Wednesday, 18th July 2018  

Vijayavani

ಸಾಲದ ಸುಳಿಯಲ್ಲಿದ್ರೂ ಐ ಫೋನ್​ ಗಿಫ್ಟ್​ - ಹತ್ತಾರು ಸಮಸ್ಯೆ ಮಧ್ಯೆ ಬೇಕಿತ್ತಾ ದುಬಾರಿ ಉಡುಗೊರೆ​ - ಇಟ್ಕೊಂಡೋರಾರು..? ವಾಪಸ್ ಕೊಟ್ಟವರಾರು.?        ದೆಹಲಿಯಲ್ಲಿದ್ರೂ ರೇವಣ್ಣಗೆ ತವರಿನ ಜಪ - ಹಾಸನದ ಅಭಿವೃದ್ಧಿ ಬಗ್ಗೆ ಕೇಂದ್ರ ಸಚಿವರ ಜತೆ ಚರ್ಚೆ - ಸಿಎಂ ಎಚ್​ಡಿಕೆಯನ್ನೇ ಓವರ್​​ಟೇಕ್​ ಮಾಡಿದ PWD ಮಿನಿಸ್ಟರ್​​​        ಜಾರಕಿಹೊಳಿ ಬ್ರದರ್ಸ್​​​​ ನಡುವೆ ಸಮರ - ದೆಹಲಿಗೆ ಶಾಸಕರನ್ನ ಕರೆದೊಯ್ದ ರಮೇಶ್​​​​​​​ ಜಾರಕಿಹೊಳಿ - ಸತೀಶ್​​ಗೆ ಮಂತ್ರಿಗಿರಿ ತಪ್ಪಿಸಲು ಶಕ್ತಿ ಪ್ರದರ್ಶನ        ಇಂದಿನಿಂದ ಸಂಸತ್ ಅಧಿವೇಶನ - ಮಹಿಳಾ ಮೀಸಲಾತಿ, ತ್ರಿಪಲ್ ತಲಾಖ್​​​​​ ಮಸೂದೆ ಅಂಗೀಕಾರ ಸಾಧ್ಯತೆ - ಸಂಜೆ ರಾಜ್ಯ ಸಂಸದರ ಜತೆ ಸಿಎಂ ಮೀಟಿಂಗ್​​        ವಸತಿ ಯೋಜನೆಯ ಹಣವನ್ನೇ ನುಂಗಿದ್ರು - 140 ಅನರ್ಹರಿಂದ 8 ಕೋಟಿ ಗುಳುಂ ಸ್ವಾಹ - ಗದಗ ನಗರಸಭೆಯಲ್ಲಿ ಬಯಲಾಯ್ತು ಗೋಲ್​ಮಾಲ್​​​​        ದೀಪಾಲಂಕಾರದಿಂದ ಕಂಗೊಳಿಸಿದ ಕೆಆರ್​ಎಸ್​ - ಗಗನ ಚುಕ್ಕಿ ಜಲಪಾತ ನಯನ ಮನೋಹರ - ಡ್ರೋಣ್​​ ಕಣ್ಣಲ್ಲಿ ಸೆರೆಯಾಯ್ತು ಜಲಧಾರೆಯ ದೃಶ್ಯ ವೈಭವ       
Breaking News

ಗ್ರೀಸ್​ನಲ್ಲಿ ಕನ್ನಡತನ ಪಸರಿಸಿದ ಪೂರ್ವಿ

Friday, 13.10.2017, 3:03 AM       No Comments

ಬೆಂಗಳೂರು: ಗ್ರೀಸ್​ನ ಥೆಸಲೊಂಕಿಯಲ್ಲಿ ನಡೆದ ಅಂತಾರಾಷ್ಟ್ರೀಯ ಮಕ್ಕಳ ಸೌಂದರ್ಯ ಸ್ಪರ್ಧೆ ಮತ್ತು ಪ್ರತಿಭಾ ಪ್ರದರ್ಶನದಲ್ಲಿ ಮೊದಲ ಬಾರಿಗೆ ಭಾರತವನ್ನು ಪ್ರತಿನಿಧಿಸಿದ್ದ ಬೆಂಗಳೂರಿನ ಸೋಫಿಯಾ ಹೈಸ್ಕೂಲ್ ವಿದ್ಯಾರ್ಥಿನಿ ಜಿ.ಬಿ. ಪೂರ್ವಿ, ಮೊದಲ ರನ್ನರ್ ಅಪ್ ಆಗುವ ಮೂಲಕ ಬೆಳ್ಳಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಹಾಗೆಯೇ, ಬೆಸ್ಟ್ ಪರ್ಫಾರ್ಮನ್ಸ್ ಟ್ಯಾಲೆಂಟ್ ಅವಾರ್ಡ್​ಗೂ ಭಾಜನರಾಗಿದ್ದಾರೆ.

ಕೊಪ್ಪಳ ಮೂಲದ ಪೂರ್ವಿ ಸೋಫಿಯಾ ಹೈಸ್ಕೂಲ್​ನಲ್ಲಿ 7ನೇ ತರಗತಿಯಲ್ಲಿ ಓದುತ್ತಿದ್ದು, 12 ವರ್ಷದೊಳಗಿನ ಮಕ್ಕಳ ವಿಭಾಗದಲ್ಲಿ ಸ್ಪರ್ಧಿಸಿದ್ದರು. ದಿವಾ ಫ್ಯಾಷನ್ ಗ್ರೂಪ್ ಮತ್ತು ಉಕ್ರೇನ್​ನ ಮಕ್ಕಳ ಕಲೆ ಮತ್ತು ಸಾಂಸ್ಕೃತಿಕ ಉತ್ಸವದ ಸಂಸ್ಥಾಪಕಿ ನಟಾಲಿಯಾ ಆಯೋಜಿಸಿದ್ದ ಈ ಸ್ಪರ್ಧೆ ಒಂದು ವಾರಗಳ ಕಾಲ ನಡೆಯಿತು. 30 ದೇಶಗಳ ವಿವಿಧ ವಯೋಮಾನದ ನೂರಾರು ಮಕ್ಕಳು ಪಾಲ್ಗೊಂಡಿದ್ದರು. ಬೆಂಗಳೂರಿನಲ್ಲಿ ನಡೆದ ಆಡಿಷನ್ ಮತ್ತು ಚೆನ್ನೈನಲ್ಲಿ ನಡೆದ ರಾಷ್ಟ್ರೀಯ ಸ್ಪರ್ಧೆಯಲ್ಲಿ ಆಯ್ಕೆಯಾದ ಪೂರ್ವಿ ಈ ಅವಕಾಶ ಪಡೆದಿದ್ದರು.

ಸಂಸ್ಕೃತಿ ಪ್ರತಿನಿಧಿಸಿದ ವಿದ್ಯಾರ್ಥಿನಿ

ರಾಷ್ಟ್ರೀಯ ವಸ್ತ್ರ ಪ್ರದರ್ಶನ ಸ್ಪರ್ಧೆಯಲ್ಲಿ ಹೊಯ್ಸಳ ವಾಸ್ತುಶಿಲ್ಪದ ವೈಭೋಗ ಬಿಂಬಿಸುವ ವೇಷಭೂಷಣ ತೊಟ್ಟು ಪೂರ್ವಿ ರ‍್ಯಾಂಪ್ ಮೇಲೆ ಹೆಜ್ಜೆ ಹಾಕುವ ಮೂಲಕ ಎಲ್ಲರ ಮೆಚ್ಚುಗೆ ಪಡೆದರು. ಶಾಂತಲೆ, ದರ್ಪಣ ಸುಂದರಿ ಭಂಗಿಯಲ್ಲಿ ಶಿಲಾಬಾಲಕಿ ಜೀವಂತವಾಗಿ ಮೈದೆಳೆದು ಬಂದಂತೆ ಕಂಗೊಳಿಸಿದಳು. ವಿವಿಧ ರಾಷ್ಟ್ರಗಳ 20 ತೀರ್ಪಗಾರರು ಸೇರಿ ಪ್ರೇಕ್ಷಕರು, ವಿನ್ಯಾಸಗಾರರು ಶಿಲಾಬಾಲಕಿ ಉಡುಗೆಯ ಪರಿಕಲ್ಪನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಮಾಜಸೇವೆ, ರಾಷ್ಟ್ರೀಯ ವೇಷಭೂಷಣ ಹಾಗೂ ರ‍್ಯಾಂಪ್ ವಾಕ್ ಈ 3 ಸುತ್ತಿನಲ್ಲಿ ಅರ್ಹತೆ ಪಡೆದು ಅತ್ಯುತ್ತಮ ಪ್ರತಿಭಾ ಪ್ರದರ್ಶನದಲ್ಲಿ ಮಿಂಚಿದ ಭಾರತದ ಏಕೈಕ ಬಾಲಕಿ ಪೂರ್ವಿ.

Leave a Reply

Your email address will not be published. Required fields are marked *

Back To Top