Saturday, 24th March 2018  

Vijayavani

Breaking News

ಜಪಾನಿನ ಸೀಕ್ರೆಟ್ ವಂಡರ್​ಲಾ..!

Friday, 12.01.2018, 3:02 AM       No Comments

ಒಂದು ವಸ್ತು ಕಣ್ಣಿಗೆ ಕಾಣುವುದಕ್ಕಿಂತ ಅಂದವಾಗಿ ಕಾಣಿಸುವಂತೆ ಮಾಡುವ ಶಕ್ತಿ ಇರುವುದು ಕ್ಯಾಮರಾಗೆ ಎನ್ನುವ ಮಾತಿದೆ. ಉದಾಹರಣೆಗೆ ಸಿನಿಮಾಗಳಲ್ಲೇ ನಾವು ನೋಡಿದ ಪ್ರವಾಸಿ ತಾಣಗಳನ್ನೇ ಹಲವಾರು ಆಂಗಲ್​ನಲ್ಲಿ ಎಷ್ಟು ಅಂದವಾಗಿ ತೋರಿಸಿರುತ್ತಾರೆ. ಇದು ನಾವು ನೋಡಿದ ಸ್ಥಳವೇನಾ ಎನ್ನುವ ಅನುಮಾನ ಮೂಡುತ್ತದೆ.

ಅದೇ ರೀತಿ ಜಪಾನಿನಲ್ಲಿ ಚಳಿಗಾಲ ಪ್ರಾರಂಭವಾದಾಗ ಅದರ ಅಂದ ನೋಡಲು ಕಣ್ಣು ಸಾಲದು. ಈ ಅಂದವಾದ ಪ್ರದೇಶವನ್ನು ಇನ್ನಷ್ಟು ಅಂದವಾಗಿ, ಅದ್ಭುತವಾಗಿ ಕ್ಯಾಮರಾ ಕಣ್ಣಲ್ಲಿ ತೋರಿಸಿದ್ದಾರೆ ಛಾಯಾಚಿತ್ರಗ್ರಾಹಕ ನಾಗೋಶಿ.

ಜಪಾನಿನಲ್ಲಿ ಚಳಿಗಾಲಕ್ಕೆ ಹೆಸರುವಾಸಿಯಾಗಿರುವ ಗಿನ್​ಜಾನ್ ಆನ್​ಸೆನ್ ರೆಸಾರ್ಟ್​ಗೆ ಭೇಟಿ ನೀಡಿದಾಗ ಅಲ್ಲಿನ ಅಂದ ನೋಡಿ ಮರುಳಾ ದರಂತೆ 22 ವರ್ಷದ ನಾ ಗೋಶಿ. ಅಲ್ಲಿನ ಸುತ್ತಮುತ್ತ ಪ್ರದೇಶ ಸಂಪೂರ್ಣ ವಾಗಿ ಮ್ಯಾಜಿಕ್ ಮಾಡಿದಂತೆ ಕಾಣುತ್ತಿತ್ತಂತೆ. ಹಿಮ ಮತ್ತು ಮಂಜಿನಿಂದ ಆವರಿಸಲ್ಪಟ್ಟ ಸಂಪೂರ್ಣ ಪ್ರದೇಶಕ್ಕೆ ಹೋದಾಗ ರಹಸ್ಯವಾಗಿರುವ

ವಂಡರ್​ಲಾಗೆ ಹೋದಂತೆ ಭಾಸವಾಗುತ್ತದೆ. ಮಂಜಿನಿಂದ ಆವರಿಸಲ್ಪಟ್ಟ ಮರಗಳನ್ನು ನೋಡಿದಾಗ ಬಿಳಿ ಹೂದೋಟ ದಂತೆ ಕಾಣುತ್ತದೆ. ಸದಾ ಬೀಳುವ ಮಂಜನ್ನು ನೋಡಿದಾಗ ಆಕಾಶದಿಂದ ಉದುರುವ ಮುತ್ತುಗಳಂತೆ ಕಾಣುತ್ತದೆಯಂತೆ. ನಾಗೋಶಿ ಫೋಟೋಗ್ರಫಿ ನೋಡಿದ ಮೇಲೆ ಪ್ರವಾಸ ಹೋಗುವ ಸಿದ್ಧತೆಯಲ್ಲಿದ್ದರೆ ಜಪಾನಿಗೇ ಹೋಗೋಣ ಎಂದು ಮನಸ್ಸಾಗುವುದಂತು ಸತ್ಯ.

Leave a Reply

Your email address will not be published. Required fields are marked *

Back To Top