Monday, 22nd January 2018  

Vijayavani

ಸರಹದ್ದು ಮೀರಿ ವರ್ತಿಸ್ತಿದೆ ಪಾಪಿ ಪಾಕ್​- ಐದು ದಿನಗಳಿಂದ ಗುಂಡಿನ ದಾಳಿಗೆ ಪರಿಸ್ಥಿತಿ ಉಲ್ಭಣ- ಗಡಿಯಲ್ಲಿ ಯುದ್ಧ ಸ್ಥಿತಿ ನಿರ್ಮಾಣ        ದಾವೋಸ್​ನಲ್ಲಿ 48ನೇ ವಿಶ್ವ ಆರ್ಥಿಕ ವೇದಿಕೆ ಸಮಾವೇಶ- ಸ್ವಿಸ್​ಗೆ ಹಾರಿದ ಪ್ರಧಾನಿ ಮೋದಿ- ವಿದೇಶಿ ಬಂಡವಾಳ ಸೆಳೆಯುವತ್ತ ಹಲವುಸೂತ್ರ        ಗ್ಯಾಸ್​ ರೀಫಿಲ್ಲಿಂಗ್ ವೇಳೆ ಲೀಕ್​ಆಗಿ ಹೊತ್ತಿಕೊಂಡ ಬೆಂಕಿ- ಆರು ಜನರಿಗೆ ಗಂಭೀರ ಗಾಯ- ಬೆಂಗಳೂರಿನಲ್ಲಿ ತಪ್ಪಿದ ಭಾರಿ ದುರಂತ        ಬೀದರ್​ನಲ್ಲಿ ವೀರಭದ್ರನ ಪಲ್ಲಕ್ಕಿ ಉತ್ಸವ- ಶಸ್ತ್ರಧಾರಣೆ ಮೂಲಕ ಭಕ್ತಿಯ ಪರಾಕಷ್ಠೆ- ಅತ್ತ ಮಂಗಳೂರಿನಲ್ಲಿ ಕಲವರದ ಪುತ್ತೂರು ಕಂಬಳ        ರಿಲೀಸ್​ ಡೇಟ್ ಫಿಕ್ಸ್​ ಆದ್ರೂ ಪದ್ಮಾವತ್​​ಗೆ ಸಂಕಷ್ಟ- 25ಕ್ಕೆ ಬಿಡುಗಡೆಯಾದ್ರೆ ದೇಶಾದ್ಯಂತ ಬಂದ್​- ಕರ್ಣಿಸೇನಾ ರಕ್ತಪಾತದ ಡೈಲಾಗ್​ಗೆ ಬೆವರಿದ ಬನ್ಸಾಲಿ       
Breaking News :

ಗೋದ್ರಾ ಗರ್ಭದಲ್ಲಿ ನವಿರಾದ ಪ್ರೇಮಕಥೆ!

Sunday, 13.08.2017, 3:02 AM       No Comments

ಬೆಂಗಳೂರು: ಗೋದ್ರಾ ಅಂದ ತಕ್ಷಣ ನೆನಪಿಗೆ ಬರುವುದು 2002ರಲ್ಲಿ ಗುಜರಾತ್​ನಲ್ಲಿ ನಡೆದ ಕೋಮುಗಲಭೆ. ಇದೀಗ ಅದೇ ಹೆಸರಿಟ್ಟುಕೊಂಡು ನಿರ್ದೇಶಕ ನಂದೀಶ್ ಸಿನಿಮಾ ಮಾಡಲು ಹೊರಟಿದ್ದಾರೆ. ಮೊದಲ ಬಾರಿಗೆ ಸತೀಶ್ ನೀನಾಸಂ ಹಾಗೂ ಶ್ರದ್ಧಾ ಶ್ರೀನಾಥ್ ಈ ಚಿತ್ರದ ಮೂಲಕ ಒಟ್ಟಿಗೆ ನಟಿಸುತ್ತಿರುವುದು ವಿಶೇಷ.

ಶೀರ್ಷಿಕೆ ‘ಗೋದ್ರಾ’ ಎಂದಿರುವುದರಿಂದ, ಗೋದ್ರಾ ಹತ್ಯಾಕಾಂಡವನ್ನು ಈ ಸಿನಿಮಾ ನೆನೆಪು ಮಾಡುತ್ತದೆಯೇ? ‘ಇಲ್ಲ.. ಈ ಗೋದ್ರಾ ಭಿನ್ನ. ಗುಜರಾತ್​ನಲ್ಲಿ ನಡೆದ ಹತ್ಯಾಕಾಂಡಕ್ಕೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ನಾವಿಲ್ಲಿ ಮುದ್ದಾದ, ನವಿರಾದ ಲವ್​ಸ್ಟೋರಿಯನ್ನು ಈ ಶೀರ್ಷಿಕೆ ಬಳಸಿಕೊಂಡು ಹೇಳಹೊರಟಿದ್ದೇವೆ’ ಎಂಬುದು ನಿರ್ದೇಶಕರ ಮಾತು.

ಚಿಕ್ಕಂದಿನಿಂದ ಕಥಾನಾಯಕನ ಜೀವನದಲ್ಲಿ ನಡೆದ ಘಟನೆಗಳು ಆತನ ಮೇಲೆ ಹೇಗೆ ಪರಿಣಾಮ ಬೀರುತ್ತವೆ, ಆತ ಬೆಳೆದು ದೊಡ್ಡವನಾದ ಮೇಲೆ ಅವು ಹೇಗೆಲ್ಲ ಬೇರೆ ತಿರುವು ಪಡೆದುಕೊಳ್ಳುತ್ತವೆ ಎಂಬುದು ‘ಗೋದ್ರಾ’ ಚಿತ್ರದ ಎಳೆಯಂತೆ. ಸಿನಿಮಾದ ಕಥೆ ತೆರೆದುಕೊಳ್ಳುವುದು ದಕ್ಷಿಣಕನ್ನಡ ಜಿಲ್ಲೆಯ ಸುಬ್ರಹ್ಮಣ್ಯದಲ್ಲಿ ಎಂಬುದು ವಿಶೇಷ. ಈ ಸಿನಿಮಾಕ್ಕಾಗಿಯೇ 3 ತಿಂಗಳಿಂದ ಗಡ್ಡ ಬಿಟ್ಟು ತಯಾರಿ ನಡೆಸಿದ್ದಾರೆ ಸತೀಶ್. 20 ವರ್ಷ ವಯಸ್ಸಿನ ಹುಡುಗ ಮತ್ತು 35ವರ್ಷದ ವಯಸ್ಕ ಪಾತ್ರದಲ್ಲಿ ಸತೀಶ್ ‘ಗೋದ್ರಾ’ದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೊದಲಿಗೆ ವಯಸ್ಕನ ಪಾತ್ರದ ಶೂಟಿಂಗ್ ನಡೆಯಲಿದೆ. ಬಳಿಕ ದೇಹವನ್ನು ಮತ್ತಷ್ಟು ಸಣ್ಣದಾಗಿಸಿಕೊಂಡು ಹರೆಯದ ಹುಡುಗನಂತಾಗಲಿದ್ದಾರೆ. ಸಾಧ್ಯವಾದ ಮಟ್ಟಿಗೆ ಹೊಸಬರನ್ನೇ ಪರಿಚಯಿಸಲು ಉದ್ದೇಶಿಸಿರುವ ಚಿತ್ರತಂಡ, ರಂಗಾಯಣ, ನೀನಾಸಂನಂತಹ ನಟನಾ ಶಾಲೆಗಳ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳಲಿದೆ. ಇದರೊಂದಿಗೆ ಹೈದರಾಬಾದ್​ನಲ್ಲಿಯೂ ಹೊಸಮುಖಗಳಿಗಾಗಿ ಆಡಿಷನ್ ನಡೆಯಲಿದೆ. ಚಿತ್ರದ ಪ್ರಮುಖ ದೃಶ್ಯಾವಳಿಗಳನ್ನು ಛತ್ತಿಸ್​ಗಢದಲ್ಲಿ ಚಿತ್ರಿಸಲು ‘ಗೋದ್ರಾ’ ಟೀಮ್ ಪ್ಲ್ಯಾನ್ ಮಾಡಿದೆ. ‘ಎಲ್ಲಿಯ ಸುಬ್ರಮಣ್ಯ, ಎಲ್ಲಿಯ ಛತ್ತಿಸ್​ಗಢ..’ ಸಿನಿಮಾದಲ್ಲಿ ಹೇಗೆ ಒಂದಕ್ಕೊಂದು ಲಿಂಕ್ ಮಾಡುತ್ತೀರಿ ಎಂದಾಗ. ‘ಸಿನಿಮಾದಲ್ಲಿ ಲವ್​ಸ್ಟೋರಿ ಹೇಗೆ ಸಾಗುತ್ತದೋ ಅದೇ ರೀತಿ ನಾಯಕನ ಪಾತ್ರವೂ ಕೆಲ ಕಾಲಘಟ್ಟಕ್ಕೆ ತಕ್ಕಂತೆ ಬದಲಾಗುತ್ತದೆ. ಆ ಬದಲಾದ ಕಾಲಘಟ್ಟವನ್ನು ಬೇರೆ ಬೇರೆ ಪ್ರದೇಶಗಳಲ್ಲಿ ಚಿತ್ರೀಕರಿಸಲಿದ್ದೇವೆ’ ಎನ್ನುತ್ತಾರೆ ಚಿತ್ರದ ನಾಯಕ ಸತೀಶ್. ಪಕ್ಕಾ ಕಮರ್ಷಿಯಲ್ ಅಂಶಗಳ ಜತೆಗೆ ಹೊಸ ರೀತಿಯ ಪ್ರಯೋಗಾತ್ಮಕ ವಿಷಯವೂ ಇದೆಯಂತೆ. ಆಗಸ್ಟ್ 18ರಂದು ಚಿತ್ರೀಕರಣಕ್ಕೆ ಸಜ್ಜಾಗಬೇಕಿದ್ದ ಗೋದ್ರಾ ಪಡೆ, ಆ.25ರಿಂದ ಚಿತ್ರೀಕರಣ ಆರಂಭಿಸಿಲಿದೆ.

Leave a Reply

Your email address will not be published. Required fields are marked *

Back To Top