Friday, 20th April 2018  

Vijayavani

ಹಾಸನದಲ್ಲಿ ರೇವಣ್ಣ, ಮೈಸೂರಲ್ಲಿ ಜಿಟಿಡಿ- ದಿಗ್ಗಜರಿಂದ ನಾಮಪತ್ರ ಸಲ್ಲಿಕೆ- ಅಫಜಲ್​ಪುರದಲ್ಲಿ ಗುತ್ತೇದಾರ್​ಗೆ ಬಿಎಸ್​ವೈ ಸಾಥ್​        ಭಾಲ್ಕಿಯಲ್ಲಿ ಖಂಡ್ರೆ ಬಲ ಪ್ರದರ್ಶನ- ಲಿಂಗಸೂರಲ್ಲಿ ಎತ್ತಿನ ಬಂಡಿ ಮೆರವಣಿಗೆ- ಉಮೇದುವಾರಿಕೆಗೂ ಮುನ್ನ ಭರ್ಜರಿ ರೋಡ್​ ಶೋ        ಚಾಮುಂಡಿ ದರ್ಶನ.. ಸ್ವಗ್ರಾಮದ ದೇಗುಲದಲ್ಲೂ ನಮನ- ಕೋಟೆ ಆಂಜನೇಯನಿಗೂ ಸಿಎಂ ಪೂಜೆ- ಒಂದೇ ದಿನ ಸಿದ್ದು ಟೆಂಪಲ್​ರನ್​        ರೆಡಿಯಾಯ್ತು ಬಿಜೆಪಿ ಮೂರನೇ ಪಟ್ಟಿ- ಕೆಲವೇ ಹೊತ್ತಲ್ಲಿ ಕದನ ಕಲಿಗಳ ಹೆಸರು ಪ್ರಕಟ- ಜೆಡಿಎಸ್​​​ನಿಂದಲೂ ಇಂದು ಎರಡನೇ ಪಟ್ಟಿ ರಿಲೀಸ್        ಶಟರ್ ಮುರಿದು ಮೊಬೈಲ್ ದೋಚಿದ ಕಳ್ಳರು- ಮತ್ತಿಕೆರೆಯಲ್ಲಿ ಅಂಗಡಿ ರಾಬರಿ- ಕಳ್ಳರ ಕೈಚಳಕ ಸಿಸಿ ಕ್ಯಾಮರಾದಲ್ಲಿ ಸೆರೆ        ಸುಪ್ರೀಂ ಮುಖ್ಯನ್ಯಾಯಮೂರ್ತಿ ವಿರುದ್ಧ ವಿಪಕ್ಷಗಳು ಗರಂ- ಸಿಜೆಐ ವಿರುದ್ಧ 7 ಪಕ್ಷಗಳ ಮಹಾಭೀಯೋಗ ನಿರ್ಣಯ- ಉಪರಾಷ್ಟ್ರಪತಿ ಭೇಟಿ, ಮನವಿ ಸಲ್ಲಿಕೆ       
Breaking News

ಚರ್ಮದ ಆರೋಗ್ಯಕ್ಕಾಗಿ ಸರಳ ಚಿಕಿತ್ಸೆಗಳು

Friday, 31.03.2017, 5:00 AM       No Comments

ಚರ್ಮದ ಸೌಂದರ್ಯವನ್ನು ಕಾಪಾಡಿಕೊಳ್ಳುವ ಅನಿವಾರ್ಯತೆ ನಮಗೆ ಎದುರಾಗುತ್ತಾ ಇದೆ. ಇಂದಿನ ದಿನಗಳಲ್ಲಿ ನಾವು ಅನುಸರಿಸುತ್ತಿರುವಂತಹ ತಪ್ಪು ಆಹಾರ ಪದ್ಧತಿ ಹಾಗೂ ಜೀವನ ಶೈಲಿಯು ನಮ್ಮ ದೇಹದ ಸೌಂದರ್ಯದ ಮೇಲೆ ಪರಿಣಾಮ ಬೀರುತ್ತಲಿದೆ. ಬೇಕರಿ ಆಹಾರ, ಕರಿದ ಆಹಾರ, ಸಂಸ್ಕರಿತ ಆಹಾರಗಳಂತಹ ಪದಾರ್ಥಗಳನ್ನು ನಾವು ಸೇವಿಸುತ್ತಿದ್ದೇವೆ. ಕೆಟ್ಟ ಕೊಬ್ಬು ನಮ್ಮ ದೇಹದಲ್ಲಿ ಉತ್ಪತಿಯಾಗುತ್ತಿದೆ. ಆಕ್ಸಿಡೇಶನ್ ಪ್ರಕ್ರಿಯೆ ವೇಗವಾಗಿ ನಡೆಯುತ್ತದೆ. ಇದರ ಪರಿಣಾಮವಾಗಿ ನಮ್ಮ ಚರ್ಮಕ್ಕೆ ಬೇಗ ವಯಸ್ಸಾಗುತ್ತಿದೆ. ಚರ್ಮ ಸುಕ್ಕುಗುಟ್ಟುತ್ತದೆ. ಕಪ್ಪು ಕಲೆಗಳು, ಮೊಡವೆಗಳು ಮುಖದಮೇಲೆ ಕಾಣಿಸಿಕೊಳ್ಳುತ್ತದೆ. ಬಿಸಿಲಿನಿಂದ ಕೆಲವರಲ್ಲಿ ಸ್ಕಿನ್ ಟ್ಯಾನ್ ಸಹ ಉಂಟಾಗುತ್ತದೆ. ಈ ಎಲ್ಲವುಗಳನ್ನು ಸರಿಮಾಡಲು ಸರಿಯಾದ ಆಹಾರ ಕ್ರಮ ಅವಶ್ಯ.

ಯಾವುದೇ ಸೋಪು, ಶಾಂಪು, ಕ್ರೀಮುಗಳು ಆಂತರ್ಯದಿಂದ ಕಾಂತಿಯನ್ನು, ಪರಿಹಾರವನ್ನು ತಂದುಕೊಡಲಾರದು. ಹಾಗಾಗಿ ನಮ್ಮ ಆಹಾರ ಪದ್ಧತಿ ಬಹಳ ಮುಖ್ಯ.

ಬೆಣ್ಣೆ, ತುಪ್ಪ, ಹಾಲು, ಮೊಸರು, ತೆಂಗಿನಕಾಯಿ ತುರಿ, ತೆಂಗಿನ ಎಣ್ಣೆ ಅಥವಾ ಎಕ್ಸಾ್ಟ್ರವರ್ಜಿನ್ ಕೊಕೊನಟ್ ಆಯಿಲ್, ಎಕ್ಸಾ್ಟ್ರವರ್ಜಿನ್ ಆಲಿವ್ ಆಯಿಲ್, ನಟ್ಸ್, (ಬಾದಾಮಿ, ಗೊಡಂಬಿ, ಅಕ್ರೊಟ್, ಪಿಸ್ತಾ, ಶೇಂಗಾ) ಇವುಗಳು ಚರ್ಮದ ಸೌಂದರ್ಯವೃದ್ಧಿಗೆ ಸಹಕಾರಿ. ಒಳ್ಳೆಯ ಕೊಬ್ಬು ಉತ್ಪಾದನೆ ಮಾಡುವಂತಹ ಆಹಾರಪದಾರ್ಥಗಳನ್ನು ಸೇವಿಸಬೇಕು. ನಮ್ಮ ಚರ್ಮ ಕೊಲ್ಲಾಜನ್​ನಿಂದ ತಯಾರಿಸ್ಪಟ್ಟಿದೆ. ಸಾಕಷ್ಟು ವಿಟಮಿನ್ ಸಿ ಜೀವಸತ್ವ ಹೆಚ್ಚಿರುವ ಆಹಾರಗಳನ್ನು ತೆಗೆದುಕೊಳ್ಳಬೇಕು. ನಿಂಬೆಹಣ್ಣು, ಕಿತ್ತಲೆ, ನೆಲ್ಲಿಕಾಯಿ ಮೊಸಂಬಿಯಲ್ಲೆಲ್ಲ ವಿಟಮಿನ್ ಸಿ ಇದೆ. ಆದರೆ ಪೇರಲೆ ಹಣ್ಣಿನಲ್ಲಿ ಹೇರಳವಾಗಿ ವಿಟಮಿನ್ ಸಿ ದೊರೆಯುತ್ತದೆ. ಪ್ರತಿನಿತ್ಯ ಒಂದೊಂದು ಪೇರಲೆಹಣ್ಣನ್ನು ಸೇವಿಸುವುದು ಬಹಳ ಪರಿಣಾಮಕಾರಿ.

ಅದೇ ರೀತಿ ವಿಟಮಿನ್ ಇ ಹೆಚ್ಚಿರುವ ಆಹಾರವೂ ಚರ್ಮಕ್ಕೆ ಬೇಕು. ಅದು ನಟ್ಸ್​ಗಳಿಂದ ದೊರೆಯತ್ತದೆ. ಪ್ರತಿನಿತ್ಯ 20 ಬಾದಾಮಿಗಳನ್ನು ನೆನೆಸಿಟ್ಟುಕೊಂಡು ಬೆಳಗ್ಗೆ ಆಹಾರದ ಮೊದಲು ಸೇವಿಸುತ್ತ ಬಂದಲ್ಲಿ ಚರ್ಮವು ಕಾಂತಿಯುಕ್ತವಾಗುತ್ತದೆ. ಪೋ›ಟೀನ್ ಸಹ ಚರ್ಮದ ಆರೋಗ್ಯಕ್ಕೆ ಬೇಕು. ಸಸ್ಯಾಹಾರಿಗಳು ಪೋ›ಟೀನ್​ಗಾಗಿ ಹಾಲು, ಮೊಸರು, ಸೋಯ, ಮೊಳಕೆಕಾಳುಗಳನ್ನು ಆಶ್ರಯಿಸಬಹುದು. ಮಾಂಸಾಹಾರಿಗಳಿಗೆ ಮೊಟ್ಟೆ, ಚಿಕನ್​ಗಳಿಂದ ದೊರೆಯುತ್ತದೆ. ಆದರೆ ಕರಿದು ಸೇವಿಸಬಾರದು ಬೇಯಿಸಿ ಸೇವಿಸುವುದೊಳಿತು.

ಕಾಬೋಹೈಡ್ರೇಟ್​ಗಳನ್ನು ಕಡಿಮೆ ಮಾಡುವುದು ಬಹಳ ಮುಖ್ಯ. ಪ್ರತಿನಿತ್ಯ 3-4 ಲೀಟರ್ ನೀರು ಕುಡಿಯುವುದು ಅತ್ಯಂತ ಅಗತ್ಯ. ಹಣ್ಣು, ತರಕಾರಿಗಳು, ಹಸಿರುಸೊಪ್ಪು ಸೇವನೆ ಮಾಡಬೇಕು. ಮನಸನ್ನು ಪ್ರಶಾಂತವಾಗಿರಿಸಿಕೊಳ್ಳಬೇಕು. ಧ್ಯಾನ, ಪ್ರಾರ್ಥನೆ ಇದಕ್ಕೆ ಸಹಾಯಮಾಡುತ್ತದೆ. ಅಂತೆಯೇ ಪ್ರಕೃತಿ ಚಿಕಿತ್ಸೆಗಳು ಹೆಚ್ಚು ಸಹಾಯ ಮಾಡುತ್ತದೆ. ದೇಹವನ್ನು ಶುದ್ಧಿ ಮಾಡುವಂತಹ ಚಿಕಿತ್ಸೆಗಳನ್ನು ಪಡೆಯಬೇಕು. ಎನಿಮಾ ಚಿಕಿತ್ಸೆ, ಉಪವಾಸ ಚಿಕಿತ್ಸೆ ಬಹಳ ಪರಿಣಾಮಕಾರಿ. ಹುತ್ತದಮಣ್ಣನ್ನು ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ತೊಳೆಯುವುದು ಸಹಕಾರಿ. ಒಮೆಗಾ-3 ಮೇದಾಮ್ಲವನ್ನು ತೆಗೆದುಕೊಳ್ಳವುದು ಸಹ ಸಹಾಯ ಮಾಡುತ್ತದೆ.

ಚೆನ್ನಾಗಿ ತೊಳೆದ ಕ್ಯಾರೆಟ್ ಒಂದನ್ನು ಸಿಪ್ಪೆ ಸಮೇತ ರುಬ್ಬಿಕೊಳ್ಳಬೇಕು. ಒಂದು ಚಮಚ ರುಬ್ಬಿಟ್ಟುಕೊಂಡ ಕ್ಯಾರೆಟ್ ಪೇಸ್ಟಗೆ ಅಲೋವೆರಾ (ಲೋಳೆಸರ)ದ ಲೋಳೆಯನ್ನು, ನಿಂಬುರಸವನ್ನು ಚಿಟಿಕೆ ಅರಿಶಿಣವನ್ನು, ಒಂದು ಚಮಚ ಮುಲ್ತಾನಿ ಮಣ್ಣನ್ನು ಹಾಕಿ ಸರಿಯಾಗಿ ಲೇಹ್ಯದಂತೆ ಮಿಶ್ರಣ ಮಾಡಿಕೊಳ್ಳಬೇಕು. ಅದನ್ನು ಮುಖಕ್ಕೆ ಲೇಪಿಸಿ ಅರ್ಧಗಂಟೆ ನಂತರ ತೊಳೆಯಬೇಕು ಅಥವಾ ಹತ್ತಿ ಬಟ್ಟೆಯಲ್ಲಿ ಒರೆಸಿಕೊಳ್ಳಬೇಕು. ಇದರಿಂದಾಗಿ ಸೂರ್ಯನ ವಿಕಿರಣಗಳಿಂದ ಕಪ್ಪಾದ ಭಾಗವು ಸರಿಯಾಗುತ್ತ ಹೋಗುತ್ತದೆ. ಒಂದು ಚಮಚ ಕಡಲೆಹಿಟ್ಟು ಹಾಗೂ ಒಂದು ಚಮಚ ಹೆಸರುಕಾಳಿನ ಹಿಟ್ಟನ್ನು ತೆಗೆದುಕೊಂಡು ಅದಕ್ಕೆ ಅರ್ಧ ಚಮಚ ಅರಿಶಿಣ, ಶುದ್ಧ ಮೊಸರು ಹಾಗೂ ನಾಲ್ಕೈದು ಹನಿ ಜೇನುತುಪ್ಪವನ್ನು ಹಾಕಿ ಮಿಶ್ರಣ ಮಾಡಿಕೊಳ್ಳಬೇಕು. ತರಿತರಿಯಾದ ಈ ಲೇಹವನ್ನು ಚರ್ಮದಮೇಲೆ ಅಥವಾ ಮುಖದ ಮೇಲೆ ವೃತ್ತಾಕಾರವಾದ ರೀತಿಯಲ್ಲಿ ಮಸಾಜ್ ಮಾಡಿಕೊಳ್ಳಬೇಕು. ನಂತರ ಇದರ ಲೇಪನವನ್ನು ಮಾಡಿಕೊಂಡು 15-20 ನಿಮಿಷದಲ್ಲಿ ತೊಳೆದುಕೊಳ್ಳಬೇಕು. ಇದರಿಂದಾಗಿ ಚರ್ಮವು ಕಾಂತಿಯುತವಾಗಿ, ಸೌಂದರ್ಯಯುತವಾದ ಹೊಳಪನ್ನು ಪಡೆಯುತ್ತದೆ. ಹೀಗೆ ಸುಲಭವಾದ ಉಪಚಾರಗಳಿಂದ ಹಾಗೂ ನೈಸರ್ಗಿಕ ಆಹಾರ ಸೇವನೆಯಿಂದ, ನಿಸರ್ಗ ಚಿಕಿತ್ಸೆಗಳಿಂದ ಸುಂದರ ಹಾಗೂ ಆರೋಗ್ಯಕರ ಚರ್ಮದ ರಚನೆಸಾಧ್ಯ.

ಕೊನೇ ಹನಿ

ಮಣ್ಣಿನ ಮಡಕೆಯಲ್ಲಿನ ಶುದ್ಧ ನೀರನ್ನು ಕುಡಿಯುವುದು ಆಸಿಡಿಟಿ, ಗ್ಯಾಸ್ ಸಂಬಂಧಿತ ಸಮಸ್ಯೆ ಇರುವವರಿಗೆ ಉತ್ತಮ.

 

Leave a Reply

Your email address will not be published. Required fields are marked *

Back To Top