Friday, 20th July 2018  

Vijayavani

ಶೀರೂರು ಶ್ರೀಗಳ ಸಾವು ಕೊಲೆಯಲ್ಲ - ಅವರಿಗೆ ಮೊದಲಿಂದಲೂ ಅನಾರೋಗ್ಯ ಇತ್ತು - ಉಡುಪಿಯಲ್ಲಿ ಪೇಜಾವರ ಶ್ರೀ ಸ್ಪಷ್ಟನೆ        ರಾಹುಲ್‌ ಅಪ್ಪುಗೆಗೆ ಬಿಜೆಪಿ ಸಿಡಿಮಿಡಿ - ಸದನದಲ್ಲಿನ ವರ್ತನೆ ಬಗ್ಗೆ ಕೋಪ - ರಾಹುಲ್‌ಗೆ ಸ್ಪೀಕರ್‌ ನೀತಿಪಾಠ        ಭಾಷಣಕ್ಕಿಂತ ರಾಹುಲ್‌ ಕಣ್ಣೇಟು ಫೇಮಸ್‌ - ಪ್ರಿಯಾ ವಾರಿಯರ್‌ ವಿಡಿಯೋಗೆ ಲಿಂಕ್‌ - ಸಾಮಾಜಿಕ ಜಾಲತಾಣಗಳಲ್ಲಿ ಫುಲ್‌ವೈರಲ್‌        ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿದ ಸಿಎಂ - ಕಾವೇರಿಗೆ ಮುಖ್ಯಮಂತ್ರಿ ದಂಪತಿಯಿಂದ ಪೂಜೆ - ಸಚಿವ ಡಿಕೆಶಿ, ಮಹೇಶ್‌ ಸಾಥ್‌        ಸಿಬ್ಬಂದಿ ಒತ್ತಾಯದಿಂದ ಅಲ್ಲಿಗೆ ಹೋಗಿದ್ದೆ - ಮೊಗಸಾಲೆಯಲ್ಲಿ ಬರ್ತಡೇ ಪಾರ್ಟಿ ತಪ್ಪು - ಕ್ಷಮೆ ಕೋರಿದ ವಿಧಾನಸಭೆ ಕಾರ್ಯದರ್ಶಿ        ನಿನ್ನೆ ಬೌಬೌ ಬಿರಿಯಾನಿ - ಇಂದು ಮಿಯಾಂವ್‌ ಮಿಯಾಂವ್‌ ಮಸಾಲ - ಬೆಂಗಳೂರಿನ ವಿಜಯನಗರದಲ್ಲಿ ಬೆಕ್ಕು ನಾಯಿ ಭಕ್ಷ       
Breaking News

ಗೋಗಿಯಲ್ಲಿ ಮತ್ತೆ ಯುರೇನಿಯಂ ಆತಂಕ!

Saturday, 18.02.2017, 8:44 AM       No Comments

ದೇಶದ 12 ಪ್ರದೇಶಗಳಲ್ಲಿ ಅಣುವಿದ್ಯುತ್ ಸ್ಥಾವರ ಘಟಕ ಆರಂಭಿಸಲು ಕೇಂದ್ರ ಮುಂದಾಗಿದೆ ಎಂಬ ಕೇಂದ್ರ ಸಚಿವ ಜಿತೇಂದ್ರಸಿಂಗ್ ಅವರ ಹೇಳಿಕೆ ಗೋಗಿ ಗ್ರಾಮಸ್ಥರನ್ನು ಆತಂಕಕ್ಕೆ ದೂಡಿದೆ. ಗ್ರಾಮದ ಹಲವರು ಪಾರ್ಶ್ವವಾಯುವಿನಿಂದ ಬಳಲುವಂತಾಗಿದೆ. ಮಕ್ಕಳಲ್ಲೂ ಅಂಗಾಂಗ ದೋಷ ಕಂಡುಬಂದಿದೆ.

| ಲಕ್ಷ್ಮೀಕಾಂತ್ ಕುಲಕರ್ಣಿ

ಯಾದಗಿರಿ: ಶಹಾಪುರ ತಾಲೂಕಿನ ಗೋಗಿ ಗ್ರಾಮದಲ್ಲಿ ಯುರೇನಿಯಂ ಗಣಿಗಾರಿಕೆ ಪುನಾರಂಭಿಸಲು ಕೇಂದ್ರಸರ್ಕಾರ ಮುಂದಾಗಿರುವ ಹಿನ್ನೆಲೆಯಲ್ಲಿ ಮತ್ತೊಂದು ಹೋರಾಟಕ್ಕೆ ಜಿಲ್ಲೆ ಸಜ್ಜಾಗತೊಡಗಿದೆ.

ದೇಶದ 12 ರಾಜ್ಯಗಳಲ್ಲಿ ಅಣುವಿದ್ಯುತ್ ಸ್ಥಾವರ ಘಟಕ ಆರಂಭಿಸಲು ನಿರ್ಧರಿಸಿದ್ದು, ಇದರಲ್ಲಿ ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಗೋಗಿ ಗ್ರಾಮವೂ ಸೇರಿದೆ ಎಂದು ಪ್ರಧಾನಿ ಕಾರ್ಯಾಲಯ ಖಾತೆ ರಾಜ್ಯ ಸಚಿವ ಜಿತೇಂದ್ರಸಿಂಗ್ ರಾಜ್ಯಸಭೆಯಲ್ಲಿ ಇತ್ತೀಚೆಗೆ ನೀಡಿದ ಲಿಖಿತ ಹೇಳಿಕೆ ಗೋಗಿ ಸೇರಿ ಸುತ್ತಲಿನ ರೈತರಲ್ಲಿ ಆತಂಕ ಮೂಡಿಸಿದೆ. ಪರಿಸರವಾದಿಗಳು ಹಾಗೂ ಸ್ಥಳೀಯರ ವಿರೋಧದ ಮಧ್ಯೆಯೂ ಈ ಯೋಜನೆ ಪುನಾರಂಭಕ್ಕೆ ಗಣಿಗಾರಿಕೆಗೆ ಸ್ವಾಧೀನಪಡಿಸಿಕೊಂಡ ಜಮೀನಿನ ಸುತ್ತ ತಂತಿಬೇಲಿ ನಿರ್ಮಾಣ ಕಾರ್ಯ ಆರಂಭವಾಗಿದೆ.

ಏನಿದು ಯೋಜನೆ?: ಶಹಾಪುರ ತಾಲೂಕಿನ ಗೋಗಿ ಗ್ರಾಮದಲ್ಲಿ 550 ಕೋಟಿ ರೂ. ವೆಚ್ಚದ ಯುರೇನಿಯಂ ಗಣಿಗಾರಿಕೆ ಘಟಕ ಸ್ಥಾಪನೆಗೆ ಐದು ವರ್ಷಗಳ ಹಿಂದೆ ಅಂದಿನ ರಾಜ್ಯ ಸರ್ಕಾರ ಸಮ್ಮತಿ ನೀಡಿತ್ತು. ವಾರ್ಷಿಕ 0.15 ಮೆಟ್ರಿಕ್ ಟನ್ ಯುರೇನಿಯಂ ಅದಿರನ್ನು ಹೊರತೆಗೆಯುವ ಯೋಜನೆ ಇದಾಗಿತ್ತು. ಅಲ್ಲದೆ ಗ್ರಾಮದಲ್ಲಿ ಪರೀಕ್ಷಾರ್ಥ ಯುರೇನಿಯಂ ಅದಿರು ಸಹ ಹೊರತೆಗೆಯಲಾಗುತ್ತಿತ್ತು. ಇದು ಸ್ಥಳೀಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರತೊಡಗಿತು.

ಇದಾದ ನಂತರ ಗೋಗಿ ಗ್ರಾಮ ಪಂಚಾಯಿತಿ, ಪರಿಸರವಾದಿಗಳು ಮತ್ತು ಭೂಮಿತಾಯಿ ಹೋರಾಟ ಸಮಿತಿ ನಡೆಸಿದ ಉಗ್ರ ಪ್ರತಿಭಟನೆಯಿಂದಾಗಿ ಈ ಯೋಜನೆಯನ್ನು ಅಂದಿನ ಕೇಂದ್ರ ಸರ್ಕಾರ ಕೈಬಿಟ್ಟಿತು. ಅಲ್ಲದೆ ಯುರೇನಿಯಂ ಗಣಿಗಾರಿಕೆ ಉದ್ದೇಶಕ್ಕೆ ಈ ಹಿಂದೆ ಸ್ವಾಧೀನಪಡಿಸಿಕೊಂಡಿದ್ದ 260 ಎಕರೆ ಪ್ರದೇಶವನ್ನು ಸಂಬಂಧಿತ ರೈತರಿಗೆ ಮರಳಿಸಿ ಎಂಬ ಕೂಗು ಬಲವಾಗಿ ಕೇಳುತ್ತಿದೆ.

ಗೋಗಿ ಗ್ರಾಮದಲ್ಲಿ ಯುರೇನಿಯಂ ಗಣಿಗಾರಿಕೆ ಪುನಃ ಆರಂಭಿಸಲು ಚಿಂತನೆ ನಡೆದಿದೆ ಎಂಬ ಕೇಂದ್ರ ಸಚಿವರ ಹೇಳಿಕೆ ದಿಗಮೆ ಮೂಡಿಸಿದೆ. ಈ ಯೋಜನೆಯನ್ನು ಯಾವುದೇ ಕಾರಣಕ್ಕೂ ಆರಂಭಿಸದಂತೆ ಗ್ರಾಮಸಭೆಯಲ್ಲಿ ಠರಾವು ಪಾಸ್ ಮಾಡಿ ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗಿದೆ.

| ಮಲ್ಲನಗೌಡ ಪರಿವಾಣ ಭೂಮಿತಾಯಿ ಹೋರಾಟ ಸಮಿತಿ ಅಧ್ಯಕ್ಷ

Leave a Reply

Your email address will not be published. Required fields are marked *

Back To Top