Friday, 22nd September 2017  

Vijayavani

1. ಸಮಾವೇಶಕ್ಕೆ ಲಕ್ಷ ಮಂದಿ ಸೇರಿಸೋ ಟಾರ್ಗೆಟ್​- ಬರದಿದ್ರೆ ಅಕ್ಕಿ ಕಟ್​​, ಬ್ಯಾಂಕ್​ ಸಬ್ಸಿಡಿಗೆ ಬ್ರೇಕ್​- ಫಲಾನುಭವಿಗಳಿಗೆ ಕೈ ಕಾರ್ಯಕರ್ತರ ಬೆದರಿಕೆ 2. ಕೊಟ್ಟ ಮಾತು ಮರೆತ ಸಿಎಂ ಸಿದ್ದರಾಮಯ್ಯ- 8 ತಿಂಗಳಾದ್ರೂ ಕುಟುಂಬಸ್ಥರಿಗೆ ಸಿಗದ ಪರಿಹಾರ- ಇದೇನಾ ನುಡಿದಂತೆ ನಡೆಯುವ ಸರ್ಕಾರ..? 3. ಎಸ್​​.ಎಂ.ಕೃಷ್ಣ ಅಳಿಯನ ಮನೆ ಕಚೇರಿ ತಲಾಷ್​​- ಎರಡನೇ ದಿನವೂ ಮುಂದುವರಿದ ಪರಿಶೀಲನೆ- ಹುಡುಕಿದಷ್ಟು ಪತ್ತೆಯಾಗ್ತಿದೆ ದಾಖಲೆ ಪತ್ರ 4. ಗದಗದಲ್ಲಿ ಹನಿ ನೀರಿಗಾಗಿ ಹೋರಾಟ- 6 ಸಾವಿರ ಜನಕ್ಕೆ ಟ್ಯಾಂಕರ್​ ನೀರೇ ಆಧಾರ- ಜನರ ಸಮಸ್ಯೆಗೆ ಸ್ಪಂದಿಸಬೇಕಿದೆ ಸರ್ಕಾರ 5. ಮೈಸೂರು ದಸರಾಗೆ ಜನವೋ ಜನ- ಅತ್ತೆ, ಸೊಸೆ ಜೊತೆ ಜೊತೆ ಮಾಡಿದ್ರು ನಳಪಾಕ- ಕೆಲವೇ ಕ್ಷಣಗಳಲ್ಲಿ ಯುವ ದಸರಾಗೆ ಚಾಲನೆ
Breaking News :

ಜಟಾಯು ಭಾಗ 4 ಜಟಾಯುವಿನ ಹಿತೋಪದೇಶ

Thursday, 14.09.2017, 3:01 AM       No Comments

ಶಾಸ್ತ್ರಮರ್ಯಾದೆ ತಿಳಿದವನೂ, ಪರಮೈಕಾಂತಿಯೂ ಆದ ಜಟಾಯುವು ರಾವಣನೊಡನೆ ಹೋರಾಟವನ್ನೂ ಮಾಡಿ, ಸೀತಾ ಸಂರಕ್ಷಣೆಗಾಗಿ ಪ್ರಾಣವನ್ನೂ ಕೊಟ್ಟು, ಮುಂದೆ ವಾಕ್ ಸಹಾಯವನ್ನೂ ಮಾಡಿದ!

ಕಣ್ಣೆದುರಿಗೆ ಒಬ್ಬ ನಿಸ್ಸಹಾಯಕನ ಹಿಂಸೆ ನಡೆಯುತ್ತಿದ್ದರೆ, ಅಶಕ್ತನಾದರೂ ನೋಡುತ್ತಾ ಕುಳ್ಳಿರಬಾರೆಂಬುದೇ ಶಾಸ್ತ್ರಮರ್ಯಾದೆ. ಬೇರೆ ಕಡೆ ಎದ್ದಾದರೂ ಹೋಗಬೇಕು; ಇಲ್ಲವಾದರೆ ಅಲ್ಲಿ ಹಿಂಸೆ ನಿವಾರಿಸಲಾದರೂ ಯತ್ನಿಸಬೇಕು. ಅದರಲ್ಲಿ ಸೀತೆ ಬರೀ ನಿಸ್ಸಹಾಯಕಳಾದ ಒಬ್ಬ ಸ್ತ್ರೀ ಮಾತ್ರವಲ್ಲ; ಚಕ್ರವರ್ತಿನೀ! ತತ್ತಾ್ವರ್ಥದಲ್ಲಿ ಭಗವಂತನ ಪತ್ನೀ! ದೇವಾಲಯದಲ್ಲಿ ದೇವರಿಗೆ ಒಬ್ಬರು ಹಿಂಸೆ ತಂದರೆ, ಆಲಯಕ್ಕೇ ಬೆಂಕಿಯಿಟ್ಟರೆ ಏನು ಮಾಡಬೇಕು? ಸ್ವಯಂ ಅರ್ಚಕನ ಕರ್ತವ್ಯವೇನು?

ಹಿಂದೆ ದಕ್ಷಿಣ ಭಾರತದ ತಿರುನಾರಾಯಣಪುರವೆಂಬ (ಇದು ಮೇಲ್ಕೋಟೆ ಅಲ್ಲ!) ದಿವ್ಯದೇಶದಲ್ಲಿ ಅಧಿನಾಯಕನಾದ ವೇದನಾರಾಯಣನೆಂಬ ಭಗವಂತನಿಗೆ ಇಂಥ ಆಪತ್ತು ಉಂಟಾಯಿತು. ಅನ್ಯಮತಸ್ಥರು, ಅಸೂಯೆಯಿಂದ ಆ ಆಲಯಕ್ಕೆ ಬೆಂಕಿ ಹಚ್ಚಿದರು. ಒಳಗೆ ತಿರುನರೈಯೂರೆಂಬ ಕ್ಷೇತ್ರದಿಂದ ದರ್ಶನಕ್ಕಾಗಿ ಬಂದಿದ್ದ ಪಿಳ್ಳೆ ೖತಿರು ನರೈಯೂರ್ ಅರೈಯರು ಎಂಬ ಭಕ್ತರು, (ಅರೈಯಾರ್ ಎಂದರೆ, ಆಳ್ವಾರರ ಹಾಡುಗಳನ್ನು ಅಭಿನಯಿಸುತ್ತಾ ಹಾಡುವ ಗಾಯಕ ಕೈಂಕರ್ಯಪರರು.) ದೇವರ ಬಳಿಯೇ ಇದ್ದರು! ಉಳಿದವರೆಲ್ಲ ಬೆದರಿ ಹೊರಗೋಡಿದರು! ಇವರನ್ನು ಹೊರಬರುವಂತೆ ಬಗೆಬಗೆಯಲ್ಲಿ ನಿರ್ಬಂಧಿಸಿದರು, ಯಾಚಿಸಿದರು! ಇವರು ಹಾಗೆ ಓಡಲಿಲ್ಲ. ಅಲ್ಲೇ ನಿಂತರು. ಉರಿಯುವ ಭಗವನ್ಮೂರ್ತಿಯೊಡನೆ ತಾವೂ ಭಸ್ಮವಾಗಿ, ಭಗವಂತನಿಗಾಗಿ ಆತ್ಮಾರ್ಪಣೆ ಮಾಡಿಕೊಂಡರು! ಇದನ್ನು ಪಿಳ್ಳೆ ೖಲೋಕಾಚಾರ್ಯರು ತಮ್ಮ ‘ಶ್ರೀವಚನ ಭೂಷಣ’ವೆಂಬ ಗ್ರಂಥದಲ್ಲಿ ಬರೆದಿದ್ದಾರೆ! (ಚೂರ್ಣಿಕೆ 84, ಮೊದಲನೇ ಪ್ರಕರಣ.) ಇದು ಶಾಸ್ತ್ರ ತಿಳಿದವನ ರೀತಿ.

ಜಟಾಯು ಮಾಡಿದ್ದೂ ಅದೇ. ವಿವರ ನೋಡಿ! ಮೊದಲು ರಾವಣನಿಗೆ ಬುದ್ಧಿ ಹೇಳಿ ನೋಡಿ ಆಯ್ತು; ‘‘ನೀನು ಸತ್ಯ, ಧರ್ಮ ತಿಳಿದವನು. ಉತ್ತಮ ಕುಲದವನು. ಕುಬೇರ ಸೋದರ ಬೇರೆ. ಈ ಸ್ತ್ರೀಚೌರ್ಯವೆಂಬ ಅಕಾರ್ಯ ನಿನಗೆ ಸಲ್ಲದು, ದೊರೆಯಾದವನೇ ಸ್ತ್ರೀಯರ ಮಾನಭಂಗಕ್ಕೆ ಕೈ ಹಾಕಿದರೆ, ರಕ್ಷಿಸುವವರು ಯಾರು?’’ ಎಂದು ಹೇಳಿ, ತಾನೂ ಪಕ್ಷಿ ರಾಜಾ ಎಂದೂ, ಸ್ತ್ರೀರಕ್ಷಣೆ, ಆರ್ತರಕ್ಷಣೆ, ತನ್ನ ಕರ್ತವ್ಯವೆಂದೂ ಹೇಳಿ, ಉಪದೇಶಿಸಿದ.

ರಾವಣನಿಗೆ ಈ ಉಪದೇಶ ಬೇಕಿರಲಿಲ್ಲವೆಂಬುದು ಜಟಾಯುವಿಗೆ ಗೊತ್ತಿದ್ದರೂ, ಕರ್ತವ್ಯಕರ್ಮವನ್ನಾಗಿ ಅದನ್ನು ಮಾಡಿದ! ರಾವಣ ಕೇಳಲಿಲ್ಲ! ಉಪದೇಶ ತೀವ್ರವಾಗುತ್ತದೆ. ‘‘ಇನ್ನೊಬ್ಬರು ನಮ್ಮನ್ನು ನೋಡಿ ಹಾಸ್ಯ ಮಾಡುವಂಥ ಅಕಾರ್ಯವನ್ನು ನಾವು ಎಂದಿಗೂ ಮಾಡಬಾರದು. ತನ್ನಂತೆ ಇತರರನ್ನೂ ಕಾಣಬೇಕಾದುದು ಧರ್ಮ. ರಾಜ್ಯದಲ್ಲಿ ಜನರ ಪುರುಷಾರ್ಥಸಾಧನೆಗಳೆಲ್ಲ ರಾಜನ ಶೀಲವೃತ್ತಗಳನ್ನೇ ಅವಲಂಬಿ ಸಿರುತ್ತವೆ. ಜನರ ದ್ರವ್ಯಗಳಿಗೆ ಪ್ರಾಣಮಾನಗಳಿಗೆ ರಾಜನೇ ರಕ್ಷಕ ಆಗಬೇಕು! ಅವನೇ ಕಳ್ಳನಾದರೆ ಹೇಗೆ? ನಿನಗಾವ ಅಪರಾಧವನ್ನೂ ಮಾಡದ ರಾಮನಿಗೆ ಈ ಅಪರಾಧವನ್ನೇಕೆ ಮಾಡುತ್ತಿರುವೆ? ಜನಸ್ಥಾನದಲ್ಲಿ ಶೂರ್ಪಣಖೆಯ ಅತಿಕ್ರಮಣದ ಸಲುವಾಗಿ ಖರಾದಿಗಳು ರಾಮನಿಂದ ಹತರಾದರೆ, ರಾಮನ ತಪ್ಪೇನು? ಸೀತೆಯನ್ನು ಬಿಡು! ಅವನು ನಿನಗೆ ಕಾಲಪಾಶವಾಗದಿರಲಿ… ಅಯ್ಯಾ! ರಾವಣ! ಒಬ್ಬನು ಎಷ್ಟು ಭಾರವನ್ನು ಹೊರಬಹುದೆಂದರೆ, ಎಷ್ಟು ಹೊತ್ತರೆ ಸಾಯಲಾರನೋ, ಅಷ್ಟನ್ನೇ ಹೊರಬೇಕು!

 

Leave a Reply

Your email address will not be published. Required fields are marked *

Back To Top