Tuesday, 17th July 2018  

Vijayavani

ಕಾಂಗ್ರೆಸ್‌ ಕಿರುಕುಳದಿಂದಲೇ ಸಿಎಂ ಕಣ್ಣೀರು - ಕಾಂಗ್ರೆಸ್‌ ನೆಚ್ಚಿಕೊಂಡು ಹೋದ್ರೆ ಇದೇ ಸ್ಥಿತಿ - ಎಚ್​ಡಿಕೆ  ಕಣ್ಣೀರಿಗೆ ಜೇಟ್ಲಿ ಟಾಂಗ್‌        ವಾಣಿಜ್ಯ ಬ್ಯಾಂಕ್‌ನಲ್ಲಿನ ಚಾಲ್ತಿ ಸಾಲವೂ ಮನ್ನಾ - ಸಿಎಂ ನಿರ್ಧಾರ - ರೈತರಿಗೆ ಮತ್ತೊಂದು ಕೊಡುಗೆ ನೀಡಿದ ಮುಖ್ಯಮಂತ್ರಿ        ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದ ಶಾಸಕರ ಪುತ್ರ - ಪ್ರಶ್ನಿಸಿದ ಪೇದೆಗೆ ಅವಾಚ್ಯ ಶಬ್ದಗಳಿಂದ ನಿಂದನೆ        ಬಂಗಾಳದಲ್ಲಿ ಮೋದಿ ರ್ಯಾಲಿ ವೇಳೆ ಅವಗಢ - ಪೆಂಡಾಲ್ ಕುಸಿದು 22 ಜನರಿಗೆ ಗಾಯ - ಆರೋಗ್ಯ ವಿಚಾರಿಸಿದ ಪ್ರಧಾನಿ ನಮೋ        ಕರಾವಳಿಯಲ್ಲಿ ಭಾರಿ ಮಳೆಯ ಅವಾಂತರ - ಕುಸಿದುಬಿತ್ತು ಭಟ್ಕಳದ ಬಸ್ ನಿಲ್ದಾಣ - ಹೊರ ಓಡಿದ ಪ್ರಯಾಣಿಕರು        ಕೆಆರ್​​ಎಸ್​​​ನಿಂದ ಭಾರಿ ಪ್ರಮಾಣದ ನೀರು - ರಂಗನತಿಟ್ಟು ಪಕ್ಷಿಧಾಮ ಸಂಪೂರ್ಣ ಮುಳುಗಡೆ - ಧುಮ್ಮಿಕ್ಕುತ್ತಿದೆ ಹೊಗೇನಕಲ್ ಫಾಲ್ಸ್       
Breaking News

ಚೀನಾ ಬಲಿಷ್ಠವಿರಬಹುದು ಭಾರತ ದುರ್ಬಲವೇನಲ್ಲ

Saturday, 13.01.2018, 3:02 AM       No Comments

ನವದೆಹಲಿ: ಚೀನಾ ಸೇನೆ ಬಲಿಷ್ಠವಾಗಿರ ಬಹುದು. ಹಾಗೆಂದು, ಭಾರತೀಯ ಸೇನಾಪಡೆ ದುರ್ಬಲವೇನಲ್ಲ. ನಮ್ಮ ರಾಷ್ಟ್ರದ ಮೇಲೆ ದಂಡೆತ್ತಿ ಬರಲು ಯಾರಿಗೂ ಅವಕಾಶ ಕೊಡುವುದಿಲ್ಲ ಎಂದು ಸೇನಾಪಡೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದರು.

ನವದೆಹಲಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದ ನೆರೆಹೊರೆ ರಾಷ್ಟ್ರಗಳ ಮೇಲೆ ಪ್ರಭಾವ ಬೀರಲು ಚೀನಾ ಹವಣಿಸುತ್ತಿದೆ. ಆದರೆ, ಇದಕ್ಕೆ ಭಾರತ ಆಸ್ಪದ ನೀಡುವುದಿಲ್ಲ ಎಂದರು.

ಉತ್ತರ ಗಡಿಭಾಗದತ್ತ ಗಮನಹರಿಸಲು ಕಾಲ ಕೂಡಿಬಂದಿದೆ. ಈ ಭಾಗದಲ್ಲಿ ಚೀನಿ ಯೋಧರ ದೌರ್ಜನ್ಯಗಳನ್ನು ಸಮರ್ಥವಾಗಿ ಹಿಮ್ಮೆಟ್ಟಿಸಲು ನಮ್ಮ ಯೋಧರು ಸಶಕ್ತರಾಗಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಪಾಕ್​ನಲ್ಲಿ ಉಗ್ರರು ಮಾರಾಟದ ಸರಕಾಗಿದ್ದಾರೆ. ನೋವಿನ ಬಾಧೆ ಹೇಗಿರುತ್ತದೆ ಎಂಬುದನ್ನು ಪಾಕ್​ಗೆ ತಿಳಿಸಿಕೊಡಲು ಭಾರತೀಯ ಸೇನಾಪಡೆ ಪ್ರಯತ್ನಿಸುತ್ತಿದೆ ಎಂದರು.

ಉತ್ತರ ಕಾಶ್ಮೀರದತ್ತ ಗಮನ: ಜಮ್ಮು ಮತ್ತು ಕಾಶ್ಮೀರದ ದಕ್ಷಿಣ ಭಾಗದಲ್ಲಿ ಉಗ್ರರ ದಮನಕ್ಕೆ ಕಳೆದ ವರ್ಷ ಹೆಚ್ಚಿನ ಒತ್ತು ನೀಡಲಾಗಿತ್ತು. ಈ ಸಾಲಿನಲ್ಲಿ ಉತ್ತರ ಕಾಶ್ಮೀರದಲ್ಲಿ ಈ ಕಾರ್ಯಾಚರಣೆ ನಡೆಯಲಿದೆ. ಬಾರಾಮುಲ್ಲಾ, ಪಟ್ಟಾನ್, ಹಂದ್ವಾರ, ಕುಪ್ವಾರ, ಸೋಪೋರ್ ಮತ್ತು ಲೊಲಾಬ್ ಹಾಗೂ ಬಂಡಿಪೋರದ ಉತ್ತರದ ಕೆಲ ಭಾಗಗಳಲ್ಲಿ ಉಗ್ರರ ಒಳನುಸುಳುವಿಕೆ ತಡೆಗಟ್ಟಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಬಿಪಿನ್ ರಾವತ್ ತಿಳಿಸಿದರು.

ರಾಸಾಯನಿಕ, ಜೈವಿಕ ಅಸ್ತ್ರ ಬಳಕೆ ಸಾಧ್ಯತೆ: ಯುದ್ಧಗಳಾದಲ್ಲಿ ರಾಸಾಯನಿಕ, ಜೈವಿಕ, ವಿಕಿರಣ ಮತ್ತು ಅಣ್ವಸ್ತ್ರಗಳು (ಸಿಬಿಆರ್​ಎನ್) ದುಷ್ಕರ್ವಿುಗಳ ಕೈಗೆ ಸಿಲುಕುವ ಸಾಧ್ಯತೆ ಹೆಚ್ಚಾಗಿದೆ. ಇಂತಹ ದಾಳಿಗಳನ್ನು ಸಮರ್ಥವಾಗಿ ಹಿಮ್ಮೆಟ್ಟಿಸಲು ಸೂಕ್ತ ಸುರಕ್ಷತಾ ತಂತ್ರಜ್ಞಾನಗಳು, ಉಪಕರಣಗಳನ್ನು ಹೊಂದುವ ಜತೆಗೆ, ಅವುಗಳ ಬಳಕೆ ಕುರಿತು ಯೋಧರಿಗೆ ತರಬೇತಿ ನೀಡಬೇಕಿದೆ. ಡಿಆರ್​ಡಿಒ ಅಭಿವೃದ್ಧಿಪಡಿಸಲಿರುವ ಉಪಕರಣ ಮತ್ತು ತಂತ್ರಜ್ಞಾನಗಳು ಶೀಘ್ರದಲ್ಲೇ ಕೈಸೇರುವ ನಿರೀಕ್ಷೆ ಇದೆ ಎಂದು ರಾವತ್ ಹೇಳಿದರು.

ಟಿಬೆಟ್​ನಲ್ಲಿ ಚೀನಿ ಸೇನೆ ಸಮರಾಭ್ಯಾಸ: ಡೋಕ್ಲಾಂ ಬಿಕ್ಕಟ್ಟು ಅಂತ್ಯಗೊಂಡ ನಂತರದಲ್ಲಿ ಚೀನಾದ ಪೀಪಲ್ಸ್ ಲಿಬರೇಷನ್ ಆರ್ವಿುಯ (ಪಿಎಲ್​ಎ) ಎಲ್ಲ ವಿಭಾಗಗಳ ಯೋಧರು ಟಿಬೆಟ್​ನ ಪ್ರಸ್ಥಭೂಮಿಯಲ್ಲಿ ಸಮರಾಭ್ಯಾಸ ನಡೆಸುತ್ತಿದ್ದಾರೆ. ಚೀನಾದ ನೌಕಾಪಡೆ ಡಿಜಿಬೌಟಿ ನೌಕಾನೆಲೆಯಲ್ಲಿ ಅಭ್ಯಾಸ ನಡೆಸಿದೆ ಎಂದು ಪಿಎಲ್​ಎ ಮೂಲಗಳು ಹೇಳಿವೆ.

ಆಧುನಿಕ ಶಸ್ತ್ರಾಸ್ತ್ರಗಳು ಬೇಕು

ಸೇನೆಗೆ ಅತ್ಯಾಧುನಿಕ ಶಸ್ತ್ರಾಸ್ತ್ರ ಅವಶ್ಯಕತೆ ಇದೆ. ಮೊದಲಿಗೆ ಸರ್ವೆಲೆನ್ಸ್ ಹೆಲಿಕಾಪ್ಟರ್​ಗಳು ಬೇಕಾಗಿವೆ. ಈ ನಿಟ್ಟಿನಲ್ಲಿ ರಷ್ಯಾ ನಿರ್ವಿುತ ಕಮಾವ್ ಹೆಲಿಕಾಪ್ಟರ್​ಗಳು 2019ರಲ್ಲಿ ಕೈಸೇರುವ ಸಾಧ್ಯತೆ ಇದೆ. ದೇಶೀಯ ಯುದ್ಧಹೆಲಿಕಾಪ್ಟರ್​ಗಳನ್ನು ಆಧುನೀಕರಣಗೊಳಿಸುವ ಕಾರ್ಯವೂ ಆಗಬೇಕಿದೆ ಎಂದರು. ಕಮಾಂಡರ್​ಗಳಿಗೆ 2-5 ಕಿ.ಮೀ. ಪರಿಧಿಯಲ್ಲಿ ಬಳಸಲು ಮಾನವರಹಿತ ವಿಮಾನ ಅಗತ್ಯವಿದ್ದು, ಖರೀದಿ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ರಾವತ್ ತಿಳಿಸಿದರು.

Leave a Reply

Your email address will not be published. Required fields are marked *

Back To Top