಸಂಭವಿಸಿದ ಪರಿಣಾಮ, ಹೊಂಗಡಹಳ್ಳ-ಕಾಗೇನರಿ ಮಾರ್ಗದಲ್ಲಿ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು. ಜೆಸಿಬಿ ಮೂಲಕ ಸತತ 4 ಗಂಟೆ ಕಾರ್ಯಾಚರಣೆ ನಡೆಸಿ ಮಣ್ಣು ತೆರವುಗೊಳಿಸುವ ಮೂಲಕ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಪಟ್ಟಣದ ಕುಶಾಲನಗರ ಬಡಾವಣೆಯಲ್ಲಿ ತಡೆಗೋಡೆ ಕುಸಿದಿದೆ. ಕುಡುಗರಹಳ್ಳಿ ಬಡಾವಣೆಯಲ್ಲಿ ನಿರ್ಮಾಣ ಹಂತದ ಮನೆಯ ಮೇಲೆ ತಡೆಗೋಡೆ ಕುಸಿದು ಬಿದ್ದಿದೆ. ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗಾಗಿ ಗುಡ್ಡಗಳನ್ನು ಕಡಿಯಲಾಗಿರುವ ಸ್ಥಳದಲ್ಲೂ ಸಾಕಷ್ಟು ಭೂಕುಸಿತ ಉಂಟಾಗಿದ್ದು, ಹಲವು ಮರಗಳು ಧರೆಗುರುಳಿವೆ. ಹೊಂಕರವಳ್ಳಿ, ಹಾಲೇಬೇಲೂರು ರಸ್ತೆಯಲ್ಲಿ ಬೃಹತ್ ಮರ ಬಿದ್ದ ಪರಿಣಾಮ ಸಂಚಾರ ವ್ಯತ್ಯಯವಾಗಿತ್ತು.

ಕೊಡ್ಲಿಪೇಟೆ-ಶುಕ್ರವಾರಸಂತೆ-ಬ್ಯಾಕರವಳ್ಳಿ ರಾಜ್ಯ ಹೆದ್ದಾರಿಯ ಬ್ಯಾಕರವಳ್ಳಿ ಸೇರಿದಂತೆ ಮೂರು ಪ್ರದೇಶಗಳಲ್ಲಿ ಮರಗಳು ರಸ್ತೆಗೆ ಉರುಳಿದ್ದರಿಂದ ಕೆಲ ಗಂಟೆಗಳ ಕಾಲ ರಸ್ತೆ ಸಂಚಾರ ಬಂದ್ ಆಗಿತ್ತು. ಕಬ್ಬಿನಗದ್ದೆ ಸಮೀಪ ಹಳ್ಳ ಉಕ್ಕಿ ಹರಿದ ಪರಿಣಾಮ ಹಾಲೆಬೇಲೂರು ಹಾಗೂ ಕಬ್ಬಿನಗದ್ದೆ ಸಂಪರ್ಕಕ್ಕೆ ಅಡಚಣೆಯಾಗಿತ್ತು. ಸಮೀಪದ ನೂರಾರು ಎಕರೆ ಭತ್ತದ ಗದ್ದೆ, ಶುಂಠಿ ಬೆಳೆ ಹಾಗೂ ಕಾಫಿ ತೋಟಗಳು ನೀರಿನಿಂದ ಆವೃತ್ತವಾಗಿವೆ.

ಇತ್ತ ಹಾಲೇಬೇಲೂರು ಸಮೀಪ ನದಿ ತುಂಬಿ ಹರಿದ ಪರಿಣಾಮ ನೂರು ಎಕರೆಗೂ ಅಧಿಕ ಭತ್ತದ ಗದ್ದೆಗಳು ನೀರಿನಿಂದ ಆವೃತ್ತವಾಗಿವೆ. ಜಾನೇಕರೆ ಗ್ರಾಮದ ಅರೆಕೆರೆ ಹಳ್ಳ ತುಂಬಿ ಹರಿದು ಗದ್ದೆಗಳು ಮá-ಳá-ಗಿವೆ. ಪಟ್ಟಣದಲ್ಲಿ ಹೇಮಾವತಿ ನದಿ ಉಕ್ಕಿ ಹರಿದು ಮಳಲಿ ಹಾಗೂ ಕುಡುಗರಹಳ್ಳಿ ಗ್ರಾಮಗಳ ಸಮೀಪ ನೂರು ಎಕರೆಗೂ ಹೆಚ್ಚಿನ ಭತ್ತದ ಗದ್ದೆ ಹಾಗೂ ಅಷ್ಟೇ ಪ್ರಮಾಣದ ಇಟ್ಟಿಗೆ ಭಟ್ಟಿಗಳು ಹಾನಿಗೀಡಾಗಿವೆ. ನದಿಯ ನೀರು ಹೊಳೆಮಲ್ಲೇಶ್ವರಸ್ವಾಮಿ ಗರ್ಭಗುಡಿ ಪ್ರವೇಶಿಸಲು ಇನ್ನು ಅರ್ಧ ಅಡಿ ಮಾತ್ರ ಬಾಕಿಯಿದ್ದು, ದೇವಸ್ಥಾನ ಪ್ರಾಂಗಣ ನೀರಿನಿಂದ ಆವೃತವಾಗಿದೆ. ನದಿಯಲ್ಲಿ 12 ಅಡಿಯಷ್ಟು ನೀರು ಹರಿಯುತ್ತಿದೆ.

ಅಜಾದ್ ರಸ್ತೆಯ ಕೆಲ ಜನವಸತಿ ಪ್ರದೇಶಕ್ಕೂ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಇದೇ ಪರಿಸ್ಥಿತಿ ಬಹುತೇಕ ಎಲ್ಲ ಗ್ರಾಮಗಳಲ್ಲೂ ಇದ್ದು, ಮಂಗಳವಾರ ಇಡೀ ದಿನ ಮಳೆಯ ಪ್ರಮಾಣ ಕಡಿಮೆಯಾಗಿದ್ದರಿಂದ ಹಂತಹಂತವಾಗಿ ನೆರೆ ಇಳಿಮುಖಗೊಳ್ಳುತ್ತಿದೆ.

ಶಾಸಕ ಪರಿಶೀಲನೆ: ಕುಡುಗರಹಳ್ಳಿ ಹಾಗೂ ಕಬ್ಬಿನಗದ್ದೆ ಗ್ರಾಮಗಳಲ್ಲಿ ನೆರೆ ವೀಕ್ಷಿಸಿ ಮಾತನಾಡಿದ ಶಾಸಕ ಎಚ್.ಕೆ.ಕುಮಾರಸ್ವಾಮಿ, ತಾಲೂಕಿನಲ್ಲಿ ವಾರದಿಂದ ಸುರಿದ ಮಳೆಯಿಂದಾಗಿ ಭಾರಿ ನಷ್ಟವಾಗಿದ್ದು, ಈ ಬಗ್ಗೆ ಇನ್ನೆರಡು ದಿನಗಳಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದು ಜಿಲ್ಲಾಡಳಿತಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು. ತಹಸೀಲ್ದಾರ್ ನಾಗಭೂಷಣ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *

Back To Top