Monday, 19th February 2018  

Vijayavani

ಶ್ರವಣಬೆಳಗೊಳದ ಮಹಾಮಜ್ಜನದಲ್ಲಿ ಮೋದಿ - ಮೆಟ್ಟಿಲುಗಳ, ಬಾಹುಬಲಿ ಆಸ್ಪತ್ರೆ ಉದ್ಘಾಟನೆ - ಚಾವುಂಡರಾಯ ವೇದಿಕೆಯಲ್ಲಿ ಭಾಷಣ.        ಮೈಸೂರಿನಲ್ಲಿ ಪರಿವರ್ತನಾ ಯಾತ್ರೆಗೆ ಕ್ಷಣಗಣನೆ - ಸಿಎಂ ತವರಲ್ಲಿ ಅಬ್ಬರಿಸಲಿದ್ದಾರೆ ಮೋದಿ - ಸಿದ್ದರಾಮಯ್ಯಗೆ ಟಾಂಗ್ ಕೊಡ್ತಾರಾ ಪ್ರಧಾನಿ?        ಮೋದಿ ಯಾತ್ರೆಗೆ ಬೆದರಿದ್ರಾ ಸಿದ್ದರಾಮಯ್ಯ - ಪ್ರಧಾನಿ ಪ್ರವಾಸದ ವೇಳೆಯೇ ರೌಂಡ್ಸ್ - ಜನರ ಸಮಸ್ಯೆ ಆಲಿಸಿದ ಸಿಎಂ.        ದರ್ಪ ಮೆರೆದಿದ್ದ ಗೂಂಡಾ ಅರೆಸ್ಟ್ - ಮಹಮ್ಮದ್‌ ವಿರುದ್ಧ ಸೆಕ್ಷನ್ 307 ಕೇಸ್ ದಾಖಲು - ಠಾಣೆ ಎದುರು ಕಾರ್ಯಕರ್ತರ ಹೈಡ್ರಾಮಾ.        ಕೆ.ಆರ್‌.ಆಸ್ಪತ್ರೆಯಲ್ಲಿ ಕೆ.ಎಸ್‌. ಪುಟ್ಟಣ್ಣಯ್ಯ ಪಾರ್ಥಿವ ಶರೀರ - ವಿದೇಶದಿಂದ ಪುತ್ರಿ ಬಂದ ಬಳಿಕ ಬುಧವಾರ ಅಂತ್ಯಕ್ರಿಯೆ - ಗಣ್ಯರಿಂದ ಸಂತಾಪ.       
Breaking News

ಚುನಾವಣೆ ವೆಚ್ಚಕ್ಕಾಗಿ ಕೈ ನಿಂದ ಹಣ ಸಂಗ್ರಹ

Tuesday, 13.02.2018, 3:02 AM       No Comments

ತೀರ್ಥಹಳ್ಳಿ: ರಾಜ್ಯ ಸರ್ಕಾರ ಚುನಾವಣಾ ವೆಚ್ಚಕ್ಕಾಗಿ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಆರೋಪಿಸಿದ್ದಾರೆ.

ತಾಲೂಕಿನ ಕೋಣಂದೂರಿಗೆ ಸೋಮವಾರ ಬೆಳಗ್ಗೆ ಆಗಮಿಸಿದ ಅವರು ಗ್ರಾಮ ವಾಸ್ತವ್ಯಕ್ಕೆ ನಿಗದಿ ಯಾಗಿದ್ದ ಮಲ್ಲಿಕಟ್ಟೆ ಹೊಸ್ಮನೆಯ ರೈತ ಸೋಮಪ್ಪ ಮನೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಬಿಬಿಎಂಪಿ ವ್ಯಾಪ್ತಿಯ ಕೆಂಪೇಗೌಡ ಬಡಾವಣೆಯಲ್ಲಿ 1 ಕಿಮೀ ರಸ್ತೆಗೆ 39 ಕೋಟಿ ರೂ. ಅಂದಾಜು ವೆಚ್ಚವನ್ನು ತರಾತುರಿಯಲ್ಲಿ ಸಿದ್ಧಪಡಿಸಿದ್ದು ಚುನಾವಣಾ ವೆಚ್ಚಕ್ಕೆ ಎಂದು ದೂರಿದರು.

ಮೋದಿಯನ್ನು ಕಾಂಗ್ರೆಸ್ ಟಾರ್ಗೆಟ್ ಮಾಡಿದೆ. ಬಿಜೆಪಿ ರಾಜ್ಯದ ಸಮಸ್ಯೆಗಳ ಬಗ್ಗೆ ಸ್ಪಷ್ಟತೆ ಇಲ್ಲದೆ ವಿಷಯ ದಾರಿದ್ರ್ಯ ಎದುರಿಸುತ್ತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದ್ದು ನೀರಾವರಿ ಮತ್ತು ರೈತರ ಸಮಸ್ಯೆಗಳು ತಾಂಡವವಾಡುತ್ತಿವೆ. ರೈತರು ಸಹಕಾರ ಸಂಘದಲ್ಲಿ ಮಾಡಿರುವ 8,600 ಕೋಟಿ ರೂ. ಸಾಲ ಮನ್ನಾ ಮಾಡಿದ್ದೇವೆಂದು ಹೇಳುತ್ತಿರುವ ರಾಜ್ಯ ಸರ್ಕಾರ ಈವರೆಗೂ ಬಿಡಿಗಾಸನ್ನು ನೀಡಿಲ್ಲ ಎಂದು ಆರೋಪಿಸಿದರು.

5 ವರ್ಷ ಅಧಿಕಾರದಲ್ಲಿದ್ದಾಗ ಸ್ಲಂ ಬಗ್ಗೆ ಗಮನಹರಿಸದ ಬಿ.ಎಸ್. ಯಡಿಯೂರಪ್ಪ ಇದೀಗ ಸ್ಲಂ ಕುರಿತು ಕಿರು ಹೊತ್ತಗೆ ಬಿಡುಗಡೆ ಮಾಡಿರುವುದು ಹಾಸ್ಯಾಸ್ಪದ. ಬಿಜೆಪಿ- ಕಾಂಗ್ರೆಸ್ ವರಿಷ್ಠರ ದಂಡು ಜೆಡಿಎಸ್ ಭಯದಿಂದ ರಾಜ್ಯಕ್ಕೆ ದಾಂಗುಡಿ ಇಟ್ಟಿದೆ.

| ಎಚ್.ಡಿ.ಕುಮಾರಸ್ವಾಮಿ ಜೆಡಿಎಸ್ ರಾಜ್ಯಾಧ್ಯಕ್ಷ

Leave a Reply

Your email address will not be published. Required fields are marked *

Back To Top