Monday, 19th February 2018  

Vijayavani

ವಿದ್ಯಾರ್ಥಿ ಮೇಲೆ ದರ್ಪ ಮೆರೆದಿದ್ದ ಗೂಂಡಾ ಅರೆಸ್ಟ್ - ಕಬ್ಬನ್‌ ಪಾರ್ಕ್‌ ಪೊಲೀಸರಿಂದ ಬಂಧನ - ಠಾಣೆ ಎದುರು ಕಾರ್ಯಕರ್ತರ ಹೈಡ್ರಾಮಾ        ಶ್ರವಣಬೆಳಗೊಳದತ್ತ ಪ್ರಧಾನಿ ಮೋದಿ ಪಯಣ - ಬಾಹುಬಲಿಗೆ ಹೆಲಿಕಾಪ್ಟರ್‌ ಮೂಲಕ ಪುಷ್ಪನಮನ - ನಾಲ್ಕು ಗಂಟೆ ವೇಳೆಗೆ ಮೈಸೂರಲ್ಲಿ ಬಿಜೆಪಿ ಪರಿವರ್ತನಾ        ಭಾರತವೇ ಎಲ್ಲ ಆವಿಷ್ಕಾರಕ್ಕೆ ಹಾಟ್‌ ಸ್ಪಾಟ್ - ಜನರಿಂದಲೇ ಡಿಜಿಟಲ್ ಇಂಡಿಯಾ ಸಕ್ಸಸ್ - ಹೈದ್ರಾಬಾದ್ ಸಮಾವೇಶಕ್ಕೆ ಮೈಸೂರಿಂದ ಮೋದಿ ಸ್ಪೀಚ್        ಮುಂದುವರಿದ ಪಿಎನ್‌ಬಿ ಬ್ಯಾಂಕ್‌ ಹಗರಣ ಬೇಟೆ - ಬೆಂಗಳೂರಿನ ಹಲವೆಡೆ ಇಡಿ ದಾಳಿ - ನೀರವ್ ಡೈಮಂಡ್ಸ್ ಮಳಿಗೆಗಳಲ್ಲಿ ಶೋಧ        ಕೆ.ಆರ್‌ ಆಸ್ಪತ್ರೆಗೆ ಕೆ.ಎಸ್‌ ಪುಟ್ಟಣ್ಣಯ್ಯ ಪಾರ್ಥಿವ ಶರೀರ ರವಾನೆ - ವಿದೇಶದಿಂದ ಪುತ್ರಿ ಬಂದ ಬಳಿಕ ಬುಧವಾರ ಅಂತ್ಯಕ್ರಿಯೆ - ಗಣ್ಯರಿಂದ ಸಂತಾಪ       
Breaking News

ಗುಣಮಟ್ಟದ ಉದ್ಯೋಗದಿಂದ ಒಳ್ಳೆ ಆರೋಗ್ಯ

Sunday, 13.08.2017, 3:00 AM       No Comments

ವ್ಯಕ್ತಿಯ ಉದ್ಯೋಗ ಹಾಗೂ ಆರೋಗ್ಯದ ನಡುವೆ ಸಂಬಂಧ ಇದೆ. ವೇತನ ಕಡಿಮೆ ಎಂಬ ಕೊರಗು ಅಥವಾ ಒತ್ತಡಮಯ ವಾತಾವರಣದಲ್ಲೇ ಕೆಲಸ ಮಾಡುವವರಿಗಿಂತ ನಿರುದ್ಯೋಗಿಗಳು ಹೆಚ್ಚು ಆರೋಗ್ಯವಂತರಾಗಿರುತ್ತಾರೆ! ಎಂಬುದನ್ನು ಭಾರತೀಯ ಮೂಲದ ತಾರಿಣಿ ಚಂಡೋಲ ಅವರನ್ನು ಒಳಗೊಂಡ ಇಂಗ್ಲೆಂಡ್​ನ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದ ಸಂಶೋಧಕರು ಹೇಳಿದ್ದಾರೆ. ವಿವಿಯ ತಜ್ಞರು 2009-10ರಲ್ಲಿ ನಿರುದ್ಯೋಗಿಗಳಾಗಿದ್ದ 35ರಿಂದ 75 ವರ್ಷ ವಯಸ್ಸಿನವರ ಮಾನಸಿಕ ವಿಶ್ಲೇಷಣೆ ನಡೆಸಿದ್ದಲ್ಲದೆ, ಮುಂದಿನ ಕೆಲ ವರ್ಷಗಳವರೆಗೆ ವಿಶ್ಲೇಷಣೆಗೆ ಒಳಪಟ್ಟವರಿಂದ ಆರೋಗ್ಯದ ಮಾಹಿತಿ ಸಂಗ್ರಹಿಸಿದರು. ಅವರ ಹಾಮೋನ್​ಗಳಲ್ಲಿ ವ್ಯಕ್ತವಾದ ಭಾರಿ ಒತ್ತಡದ ಸ್ಥಿತಿ ಮತ್ತಿತರ ಜೈವಿಕ ಅಂಶಗಳನ್ನು ಸಮಗ್ರವಾಗಿ ವಿಶ್ಲೇಷಿಸಿದರು. ನಿರುದ್ಯೋಗಿಗಳಾಗಿ ಉಳಿದವರಿಗಿಂತಲೂ ಯಾವುದೋ ಒಂದು ಉದ್ಯೋಗ ಎಂದು ಆಯ್ಕೆ ಮಾಡಿಕೊಂಡು, ಸಣ್ಣಪುಟ್ಟ ಕೆಲಸಗಳಲ್ಲಿ ತೊಡಗಿಕೊಂಡವರು ಹೆಚ್ಚು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದು ಪತ್ತೆಯಾಯಿತು. ಅದೇ, ತಮ್ಮ ಇಚ್ಛೆಯಂತೆ, ಬೇಕಾದ ಕೆಲಸವನ್ನು ಅಯ್ಕೆ ಮಾಡಿಕೊಂಡವರ ಮಾನಸಿಕ ಆರೋಗ್ಯ ಉತ್ತಮವಾಗಿದ್ದದ್ದು ಕೂಡ ಕಂಡುಬಂದಿತು. ನಿರುದ್ಯೋಗಿಗಳ ಉದ್ಯೋಗದಲ್ಲಿನ ಯಶಸ್ಸು ಕೆಲಸದ ಗುಣಮಟ್ಟವನ್ನು ಆಧರಿಸಿದೆ. ಆದ್ದರಿಂದ, ಉದ್ಯೋಗದ ಮಟ್ಟ ಕಳಪೆಯಾಗಿದ್ದರೆ, ಅದು ಉದ್ಯೋಗಿಯ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. -ಪಿಟಿಐ

Leave a Reply

Your email address will not be published. Required fields are marked *

Back To Top