Monday, 24th September 2018  

Vijayavani

ದುನಿಯಾ ವಿಜಿಗೆ ಇನ್ನೂ ತಪ್ಪದ ಸಂಕಷ್ಟ- 2 ದಿನ ಜರಾಸಂಧನಿಗೆ ನ್ಯಾಯಾಂಗ ಬಂಧನ- ರೌಡಿ ಶೀಟ್​ ಓಪನ್​ಗೆ ಖಾಕಿ ಪ್ಲಾನ್.        ದರ್ಶನ್ ಕಾರ್ ಆಕ್ಸಿಡೆಂಟ್- ಬಲಗೈ ಮೂಳೆ ಮುರಿತ ಬೆನ್ನಲ್ಲೇ ವಾರ್ಡ್​ಗೆ ದಚ್ಚು ಶಿಫ್ಟ್- ಶೀಘ್ರ ಗುಣಮುಖ ಆಗುವಂತೆ ಸುದೀಪ್ ಟ್ವೀಟ್        ಪರಿಷತ್​ ಮೂರೂ ಸ್ಥಾನ ಮಿತ್ರಕೂಟಕ್ಕೆ- ಕಾಂಗ್ರೆಸ್​ನ ಇಬ್ಬರು, ಜೆಡಿಎಸ್​​ನ ಒಬ್ಬರು ಅವಿರೋಧ ಆಯ್ಕೆ- ರಮೇಶ್​ ಆಯ್ಕೆಗೆ ಅಪಸ್ವರ        ಉತ್ತರ ಭಾರತದಲ್ಲಿ ಅಬ್ಬರಿಸಿದ ವರುಣ- ಮೇಘಸ್ಫೋಟಕ್ಕೆ ಪಂಜಾಬ್, ಹಿಮಾಚಲ ತಲ್ಲಣ- ಕೇದಾರನಾಥದಲ್ಲಿ ಕನ್ನಡಿಗರಿಗೆ ಸಂಕಷ್ಟ        ಸಿಕ್ಕಿಂನಲ್ಲಿ ಏರ್​ಪೋರ್ಟ್​ಗೆ ಮೋದಿ ಚಾಲನೆ- ನಯನ ಮನೋಹರ ವಿಮಾನ ನಿಲ್ದಾಣ ಲೋಕಾರ್ಪಣೆ        ಅಂತೂ ರಜನಿ ಪಾರ್ಟಿಗೆ ಮುಹೂರ್ತ ಫಿಕ್ಸ್- ಡಿಸೆಂಬರ್​ನಲ್ಲಿ ಹೊಸ ಪಕ್ಷದ ಹೆಸರು ಅನೌನ್ಸ್- ಥ್ರಿಲ್ ಆಗಿದ್ದಾರೆ ಫ್ಯಾನ್ಸ್.!       
Breaking News

ಜನರಿಗೆ ಲಾಭವಾಗುವ ನಿರ್ಣಯ ತಳೆಯುವುದು ಮುಖ್ಯ

Friday, 27.01.2017, 3:04 AM       No Comments

ಯಾವ ಕ್ಷೇತ್ರದಲ್ಲೂ ಹಟಮಾರಿ ಸ್ವಭಾವ ತರವಲ್ಲ. ದೊಡ್ಡಮಟ್ಟದ ಲಾಭ ದಕ್ಕಿಸಿಕೊಳ್ಳುವುದಕ್ಕೆ ಸಣ್ಣ ವಿಷಯಗಳೊಂದಿಗೆ ರಾಜಿಯಾಗುವುದು ಉತ್ತಮ. ಇದರ ಪ್ರಯೋಜನ ಆಗುವುದು ಜನಸಮುದಾಯಕ್ಕೇ ಹೊರತು ಇದರಲ್ಲಿ ವೈಯಕ್ತಿಕವಾಗಿರುವಂಥದ್ದು ಏನೂ ಇಲ್ಲ. ಸಹೋದ್ಯೋಗಿಗಳ ಸಹಕಾರವಿಲ್ಲದೆ ಕಾರ್ಯಕ್ಷೇತ್ರದಲ್ಲಿನ ಸಾಧನೆ ದುಸ್ತರವೇ.

 

ರ್ನಾಟಕ ಗೃಹಮಂಡಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಾನು, ‘ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ’ (ಬೆಸ್ಕಾಂ)ದ ಸೇವೆಗೆ ನಿಯೋಜಿಸಲ್ಪಟ್ಟೆ. ಇದು ಹಿಂದೆ ಅಸ್ತಿತ್ವದಲ್ಲಿದ್ದ ‘ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ’ (ಕೆಇಬಿ)ಯನ್ನು ವಿಭಜಿಸಿ ರಚಿಸಲಾದ ಐದು ವಿದ್ಯುಚ್ಛಕ್ತಿ ಸರಬರಾಜು ಕಂಪನಿಗಳಲ್ಲಿ ಒಂದು. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್)ವು ಪ್ರಸರಣ ಕಂಪನಿ ಎನಿಸಿಕೊಂಡರೆ, ಬೆಸ್ಕಾಂ ಮತ್ತು ಇತರ ಕಂಪನಿಗಳು ಸರಬರಾಜು ಕಂಪನಿಗಳಾದವು. ಹಿಂದೆ ಕೆಇಬಿಯಲ್ಲಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಗಿನ ನನ್ನ ಅನುಭವವನ್ನು ಹೇಳುವುದಾದರೆ, ಅದು ಬಹುತೇಕವಾಗಿ ಆಡಳಿತಾತ್ಮಕ ವಿಷಯಗಳಿಗೆ ಸಂಬಂಧಿಸಿದ್ದಾಗಿತ್ತು. ಆದರೆ ಬೆಸ್ಕಾಂ ಸೇವೆಗೆ ನಿಯೋಜಿಸಲ್ಪಟ್ಟಾಗ, ತಾಂತ್ರಿಕ ವಿಷಯ/ವ್ಯವಹಾರಗಳನ್ನೂ ನೋಡಿಕೊಳ್ಳಬೇಕಾಗುತ್ತಿತ್ತು. ಉಪ ವಿದ್ಯುತ್​ಕೇಂದ್ರ ಅಥವಾ ಗ್ರಾಹಕರ ಮಟ್ಟದಲ್ಲಿ ಆಗುವ ವಿದ್ಯುಚ್ಛಕ್ತಿ ಪೂರೈಕೆ ಪ್ರಮುಖ ಚಟುವಟಿಕೆಯಾಗಿತ್ತು. ಒಟ್ಟಿನಲ್ಲಿ, ಬಹಳಷ್ಟು ಕಾರ್ಯಚಟುವಟಿಕೆಗಳನ್ನು ಅದು ಒಳಗೊಂಡಿತ್ತು ಎನ್ನಬಹುದು.

ವಿದ್ಯುಚ್ಛಕ್ತಿ ಸರಬರಾಜು, ಆದಾಯದ ಮಾದರಿ, ಜನರ ಕುಂದುಕೊರತೆಗಳು ಇತ್ಯಾದಿ ವಿಷಯಗಳ ಒಟ್ಟಾರೆ ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳುವುದು ನನ್ನ ಪಾಲಿಗೆ ತೀರಾ ಹೊಸ ವಿಷಯವಾಗಿತ್ತು. ವಿದ್ಯುಚ್ಛಕ್ತಿಯು ಅಗೋಚರ ವಸ್ತು ಎಂಬುದು ಗೊತ್ತಿರುವಂಥದ್ದೇ. ಗೃಹಮಂಡಳಿಯಲ್ಲಾದರೋ ನಿರ್ಮಾಣ ಗೊಂಡ ಮನೆ ಅಥವಾ ಅಥವಾ ಮಂಜೂರಾದ ನಿವೇಶನಗಳನ್ನು ನೀವು ನೋಡಲು ಸಾಧ್ಯವಿದೆ. ಆದರೆ ಇಲ್ಲಿ ನಿಮಗೇನೂ ಗೋಚರಿಸುವುದಿಲ್ಲ. ವಿದ್ಯುತ್ತನ್ನು ಬಳಸುವ ಹಾಗೂ ಪ್ರತಿಯಾಗಿ ಶುಲ್ಕ/ವರಮಾನ ನೀಡುವ ಬಳಕೆದಾರರು ಮಾತ್ರವೇ ನಿಮ್ಮ ಅರಿವಿಗೆ ದಕ್ಕುತ್ತಾರೆ. ಅಲ್ಲಿಗೆ, ಕಣ್ಣಿಗೆ ಗೋಚರಿಸದ ಆದರೆ ಮಾಪನಕ್ಕೆ ದಕ್ಕುವ ವಸ್ತುವಿಗೆ ಗ್ರಾಹಕರು ಶುಲ್ಕವನ್ನು ಕಟ್ಟುತ್ತಾರೆ ಎಂದಾಯಿತು.

ನಷ್ಟವನ್ನು ಲಾಭವಾಗಿ ಮಾರ್ಪಡಿಸಿದ್ದು: ಕಡಿಮೆ ವೋಲ್ಟೇಜಿನ (ಎಲ್​ಟಿ) ಮತ್ತು ಅಧಿಕ ವೋಲ್ಟೇಜಿನ (ಎಚ್​ಟಿ) ವಿದ್ಯುತ್ ಪ್ರಸರಣ ಮಾರ್ಗಗಳನ್ನು ಬಹಳ ಹಿಂದೆಯೇ ಅಳವಡಿಸಲಾಗಿತ್ತು. ಬೆಸ್ಕಾಂನ ಆರ್ಥಿಕ ಪರಿಸ್ಥಿತಿ ಚೆನ್ನಾಗಿರಲಿಲ್ಲವಾದ್ದರಿಂದ, ಹಳೆಯ ಮೂಲಸೌಕರ್ಯವನ್ನು ನವೀಕರಿಸುವುದೇ ಸವಾಲಾಗಿತ್ತು. ಈ ಕಾರಣದಿಂದಾಗಿಯೇ, ಬೆಂಗಳೂರಿ ನಲ್ಲಿನ ವಿದ್ಯುಚ್ಛಕ್ತಿ ಸರಬರಾಜು ಚಟುವಟಿಕೆಯ ಖಾಸಗೀಕರಣದ ಕುರಿತಾದ ಮಾತುಕತೆಗಳು ಗಂಭೀರ ಸ್ವರೂಪದಲ್ಲಿ ನಡೆಯುತ್ತಿದ್ದವು. ಬೆಸ್ಕಾಂ ಅನ್ನು ಆರ್ಥಿಕವಾಗಿ ಕಾರ್ಯಸಾಧ್ಯವಾಗಿಸುವುದು ಸವಾಲಾಗಿತ್ತು. ಬೆಂಗಳೂರಿ ನಂಥ ನಗರವೊಂದರಲ್ಲಿ ಯಾವುದೇ ಕಂಪನಿಯು ಆರ್ಥಿಕವಾಗಿ ಕಾರ್ಯಸಾಧು ವಾಗದ ಪಕ್ಷದಲ್ಲಿ, ಬೇರಾವುದೇ ಪ್ರದೇಶದಲ್ಲೂ ಅದು ನೆರವೇರದು.

ವಿದ್ಯುತ್ ಪ್ರಸರಣ ಮತ್ತು ವಿತರಣೆಯಲ್ಲಿನ ನಷ್ಟಗಳನ್ನು ತಗ್ಗಿಸುವುದು ಆದ್ಯತೆಯ ಮೇಲೆ ಆಗಬೇಕಾದ ಕೆಲಸವಾಗಿತ್ತು. ಇಷ್ಟು ಸಾಲದೆಂಬಂತೆ, ಹಲವಾರು ಬಳಕೆದಾರರು ಕಚೇರಿಗಳಿಗೆ ಕುಂದುಕೊರತೆ, ಅಸಮಾಧಾನಗಳನ್ನು, ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿದ್ದರೂ ಅದು ದಕ್ಕಿಲ್ಲ ಎಂಬ ಅಳಲನ್ನು ಹೊತ್ತುತರುವುದು ಮಾಮೂಲಾಗಿತ್ತು. ಅವರ ಸಮಸ್ಯೆಗಳನ್ನು ನಿಭಾಯಿಸುವುದು ಹೇಗೆ, ಒಂದಿಡೀ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ತರುವುದು ಹೇಗೆ ಎಂಬುದು ಕೂಡ ಸವಾಲೇ ಆಗಿತ್ತು. ಅಷ್ಟೇಕೆ, ಉದ್ಯಮಗಳಿಗೆ ಕೂಡ ಆದ್ಯತಾನುಸಾರ ಸೇವೆ ದಕ್ಕುತ್ತಿರಲಿಲ್ಲ. ಹಾಗೆ ನೋಡಿದರೆ, ಯಾವ ವಲಯ ಹೆಚ್ಚಿನ ವರಮಾನ ತಂದುಕೊಡುತ್ತದೋ ಅದಕ್ಕೆ ಮೊದಲ ಸೇವೆ ಸಲ್ಲಬೇಕು. ಆದರೆ, ಟ್ರಾನ್ಸ್​ಫಾರ್ಮರ್​ಗಳು ಹೆಚ್ಚುವರಿ ಹೊರೆ ತಡೆದುಕೊಳ್ಳಲಾರವು ಎಂಬ ದೂರುಗಳು ಅಲ್ಲಿ ಸಾಮಾನ್ಯವಾಗಿದ್ದವು. ವ್ಯವಸ್ಥೆಯಾಗಲೇ ಅತಿಯಾದ ಹೊರೆಯಿಂದ ಬಳಲುತ್ತಿದ್ದುದರಿಂದ, ಹೊಸ ಗ್ರಾಹಕರನ್ನು ಸೇರ್ಪಡೆ ಮಾಡುವುದು ಸಾಧ್ಯವಿರಲಿಲ್ಲ.

ಅದು ಗಣಕೀಕರಣ ವ್ಯವಸ್ಥೆ ಇರದಿದ್ದ ಕಾಲ; ವಿದ್ಯುತ್ ಬಿಲ್​ಗಳನ್ನು ಕೈಗಳಿಂದಲೇ ರಚಿಸಲಾಗುತ್ತಿತ್ತು. ಹೀಗಾಗಿ, ಈ ವಿಷಯಕ್ಕೆ ಸಂಬಂಧಿಸಿಯೇ ಅನೇಕ ದೂರುಗಳಿರುತ್ತಿದ್ದವು. ಬಿಲ್ ತಯಾರಿಸುವ ವಿಭಾಗವನ್ನು ನಿಭಾಯಿಸುತ್ತಿದ್ದ ಸಿಬ್ಬಂದಿ, ಪೆನ್ಸಿಲ್ ಬಳಸಿ ಬಿಲ್​ನಲ್ಲಿ ಹೆಚ್ಚಿನ ಮೊತ್ತ ನಮೂದಿಸುತ್ತಿದ್ದರು. ಬಳಕೆದಾರರು ಬಂದಾಗ ಅದನ್ನು ಸರಿಪಡಿಸಿ ಅವರಿಗೆ ಮರಳಿಸುತ್ತಿದ್ದರು. ಒಟ್ಟಿನಲ್ಲಿ ಸರಿಯಾದ ರೀತಿಯಲ್ಲಿ ಲೆಕ್ಕಪತ್ರ ನಿಭಾಯಿಸುವ ಪರಿಪಾಠವೇ ಇರಲಿಲ್ಲ. ಈ ಕಾರಣದಿಂದಲೇ ಯುನಿಟ್ ಹಾಗೂ ಆದಾಯದ ವಿಷಯದಲ್ಲಿ ಅಗಾಧ ನಷ್ಟವಾಗುತ್ತಿತ್ತು.

ವ್ಯವಸ್ಥೆಯ ಸಮಗ್ರ ಸುಧಾರಣೆ: ರಾಜ್ಯ ರಾಜಧಾನಿಯಲ್ಲಿ ಬೆಸ್ಕಾಂ ಒಂದು ಅಗ್ರಗಣ್ಯ ಕಂಪನಿಯಾಗಿದ್ದ ಕಾರಣ, ನಾನು ಉತ್ತಮ ಫಲಿತಾಂಶ ತೋರಿಸುವುದು ಅನಿವಾರ್ಯವಾಗಿತ್ತು. ಹೀಗಾಗಿ ತಡಮಾಡದೆ, ನನ್ನ ಕಾರ್ಯವ್ಯಾಪ್ತಿಯ ಸಂಪೂರ್ಣ ಪರಿಚಯ ಮಾಡಿಕೊಂಡೆ. ಇಂಜಿನಿಯರುಗಳ ಜತೆಗೆ ಸಭೆ ನಡೆಸುವ, ಜನರೊಂದಿಗೆ ಮಾತನಾಡುವ, ಸಾರ್ವಜನಿಕರ ಕುಂದುಕೊರತೆ ಆಲಿಸುವ ಪರಿಪಾಠಗಳನ್ನು ಶುರುವಿಟ್ಟುಕೊಂಡೆ. ‘ಭೇಟಿಯ ಸಮಯ’ ಎಂಬ ಕಟ್ಟುಪಾಡನ್ನೇನೂ ನಾನು ವಿಧಿಸಿರದ ಕಾರಣ, ಯಾರು ಯಾವಾಗ ಬೇಕಿದ್ದರೂ ದೂರಿನೊಂದಿಗೆ ನನ್ನನ್ನು ಭೇಟಿಯಾಗಬಹುದಿತ್ತು. ನೌಕರರ ಒಕ್ಕೂಟಗಳೊಂದಿಗೆ ಮಾತುಕತೆಗೆ ಶುರುವಿಟ್ಟುಕೊಂಡು, ಗಣಕೀಕರಣ ವ್ಯವಸ್ಥೆ ಮತ್ತು ಇನ್ನಿತರ ಸಂಗತಿಗಳ ಕುರಿತು ರ್ಚಚಿಸಿದೆ. ತರುವಾಯದಲ್ಲಿ, ಭಾರತ ಸರ್ಕಾರದ ಆರ್ಥಿಕ ನೆರವಿನ ’ಅ್ಚ್ಝ್ಟಠಿಛಿ ಕಟಡಿಛ್ಟಿ ಈಛಿಡಛ್ಝಿಟಟಞಛ್ಞಿಠಿ ್ಕ್ಛ್ಟಠ ಕ್ಟಟಜ್ಟಚಞಞಛಿ’ (ಅಕಈಕ) ಎಂಬ ಯೋಜನೆಗೆ ಸಂಬಂಧಿಸಿದ ಸಾಕಷ್ಟು ಯೋಜನಾಕಾರ್ಯ ನಮ್ಮ ಮಡಿಲಿಗೆ ಬಿತ್ತು ಮತ್ತು ಇದರಡಿಯಲ್ಲಿ ವ್ಯವಸ್ಥೆಯ ಸುಧಾರಣೆ ಕುರಿತಾದ ಬಹಳಷ್ಟು ಕಾರ್ಯಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕಾಗಿ ಬಂತು. ಯೋಜನೆಗೆ ಮಂಜೂರಾತಿ ಸಿಕ್ಕಿತಾದರೂ, ಅದೇ ನೌಕರರನ್ನಿಟ್ಟುಕೊಂಡು ಅನುಷ್ಠಾನಗೊಳಿಸುವುದು ಮತ್ತೆ ಸವಾಲಾಯಿತು.

ಕೆಇಬಿಯಲ್ಲಿದ್ದಂತೆ, ಇಲ್ಲಿನ ನೌಕರರನ್ನು ಪ್ರತ್ಯೇಕಿಸಿರಲಿಲ್ಲ. ಕೆಇಬಿ ನೌಕರರು ಇಲ್ಲಿದ್ದರಾದರೂ, ಎಸ್ಕಾಂಗಳಿಗೆ ಅವರನ್ನು ನಿಯೋಜಿಸಿರಲಿಲ್ಲ. ಆ ದಿನಗಳಲ್ಲಂತೂ, ಆಡಳಿತಾತ್ಮಕ ಹಾಗೂ ಇತರ ಸಂಗತಿಗಳಲ್ಲಿ ತಲೆಹಾಕುವ ವಿಷಯದಲ್ಲಿ ನೌಕರರ ಒಕ್ಕೂಟಗಳು ತೀರಾ ಬಲಿಷ್ಠವಾಗಿದ್ದವು. ಯಾವುದೇ ಮೂಲಭೂತ ಅಥವಾ ತೀವ್ರ ಸುಧಾರಣಾವಾದಿ ನಿರ್ಣಯ ಕೈಗೊಳ್ಳುವುದು ತೀರಾ ಕಷ್ಟಕರವಾಗಿತ್ತು. ಒಕ್ಕೂಟಗಳು ಆಕ್ಷೇಪಿಸುವುದಕ್ಕೆ ಮುಂದಾದರೆ ಅದೇ ಸಮಸ್ಯೆಯಾಗಿಬಿಡುತ್ತಿತ್ತು. ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ನಡೆಸಿಕೊಂಡು ಹೋಗುವ, ಸೋರಿಕೆ ತಡೆಯುವ ಜತೆಜತೆಗೆ ನಷ್ಟವನ್ನು ತಗ್ಗಿಸಿ ಆದಾಯವನ್ನು ಹೆಚ್ಚಿಸುವುದು ಅಲ್ಲಿದ್ದ ಸವಾಲಾಗಿತ್ತು; ಇಷ್ಟೇ ಅಲ್ಲ, ಜನರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸುವುದರ ಜತೆಗೆ ಅವರೊಂದಿಗೆ ಸಮರ್ಪಕವಾಗಿ ನಡೆದುಕೊಳ್ಳುವಂತೆ ಸಿಬ್ಬಂದಿಯನ್ನು ಸಜ್ಜುಗೊಳಿಸುವುದೂ ಮತ್ತೊಂದು ಸವಾಲಾಗಿತ್ತೆನ್ನಿ.

ಅನೌಪಚಾರಿಕ ಸಭೆಗಳು: ವಾರದ ಸಭೆಗಳ ಪರಿಕಲ್ಪನೆಯನ್ನು ನಾನಲ್ಲಿ ಪರಿಚಯಿಸಿದೆ. ಪ್ರಧಾನ ಕಚೇರಿಯಲ್ಲಿನ ಪ್ರಮುಖ ಅಧಿಕಾರಿಗಳನ್ನು, ಕ್ಷೇತ್ರಕಾರ್ಯದಲ್ಲಿ ತೊಡಗಿರುವ ಇಂಜಿನಿಯರುಗಳನ್ನು ಪ್ರತಿ ವಾರವೂ ಭೇಟಿಯಾಗುತ್ತಿದ್ದೆವು. ಸಭೆ ಸೇರಿ, ಅನೌಪಚಾರಿಕವಾಗಿ ಅವರೊಂದಿಗೆ ಮಾತನಾಡುವುದು ನನ್ನ ಕಾರ್ಯಶೈಲಿಯಾಗಿತ್ತು. ‘ಅಧಿಕೃತ ಅಧಿಕಾರ’ದ ಬದಲಿಗೆ ‘ವೈಯಕ್ತಿಕ ಅಧಿಕಾರ’ ಚಲಾಯಿಸುವುದರಲ್ಲೇ ನನಗೆ ನಂಬಿಕೆ. ನೀವು ಯಾರನ್ನಾದರೂ ವ್ಯಕ್ತಿಗತವಾಗಿ ಅರಿತಿದ್ದರೆ, ಅವರಿಂದ ಹೆಚ್ಚು ಕೆಲಸ ಮಾಡಿಸಿಕೊಳ್ಳುವುದು ಸಾಧ್ಯ. ನಮ್ಮ ಕೈಯಲ್ಲಿ ಅಧಿಕಾರವಿರುತ್ತದೆ, ಯಾರನ್ನು ಬೇಕಿದ್ದರೂ ದಂಡನೆಗೆ ಒಳಪಡಿಸಬಹುದಾಗಿರುತ್ತದೆ; ಆದರೆ ಅದು ಕೊನೆಯ ಆಯ್ಕೆಯಾಗಬೇಕು. ಈ ತತ್ತ್ವದಲ್ಲೇ ನನಗೆ ನಂಬಿಕೆ. ಕ್ರಮ ಕೈಗೊಳ್ಳುವುದಾಗಿ ನಾನು ಅಧಿಕಾರಿಗಳಿಗೆ ಬಾಯಿಮಾತಲ್ಲಿ ಗದರಿಸಿದ್ದಿದೆ, ಆದರೆ ಅವರನ್ನು ಅಮಾನತುಗೊಳಿಸುವ, ಶಿಸ್ತುಕ್ರಮ ಕೈಗೊಳ್ಳುವಂಥ ಶಿಕ್ಷಾರೂಪದ ಕ್ರಮಕ್ಕೆ ಎಂದೂ ಮುಂದಾಗಿಲ್ಲ.

ನೌಕರರ ಒಕ್ಕೂಟಗಳೊಂದಿಗಿನ ಸಮಸ್ಯೆಗಳು: ನಮ್ಮ ಕಾರ್ಯತಂತ್ರವನ್ನು ಹೇಗೆ ಹೊಂದಿಸಿಕೊಳ್ಳಬೇಕಾಗಿ ಬರುತ್ತದೆ ಎಂಬುದನ್ನು ತೋರಿಸುವ ಘಟನೆಯೊಂದನ್ನು ಇಲ್ಲಿ ಉಲ್ಲೇಖಿಸಬಯಸುವೆ. ಒಂದಷ್ಟು ದೂರುಗಳ ನ್ನಾಧರಿಸಿ ಕೆಲ ಜನರ ವರ್ಗಾವಣೆ ಆದೇಶವನ್ನು ನಾನು ಜಾರಿಮಾಡಬೇಕಾಗಿ ಬಂತು. ಬಹಳ ಕಾಲದಿಂದ ನನಗೆ ಗೊತ್ತಿದ್ದ, ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬಂದು, ‘ಕೆಲ ವರ್ಗಾವಣೆ ಆದೇಶಗಳನ್ನು ಮರುಪರಿಶೀಲಿಸುವಂತೆ’ ಹೇಳಿದರು. ನಾನು ‘ಒಂದು ಸಲ ಆದೇಶ ಜಾರಿಮಾಡಿದೆನೆಂದರೆ, ಅದರ ಒಂದು ಪದವನ್ನೂ ಬದಲಿಸುವುದಿಲ್ಲ’ ಎಂದೆ. ಅವರು ಮರುದಿನ ಮತ್ತೊಮ್ಮೆ ಬಂದು, ಕೆಲವರ ವರ್ಗಾವಣೆ ಆದೇಶಗಳನ್ನಾದರೂ ಮಾರ್ಪಡಿಸುವಂತೆ ಕೇಳಿದಾಗ, ಆ ಮನವಿಯನ್ನು ಮತ್ತೊಮ್ಮೆ ನಿರಾಕರಿಸಿದೆ. ಅದಕ್ಕವರು, ‘ಓರ್ವ ಎಂ.ಡಿ.ಯಾಗಿ ನೀವೇನು ಬಯಸುತ್ತಿದ್ದೀರಿ- ಕೇವಲ ಈ ಆದೇಶಗಳ ಅನುಷ್ಠಾನವನ್ನೋ ಅಥವಾ ಕಂಪನಿಗಾಗಿ ಏನಾದರೂ ಒಳ್ಳೆಯದು ಮಾಡಬೇಕು ಎಂಬುದನ್ನೋ?’ ಎಂದರು. ‘ಕಂಪನಿಗೆ ಏನಾದರೂ ಒಳ್ಳೆಯದನ್ನು ಮಾಡಬೇಕೆಂಬುದು ನನ್ನ ಬಯಕೆ’ ಎಂದೆ. ಅದಕ್ಕವರು, ‘ನೀವು ಈ ಆದೇಶಕ್ಕೇ ಅಂಟಿಕೊಂಡಿರಬೇಡಿ. ಆದೇಶ ಮುಖ್ಯವಲ್ಲ. ಕಾರಣ, ನೀವಿಲ್ಲಿ ಉಳಿದುಕೊಂಡರೆ ಓರ್ವ ಎಂ.ಡಿ.ಯಾಗಿ ಬಹಳಷ್ಟು ಒಳ್ಳೆಯ ಕೆಲಸಗಳನ್ನು ಮಾಡುತ್ತೀರಿ. ಒಂದೊಮ್ಮೆ ನಾವು ಪ್ರತಿಭಟಿಸಿದರೆ ಮತ್ತು ನೀವು ವಿವಾದವನ್ನು ತೀವ್ರಗೊಳಿಸಿದರೆ, ಗೌಣ ಸಮಸ್ಯೆಗಳೇ ಪ್ರಮುಖ ಸಮಸ್ಯೆಗಳಾಗಿಬಿಡುತ್ತವೆ. ಬೇರೆಲ್ಲಿಗೆ ವರ್ಗವಾದರೂ ನಿಮ್ಮ ಪರಿಕಲ್ಪನೆಗಳನ್ನು ಕಾರ್ಯರೂಪಕ್ಕೆ ತರಲಾಗುವುದಿಲ್ಲ’ ಎಂದುಬಿಟ್ಟರು. ಅವರು ವಿಷಯಮಂಡನೆ ಮಾಡಿದ ರೀತಿ ನನಗಿಷ್ಟವಾಯಿತು. ಮುಖಕ್ಕೆ ಮುಖಕೊಟ್ಟು ನಿಲ್ಲುವುದು ವ್ಯರ್ಥ ಎಂದು ಆಗ ನನಗರಿವಾಯಿತು. ದೊಡ್ಡ ಸಮಸ್ಯೆಗಳು/ವಿಷಯಗಳ ಕುರಿತು ಅವರು ಸಹಕಾರ ನೀಡಿದರೆ, ಸಣ್ಣವು ಗೌಣವಾಗಿಬಿಡುತ್ತವೆ. ಹೀಗಾಗಿ ಭಿನ್ನಾಭಿಪ್ರಾಯಕ್ಕೆ ತೆರೆಯೆಳೆದು ವರ್ಗಾವಣೆ ಆದೇಶದಲ್ಲಿ ಕೆಲ ಬದಲಾವಣೆಗಳನ್ನು ಮಾಡಿದೆ. ಇದರಿಂದ ಅತೀವ ಸಂತಸಗೊಂಡ ಅವರು ಭವಿಷ್ಯದಲ್ಲಿ ನಮ್ಮ ಬೆಂಬಲಕ್ಕೆ ನಿಂತರು.

ಹಟಮಾರಿ ಸ್ವಭಾವ ತರವಲ್ಲ ಎಂಬುದನ್ನು ಆ ಒಕ್ಕೂಟ ನಾಯಕರಿಂದ ಕಲಿತೆ. ದೊಡ್ಡಮಟ್ಟದ ಲಾಭ ದಕ್ಕಿಸಿಕೊಳ್ಳುವ ನಿಟ್ಟಿನಲ್ಲಿ ಸಣ್ಣಸಣ್ಣ ವಿಷಯಗಳೊಂದಿಗೆ ರಾಜಿಯಾಗುವುದು ಉತ್ತಮ. ಇದರಲ್ಲಿ ವೈಯಕ್ತಿಕವಾಗಿರುವಂಥದ್ದು ಏನೂ ಇಲ್ಲ. ಇದರ ಪ್ರಯೋಜನವಾಗುವುದು ಜನಸಮುದಾಯಕ್ಕೇ. ಆದರೆ ಯಾವುದೇ ತೀರ್ವನವನ್ನು ಕೈಗೊಳ್ಳುವಾಗ, ನಾವು ಅದರ ಸಕಾರಾತ್ಮಕ ಮಗ್ಗುಲನ್ನು ನೋಡಬೇಕು.

(ಲೇಖಕರು ಹಿರಿಯ ಐಎಎಸ್ ಅಧಿಕಾರಿ)

 

Leave a Reply

Your email address will not be published. Required fields are marked *

Back To Top