Monday, 16th July 2018  

Vijayavani

ಡ್ಯಾಂಗಳು ತುಂಬಿವೆ, ಸಿಎಂ ರಿಂದ ಕಣ್ಣೀರಧಾರೆ - ಸಿಎಂ ಕಣ್ಣೀರಿಗೆ ಆಯನೂರು ವ್ಯಂಗ್ಯ - ಕಲ್ಲು ಹೃದಯಗಳಿಗೆ ಕಣ್ಣೀರು ಬರಲ್ಲ ಅಂತಾ ಸಚಿವ ನಾಡಗೌಡ ಟಾಂಗ್‌        ಮುಖ್ಯಮಂತ್ರಿ ಸ್ಥಾನ ಕೊಟ್ಟಿದ್ದೇವೆ, ಪ್ರಮುಖ ಖಾತೆ ಬಿಟ್ಟಿದ್ದೇವೆ - ಸಿಎಂ ‘ವಿಷಕಂಠ’ ಹೇಳಿಕೆಗೆ ಎ. ಮಂಜು ಟಾಂಗ್‌ - ದೋಸ್ತಿ ಸರ್ಕಾರದಲ್ಲಿ ಮತ್ತೇ ಜಂಗೀ ಕುಸ್ತಿ        ಒಂದೇ ವೇದಿಕೆಯಲ್ಲಿ ಎಚ್‌ಡಿಕೆ, ಡಿಕೆಶಿ - ರಾಮನಗರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ - ಉಪಚುನಾವಣೆಗೆ ದೋಸ್ತಿಗಳ ಅಡಿಪಾಯ        ಸಿದ್ದು ಅನ್ನಭಾಗ್ಯದಲ್ಲಿ ಮಿಂಚಿದ್ದವನಿಗೆ ದೌರ್ಭಾಗ್ಯ - ಮಗನಿಗೆ ಚಿಕಿತ್ಸೆ ಕೊಡಿಸಲು ತಂದೆಯ ಪರದಾಟ - ಜಾಹೀರಾತಿಗೆ ಬಳಸಿಕೊಂಡು ಕೈಬಿಟ್ಟ ಸರ್ಕಾರ        ನಾಲ್ಕನೇ ವರ್ಷಕ್ಕೆ ಕಾಲಿಟ್ಟ ಮಹಾದಾಯಿ ಹೋರಾಟ - ದಯಾಮರಣಕ್ಕಾಗಿ ರೈತರಿಂದ ಮನವಿ - ರಾಜ್ಯ ಕೇಂದ್ರದ ವಿರುದ್ಧ ಅನ್ನದಾತರ ಆಕ್ರೋಶ        ಮುಂದಿನ ಲೋಕಸಭೆ ಚುನಾವಣೆ ಭರ್ಜರಿ ತಯಾರಿ- 25 ಸ್ಥಾನ ಗೆಲ್ಲಲು ಬಿಜೆಪಿ ಬಿಗ್‌ ಪ್ಲಾನ್‌ - ಜುಲೈ 28 ಕ್ಕೆ ಅಮಿತ್‌ ಷಾ ರಾಜ್ಯಕ್ಕೆ ಆಗಮನ       
Breaking News

ಚಿನ್ನದ ಕಳ್ಳರಿಗೆ ಬೆಂಗಳೂರು ಕಳ್ಳ ಹೆದ್ದಾರಿ!

Wednesday, 15.02.2017, 9:18 AM       No Comments

ಬೆಂಗಳೂರು: ಕೊಚ್ಚಿ ಮತ್ತು ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತೆ ಬಿಗಿಯಾಗಿರುವುದರಿಂದ ಚಿನ್ನದ ಕಳ್ಳಸಾಗಣೆದಾರರು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣವನ್ನು ಹೆದ್ದಾರಿ ಮಾಡಿಕೊಂಡಿದ್ದಾರೆ.

2015ರ ಏಪ್ರಿಲ್​ನಿಂದ 2016ರ ಜನವರಿವರೆಗೆ ಸೀಮಾ ಸುಂಕ ಅಧಿಕಾರಿ ಗಳು ವಶಪಡಿಸಿಕೊಂಡಿರುವ 8 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ 29 ಕೆಜಿ ಚಿನ್ನವೇ ಈ ಮಾತಿಗೆ ಸಾಕ್ಷಿ ಹೇಳುತ್ತದೆ.

ಬೆಂಗಳೂರಿನಲ್ಲಿ 100 ಗ್ರಾಂ ಚಿನ್ನ ಕೊಳ್ಳಲು, ದುಬೈಗಿಂತಲೂ 2.80 ಲಕ್ಷ ರೂ. ಹೆಚ್ಚು ಕೊಡಬೇಕು. ಅಂದರೆ, 1 ಕೆಜಿ ಚಿನ್ನಕ್ಕೆ 28 ಲಕ್ಷ ರೂ. ಲಾಭ! ಕೊಚ್ಚಿ ಮತ್ತು ಚೆನ್ನೈ ಏರ್​ಪೋರ್ಟ್​ಗಳಲ್ಲಿ ತಪಾಸಣೆ ಬಿಗಿಯಾಗಿದ್ದರಿಂದ ಕಳ್ಳಸಾಗಣೆ ಜಾಲ ಬೆಂಗಳೂರಿಗೆ ಸ್ಥಳ ಬದಲಿಸಿದೆ ಎನ್ನುತ್ತಾರೆ ಗುಪ್ತಚರ ಇಲಾಖೆ ಅಧಿಕಾರಿಗಳು. ಹೆಚ್ಚಾಗಿ ಕೇರಳ ಮೂಲದ ಚಿನ್ನದ ವ್ಯಾಪಾರಿಗಳು ಈ ಕೃತ್ಯದಲ್ಲಿದ್ದು ಚಿನ್ನದ ಬೆಲೆ ಕಡಿಮೆ ಇರುವ ಅರಬ್ ರಾಷ್ಟ್ರಗಳು, ಸಿಂಗಾಪುರ, ಥಾಯ್ಲೆಂಡ್, ಹಾಂಕಾಂಗ್, ಶ್ರೀಲಂಕಾ ಮತ್ತಿತರ ದೇಶಗಳಿಂದ ಕಳ್ಳಸಾಗಣೆ ಮಾಡಲಾಗುತ್ತಿ್ತೆ.

ಗುದನಾಳದಲ್ಲಿ ಬಚ್ಚಿಟ್ಟು ಸಾಗಣೆ!: ದೇಹದ ಬೇರೆ ಬೇರೆ ಭಾಗಗಳಲ್ಲಿ ಚಿನ್ನ ಸಾಗಣೆ ಮಾಡುತ್ತಿದ್ದವರು ಈಗ ಗುದನಾಳದಲ್ಲಿ ಚಿನ್ನ ಬಚ್ಚಿಟ್ಟು ಕಳ್ಳಸಾಗಣೆ ಮಾಡ ತೊಡಗಿದ್ದಾರೆ. ಕೇರಳದ ಕಾಸರಗೋಡಿನ ಸಾಜಿಲಾಲ್ (43) ಇದರಲ್ಲಿ ಪರಿಣತ. ಮುಂಬೈ ಮತ್ತು ಬೆಂಗಳೂರು ಏರ್​ಪೋರ್ಟ್ ಮೂಲಕವೇ ಸಂಚರಿಸುವ ಈತ ಒಮ್ಮೆಗೆ 800 ಗ್ರಾಂ ಚಿನ್ನ ಸಾಗಣೆ ಮಾಡಬಲ್ಲ. ಇದಕ್ಕೆ ಆತ ಪಡೆಯುವ ಹಣ 50 ಸಾವಿರ ರೂ.. ವಿಮಾನ ಶುಚಿಗೊಳಿಸುವ ಕೆಲಸಗಾರರ ಮೂಲಕವೂ ಚಿನ್ನವನ್ನು ನಿಲ್ದಾಣದಿಂದ ಹೊರಸಾಗಿಸಲಾಗುತ್ತದೆ.

ಸಾಗಣೆಯ ಮೂಲ ರಹಸ್ಯ: ಎಷ್ಟೋ ಸಲ ಕಳ್ಳಸಾಗಣೆದಾರರಿಗೆ ತಾವು ಸಾಗಣೆ ಮಾಡುವ ಚಿನ್ನ ಎಲ್ಲಿಗೆ ಹೋಗುತ್ತದೆ, ಮೂಲ ಯಾವುದು ಎನ್ನುವುದು ಗೊತ್ತಿರುವುದಿಲ್ಲ. ಕಳ್ಳಸಾಗಣೆ ಮಾಡುವ ಪುರುಷ ಮತ್ತು ಮಹಿಳೆಯರಿಗೆ ವಸತಿ, ವಿಮಾನ ಟಿಕೆಟ್ ಜತೆಗೆ 30ರಿಂದ 50 ಸಾವಿರ ರೂ. ಕಮಿಷನ್ ಕೊಡಲಾಗುತ್ತದೆ.

ದುಬೈನಲ್ಲಿ ಮರುಸೃಷ್ಟಿ

ಬೆಂಗಳೂರು ಕಳ್ಳಸಾಗಣೆ ಜಾಲದ ಮೂಲಗಳ ಪ್ರಕಾರ ದುಬೈನಲ್ಲಿ ಎಲೆಕ್ಟ್ರಾನಿಕ್ ವಸ್ತುಗಳ ಭಾಗಗಳನ್ನು ಚಿನ್ನದಲ್ಲಿ ಮರುಸೃಷ್ಟಿಸಿ ಅದನ್ನು ಸಾಮಾನ್ಯ ಎಲೆಕ್ಟ್ರಾನಿಕ್ ಭಾಗವೆಂಬಂತೆ ಹಾಕಿ ಕಳಿಸುತ್ತಾರೆ. ಫ್ಲಾಸ್ಕ್, ಮೈಕ್ರೋವೇವ್ ಓವನ್ ಅಥವಾ ಚಿಕ್ಕ ಮೋಟಾರ್ ಪಂಪ್​ಗಳಲ್ಲಿ ಚಿನ್ನದ ಗಟ್ಟಿಗಳನ್ನು ಅಳವಡಿಸಿ ಸಾಗಿಸá-ತ್ತಾರೆ. 2016ರ ಜ. 30ರಂದು ಮಡಿಕೇರಿ ಮೂಲದ ಅಬ್ದುಲ್ ಎಂಬಾತ ಶಾರ್ಜಾದಿಂದ ಬೆಂಗಳೂರಿಗೆ 1 ಕೆಜಿ ತೂಕದ ಚಿನ್ನದ ತಟ್ಟೆಗಳನ್ನು ಇದೇ ರೀತಿ ಸಾಗಿಸಿ ಸಿಕ್ಕಿಬಿದ್ದಿದ್ದ. ಯಂತ್ರಗಳಲ್ಲಿ, ಗೊಂಬೆಗಳಲ್ಲಿ, ಕಂಪ್ಯೂಟರ್ ಹಾರ್ಡ್ ಡಿಸ್ಕ್​ಗಳಲ್ಲಿ ಹಾಗೂ ಗೇಮಿಂಗ್ ಡಿವೈಸ್​ಗಳಲ್ಲಿಯೂ ಮುಚ್ಚಿಟ್ಟು ಕಳ್ಳಸಾಗಣೆ ಮಾಡಲಾಗುತ್ತದೆ.

 

Leave a Reply

Your email address will not be published. Required fields are marked *

Back To Top