Sunday, 18th February 2018  

Vijayavani

ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸೂಚಿಸಿದ್ದೇನೆ - ಸಂಜೆಯೊಳಗೆ ಬಂಧಿಸದಿದ್ದರೆ ಅಧಿಕಾರಿಗಳು ಸಸ್ಪೆಂಡ್- ಗೃಹ ಸಚಿವರ ಖಡಕ್ ವಾರ್ನಿಂಗ್.        ಕಾಂಗ್ರೆಸ್‌ನ ಗೂಂಡಾಗಿರಿ ಬಯಲಾಗಿದೆ - ತಮ್ಮ ಸರ್ಕಾರ ಇದೆ ಅಂತಲೇ ಈ ಕೃತ್ಯ - ಹ್ಯಾರಿಸ್ ಮಗನ ದರ್ಪಕ್ಕೆ ಆರ್‌.ಅಶೋಕ್ ಕಿಡಿ.        ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗುದ್ದಲಿ ಪೂಜೆ ಗುದ್ದಾಟ - ಸಿಎಂ ಪುತ್ರ ಯತೀಂದ್ರಗೆ ಘೇರಾವ್‌ - ಜೆಡಿಎಸ್‌ ಕಡೆಗಣಿಸಿದ್ದಕ್ಕೆ ಆಕ್ರೋಶ.        ತಮಿಳುನಾಡು ರಾಜಕೀಯದಲ್ಲಿ ಮಹಾಪರ್ವ - ತಲೈವಾ ಭೇಟಿ ಮಾಡಿದ ಕಮಲ್‌ - ಮೈತ್ರಿ ಕುರಿತು ಮಹತ್ವದ ಚರ್ಚೆ.        ಇರಾನ್‌ನ ಸೆಮಿರೋಮ್‌ ಬಳಿ ವಿಮಾನ ಪತನ - 66 ಪ್ರಯಾಣಿಕರ ದುರ್ಮರಣ - ಏರ್‌ಲೈನ್ಸ್‌ ಕಡೆಯಿಂದ ಸ್ಪಷ್ಟನೆ.       
Breaking News

ಚೀನಾ ಕಂಪನಿ ಟೆಂಡರ್ ರದ್ದು

Wednesday, 15.11.2017, 3:00 AM       No Comments

ಕಾಠ್ಮಂಡು: 16 ಸಾವಿರ ಕೋಟಿ ರೂ. ವೆಚ್ಚದಲ್ಲಿ ಚೀನಾದ ಕಂಪನಿಗೆ ನೀಡಲಾಗಿದ್ದ ಜಲವಿದ್ಯುತ್ ಘಟಕ ಟೆಂಡರನ್ನು ನೇಪಾಳ ಸರ್ಕಾರ ರದ್ದುಗೊಳಿಸಿದೆ.

ಚೀನಾ ಸಂಸ್ಥೆಗೆ ನೇರ ಟೆಂಡರ್ ನೀಡಿದ ಆರೋಪ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ನೇಪಾಳ ಸರ್ಕಾರ ತಿಳಿಸಿದೆ.

ಬುಧಿ ಗಂಢಕಿ ಜಲವಿದ್ಯುತ್ ಘಟಕ ನಿರ್ಮಾಣ ಟೆಂಡರನ್ನು ಚೀನಾದ ಜೆಜೌಬಾ ಗ್ರೂಪ್​ಗೆ ನೀಡಲಾಗಿತ್ತು. ಸ್ಪರ್ಧಾತ್ಮಕ ಟೆಂಡರ್ ಕರೆಯದ ಕಾರಣ ಈ ಟೆಂಡರ್ ಚೀನಾ ಸಂಸ್ಥೆಯ ಪಾಲಾಗಿತ್ತು ಎಂದು ಇಂಧನ ಸಚಿವ ಕಮಲ್ ಥಾಪಾ ಹೇಳಿದ್ದಾರೆ. ಆದರೆ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಅವರು ನಿರಾಕರಿಸಿದ್ದಾರೆ.

ಹಿಮಾಲಯದಿಂದಾಗಿ ನೇಪಾಳದಲ್ಲಿರುವ ನದಿಗಳು ವರ್ಷದ 365 ದಿನವೂ ಮೈದುಂಬಿ ಹರಿಯುತ್ತವೆ. ಆರ್ಥಿಕತೆ ಹಾಗೂ ತಂತ್ರಜ್ಞಾನದ ಕೊರತೆಯಿಂದ ಈ ನದಿಗಳನ್ನು ವಿದ್ಯುತ್ ಉತ್ಪಾದನೆಗೆ ಬಳಸಿಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ವಿದ್ಯುಚ್ಛಕ್ತಿಗೆ ನೇಪಾಳ, ಭಾರತದ ಮೇಲೆ ಅವಲಂಬಿತವಾಗಿದೆ. -ಏಜೆನ್ಸೀಸ್

Leave a Reply

Your email address will not be published. Required fields are marked *

Back To Top