Saturday, 17th March 2018  

Vijayavani

ರಾಜ್ಯದಲ್ಲಿ ಮತ್ತೆ ರಾಹುಲ್​ ಟೆಂಪಲ್​ರನ್​ - ಉಡುಪಿಗೆ ವಿಸಿಟ್ಟು​​​.. ಕೃಷ್ಣಮಠಕ್ಕೆ ಡೌಟು - ಕಾಂಗ್ರೆಸ್​​ನಲ್ಲಿ ಹೈಕಮಾಂಡ್​ ಆದ್ರಾ ಸಿಎಂ..        ಧರ್ಮ ಸಂಕಷ್ಟಕ್ಕೆ ಹೈಕಮಾಂಡ್​ ಎಂಟ್ರಿ - ಚುನಾವಣೆಗಾಗಿ ವಿಷ್ಯ ಸೈಡ್​ಗಿಡೋಕೆ ತಾಕೀತು - ಅತ್ತ ದಿಲ್ಲೀಲಿ ಮೊಯ್ಲಿಗೆ ವರಿಷ್ಠರ ಎಚ್ಚರಿಕೆ        ಕಾಂಗ್ರೆಸ್ ಕೋಟೆಯಲ್ಲಿ ಕೇಸರಿ ಮಾಸ್ಟರ್​ಪ್ಲಾನ್​ - ನಾಲ್ಕೂ ದಿಕ್ಕಿನಲ್ಲಿ ಚಾಣಕ್ಯನ ತಂಡ - ಸಿಎಂ ತವರಲ್ಲಿ ರಾಜೇಂದ್ರ ಅಗರ್​ವಾಲ್​​ ತಂತ್ರಗಾರಿಕೆ        ಮಾರ್ಚ್​ 21ಕ್ಕೆ ಎಲೆಕ್ಷನ್​ಗೆ ಮುಹೂರ್ತ ಸಾಧ್ಯತೆ - ಇವಿಎಂ ಬೇಡ ಅಂತ ಕೈ ನಿರ್ಣಯ - ಬ್ಯಾಲೆಟ್ ಪೇಪರ್​​ಗೆ ಎಚ್​​​ಡಿಡಿ ಅಭಿಮತ        ಭಾರತದ ಬ್ಯಾಂಕ್​​ಗಳಿಂದಲೇ ನಡೆದಿದೆ ಪ್ರಮಾದ - ಸಾಲ ವಾಪಸ್​​ ಕಟ್ಟೋದಾಗಿ ಮಲ್ಯ ವಾದ - ಮದ್ಯದ ದೊರೆ ದೇಶಕ್ಕೆ ಬರೋದೇ ಅನುಮಾನ        ನಾಡಿನೆಲ್ಲೆಡೆ ನಾಳೆ ಯುಗಾದಿ ಸಂಭ್ರಮ - ಶ್ರೀಶೈಲದಲ್ಲಿ ಜನಜಾಗೃತಿ ಸಮಾವೇಶ - ಪ್ರಧಾನಿ ಮೋದಿಯಿಂದ ಹಬ್ಬದ ಶುಭಾಶಯ       
Breaking News

ಜನತೆ ಆಶೀರ್ವಾದ ಪಾಟೀಲರ ಶಕ್ತಿ

Sunday, 08.10.2017, 3:00 AM       No Comments

ವಿಜಯಪುರ: ಪ್ರಜಾಪ್ರಭುತ್ವದಲ್ಲಿ ಜನರ ಆಶೀರ್ವಾದವೇ ದೊಡ್ಡ ಶಕ್ತಿ. ಈ ಶಕ್ತಿಯನ್ನು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಅವರಿಗೆ ನೀಡುವ ಮೂಲಕ ಇನ್ನಷ್ಟು ಜನಸೇವೆ ಮಾಡುವ ಅವಕಾಶವನ್ನು ನೀಡಬೇಕು ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ ಹೇಳಿದರು.

ಸೊಲ್ಲಾಪುರ ರಸ್ತೆಯಲ್ಲಿರುವ ಎಎಸ್​ಪಿ ವಾಣಿಜ್ಯ ಮಹಾವಿದ್ಯಾಲಯ ಆವರಣದಲ್ಲಿ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಜಲ-ವೃಕ್ಷ-ಶಿಕ್ಷಣ‘ ಪ್ರತಿಜ್ಞಾ ಸ್ವೀಕಾರ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು, ಜಲಸಂಪನ್ಮೂಲ ಇಲಾಖೆಯ ಕರ್ಣಧಾರತ್ವ ವಹಿಸಿದ ಸಚಿವ ಎಂ.ಬಿ. ಪಾಟೀಲ ಈ ಭಾಗದ ನೀರಾವರಿ ಯೋಜನೆಗಳಿಗೆ ಶರವೇಗ ನೀಡಿದ್ದಾರೆ ಎಂದರು.

ಅವರ ಒತ್ತಾಸೆ, ಪ್ರಯತ್ನದಿಂದ ವಿಜಯಪುರ ಜಿಲ್ಲೆಯ ಹೆಚ್ಚಿನವರು ನಿರಂತರ ಜ್ಯೋತಿ ಸೌಲಭ್ಯ ಪಡೆದುಕೊಂಡಿದ್ದಾರೆ ಇನ್ನೂ ಬಹುಮುಖ್ಯವಾಗಿ ಜಿಲ್ಲಾ ಉಸ್ತು ವಾರಿ ಸಚಿವ ಎಂ.ಬಿ. ಪಾಟೀಲರ ಪ್ರಯತ್ನದ ಫಲವಾಗಿಯೇ ವಿಜಯಪುರದಲ್ಲಿ ಅಂಡರ್ ಗ್ರೌಂಡ್ ಇಲೆಕ್ಟ್ರಿಸಿಟಿ ಜಾಲ ರೂಪಿಸಲಾಗು ತ್ತಿದ್ದು, 205 ಕೋಟಿ ರೂ. ವ್ಯಯಿಸಲಾಗುತ್ತಿದೆ ಎಂದು ಪ್ರಕಟಿಸಿದರು.

ಸನ್ಮಾನ: 54ನೇ ವಸಂತಕ್ಕೆ ಕಾಲಿರಿಸಿರುವ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲರನ್ನು ಅಭಿಮಾನಿಗಳು ಸನ್ಮಾನಿಸಿದರು. ಸಂಗೀತ ನಿರ್ದೇಶಕ ಅರ್ಜುನ ಜನ್ಯ ನೇತೃತ್ವದ ತಂಡ ಕಾರ್ಯಕ್ರಮ ನಡಸಿಕೊಟ್ಟಿತು. ಎಂ.ಡಿ. ಪಲ್ಲವಿ, ವಿಜಯಪ್ರಕಾಶ್ ಗಾಯನ ಶ್ರೋತೃಗಳನ್ನು ಸೆಳೆಯಿತು. ಖ್ಯಾತ ನಟ ಯಶ್ ಹಾಗೂ ಪತ್ನಿ ರಾಧಿಕಾ ಪಂಡಿತ್ ಉಪಸ್ಥಿತರಿದ್ದರು.

ಹತ್ತು ವರ್ಷದಲ್ಲಿ ಶ್ರೀಮಂತ ಜಿಲ್ಲೆ

‘ಈ ಭೂಮಿಗೆ ಬೊಗಸೆ ನೀರು ಕೊಡಿ ಈ ಭೂಮಿ ನಂದನವನ‘’ವಾಗುತ್ತದೆ ಎಂಬ ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಆಶಯ ಈಡೇರಿಕೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ನೀರಾವರಿ ಯೋಜನೆಗಳ ಅನುಷ್ಠಾನದ ಮೂಲಕ ಮುಂದಿನ 10 ವರ್ಷಗಳಲ್ಲಿ ವಿಜಯಪುರ ಜಿಲ್ಲೆ ರಾಷ್ಟ್ರದ 10 ಶ್ರೀಮಂತ ಜಿಲ್ಲೆಗಳಲ್ಲಿ ಒಂದಾಗಲಿದೆ ಎಂದು ಸಚಿವ ಎಂ.ಬಿ. ಪಾಟೀಲ್ ಆಶಯ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

Back To Top