Monday, 19th March 2018  

Vijayavani

ಬಿಜೆಪಿ, RSSನವರು ಕೌರವರು - ರೈತರು ಸಾಯ್ತಿದ್ರೆ ಮೋದಿ ಯೋಗ ಮಾಡ್ತಾರೆ - ಅಧಿವೇಶನದ ಕಡೇ ದಿನ ರಾಹುಲ್ ವಾಗ್ದಾಳಿ        ಬ್ಯಾಲೆಟ್‌ ಪದ್ದತಿಗೆ ರಾಜಕೀಯ ಒಮ್ಮತ - ಮತಪತ್ರ ಬಳಕೆ ಚರ್ಚಿಸಲು ಓಕೆ ಎಂದ ಬಿಜೆಪಿ - ಮತ್ತೆ ಬರುತ್ತಾ ಬ್ಯಾಲೆಟ್ ಪೇಪರ್‌ ಬಗೆದಷ್ಟು ಬಯಲಾಗ್ತಿದೆ ವಿಕ್ರಂ ಚಿಟ್‌ಫಂಡ್ ವಂಚನೆ - ಇನ್ವೆಸ್ಟ್ ಮಾಡಿದ್ದ ದ್ರಾವಿಡ್ ಪತ್ನಿಗೂ ಮೋಸ - ಸದಾಶಿವನಗರ ಠಾಣೆಯಲ್ಲಿ ಕೇಸ್        ಲಿಂಗಾಯತ ಧರ್ಮ ಸಂಕಟದಲ್ಲಿ ಸಿಎಂ - ಕೇಂದ್ರಕ್ಕೆ ವರದಿ ಶಿಫಾರಸು ಕುರಿತು ನಾಳೆ ಡಿಸ್ಕಷನ್ - ಕುತೂಹಲ ಮೂಡಿಸಿದ ಸಿದ್ದರಾಮಯ್ಯ ನಡೆ        ಎನ್‌ಜಿಒ ಕ್ರೆಡಿಟ್ ಕಾರ್ಡ್‌ ಬಳಸಿ ಶಾಪಿಂಗ್ - ಮಾರಿಷಸ್‌ ಅಧ್ಯಕ್ಷೆ ಅಮೀನಾ ರಿಸೈನ್ - ಬಿಂದಾಸ್‌ ಲೈಫ್‌ಗೆ ಹೋಯ್ತು ಪ್ರೆಸಿಡೆಂಟ್ ಸೀಟ್        ನಾಡಿನಾದ್ಯಂತ ವಿಳಂಬಿ ನಾಮ ಸಂವತ್ಸರ - ಬೇವು ಬೆಲ್ಲ ಸವಿದು ನಮಿಸಿದ ಭಕ್ತಸಾಗರ - ದಾವಣಗೆರೆಯ ಕುಂದುವಾಡದಲ್ಲಿಲ್ಲ ಹಬ್ಬದ ಸಡಗರ       
Breaking News

ಗೌರಿಬಿದನೂರು, ಮೈಸೂರು ರಸ್ತೆಯಲ್ಲಿ ಸಮೃದ್ಧಿ ಬಡಾವಣೆ

Saturday, 09.09.2017, 3:00 AM       No Comments

ದ್ಯ ರಿಯಾಲ್ಟಿ ವಲಯದ ಚಿತ್ತ ಉಪನಗರಗಳತ್ತ ಹರಿಯುತ್ತಿದೆ. ಗೌರಿಬಿದನೂರು, ತುಮಕೂರು, ಚಿಕ್ಕಬಳ್ಳಾಪುರ, ಮಾಗಡಿ ರಸ್ತೆ ಸೇರಿ ಬೆಂಗಳೂರಿನಿಂದ ಕೊಂಚ ಅಂತರದಲ್ಲಿ ಬಡಾವಣೆಗಳು ತಲೆ ಎತ್ತುತ್ತಿವೆ.

ಹೂಡಿಕೆಯ ಅವಕಾಶಗಳನ್ನು ಗಮನದಲ್ಲಿರಿಸಿ ನಗರದ ಸಮೃದ್ಧಿ ಪ್ರಾಪರ್ಟೀಸ್ ಸಂಸ್ಥೆಯು ಚಿಕ್ಕಬಳ್ಳಾಪುರದ ಗೌರಿಬಿದನೂರು ಹಾಗೂ ಮೈಸೂರು ರಸ್ತೆಯ ದೊಡ್ಡ ಆಲದಮರ ಪ್ರದೇಶದಲ್ಲಿ ಕೈಗೆಟಕುವ ದರದಲ್ಲಿ ಆಕರ್ಷಕ ಬಡಾವಣೆಗಳನ್ನು ನಿರ್ವಿುಸುತ್ತಿದೆ. ಜ್ಞಾನಾಕ್ಷಿ ರಾಜರಾಜೇಶ್ವರಿ ಬಡಾವಣೆ ಹಾಗೂ ಗೌರಿಬಿದನೂರಿನಲ್ಲಿನ ಸಮೃದ್ಧಿ ನಿತ್ಯೋತ್ಸವ ಹಾಗೂ ನಂದನವನ ಬಡಾವಣೆಗಳು ಹೂಡಿಕೆಗೆ ಯೋಗ್ಯ ಬಡಾವಣೆಗಳಾಗಿ ರೂಪುಗೊಳ್ಳುತ್ತಿವೆ.

ಪ್ರಸ್ತುತ ಬೆಂಗಳೂರಿನ ಆಸುಪಾಸಿನಲ್ಲಿ ಕೆಂಗೇರಿ, ಮೈಸೂರು ರಸ್ತೆ ಭಾಗಕ್ಕೆ ರಿಯಾಲ್ಟಿ ವಲಯದಲ್ಲಿ ಹೆಚ್ಚು ಬೇಡಿಕೆ ಇವೆ. ಹೆದ್ದಾರಿಗೆ ಹೊಂದಿಕೊಂಡ ಬಡಾವಣೆಯಾಗಿರುವ ಜ್ಞಾನಾಕ್ಷಿ ರಾಜರಾಜೇಶ್ವರಿ ಬಡಾವಣೆಯ ಶೇ.100 ಅಭಿವೃದ್ಧಿಯಾಗಿದ್ದು, ಗ್ರಾಹಕರು ತಮ್ಮ ಕನಸಿನ ಮನೆ ನಿರ್ವಣಕ್ಕೆ ಅಗತ್ಯ ಎಲ್ಲ ಅನುಕೂಲತೆ ಸಿದ್ಧ ಮಾಡಲಾಗಿದೆ. 2 ಎಕರೆ ಪ್ರದೇಶದಲ್ಲಿ ಬಿಎಂಆರ್​ಡಿನಿಂದ ಅನುಮೋದನೆ ಪಡೆದ ಭೂ ಭಾಗವನ್ನು ಆಕರ್ಷಕ ಬಡಾವಣೆಯನ್ನಾಗಿ ರೂಪುಗೊಳಿಸಲಾಗಿದೆ.

ಬಡಾವಣೆಯ ಸುತ್ತಮುತ್ತ ಪ್ರತಿಷ್ಠಿತ ರೆಸಿಡೆನ್ಷಿಯಲ್ ಚಟುವಟಿಕೆಗಳೇ ಹೆಚ್ಚಿರುವುದರಿಂದ ಬಡಾವಣೆಗೆ ಬೇಡಿಕೆ ಹೆಚ್ಚಿಸಿದೆ.ಇದಲ್ಲದೆ ಕುಂಬಳಗೂಡು ವರೆಗೆ ಮೆಟ್ರೋ ರೈಲು ಸಂಪರ್ಕದಿಂದ ಸಂಚಾರ ಹಾಗೂ ಸಂಪರ್ಕಕ್ಕೆ ಮತ್ತಷ್ಟು ಅನುಕೂಲ ಸೃಷ್ಟಿಸಿದೆ. ರಾಜರಾಜೇಶ್ವರಿ ಮೆಡಿಕಲ್ ಕಾಲೇಜು, ಆರ್.ವಿ ಇಂಜಿನಿಯರಿಂಗ್ ಕಾಲೇಜು ಸೇರಿ ಅನೇಕ ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ಬಡಾವಣೆಗೆ ಹತ್ತಿರದಲ್ಲಿರುವುದು ಪ್ಲಸ್ ಪಾಯಿಂಟ್

ಇನ್ನು ಚಿಕ್ಕಬಳ್ಳಾಪುರದ ಗೌರಿಬಿದನೂರಿನ ಸನಿಹದಲ್ಲಿ ಸಮೃದ್ಧಿ ನಿತ್ಯೋತ್ಸವ ಹಾಗೂ ನಂದನವನ ಬಡಾವಣೆ ನೋಂದಣಿಗೆ ಸಿದ್ಧಗೊಂಡಿದೆ. ಒಟ್ಟಾರೆ 40 ಎಕರೆ ಪ್ರದೇಶವನ್ನು ಅಭಿವೃದ್ಧಿಪಡಿಸಲು ಮುಂದಾಗಿದೆ. ಒಟ್ಟಾರೆ 4 ಹಂತಗಳಲ್ಲಿ ಬಡಾವಣೆ ನಿರ್ಮಾಣ ಮಾಡಲಾಗಿದೆ. ಒಟ್ಟು 200ಕ್ಕೂ ಅಧಿಕ ಸೈಟುಗಳು ಬಡಾವಣೆಯಲ್ಲಿದ್ದು, 3ನೇ ಹಂತದಲ್ಲಿ 70 ಸೈಟುಗಳಷ್ಟೇ ಹೊಸ ಗ್ರಾಹಕರಿಗೆ ಲಭ್ಯವಿದೆ. ಇನ್ನುಳಿದ ಹಂತಗಳ ಸೈಟುಗಳು ಈಗಾಗಲೇ ಮಾರಾಟವಾಗಿದೆ.

ಗೌರಿಬಿದನೂರು ಕೈಗಾರಿಕಾ ಪ್ರದೇಶ, ಪ್ರತಿಷ್ಠಿತ ವಿದ್ಯಾಸಂಸ್ಥೆಗಳ ಭವಿಷ್ಯದ ಯೋಜನೆಗಳು ಗೌರಿಬಿದನೂರು ಹಾಗೂ ಚಿಕ್ಕಬಳ್ಳಾಪುರ-ಬಳ್ಳಾರಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ರೂಪುಗೊಳ್ಳುತ್ತಿದೆ. ಸಮೃದ್ಧಿ ನಿತ್ಯೋತ್ಸವ ಹಾಗೂ ನಂದನವನ ಯೋಜನೆಗಳೂ ಹೆದ್ದಾರಿಗೆ ಹೊಂದಿಕೊಂಡಿದ್ದು, ಡಿಟಿಸಿಪಿಯಿಂದ ಅನುಮೋದನೆಯನ್ನೂ ಪಡೆದುಕೊಂಡಿದೆ.

ಗುಣಮಟ್ಟದ ಸೌಕರ್ಯ

ಬಡಾವಣೆಯಲ್ಲಿ ಮೂಲಸೌಕರ್ಯಕ್ಕೆ ಆದ್ಯತೆ ನೀಡಲಾಗಿದ್ದು, ನೀರು ಸರಬರಾಜು, ಸ್ಯಾನಿಟರಿ, ವಿದ್ಯುತ್, ಭದ್ರತೆ ಇತ್ಯಾದಿ ಎಲ್ಲ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗಿದೆ. 40ಅಡಿ ಅಗಲದ ಕಾಂಕ್ರೀಟ್ ರಸ್ತೆಗಳಿರಲಿದೆ. ನಿತ್ಯೋತ್ಸವ ಹಾಗೂ ನಂದನವನ ಬಡಾವಣೆಯಲ್ಲಿ ಕ್ಲಬ್ ಹೌಸ್, ಆಕರ್ಷಕ ಆರ್ಚ್, ಈಜುಕೊಳ ಇತ್ಯಾದಿ ಸೌಲಭ್ಯಗಳಿವೆ.

ಸಮೃದ್ಧಿ ನಿತ್ಯೋತ್ಸವ ಹಾಗೂ ನಂದನವನ ಯೋಜನೆಗಳು ಶೇ.100 ಅಭಿವೃದ್ಧಿಯಾಗಿದ್ದು, ನೋಂದಣಿಗೆ ಸಿದ್ಧವಾಗಿದೆ. ಭವಿಷ್ಯದಲ್ಲಿ ಮೈಸೂರು ಹಾಗೂ ಚಿಕ್ಕಬಳ್ಳಾಪುರ ಭಾಗದಲ್ಲಿ ಉತ್ತಮ ಬಡಾವಣೆ ನಿರ್ವಿುಸುವ ಆಲೋಚನೆ ಇದೆ

ಜಿ.ಎಸ್.ವಿಜಯ್, ವ್ಯವಸ್ಥಾಪಕ ನಿರ್ದೇಶಕ

ಸಂಪರ್ಕ ಸಂಖ್ಯೆ: 9019621962

ಕಚೇರಿ ದೂರವಾಣಿ: 080-28488238

Leave a Reply

Your email address will not be published. Required fields are marked *

Back To Top