Wednesday, 18th July 2018  

Vijayavani

ಶಬರಿಮಲೆ ಪ್ರವೇಶಕ್ಕೆ ಮಹಿಳೆಯರಿಗೆ ಅನುಮತಿ - ಕೇರಳ ಸರ್ಕಾರದಿಂದ ಗ್ರೀನ್​ಸಿಗ್ನಲ್        ಕೇಂದ್ರದಿಂದ ನೆರವಿನ ಮಹಾಪೂರ - ಕೃಷಿ ಯೋಜನೆ, ಮೆಗಾ ಡೈರಿ ಆರಂಭಕ್ಕೆ 900 ಕೋಟಿ ನೆರವು        ಸ್ಮಶಾನ ಜಾಗದ ವಿಚಾರವಾಗಿ ಜಟಾಪಟಿ - ಎರಡು ಗುಂಪುಗಳ ಮಧ್ಯೆ ಮಾರಾಮಾರಿ - ಘರ್ಷಣೆಯಲ್ಲಿ 50 ಮಂದಿಗೆ ಗಾಯ        ಕೃಷ್ಣಾ ನದಿಯಲ್ಲಿ ಪ್ರವಾಹದ ನರ್ತನ - ಯಾದಗಿರಿಯ ನೀಲಕಂಠನದೊಡ್ಡಿ ಗ್ರಾಮಕ್ಕೆ ಜಲದಿಗ್ಬಂಧನ - ಗ್ರಾಮಸ್ಥರು ತಲ್ಲಣ        ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಜಿಟಿಡಿ - ಬಳ್ಳಾರಿಗೆ ಕಳಿಸೋದಾಗಿ ಅಧಿಕಾರಿಗಳಿಗೆ ವಾರ್ನಿಂಗ್- ಚಪ್ಪಾಳೆ ಹೊಡೆದ ಸ್ಟೂಡೆಂಟ್ಸ್        ಎಲ್ಲೆಡೆ ಕೇಳಿಬರ್ತಿದೆ ಧೋನಿ ನಿವೃತ್ತಿ ವಿಷಯ - ಲೀಡ್ಸ್​​ನಲ್ಲಿ ಅಂಪೈರ್ ಬಳಿ ಬಾಲ್ ಪಡೆದಿದ್ದೇಕೆ - ಕ್ರಿಕೆಟಿಗೆ ಗುಡ್​​ಬೈ ಹೇಳ್ತಾರಾ ಮಾಹಿ       
Breaking News

ಗೋಲ್ಡನ್ ಗ್ಲೋಬ್ಸ್​ನಲ್ಲಿ ಪ್ರಿಯಾಂಕಾ

Tuesday, 03.01.2017, 2:13 AM       No Comments

2016ರಲ್ಲಿ ನಡೆದ ಅಕಾಡೆಮಿ ಅವಾರ್ಡ್ಸ್ ಆಂಡ್ ಎಮ್ಮೀಸ್​ನಲ್ಲಿ ಸಖತ್ತಾಗಿ ಕಾಣಿಸಿಕೊಂಡಿದ್ದ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮೊದಲ ಬಾರಿಗೆ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ಸ್ ಅವಾರ್ಡ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದೇ ತಿಂಗಳು ನಡೆಯುವ 74ನೇ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಿಗ್ಗಿ ಕೂಡ ನಿರೂಪಕಿಯಾಗಿ ಕಾಣಿಸಿಕೊಳ್ಳಲಿರುವುದು ವಿಶೇಷ. ಗೋಲ್ಡನ್ ಗ್ಲೋಬ್ ಅವಾರ್ಡ್​ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪ್ರಿಯಾಂಕಾ ಚೋಪ್ರಾ ಹೆಸರನ್ನು ಘೊಷಿಸಲಾಗಿದೆ. ಇವರ ಜತೆಗೆ ಟಿಮೋತಿ ಒಲಿಫಂಟ್, ಜಸ್ಟಿನ್ ತೆರೋಕ್ಸ್ ಹೆಸರನ್ನೂ ಹಾಕಲಾಗಿದೆ. ‘ಪ್ರಿಯಾಂಕಾ ಚೋಪ್ರಾ ಬದಲು ಬೇರೆ ನಟಿಯರು ಪಾಲ್ಗೊಳ್ಳುವ ಅವಕಾಶವಿದ್ದರೂ ನಾವು ಆಕೆಯ ಆಗಮನದ ನಿರೀಕ್ಷೆಯಲ್ಲಿದ್ದೇವೆ’ ಎಂದು ಆಯೋಜಕರು ಟ್ವೀಟ್ ಮಾಡಿದ್ದಾರೆ. ಖ್ಯಾತ ನಟಿಯರಾದ ಡ್ರೂ ಬ್ಯಾರಿಮೋರ್, ಮಟ್ ದಮನ್, ವಿಯೋಲ ಡೇವಿಸ್, ಲಾರಾ ಡೆರ್ನ್, ಗೋಲ್ಡಿ ಹಾನ್, ನಿಕೋಲ್ ಕಿಡ್​ವುನ್, ಮ್ಯಾಂಡಿ ಮೂರ್ ಮುಂತಾದವರ ಹೆಸರು ಪಟ್ಟಿಯಲ್ಲಿತ್ತು. ಅದರಲ್ಲಿ ಪ್ರಿಯಾಂಕಾ ಚೋಪ್ರಾ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ದೇಶಿಯ ಮತ್ತು ವಿದೇಶಿ ಕಿರುತೆರೆ, ಸಿನಿಮಾ ಎರಡರಲ್ಲಿಯ ಅತ್ಯುತ್ತಮ ನಟನೆ, ತಂತ್ರಜ್ಞಾನ ಇತ್ಯಾದಿ ವಿಭಾಗಗಳಿಗೆ ಗೋಲ್ಡನ್ ಗ್ಲೋಬ್ ಅವಾರ್ಡ್ ನೀಡಲಾಗುತ್ತದೆ. ಈ ಬಾರಿ ಜ.8ರಂದು ನಡೆಯುವ ಈ ಸಮಾರಂಭದಲ್ಲಿ ಟಾಕ್ ಶೋ ಹೋಸ್ಟ್ ಜಿಮ್ಮಿ ಫಾಲನ್ ಮುಖ್ಯ ನಿರೂಪಕರಾಗಿರುತ್ತಾರೆ. | ಏಜೆನ್ಸೀಸ್

Leave a Reply

Your email address will not be published. Required fields are marked *

Back To Top