Sunday, 22nd July 2018  

Vijayavani

ಶೀರೂರು ಶ್ರೀ ಸಾವಿನ ಹಿಂದೆ ರಮ್ಯಾ ಶೆಟ್ಟಿ ಕೈವಾಡ - ಗೋಡಂಬಿ ಜ್ಯೂಸ್ ಕುಡಿಸಿರೋ ಶಂಕೆ - ತನಿಖೆ ಚುರುಕುಗೊಳಿಸಿದ ಉಡುಪಿ ಪೊಲೀಸರು        ದೋಸ್ತಿ ಸರ್ಕಾರಕ್ಕೆ ಆಯುಷ್ಯ ಕಡಿಮೆ - ಜೆಡಿಎಸ್ ಜತೆ ಲೋಕ ಎಲೆಕ್ಷನ್​​ ಮೈತ್ರಿ ಬೇಡ - ತುಮಕೂರಿನಲ್ಲಿ ಮಾಜಿ ಶಾಸಕ ರಾಜಣ್ಣ ಅಪಸ್ವರ        ಡಿಸಿಎಂ ಪರಮೇಶ್ವರ್​ಗೆ ದೋಸ್ತಿ ಇಷ್ಟ - ದೊಡ್ಡಗೌಡರಿಗೆ ಆಗ್ತಿದೆಯಂತೆ ಕಷ್ಟ - ಲೋಕಸಭಾ ಮೈತ್ರಿಯಲ್ಲೇ ದೋಸ್ತಿ ಬಗ್ಗೆ ಎದ್ದಿದೆ ಗೊಂದಲ        ರಸ್ತೆಯಲ್ಲಿ ಬರ್ತಿದ್ದ ಬಾಲಕಿ ಮೇಲೆ ಹರಿದ ಕಾರು - ಪವಾಡ ಸದೃಶ್ಯ ರೀತಿಯಲ್ಲಿ ಪುಟಾಣಿ ಪಾರು - ಉತ್ತರ ಪ್ರದೇಶದಲ್ಲೊಂದು ಪವಾಡ        ಕೊಪ್ಪಳದ ಅಂಜನಾದ್ರಿ ಬೆಟ್ಟಕ್ಕೂ ಸಂಚಕಾರ- ಹನುಮಂತ ಹುಟ್ಟಿದ ಸ್ಥಳ ಮುಜರಾಯಿ ಇಲಾಖೆ ವಶಕ್ಕೆ - ದೋಸ್ತಿ ಸರ್ಕಾರದ ಮತ್ತೊಂದು ವಿವಾದ        ಜಲಾಶಯದಿಂದ ತುಂಗಭದ್ರಾ ನದಿಗೆ ನೀರು - ಡ್ರೋಣ್ ಕಣ್ಣಲ್ಲಿ ಮನಮೋಹಕ ನೋಟ - ಎಲ್ಲೆಲ್ಲೂ ಹಸಿರ ಸಿರಿಯ ವೈಭವ       
Breaking News

ಚುಟುಕು ಕ್ರಿಕೆಟ್​ನಲ್ಲೂ ಸರಣಿ ಗೆಲುವಿನ ಟಾರ್ಗೆಟ್‌

Tuesday, 10.10.2017, 3:01 AM       No Comments

ಗುವಾಹಟಿ: ಪ್ರವಾಸದಲ್ಲಿ ಭಾರತದ ಶಕ್ತಿಯ ಮುಂದೆ ಒಂದೊಂದು ರೀತಿಯಲ್ಲಿ ವೈಫಲ್ಯ ಕಾಣುತ್ತಿರುವ ಆಸ್ಟ್ರೇಲಿಯಾ ತಂಡ ಟಿ20 ಸರಣಿಯ 2ನೇ ಪಂದ್ಯದಲ್ಲಿ ಮಂಗಳವಾರ ಸರಣಿ ಉಳಿಸಿಕೊಳ್ಳುವ ದೃಷ್ಟಿಯಲ್ಲಿ ಕಣಕ್ಕಿಳಿಯಲಿದೆ. ಸೀಮಿತ ಓವರ್​ಗಳ ಸರಣಿಯಲ್ಲಿ ನಡೆದಿರುವ 6 ಪಂದ್ಯಗಳ ಪೈಕಿ ಆಸೀಸ್ ಗೆದ್ದಿರುವುದು ಕೇವಲ ಒಂದು ಪಂದ್ಯ ಮಾತ್ರ. ಇನ್ನೊಂದೆಡೆ ಸರಣಿಯಲ್ಲಿ ವಿಶ್ವಾಸದ ಆಟವಾಡುತ್ತಿರುವ ಭಾರತ ತಂಡ, ಆಸೀಸ್ ವಿರುದ್ಧ ಸರಣಿ ಗೆಲುವು ಮಾತ್ರವಲ್ಲ, ಸತತ 2ನೇ ಬಾರಿಗೆ ದ್ವಿಪಕ್ಷೀಯ ಸರಣಿಯನ್ನು ಕ್ಲೀನ್​ಸ್ವೀಪ್ ಮಾಡುವ ಗುರಿಯಲ್ಲಿದೆ.

ಭಾರತ ತಂಡದಲ್ಲಿ ಬದಲಾವಣೆ ಆಗುವುದು ಅನುಮಾನ. ಮೊದಲ ಪಂದ್ಯದಲ್ಲಿ ಬ್ಯಾಟಿಂಗ್​ಗೆ ಹೆಚ್ಚಿನ ಅವಕಾಶ ಸಿಗದ ಕಾರಣ, ರಾಂಚಿ ಟಿ20ಯಲ್ಲಿ ಆಡಿದ ತಂಡವನ್ನೇ ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಟೀಮ್ ಇಂಡಿಯಾ ಟಿ20ಯಲ್ಲಿ ಬಲಿಷ್ಠ ತಂಡವೆನಿಸಿದ್ದರೂ, ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ತಂಡ ಹೊಂದಿರುವ ಶಕ್ತಿಗೆ ಹೋಲಿಸಿದರೆ ಕಡಿಮೆ ಎನಿಸಿಕೊಳ್ಳುತ್ತದೆ.

ಟಿ20 ಮಾದರಿಯಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮುಖಾಮುಖಿ ಏಕಪಕ್ಷೀಯವಾಗಿದೆ. ಈವರೆಗೂ ಆಡಿರುವ 14 ಪಂದ್ಯಗಳಲ್ಲಿ ಭಾರತ 10ರಲ್ಲಿ ಗೆಲುವು ಕಂಡಿದೆ. ಅಲ್ಲದೆ, ಭಾರತ ತಂಡ 2012ರ ಸೆಪ್ಟೆಂಬರ್ 28 ರಂದು ಆಸೀಸ್ ವಿರುದ್ಧ ಸೋಲು ಕಂಡ ಬಳಿಕ ಆಡಿದ ಏಳೂ ಪಂದ್ಯಗಳಲ್ಲಿ ಜಯಭೇರಿ ಬಾರಿಸಿದೆ.

ಏಕದಿನ ಸರಣಿಯನ್ನು ಐದು ಪಂದ್ಯ ಆಡುವ ಮುನ್ನವೇ ಕಳೆದುಕೊಂಡಿದ್ದ ಆಸೀಸ್, ಟಿ20 ಸರಣಿಯನ್ನು ಅಂತಿಮ ಪಂದ್ಯದವರೆಗೂ ಜೀವಂತವಾಗಿಡುವ ವಿಶ್ವಾಸದಲ್ಲಿದೆ. ಇದು ಸಾಧ್ಯವಾಗಬೇಕಾದರೆ, ಬರ್ಸಾಪರ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯಲಿರುವ ಮಂಗಳವಾರದ ಪಂದ್ಯದಲ್ಲಿ ಭಾರತದ ಮಣಿಕಟ್ಟು ಸ್ಪಿನ್ನರ್​ಗಳಾದ ಕುಲದೀಪ್ ಯಾದವ್ ಹಾಗೂ ಯಜುವೇಂದ್ರ ಚಾಹಲ್​ರನ್ನು ಸಮರ್ಥವಾಗಿ ಎದುರಿಸುವಲ್ಲಿ ಯಶ ಕಂಡರೆ ಆಸೀಸ್​ಗೆ ಯಶಸ್ಸು ಖಂಡಿತವಾಗಿ ಸಿಗಲಿದೆ. ಕುಲದೀಪ್-ಚಾಹಲ್ ಜೋಡಿ ಏಕದಿನ-ಟಿ20 ಸರಣಿಯಿಂದ ಈವರೆಗೂ 16 ವಿಕೆಟ್​ಗಳನ್ನು ಹಂಚಿಕೊಂಡಿದೆ.

ಗ್ಲೆನ್ ಮ್ಯಾಕ್ಸ್​ವೆಲ್ ವೈಫಲ್ಯ ಕಾಣುತ್ತಿರುವುದು ಆಸೀಸ್​ಗೆ ತಲೆನೋವಾಗಿ ಕಾಡಿದೆ. ಟಿ20 ಮಾದರಿಯಲ್ಲಿ ವಾರ್ನರ್ ಹಾಗೂ ಫಿಂಚ್​ರಂತೆ ತಂಡದ ಸ್ಟಾರ್ ಆಟಗಾರ ಎನಿಸಿಕೊಂಡಿರುವ ಮ್ಯಾಕ್ಸ್​ವೆಲ್ ಭಾರತ ಪ್ರವಾಸದಲ್ಲಿ ರನ್ ಗಳಿಸಲು ಒದ್ದಾಡುತ್ತಿದ್ದಾರೆ. -ಏಜೆನ್ಸೀಸ್

ಆರಂಭ: ಸಂಜೆ 7.00

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ಭಾರತ ತಂಡ ಆಸ್ಟ್ರೇಲಿಯಾವನ್ನು ಸತತ 7 ಟಿ20 ಪಂದ್ಯಗಳಲ್ಲಿ ಸೋಲಿಸಿದೆ. ಒಂದೇ ತಂಡದ ವಿರುದ್ಧ ಸತತ ಗರಿಷ್ಠ ಪಂದ್ಯಗಳನ್ನು ಗೆದ್ದ ವಿಶ್ವದಾಖಲೆ ಪಾಕಿಸ್ತಾನ ತಂಡದ ಹೆಸರಲ್ಲಿದೆ. ಪಾಕಿಸ್ತಾನ ತಂಡ ಜಿಂಬಾಬ್ವೆ ವಿರುದ್ಧ ಆಡಿದ ಸತತ 9 ಪಂದ್ಯಗಳಲ್ಲಿ ಜಯ ಕಂಡಿದೆ.

2017ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ನ ಎಲ್ಲ ಮಾದರಿಯಲ್ಲಿ ಯಜುವೇಂದ್ರ ಚಾಹಲ್ ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ 6 ಪಂದ್ಯ ಗಳಲ್ಲಿ ಮುಖಾಮುಖಿಯಾಗಿದ್ದಾರೆ. ಇದರಲ್ಲಿ 5 ಪಂದ್ಯಗಳಲ್ಲಿ ಚಾಹಲ್, ಮ್ಯಾಕ್ಸ್​ವೆಲ್​ರನ್ನು ಔಟ್ ಮಾಡಿದ್ದಾರೆ.

ನೂತನ ಸ್ಟೇಡಿಯಂ..

ಈ ಪಂದ್ಯದ ಮೂಲಕ ಬರ್ಸಾಪುರ ಸ್ಟೇಡಿಯಂ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಲಿದೆ. ಭಾರತದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಕ್ಕೆ ಆತಿಥ್ಯ ವಹಿಸಿಕೊಂಡ 49ನೇ ಸ್ಟೇಡಿಯಂ ಇದಾಗಲಿದೆ. ಗುವಾಹಟಿ ಕೊನೆಯ ಬಾರಿಗೆ ಅಂತಾರಾಷ್ಟ್ರೀಯ ಪಂದ್ಯಕ್ಕೆ ಆತಿಥ್ಯ ವಹಿಸಿಕೊಂಡಿದ್ದು 2010ರಲ್ಲಿ. ನೆಹರು ಸ್ಟೇಡಿಯಂನಲ್ಲಿ 2010ರ ನವೆಂಬರ್ 28ರಂದು ನಡೆದಿದ್ದ ಪಂದ್ಯದಲ್ಲಿ ಭಾರತ ತಂಡ 40 ರನ್​ಗಳಿಂದ ನ್ಯೂಜಿಲೆಂಡ್ ತಂಡವನ್ನು ಸೋಲಿಸಿತ್ತು. ಇನ್ನು ಬರ್ಸಾಪರ ಸ್ಟೇಡಿಯಂನಲ್ಲಿ ಕಳೆದ ವರ್ಷ ನಡೆದ ರಣಜಿ ಟ್ರೋಫಿ ಪಂದ್ಯದ ವೇಳೆ ಹಿಮಾಚಲ ಪ್ರದೇಶ ತಂಡ ಹೈದರಾಬಾದ್ ವಿರುದ್ಧ ಕೇವಲ 36 ರನ್​ಗೆ ಆಲೌಟ್ ಆಗಿತ್ತು. ಇದು 2000 ಇಸವಿಯ ಬಳಿಕ ರಣಜಿ ಟ್ರೋಫಿಯ ನಾಲ್ಕನೇ ಕನಿಷ್ಠ ಮೊತ್ತವೆನಿಸಿತ್ತು.

Leave a Reply

Your email address will not be published. Required fields are marked *

Back To Top