Tuesday, 17th July 2018  

Vijayavani

ಕಾಂಗ್ರೆಸ್‌ ಕಿರುಕುಳದಿಂದಲೇ ಸಿಎಂ ಕಣ್ಣೀರು - ಕಾಂಗ್ರೆಸ್‌ ನೆಚ್ಚಿಕೊಂಡು ಹೋದ್ರೆ ಇದೇ ಸ್ಥಿತಿ - ಎಚ್​ಡಿಕೆ  ಕಣ್ಣೀರಿಗೆ ಜೇಟ್ಲಿ ಟಾಂಗ್‌        ವಾಣಿಜ್ಯ ಬ್ಯಾಂಕ್‌ನಲ್ಲಿನ ಚಾಲ್ತಿ ಸಾಲವೂ ಮನ್ನಾ - ಸಿಎಂ ನಿರ್ಧಾರ - ರೈತರಿಗೆ ಮತ್ತೊಂದು ಕೊಡುಗೆ ನೀಡಿದ ಮುಖ್ಯಮಂತ್ರಿ        ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದ ಶಾಸಕರ ಪುತ್ರ - ಪ್ರಶ್ನಿಸಿದ ಪೇದೆಗೆ ಅವಾಚ್ಯ ಶಬ್ದಗಳಿಂದ ನಿಂದನೆ        ಬಂಗಾಳದಲ್ಲಿ ಮೋದಿ ರ್ಯಾಲಿ ವೇಳೆ ಅವಗಢ - ಪೆಂಡಾಲ್ ಕುಸಿದು 22 ಜನರಿಗೆ ಗಾಯ - ಆರೋಗ್ಯ ವಿಚಾರಿಸಿದ ಪ್ರಧಾನಿ ನಮೋ        ಕರಾವಳಿಯಲ್ಲಿ ಭಾರಿ ಮಳೆಯ ಅವಾಂತರ - ಕುಸಿದುಬಿತ್ತು ಭಟ್ಕಳದ ಬಸ್ ನಿಲ್ದಾಣ - ಹೊರ ಓಡಿದ ಪ್ರಯಾಣಿಕರು        ಕೆಆರ್​​ಎಸ್​​​ನಿಂದ ಭಾರಿ ಪ್ರಮಾಣದ ನೀರು - ರಂಗನತಿಟ್ಟು ಪಕ್ಷಿಧಾಮ ಸಂಪೂರ್ಣ ಮುಳುಗಡೆ - ಧುಮ್ಮಿಕ್ಕುತ್ತಿದೆ ಹೊಗೇನಕಲ್ ಫಾಲ್ಸ್       
Breaking News

ಚೆನ್ನೈ ಓಪನ್ ಟೆನಿಸ್ ಟೂರ್ನಿ ಪುಣೆಗೆ ಸ್ಥಳಾಂತರ

Friday, 21.07.2017, 3:00 AM       No Comments

ಬೆಂಗಳೂರು: ಭಾರತದ ಆತಿಥ್ಯದಲ್ಲಿ ನಡೆಯುವ ಏಕೈಕ ಪ್ರತಿಷ್ಠಿತ ಎಟಿಪಿ ಟೂರ್ನಿಯಾದ ಚೆನ್ನೈ ಓಪನ್ ನಿರೀಕ್ಷೆಯಂತೆ ಪುಣೆ ನಗರಕ್ಕೆ ಸ್ಥಳಾಂತರಗೊಂಡಿದೆ. ಆರ್ಥಿಕ ಬಿಕ್ಕಟ್ಟಿನ ಸಮಸ್ಯೆಯಿಂದ 20 ವರ್ಷಗಳ ಬಳಿಕ ಟೂರ್ನಿಯ ಆತಿಥ್ಯವನ್ನು ತಮಿಳುನಾಡು ಟೆನಿಸ್ ಸಂಸ್ಥೆ(ಟಿಎನ್​ಟಿಎ) ಬಿಟ್ಟುಕೊಟ್ಟಿರುವುದರಿಂದ ಟೂರ್ನಿಯ ಸಂಘಟಕರಾದ ಐಎಂಜಿ-ರಿಲಾಯನ್ಸ್, ಮಹಾರಾಷ್ಟ್ರ ರಾಜ್ಯ ಲಾನ್ ಟೆನಿಸ್ ಸಂಸ್ಥೆಗೆ (ಎಂಎಸ್​ಎಲ್​ಟಿ) ಆತಿಥ್ಯಕ್ಕೆ ನೀಡಿದೆ.

ಉದ್ಯಮಿ ಮುಖೇಶ್ ಅಂಬಾನಿ ಮಾಲೀಕತ್ವದ ಐಎಂಜಿ (ಆರ್) ಈ ಮುನ್ನ ನಿಗದಿಪಡಿಸಿದ್ದ 2019ರವರೆಗಿನ ಆತಿಥ್ಯ ಒಪ್ಪಂದವನ್ನು ರದ್ದುಗೊಳಿಸಿದೆ ಎಂದೂ ಟಿಎನ್​ಟಿಎ ಖಚಿತಪಡಿಸಿದೆ. ಒಟ್ಟು 5 ವರ್ಷಗಳ ಆತಿಥ್ಯದ ಒಪ್ಪಂದ ಪಡೆದಿರುವ ಎಂಎಸ್​ಎಲ್​ಟಿ ‘ಮಹಾರಾಷ್ಟ್ರ ಓಪನ್‘ ಎಂಬ ಹೆಸರಿನೊಂದಿಗೆ ಟೂರ್ನಿ ಆಯೋಜಿಸಲಿದೆ. ಇದು 20 ವರ್ಷಗಳ ಬಳಿಕ ಮೊದಲ ಬಾರಿ ಚೆನ್ನೈ ಓಪನ್ ಬದಲು ಬೇರೆ ನಗರದಲ್ಲಿ ಟೂರ್ನಿ ನಡೆಯಲಿದೆ.

ವಿಶ್ವ ಶ್ರೇಷ್ಠ ಎಟಿಪಿ ಟೂರ್ನಿಯ ಆತಿಥ್ಯವಹಿಸಿ ಕೊಳ್ಳುವುದನ್ನು ನಾವು ಸದಾ ಸ್ವಾಗತಿಸುತ್ತೇವೆ. ಮಹಾರಾಷ್ಟ್ರ ಓಪನ್ ಆತಿಥ್ಯವಹಿಸಿಕೊಳ್ಳಲು ಖುಷಿಯಾಗುತ್ತಿದೆ. ಪ್ರತಿ ವರ್ಷ ಈ ಟೂರ್ನಿಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಪ್ರಯತ್ನ ಮಾಡಲಿದ್ದೇವೆ ಎಂದು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ತಿಳಿಸಿದ್ದಾರೆ.

ಅಲ್ಲದೆ ಟೂರ್ನಿಯ ಬಹುಮಾನ ಮೊತ್ತದಲ್ಲೂ ಏರಿಕೆಯಾಗಿದ್ದು, ಮುಂದಿನ ವರ್ಷದ ಟೂರ್ನಿಯ ಒಟ್ಟು ಬಹುಮಾನ 3.5 ಕೋಟಿ ರೂ.(5.5 ಲಕ್ಷ ಯುಎಸ್ ಡಾಲರ್) ಹೊಂದಿರಲಿದೆ. ಚೆನ್ನೈ ಆತಿಥ್ಯದ ಟೂರ್ನಿ ಇದುವರೆಗೆ 28.50 ಲಕ್ಷ ರೂ. ಕಡಿಮೆ ಮೊತ್ತಕ್ಕೆ ನಡೆಯುತ್ತಿತ್ತು. ಹೀಗಾಗಿ ಮೆಲ್ಬೋರ್ನ್​ನಂತಿದ್ದ ಉಷ್ಣ ವಾತಾವರಣವಾಗಿದ್ದ ಚೆನ್ನೈನಲ್ಲಿ ಆಡಿದ್ದ ವಿದೇಶಿ ಆಟಗಾರರು ಇನ್ನು ಶೀತಲ ವಾತಾವರಣದ ಪುಣೆ ನಗರದಲ್ಲಿ ಆಡಬೇಕಿದೆ.

ಟೂರ್ನಿ ಇದು ನಾಲ್ಕನೇ ಬಾರಿ ಹೊಸ ಹೆಸರನ್ನು ನೀಡಲಾಗುತ್ತಿದೆ. 1996ರಿಂದ 2001ರ ವರೆಗಿನ ಟೂರ್ನಿಗೆ ಗೋಲ್ಡ್ ಫ್ಲೇಕ್ ಓಪನ್, 2002ರಿಂದ 2004ರ ಟೂರ್ನಿಗೆ ಟಾಟಾ ಓಪನ್ ಹಾಗೂ 2005ರಿಂದ ಚೆನ್ನೈ ಓಪನ್ ಎಂಬ ಹೆಸರಿನೊಂದಿಗೆ ಟೂರ್ನಿ ನಡೆದಿತ್ತು.

ಬೆಂಗಳೂರು ರೇಸ್​ನಲ್ಲಿತ್ತು

ಟೂರ್ನಿಯ ಆತಿಥ್ಯವಹಿಸಿಕೊಳ್ಳಲು ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆ(ಕೆಎಸ್​ಎಲ್​ಟಿಎ) ಕೂಡ ರೇಸ್​ನಲ್ಲಿತ್ತು. ‘ಚೆನ್ನೈ ಓಪನ್​ನಂಥ ಪ್ರತಿಷ್ಠಿತ ಟೂರ್ನಿಯ ಆತಿಥ್ಯ ಸಿಕ್ಕಿದರೆ ನಮಗೆ ಅದು ಹೆಮ್ಮೆಯ ಸಂಗತಿ. ಅವಕಾಶ ಸಿಕ್ಕಿದ್ದರೆ ಬೆಂಗಳೂರಿನಲ್ಲೇ ನಡೆಸಲು ನಾವು ಸಿದ್ಧ. ಆದರೆ ಸರ್ಕಾರದಿಂದ ನಿರೀಕ್ಷಿತ ಬೆಂಬಲ ಸಿಗದ ಏನೂ ಮಾಡುವಂತಿಲ್ಲ. ಕಳೆದ ಡೇವಿಸ್ ಕಪ್ ಟೂರ್ನಿ ನಡೆಸಲೇ ಪ್ರಾಯೋಜಕರಿಲ್ಲದೆ ಪರದಾಡುವಂತಾಗಿತ್ತು‘ ಎಂದು ಕೆಎಸ್​ಎಲ್​ಟಿಎ ಸದಸ್ಯರೊಬ್ಬರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Back To Top