Friday, 22nd September 2017  

Vijayavani

1. ಸಮಾವೇಶಕ್ಕೆ ಲಕ್ಷ ಮಂದಿ ಸೇರಿಸೋ ಟಾರ್ಗೆಟ್​- ಬರದಿದ್ರೆ ಅಕ್ಕಿ ಕಟ್​​, ಬ್ಯಾಂಕ್​ ಸಬ್ಸಿಡಿಗೆ ಬ್ರೇಕ್​- ಫಲಾನುಭವಿಗಳಿಗೆ ಕೈ ಕಾರ್ಯಕರ್ತರ ಬೆದರಿಕೆ 2. ಕೊಟ್ಟ ಮಾತು ಮರೆತ ಸಿಎಂ ಸಿದ್ದರಾಮಯ್ಯ- 8 ತಿಂಗಳಾದ್ರೂ ಕುಟುಂಬಸ್ಥರಿಗೆ ಸಿಗದ ಪರಿಹಾರ- ಇದೇನಾ ನುಡಿದಂತೆ ನಡೆಯುವ ಸರ್ಕಾರ..? 3. ಎಸ್​​.ಎಂ.ಕೃಷ್ಣ ಅಳಿಯನ ಮನೆ ಕಚೇರಿ ತಲಾಷ್​​- ಎರಡನೇ ದಿನವೂ ಮುಂದುವರಿದ ಪರಿಶೀಲನೆ- ಹುಡುಕಿದಷ್ಟು ಪತ್ತೆಯಾಗ್ತಿದೆ ದಾಖಲೆ ಪತ್ರ 4. ಗದಗದಲ್ಲಿ ಹನಿ ನೀರಿಗಾಗಿ ಹೋರಾಟ- 6 ಸಾವಿರ ಜನಕ್ಕೆ ಟ್ಯಾಂಕರ್​ ನೀರೇ ಆಧಾರ- ಜನರ ಸಮಸ್ಯೆಗೆ ಸ್ಪಂದಿಸಬೇಕಿದೆ ಸರ್ಕಾರ 5. ಮೈಸೂರು ದಸರಾಗೆ ಜನವೋ ಜನ- ಅತ್ತೆ, ಸೊಸೆ ಜೊತೆ ಜೊತೆ ಮಾಡಿದ್ರು ನಳಪಾಕ- ಕೆಲವೇ ಕ್ಷಣಗಳಲ್ಲಿ ಯುವ ದಸರಾಗೆ ಚಾಲನೆ
Breaking News :

ಚಿನ್ನದ ಗೊಂಬೆಗೆ ಹಾರರ್ ಪೋಷಾಕು 

Thursday, 14.09.2017, 3:00 AM       No Comments

ಬೆಂಗಳೂರು: ಸಿನಿಮಾದೊಳಗೊಂದು ಸಿನಿಮಾ ಮಾಡುವುದು ಗಾಂಧಿನಗರಕ್ಕೆ ಹೊಸದೇನಲ್ಲ. ಇಂತಹ ಸಾಕಷ್ಟು ಕಥೆಗಳನ್ನು ಈಗಾಗಲೇ ಕೇಳಿದ್ದೇವೆ, ನೋಡಿದ್ದೇವೆ. ಸದ್ಯ ಇಂತಹದ್ದೊಂದು ಕಥೆಯನ್ನು ಇಟ್ಟುಕೊಂಡು ‘ಚಿನ್ನದ ಗೊಂಬೆ’ ಚಿತ್ರ ಮಾಡಿದ್ದಾರೆ ನಿರ್ದೇಶಕ ಪಂಕಜ್ ಬಾಲನ್. ಮೂಲತಃ ಆಂಧ್ರದವರಾದ ಪಂಕಜ್, ಈ ಹಿಂದೆ ಹಲವು ತಮಿಳು ಸಿನಿಮಾಗಳಿಗೆ ಬಂಡವಾಳ ಹೂಡಿದ್ದರು. ಜತೆಗೆ ತೆಲುಗು ಸಿನಿಮಾವೊಂದಕ್ಕೆ ಆಕ್ಷನ್-ಕಟ್ ಹೇಳಿದ್ದರು. ಇದೀಗ ಮೊದಲ ಬಾರಿ ‘ಚಿನ್ನದ ಗೊಂಬೆ’ ಜತೆಗೆ ಕನ್ನಡಕ್ಕೆ ಆಗಮಿಸಿದ್ದಾರೆ. ಇತ್ತೀಚೆಗೆ ಚಿತ್ರದ ಆಡಿಯೋ ಬಿಡುಗಡೆಯಾಯಿತು.

‘ಇಡೀ ಕಥೆ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ನಡೆಯುವಂಥದ್ದು. ಸಿನಿಮಾ ನಟಿಯಾಗಬೇಕೆಂಬ ಕನಸು ಕಂಡ ನಾಯಕಿ ನಿಗೂಢವಾಗಿ ಸಾವನ್ನಪ್ಪುತ್ತಾಳೆ. ಆಕೆಯ ಸಾವಿಗೆ ಕಾರಣವೇನು? ಆಕೆ ಕಂಡ ಸಿನಿಮಾ ಕನಸು ನನಸು ಮಾಡಿಕೊಳ್ಳುತ್ತಾಳಾ? ಹೀಗೆ ಹಲವು ರೋಚಕ ತಿರುವುಗಳನ್ನು ಹೊತ್ತು ಕಥೆ ಸಾಗಲಿದೆ’ ಎನ್ನುತ್ತಾರೆ ಚಿತ್ರದ ನಾಯಕ ಕೀರ್ತಿ ಕಿರಣ್. ನಾಟಕ, ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರ ಮಾಡಿಕೊಂಡು ಬಂದಿರುವ ಕೀರ್ತಿ, ಮೊದಲ ಬಾರಿಗೆ ನಾಯಕನಾಗಿ ಬಡ್ತಿ ಪಡೆದಿದ್ದಾರೆ. ಚಿತ್ರದಲ್ಲಿ ಮೂರು ಶೇಡ್​ಗಳಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರಂತೆ. ಮಾಸ್ ಪ್ರೇಕ್ಷಕರಿಗೆ ಇಷ್ಟವೆನಿಸುವ ಖಡಕ್ ಪೊಲೀಸ್ ಲುಕ್, ಪೌರಾಣಿಕ ಹಾಗೂ ಲವರ್ ಬಾಯ್ ಪಾತ್ರ ನಿಭಾಯಿಸಿದ್ದಾರೆ ಕೀರ್ತಿ ಕಿರಣ್. ಈಗಾಗಲೇ ‘1 ಮೈನಸ್ 11’ ಸಿನಿಮಾದಲ್ಲಿ ನಟಿಸಿರುವ ಲೀನಾ ಖುಷಿ ಹಾಗೂ ಅಂಜುಶ್ರೀ ನಾಯಕಿಯರಾಗಿ ‘ಚಿನ್ನದ ಗೊಂಬೆ’ಯಲ್ಲಿದ್ದಾರೆ. ನಿರ್ವಪಕ ಪಿ.ಕೃಷ್ಣಪ್ಪ ಕೂಡ ಚಿತ್ರದ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ.

ಸೆಂಚುರಿ ಗೌಡ ಹಾಗೂ ಗಡ್ಡಪ್ಪ ‘ಚಿನ್ನದಗೊಂಬೆ’ ಯಲ್ಲಿ ಕಮಾಲ್ ಮಾಡಿದ್ದಾರಂತೆ. ಹಾಗಂತ ಡಬಲ್ ಮೀನಿಂಗ್ ಇಲ್ಲಿಲ್ಲ ಎಂಬುದು ನಿರ್ಮಾಪಕರ ಸ್ಟಷ್ಟನೆ. ‘ಪ್ರತಿ ಬಾರಿ ಒಬ್ಬರನ್ನು ಒಂದೇ ದೃಷ್ಟಿಯಲ್ಲಿ ನೋಡಲಾಗುತ್ತಿದೆ. ಆದರೆ ಈ ಬಾರಿ ನಮ್ಮ ಸಿನಿಮಾದಲ್ಲಿ ಯಾವುದೇ ಡಬಲ್ ಮೀನಿಂಗ್ ಡೈಲಾಗ್ ನೀಡದೆ, ಒಬ್ಬ ಒಳ್ಳೆಯ ಕಲಾವಿದರಾಗಿ ಅವರನ್ನು ನೋಡಬಹುದು’ ಎನ್ನುತ್ತಾರೆ ಅವರು.

ಚಿತ್ರದಲ್ಲಿನ ಐದು ಹಾಡುಗಳಿಗೆ ಸಂಗೀತ ನಿರ್ದೇಶಕ ಧನ್​ಶೀಲನ್ ರಾಗ ಸಂಯೋಜಿಸಿದ್ದಾರೆ. ರಾಜೇಶ್ ಕೃಷ್ಣನ್, ಅನುರಾಧಾ ಭಟ್, ಸುಪ್ರಿಯಾ, ಸಚಿನ್, ಗೋವಿಂದ್ ಆನಂದ್ ತಲಾ ಒಂದೊಂದು ಹಾಡಿಗೆ ಧ್ವನಿ ನೀಡಿದ್ದಾರೆ. ಬೆಂಗಳೂರು, ಕನಕಪುರ ಮುಂತಾದ ಚಿತ್ರೀಕರಣ ಮುಗಿಸಿಕೊಂಡಿರುವ ‘ಚಿನ್ನದಗೊಂಬೆ’ ಅಕ್ಟೋಬರ್ ವೇಳೆಗೆ ತೆರೆಗೆ ಬರಲಿದೆಯಂತೆ.

Leave a Reply

Your email address will not be published. Required fields are marked *

Back To Top