Wednesday, 24th October 2018  

Vijayavani

ರಂಗೇರಿದ ಉಪ ಚುನಾವಣಾ ಕಣ-ಜಮಖಂಡಿಯಲ್ಲಿಂದು ಬಿಎಸ್ ವೈ ಮತಬೇಟೆ-ಸಕ್ಕರೆ ನಾಡು ಮಂಡ್ಯದಲ್ಲಿಂದು ಸಿದ್ದರಾಮಯ್ಯ ಪ್ರಚಾರ        ದೀಪಾವಳಿಯಿಂದ ಲೋಡ್​ ಶೆಡ್ಡಿಂಗ್-ಇಂಧನ ಇಲಾಖೆ ಅಧಿಕಾರಿಗಳ ಜತೆ ಸಿಎಂ ಸಭೆ-ಕತ್ತಲಲ್ಲಿ ಮುಳುಗುತ್ತಾ ಕರ್ನಾಟಕ..?        ಸಾಲಮನ್ನಾವೂ ಇಲ್ಲ, ಬೆಲೆಯೂ ಇಲ್ಲ-ಬೆವರು ಸುರಿಸಿ ಬೆಳೆದ ಬೆಳೆ ಕೇಳೋರೂ ಇಲ್ಲ-ಅನ್ನದಾತನಿಗೆ ಕಣ್ಣೀರು ತರಿಸುತ್ತಿದೆ ಈರುಳ್ಳಿ        ಬೆಂಗಳೂರಲ್ಲಿ ಅನಧಿಕೃತ ಬಿಟ್ ಕಾಯಿನ್ ATM-ಆರೋಪಿ ಹರೀಶ್ ಬಂಧನ-ಕೆಂಪ್ ಫೋರ್ಟ್​ನಲ್ಲಿದ್ದ ಎಟಿಎಂ ಪೊಲೀಸರ ವಶಕ್ಕೆ        ಕೊಳ್ಳೆಗಾಲದಲ್ಲಿ 17 ವರ್ಷಗಳಿಂದ ಕಾಮಗಾರಿ ಅಪೂರ್ಣ-ಇನ್ನೂ ಆಗಿಲ್ಲ ವಾಲ್ಮೀಕಿ ಭವನ ನಿರ್ಮಾಣ-ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ        ವಿಜಯಪುರದಲ್ಲಿ ಗಂಗಾಕಲ್ಯಾಣ ಗೋಲ್ಮಾಲ್-ಫಲಾನುಭವಿಗಳಿಗೆ ಸಿಗದ ಬೋರ್ ವೇಲ್ ಸೌಲಭ್ಯ-ಯಾರದ್ದೋ ಹೆಸರಲ್ಲಿ ಅನುದಾನ ನೀಡಿದ ಅಧಿಕಾರಿಗಳು       
Breaking News

ಚಾರ್ಲಿ ಬಳಗಕ್ಕೆ ಸತಿ ಸಂಗೀತಾ

Tuesday, 17.07.2018, 3:05 AM       No Comments

| ಅವಿನಾಶ್ ಜಿ.ರಾಮ್

ಬೆಂಗಳೂರು: ನಟ ರಕ್ಷಿತ್ ಶೆಟ್ಟಿ ನಾಯಕತ್ವದ ‘777 ಚಾರ್ಲಿ’ ಚಿತ್ರಕ್ಕೆ ಈಗಾಗಲೇ ಒಂದು ಹಂತದ ಶೂಟಿಂಗ್ ಮುಗಿದಿದೆ. ಆದರೆ ಚಿತ್ರದ ನಾಯಕಿ ಯಾರೆಂದು ಹೇಳಿರಲಿಲ್ಲ ಚಿತ್ರತಂಡ. ಇದೀಗ ಆ ಮಾಹಿತಿ ಹೊರಬಿದ್ದಿದೆ. ‘ಹರ ಹರ ಮಹಾದೇವ’ ಧಾರಾವಾಹಿಯಲ್ಲಿ ಸತಿ ಪಾತ್ರ ಮಾಡಿದ್ದ ನಟಿ ಸಂಗೀತಾ ಈಗ ರಕ್ಷಿತ್ ಎದುರು ನಟಿಸುವುದಕ್ಕೆ ಆಯ್ಕೆಯಾಗಿದ್ದಾರೆ.

ಚಿತ್ರದಲ್ಲಿ ರಕ್ಷಿತ್ ಮತ್ತು ನಾಯಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿದರೆ, ಸಂಗೀತಾ ಕೂಡ ಅಷ್ಟೇ ಮಹತ್ವದ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ‘ಸಂಗೀತಾ ನಿಭಾಯಿಸುತ್ತಿರುವ ಪಾತ್ರವನ್ನು ನಾಯಕಿ ಎನ್ನುವುದರ ಬದಲು ತುಂಬ ವಿಶೇಷವಾದ, ಚಿತ್ರಕ್ಕೆ ಬಹುಮುಖ್ಯವಾದ ಪಾತ್ರ ಎಂದಷ್ಟೇ ಹೇಳಬಹುದು. ‘ಕಿರಿಕ್ ಪಾರ್ಟಿ’ಯಲ್ಲೂ ಹೊಸ ನಟಿಯರಿಗೆ ಅವಕಾಶ ನೀಡಿದ್ದೆವು. ಈ ಬಾರಿಯೂ ಹೊಸಬರಿಗೆ ಅವಕಾಶ ನೀಡಬೇಕು ಎಂಬ ಉದ್ದೇಶ ಇತ್ತು. ಜನಪ್ರಿಯ ಕಲಾವಿದರನ್ನು ಆಯ್ಕೆ ಮಾಡಿಕೊಂಡರೆ, ಪಾತ್ರಕ್ಕಿಂತ ಹೆಚ್ಚು ಅವರೇ ಕಾಣಿಸುತ್ತಾರೆ. ನಮಗೆ ಕಲಾವಿದರಿಗಿಂತ ಚಿತ್ರದಲ್ಲಿ ಪಾತ್ರ ಕಾಣಿಸಬೇಕಿತ್ತು’ ಎಂದು ಮಾಹಿತಿ ನೀಡುತ್ತಾರೆ ನಿರ್ದೇಶಕ ಕಿರಣ್ ರಾಜ್. ನಾಯಕಿ ಪಾತ್ರಕ್ಕಾಗಿ ಅಂದಾಜು 2,700ಕ್ಕೂ ಅಧಿಕ ಪ್ರೊಫೈಲ್​ಗಳು ಬಂದಿದ್ದವು. ಅದರಲ್ಲಿ 150ರಿಂದ 200 ಜನರಿಗೆ ಆಡಿಷನ್ ಮಾಡಲಾಗಿತ್ತು. ಅಂತಿಮವಾಗಿ ಸಂಗೀತಾ ಆಯ್ಕೆಯಾಗಿದ್ದರು. ‘ತುಂಬ ಎನರ್ಜಿ ತುಂಬಿರುವ ಪಾತ್ರವಿದು. ಸಣ್ಣ ಸಣ್ಣ ಭಾವನೆಗಳನ್ನು ಸಂಗೀತಾ ತುಂಬ ಕಾನ್ಪಿಡೆಂಟ್ ಆಗಿ ಹೊರಹೊಮ್ಮಿಸುತ್ತಾರೆ. ನಮ್ಮ ಚಿತ್ರದ ಸೆಟ್​ನಲ್ಲಿ ಯಾವ ಕಲಾವಿದರಿಗೂ ರಿ-ಟೇಕ್ ಅವಕಾಶ ಇರುವುದಿಲ್ಲ. ಪ್ರಮುಖ ಪಾತ್ರದಲ್ಲಿ ನಾಯಿ ನಟಿಸುತ್ತಿರುವುದರಿಂದ ಕಲಾವಿದರು ಸದಾ ಸಿದ್ಧರಿರಬೇಕು. ಅದು ಯಾವ ಟೈಮ್ ಅಲ್ಲಿ ಬೇಕಾದ್ರು ಟೇಕ್ ಓಕೆ ಮಾಡಬಹುದು’ ಎನ್ನುತ್ತಾರೆ ಕಿರಣ್.

ಅಷ್ಟೊಂದು ಜನರ ಮಧ್ಯೆ ನಾನು ಸೆಲೆಕ್ಟ್ ಆಗಿರುವುದು ಒಂಥರಾ ಮಿಸ್ ಇಂಡಿಯಾಗೆ ಆಯ್ಕೆಯಾದಷ್ಟು ಖುಷಿಯಾಗಿದೆ. ಸಿನಿಮಾ ಬಗ್ಗೆ ತುಂಬ ಪ್ಯಾಷನ್ ಇರುವಂತಹ ತಂಡ ಇದು. ಪ್ರತಿಭೆ ಇರುವವರಿಗೆ ಮಾತ್ರ ಇಲ್ಲಿ ಮನ್ನಣೆ ಸಿಗುತ್ತದೆ.

| ಸಂಗೀತಾ ನಟಿ

 

ನಮ್ಮ ಬ್ಯಾನರ್​ನಲ್ಲಿ ಸಿದ್ಧವಾಗುವ ಸಿನಿಮಾಗಳ ಒಂದಲ್ಲ ಒಂದು ವಿಭಾಗದಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುತ್ತ ಬಂದಿದ್ದೇವೆ. ಆಡಿಷನ್​ನಲ್ಲಿ ಸಂಗೀತಾ ಉತ್ತಮವಾಗಿ ನಟಿಸಿದ್ದರು. ಚಿತ್ರದಲ್ಲಿನ ಅವರ ಪಾತ್ರಕ್ಕೂ ನ್ಯಾಯ ಸಲ್ಲಿಸಲಿದ್ದಾರೆ ಎಂಬ ನಂಬಿಕೆ ಇದೆ.

| ಪುಷ್ಕರ್ ಮಲ್ಲಿಕಾರ್ಜುನಯ್ಯ, ನಿರ್ಮಾಪಕ

Leave a Reply

Your email address will not be published. Required fields are marked *

Back To Top