Friday, 20th April 2018  

Vijayavani

ಬಾದಾಮಿಯಿಂದ ಸ್ಪರ್ಧೆ ವಿಚಾರದಲ್ಲಿ ದ್ವಂದ್ವ- ಸ್ಪರ್ಧೆ ಬಗ್ಗೆ ಸ್ಪಷ್ಟವಾಗಿ ಹೇಳದ ಸಿಎಂ- ಹೈಕಮಾಂಡ್​ ನಿರ್ಧಾರ ಅಂತಿಮ        ಉಲ್ಟಾ ಹೊಡೆದ ಸಿಎಂ ಪುತ್ರ ಯತೀಂದ್ರ- ತಂದೆಯ ಬಾದಾಮಿ ಸ್ಪರ್ಧೆ ಪೋಸ್ಟ್​​​ ಡಿಲೀಟ್​​ - ಏ.23 ಕ್ಕೆ ನಾಮಪತ್ರ ಎಂದಿದ್ದ ಯತೀಂದ್ರ        ಜಗಳೂರು ಟಿಕೆಟ್​ ವಂಚಿತೆ ಆಸ್ಪತ್ರೆಗೆ ದಾಖಲು- ಟಿಕೆಟ್​​ ಕೊಟ್ಟು ಕಸಿದಿದ್ದರಿಂದ ನೊಂದಿದ್ದ ಪುಷ್ಪಾ- ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ        ಕಾಂಗ್ರೆಸ್​ನಲ್ಲಿ ಆಗಿದೆಯಂತೇ ಕೋಟಿ ಕೋಟಿ ಡೀಲ್​- ಕೆಪಿಸಿಸಿ ಅಧ್ಯಕ್ಷರಿಂದಲೇ ಟಿಕೆಟ್​ ಸೇಲ್​- ಛಲವಾದಿ ನಾರಾಯಣಸ್ವಾಮಿ ಹೊಸ ಬಾಂಬ್​        ಕೋಲಾರದ ಮಾಲೂರಿನಲ್ಲಿ ವೈದ್ಯರ ಎಡವಟ್ಟು- ಮಗುವಿನ ದೇಹದಲ್ಲೇ ಸೂಜಿ ಬಿಟ್ಟ ಡಾಕ್ಟರ್​- ಏಳು ದಿನದ ಬಳಿಕ ಮಗು ಸಾವು        ನರೋಡಾ ಪಾಟೀಯಾ ಹತ್ಯಾಖಾಂಡ ಪ್ರಕರಣ- ಮಾಜಿ ಸಚಿವೆ ಮಾಯಾ ಕೊಡ್ನಾನಿ ನಿರ್ದೋಶಿ- ಗುಜರಾತ್​​ ಹೈಕೋರ್ಟ್​​ನಿಂದ ತೀರ್ಪು       
Breaking News

ಜನರ ಕನಸು ನನಸು ಮಾಡುವ ಯುಟಿಸಿ

Saturday, 04.03.2017, 5:00 AM       No Comments

ಬೆಂಗಳೂರು ಹಾಗೂ ಸುತ್ತಮುತ್ತಲ ಪಟ್ಟಣ ಪ್ರದೇಶಗಳಲ್ಲಿ ಅತ್ಯುತ್ತಮ ಬಡಾವಣೆ ನಿರ್ವಿುಸುತ್ತಿರುವ ಸಂಸ್ಥೆ ಕಳೆದ 10 ವರ್ಷದಿಂದ ಸುಮಾರು 2 ಸಾವಿರಕ್ಕೂ ಹೆಚ್ಚು ಜನರ ಕನಸು ನನಸು ಮಾಡಲು ಸಹಕರಿಸಿದೆ.

2004ರಿಂದ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಕಾಲಿಟ್ಟು, ಮಧ್ಯಮ ವರ್ಗದವರ ಗುರಿ ಈಡೇರಿಸುವತ್ತಲೂ ಹೆಚ್ಚು ಗಮನ ನೀಡುತ್ತಿರುವ ಯುಟಿಸಿ, 2009ರಲ್ಲಿ ತನ್ನ ಹೆಸರನ್ನು ಉದ್ಯಮದಲ್ಲಿ ಅಧಿಕೃತವಾಗಿಸಿತು. ಅಂದಿನಿಂದ ಇಂದಿನ ವರೆಗೂ ಗುಣಮಟ್ಟದ ನಿವೇಶನಗಳನ್ನು ಸಾಮಾನ್ಯ ವರ್ಗಕ್ಕೆ ನೀಡುತ್ತಾ ಬಂದಿದೆ.

ಬದಲಾಗುತ್ತಿರುವ ಸರ್ಕಾರದ ನಿಯಮಗಳು, ಹೊಸ ಯೋಜನೆ, ದಿಟ್ಟ ನಿರ್ಧಾರಗಳಿಂದ ಕೂಡಿಟ್ಟ ಹಣಕ್ಕೆ ಆಪತ್ತಾಗುವ ಬದಲು ಉಪನಗರಗಳಲ್ಲಿ ಜಮೀನು ಖರೀದಿಯೇ ಲೇಸು ಎಂಬ ಸೂತ್ರ ಸಂಸ್ಥೆಯದ್ದು. ಬೆಂಗಳೂರು ನಗರದಲ್ಲಿ ತಲೆ ಎತ್ತುತ್ತಿರುವ ದೊಡ್ಡ ಮಟ್ಟದ ವಸತಿ ಯೋಜನೆಗಳನ್ನು ಬಿಟ್ಟು, ಗ್ರಾಮಾಂತರ ಹಾಗೂ ಬೆಂಗಳೂರಿನಿಂದ ಕೊಂಚ ಹೊರ ಭಾಗಕ್ಕೆ ತನ್ನ ಯೋಜನೆಗಳನ್ನು ಸಂಸ್ಥೆ ವಿಸ್ತರಿಸಿದೆ. ಬೆಳೆಯುತ್ತಿರುವ ಪಟ್ಟಣಕ್ಕೆ ಹೂಡಿಕೆ ಮಾಡುವ ವಿಪುಲ ಅವಕಾಶವನ್ನು ಒದಗಿಸುವ ಸಂಸ್ಥೆಗಳಲ್ಲಿ ಯುಟಿಸಿ ಅಗ್ರ ಸ್ಥಾನ ಪಡೆದಿದ್ದು, ಚಿಕ್ಕಬಳ್ಳಾಪುರ, ಮಾಗಡಿ ರಸ್ತೆ, ತುರುವೆಕೆರೆಗಳಲ್ಲಿ ನೂತನ ಯೋಜನೆಗಳ ಮೂಲಕ 1 ಸಾವಿರಕ್ಕೂ ಹೆಚ್ಚು ವಿವಿಧ ಅಳತೆಯ ನಿವೇಶನ ಮಾರಾಟಕ್ಕೆ ಸಿದ್ಧಪಡಿಸುತ್ತಿದೆ.

ಖಾಸಗಿ ಬಡಾವಣೆಗಳಲ್ಲಿ ನಿವೇಶನ ಪಡೆಯುವುದೇ ಕಷ್ಟಕರ ಎಂಬ ಮಾತಿಗೆ ಯುಟಿಸಿ ಗ್ರೂಪ್ ಅಪವಾದ. ಚದರ ಅಡಿಗೆ 500 ರೂ.ನಿಂದ 1500 ರೂ. ವರೆಗಿನ ನಿವೇಶನಗಳೂ ಸಂಸ್ಥೆಯಲ್ಲಿವೆ. ಸಾಮಾನ್ಯ ವರ್ಗದ ಜನರಿಗೆ ಅನುಕೂಲವಾಗುವಂತೆ ಸಾಲ ಸೌಲಭ್ಯಗಳನ್ನೂ ಕಲ್ಪಿಸಲಿದೆ. ಗ್ರಾಹಕರ ಬೇಡಿಕೆ ಹಾಗೂ ಗ್ರಾಹಕರ ಅವಶ್ಯಕತೆಗಳಿಗೆ ತಕ್ಕಂತಹ ನಿವೇಶನಗಳನ್ನು ನೀಡುವಲ್ಲಿ ಸಂಸ್ಥೆ ಯಶ ಕಂಡಿದೆ. ಚಿಕ್ಕಬಳ್ಳಾಪುರದಲ್ಲಿ ಯುಟಿಸಿ ರಾಯಲ್ ಸಿಟಿ, ಯುಟಿಸಿ ಮೌಂಟೇನ್ ಮಿಸ್ಟ್, ಯುಟಿಸಿ ರಾಯಲ್ ಎನ್​ಕ್ಲೇವ್ ಯೋಜನೆಗಳು ಗ್ರಾಹಕರ ಕೈಸೇರಲು ಸಿದ್ಧವಾಗಿದೆ. ಅಧಿಕ ಬೆಲೆಯ ನೋಟುಗಳನ್ನು ಅಮಾನ್ಯೀಕರಣದಿಂದ ರಿಯಲ್ ಎಸ್ಟೇಟ್​ಗೆ ಪ್ರಾಮಾಣಿಕ ಹೂಡಿಕೆದಾರರ ದಂಡೇ ಹರಿದು ಬಂದಿದೆ. ಹೀಗಾಗಿ ಕೆಲ ಸಮಯದ ಹಿಂದೆ ಉದ್ಯಮಕ್ಕಿದ್ದ ಕಳಂಕ ತೊಳೆದು ಹೋಗಿದೆ. ಮಾರ್ಚ್ ಬಳಿಕ ಮುಂಗಡ ಹಣ ಪಾವತಿ ಸೇರಿ ನಿವೇಶನ ಅಥವಾ ಯೋಜನೆಗಳ ಆರಂಭಿಕ ಕೆಲಸಗಳಿಗೆ ಈ ನಿರ್ಧಾರ ಸಹಾಯಕವಾಗಲಿದೆ ಎಂಬುದು ಯುಟಿಸಿ ಗ್ರೂಪ್​ನ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಬಿ.ಪಿ. ಗಂಗಹನುಮಯ್ಯ ಅವರ ಅಭಿಪ್ರಾಯ.

ಪಾರದರ್ಶಕ ವ್ಯವಹಾರ

ನಿವೇಶನ ನೀಡುವ ವೇಳೆ ಯಾವುದೇ ಗೊಂದಲಗಳಿಗೆ ಅವಕಾಶಗಳಿಲ್ಲ. ದಾಖಲೆಗಳನ್ನು ಪರಿಶೀಲಿಸಲೆಂದೇ ನುರಿತ ಕಾನೂನು ತಜ್ಞರ ತಂಡಗಳಿದೆ. ಜಮೀನು ಖರೀದಿಗೆ ಮೊದಲು ಕಾನೂನು ತಂಡದಿಂದ ಸಲಹೆ ಪಡೆದು, ದಾಖಲೆಗಳ ಪರಿಶೀಲಿಸಿದ ಬಳಿಕವೇ ಮುಂದಿನ ವ್ಯವಹಾರ. ಹೀಗಾಗಿ ಯಾವುದೇ ಬಡಾವಣೆಯಲ್ಲಿ ನ್ಯಾಯಾಲಯದಲ್ಲಿ ಇತ್ಯರ್ಥವಾಗದೇ ಬಾಕಿಯಾಗಿರುವ ಧಾವೆಗಳಿಲ್ಲ ಎಂಬ ಹೆಗ್ಗಳಿಕೆಯೂ ಇದೆ. ಗ್ರಾಹಕರೂ, ತಾವು ಪಡೆಯುವ ನಿವೇಶನದ ಬಗ್ಗೆ ಯಾವುದೇ ಮಾಹಿತಿ ಪಡೆಯಲು ಅವಕಾಶಗಳಿರುತ್ತದೆ. ಜಮೀನು ಕೊಡು-ಕೊಳ್ಳುವಿಕೆ ಹಾಗೂ ಗ್ರಾಹಕರಿಗೆ ಹಸ್ತಾಂತರ ಎಲ್ಲವೂ ಸಂಪೂರ್ಣ ಪಾರದರ್ಶಕ ವ್ಯವಸ್ಥೆ ಯುಟಿಸಿ ಗ್ರೂಪ್​ನ ವೈಶಿಷ್ಟ್ಯ ಎಂದರೆ ಅತಿಶಯೋಕ್ತಿಯಲ್ಲ.

ಇತ್ತೀಚಿನ ದಿನಗಳಲ್ಲಿ ಜನರು ವಿಲ್ಲಾಗಳ ಮೇಲೆ ಹೆಚ್ಚಿನ ಆಸಕ್ತಿ ತೋರುತ್ತಿರುವುದು ಗಮನಾರ್ಹ ವಿಚಾರ. ಹೀಗಾಗಿ ಪ್ರಸ್ತುತ ನಿರ್ವಣವಾಗುತ್ತಿರುವ ಬಡಾವಣೆಗಳಲ್ಲಿ ವಿಲ್ಲಾಗಳ ನಿರ್ವಣಕ್ಕೂ ಅವಕಾಶ ನೀಡಲಾಗಿದೆ. ಅಲ್ಲದೆ ಚಿಕ್ಕಬಳ್ಳಾಪುರದ ಯೋಜನೆಗಳಲ್ಲಿ ಕ್ಲಬ್ ಹೌಸ್, ಒಳಾಂಗಣ ಕ್ರೀಡಾಂಗಣ, ಸುಸಜ್ಜಿತ ಶಿಕ್ಷಣ ಸಂಸ್ಥೆಗಳ ನಿರ್ವಣಕ್ಕೂ ಅವಕಾಶವಿದೆ. ಹೀಗಾಗಿ ಇಂದಿನ ಯೋಜನೆ ಭವಿಷ್ಯದಲ್ಲಿ ಅತ್ಯುತ್ತಮ ಆದಾಯ ಗ್ರಾಹಕರಿಗೆ ತಂದುಕೊಡುವ ಸಾಧ್ಯತೆ ಇದೆ. ಅಲ್ಲದೆ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆ ಮಾದರಿಯಲ್ಲೇ ಎಲ್ಲ ಬಡಾವಣೆ ನಿರ್ವಣವಾಗುವುದರಿಂದ ಅತ್ಯಾಧುನಿಕ ಸೌಲಭ್ಯ ಹಾಗೂ ಗುಣಮಟ್ಟದ ಸವಲತ್ತು ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿದೆ.

ಆಭರಣಗಳನ್ನು ಮನೆಯಲ್ಲಿರಿಸುವುದೇ ಕಷ್ಟಕರವಾಗಿರುವುದರಿಂದ ಜನರು ಪ್ರಾಪರ್ಟಿ ಖರೀದಿಸುವುದೇ ಹೆಚ್ಚು ಸೂಕ್ತ. ಜಮೀನು ಎಂದೆಂದಿಗೂ ನಶಿಸುವ ಸ್ವತ್ತಾಗುವುದಿಲ್ಲ. ಅಲ್ಲದೆ ಉಪನಗರದ ಯೋಜನೆಯಲ್ಲಿ ಹೂಡಿಕೆಯಿಂದ ಮುಂದಿನ ಕೆಲ ವರ್ಷದಲ್ಲಿ ದ್ವಿಗುಣಗೊಳಿಸಬಹುದು. ನಮ್ಮ ಯೋಜನೆಗಳಲ್ಲಿ ಬಡಾವಣೆಯ ನಿರ್ವಹಣೆಯನ್ನೂ ಸಂಸ್ಥೆಯೇ ನೋಡಿಕೊಳ್ಳುತ್ತದೆ

| ಬಿ.ಪಿ. ಗಂಗಹನುಮಯ್ಯ, ಯುಟಿಸಿ ಸಂಸ್ಥೆ ಸಿಎಂಡಿ

ಯೋಜನೆಗಳ ವಿವರ

  • ಚಿಕ್ಕಬಳ್ಳಾಪುರ – ಬೆಂಗಳೂರು-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ ಸಮೀಪ ಯುಟಿಸಿ ರಾಯಲ್ ಸಿಟಿ:
  • ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದಲ್ಲಿ ಕಲ್ಚರಲ್ ಸಿಟಿ
  • ಬೆಂಗಳೂರು-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಯುಟಿಸಿ ಮೌಂಟೇನ್ ಮಿಸ್ಟ್
  • ಚಿಕ್ಕಬಳ್ಳಾಪುರ ಡಿಸಿ ಕಚೇರಿ ಸಮೀಪ ಯುಟಿಸಿ ರಾಯಲ್ ಎನ್​ಕ್ಲೇವ್
  • ತಾವರೆಕೆರೆಯಲ್ಲಿ ಯುಟಿಸಿ ಆಕ್ಸಿಜನ್ ಸಿಟಿ

Leave a Reply

Your email address will not be published. Required fields are marked *

Back To Top