Monday, 23rd October 2017  

Vijayavani

1. ಲಿಂಗಾಯತರು ಹಿಂದೂಗಳಲ್ಲ ಹೇಳಿಕೆ – ಜಾಮದಾರ್​ಗೆ ಕನೇರಿ ಮಠದ ಶ್ರೀ ತಿರುಗೇಟು – ಬಹಿರಂಗ ಚರ್ಚೆಗೆ ಕಾಡಸಿದ್ದೇಶ್ವರ ಸ್ವಾಮಿಗಳ ಆಹ್ವಾನ 2. ರಾಜ್ಯ ಕಾಂಗ್ರೆಸ್​ನಲ್ಲಿ ಭುಗಿಲೆದ್ದ ಭಿನ್ನಾಭಿಪ್ರಾಯ – ಸಿದ್ದು, ಪರಂ, ಡಿಕೆಶಿ ದೂರ ದೂರ – ಹೈಕಮಾಂಡ್​ ಸಾಮೂಹಿಕ ಜಪ, ನಾಯಕರು ಸಪರೇಟ್​ ರೂಪ 3. ಧಾರವಾಡದಲ್ಲಿ ಸರ್ಕಾರದ ಸಾಧನಾ ಸಮಾವೇಶ – ಜನರ ತೆರಿಗೆ ದುಡ್ಡಲ್ಲಿ ಕಾಂಗ್ರೆಸ್‌ ಪಕ್ಷಕ್ಕೂ ಪ್ರಚಾರ – ಬೆನ್ನುತಟ್ಟಿಕೊಳ್ಳೋ ಸಮಾವೇಶಕ್ಕೆ ಪಿಡಿಓಗಳೂ ದುರ್ಬಳಕೆ 4. ನಟ ವಿಜಯ್ ಬೆಂಬಲಕ್ಕೆ ನಿಂತ ತಲೈವಾ – ಮೆರ್ಸಲ್‌ ಸಿನಿಮಾದ ಬಗ್ಗೆ ಮೆಚ್ಚುಗೆಯ ಟ್ವೀಟ್ – ವಿವಾದಾತ್ಮಕ ವಿಷಯಗಳಿಗೂ ರಜನಿಕಾಂತ್ ಪರೋಕ್ಷ ಶ್ಲಾಘನೆ 5. ಚುನಾವಣಾ ಹೊಸ್ತಿಲಲ್ಲಿ ಬಿಜೆಪಿಗೆ ಬಿಗ್​ ಶಾಕ್​ – ಬಿಜೆಪಿಗೆ ಸೇರಲು 1 ಕೋಟಿ ರೂ ಆಮೀಷ – ಹಾರ್ದಿಕ್​ ಪಟೇಲ್​ ಸಂಗಡಿಗನ ಗಂಭೀರ ಆರೋಪ
Breaking News :

ಚಿಂತನೆಗಳ ಚಿವುಟದಿರಲಿ ಸಾಹಿತ್ಯ

Monday, 02.10.2017, 3:12 AM       No Comments

ಚಿಕ್ಕಬಳ್ಳಾಪುರ: ಸಾಹಿತ್ಯ ಜನರ ಒಳ್ಳೆಯ ಚಿಂತನೆಗಳನ್ನು ಚಿವುಟಿ ಹಾಕ ಬಾರದು. ಹಾಗೆಯೇ ಭಾವನೆಗಳನ್ನೂ ಕೆರಳಿಸಬಾರದು ಎಂದು ವಿಜಯವಾಣಿ ಪತ್ರಿಕೆ ಮತ್ತು ದಿಗ್ವಿಜಯ 24×7 ನ್ಯೂಸ್ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಹೇಳಿದ್ದಾರೆ.

ನಗರದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಭಾನುವಾರ ಏರ್ಪಡಿಸಿದ್ದ ಬಹುಭಾಷಾ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು. ಸೂರ್ಯ, ಚಂದ್ರ ಇಬ್ಬರೇ ಜಗತ್ತಿಗೆ ಬೆಳಕು ನೀಡುತ್ತಾರೆ. ಹಾಗೆಯೇ ಕಡಿಮೆ ಸಂಖ್ಯೆಯಲ್ಲಿ ದ್ದರೂ ಚಿಂತಕರು, ಸಾಹಿತಿ, ಕವಿ ಗಳು ಸಮಾಜದ ಮೇಲೆ ಹೆಚ್ಚು ಪ್ರಭಾವ ಬೀರುತ್ತಾರೆ. ಅಂಕು- ಡೊಂಕು ತಿದ್ದಿ ಸನ್ಮಾರ್ಗದಲ್ಲಿ ನಡೆಸುತ್ತಾರೆ. ಇಂತಹ ಪ್ರಜ್ಞಾವಂತರು ಜವಾಬ್ದಾರಿಯುತವಾಗಿ ನಡೆದುಕೊಂಡು ಸಮಾಜದ ಒಗ್ಗಟ್ಟು ಕಾಪಾಡಬೇಕು ಎಂದರು.

ಅನೇಕ ಮೇಧಾವಿಗಳು ಬರಹದ ಮೂಲಕ ಸಮಾಜದ ಹಿತ ಕಾಪಾಡಿದ್ದಾರೆ. ಮನುಷ್ಯರನ್ನು ದೈವತ್ವದ ಕಡೆಗೆ ಕರೆದುಕೊಂಡು ಹೋಗಲು ಶ್ರಮಿಸಿದ್ದಾರೆ. ಇತ್ತೀಚೆಗೆ ಹೆಸರು, ಸ್ವಪ್ರತಿಷ್ಠೆ, ಪ್ರಚಾರ, ವೈಯಕ್ತಿಕ ಲಾಭಕ್ಕಾಗಿ ಹಾತೊರೆಯುತ್ತಿರುವ ಕೆಲವರಿಂದ ಸಾಹಿತ್ಯ ಚಿಂತನೆ ವಕ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ತಿರುಚುವ ಮೂಲಕ ಜನರ ಭಾವನೆ ಕೆರಳಿಸಲಾಗುತ್ತಿದೆ.

ಇದರಿಂದ ಭಾಷೆ, ಸಂಸ್ಕೃತಿ, ಆಚಾರ ವಿಚಾರಗಳಲ್ಲಿ ಒಡಕು ಉಂಟಾಗಿ ಅನಪೇಕ್ಷಿತ ಘಟನೆಗಳು ನಡೆಯುತ್ತಿವೆ, ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಅಭಿಪ್ರಾಯಪಟ್ಟರು.

ಸಾಹಿತ್ಯವನ್ನು ಬರೆದವರು ಯಾರು ಎನ್ನುವುದಕ್ಕಿಂತ ಏನನ್ನು ಬರೆಯಲಾಗಿದೆ ಎಂಬುದು ಮುಖ್ಯ. ವಾಲ್ಮೀಕಿ, ವ್ಯಾಸ ಮಹರ್ಷಿ, ಪಂಪ, ಕುವೆಂಪು ಸೇರಿ ಅನೇಕ ಮಹನೀಯರು ಆಧ್ಯಾತ್ಮಿಕ ಲೇಪನದ ಮೂಲಕ ಆದರ್ಶ ತತ್ವಗಳು, ಒಳ್ಳೆಯ ವಿಚಾರ ತಿಳಿಸಿದ್ದಾರೆ. ಇದರಿಂದ ಜನರ ಆಲೋಚನೆಗಳು ವಿಕಸನಗೊಂಡಿವೆ ಎಂದರು.

ಕನ್ನಡ ವಚನ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸಿ.ಬಿ. ಹನುಮಂತಪ್ಪ, ಅಖಿಲ ಭಾರತ ಸಾಹಿತ್ಯ ಪರಿಷತ್ ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣ ಶೇವಿರೆ, ತಾಲೂಕು ಅಧ್ಯಕ್ಷ ರಾಜಗೋಪಾಲ್, ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಚಲಪತಿ ಗೌಡ, ಹಿರಿಯ ಸಾಹಿತಿಗಳಾದ ಕಾಗತಿ ವೆಂಕಟರತ್ನಂ, ನಾಗಸುಬ್ರಮಣ್ಯಂ, ಸೀತಮ್ಮ, ರಾಜೇಶ್ವರಿ, ಭಾಗೀರಥಿ, ಲಕ್ಷ್ಮೀನರಸಿಂಹಪ್ಪ ಮತ್ತಿತರರು ಇದ್ದರು.

ವಸುದೈವ ಕುಟುಂಬಕಂ ಎಂಬ ತತ್ವ ಸಾರಿದ ಪೂರ್ವಜರ ಆಶಯದಲ್ಲಿ ಭಾರತ ಬೆಳೆಯುತ್ತದೆ. ಸೈನಿಕ ಶಕ್ತಿಯ ಬದಲಿಗೆ ತಂತ್ರಜ್ಞಾನ, ಮಹಾನ್ ಮೇಧಾವಿಗಳು, ಸಾಧಕರಿಂದ ಶಕ್ತಿಯುತ ರಾಷ್ಟ್ರವಾಗಿ ಗಮನ ಸೆಳೆಯುತ್ತಿದೆ. ಇಂತಹ ಸಂದರ್ಭದಲ್ಲಿ ನಮ್ಮತನ ಬಿಟ್ಟು ಕೊಟ್ಟು ನಕಾರಾತ್ಮಕ ವಾತಾವರಣ ನಿರ್ಮಾಣ ಮಾಡುವುದು ಸರಿಯಲ್ಲ.

| ಹರಿಪ್ರಕಾಶ ಕೋಣೆಮನೆ, ವಿಜಯವಾಣಿ ಪತ್ರಿಕೆ ಮತ್ತು ದಿಗ್ವಿಜಯ 24×7 ನ್ಯೂಸ್ ಪ್ರಧಾನ ಸಂಪಾದಕ

Leave a Reply

Your email address will not be published. Required fields are marked *

Back To Top