Wednesday, 21st March 2018  

Vijayavani

ಸದ್ಯಕ್ಕಿಲ್ಲ ರೋಹಿಣಿ ಸಿಂಧೂರಿ ವರ್ಗಾವಣೆ - ಸರ್ಕಾರದ ಆದೇಶಕ್ಕೆ ತಡೆ - ಹೊಸ ಆದೇಶಕ್ಕೆ ಸಿಎಟಿ ಸೂಚನೆ        ಇರಾಕ್‌ನಲ್ಲಿ ಭಾರತೀಯರ ಹತ್ಯೆಗೆ ವಿಪಕ್ಷ ಖಂಡನೆ - ಕಲಾಪದ ಆರಂಭದಲ್ಲೇ ಗದ್ದಲ ಕೋಲಾಹಲ - ರಾಜ್ಯಸಭಾ ಕಲಾಪ ನಾಳೆಗೆ ಮುಂದೂಡಿಕೆ        ಕೈ ಕೊಟ್ಟು ತೆನೆ ಇಳಿಸಿ ಕಮಲ ಮುಡಿದ ನಡಹಳ್ಳಿ - ಬಿಜೆಪಿ ಸೇರಿದ ಎ.ಎಸ್‌ ಪಾಟೀಲ್ - ಬಿಎಸ್‌ವೈ ಸಮ್ಮುಖದಲ್ಲಿ ಸೇರ್ಪಡೆ        ಬೆಂಗಳೂರಲ್ಲಿ ಮಿತಿ ಮೀರಿದ ಸರಗಳ್ಳರ ಹಾವಳಿ - ವಿದ್ಯಾರಣ್ಯಪುರದಲ್ಲಿ ಚೈನ್ ಸ್ನ್ಯಾಚಿಂಗ್ - ವೃದ್ಧೆಯ 16 ಗ್ರಾಂ ಸರ ಕಸಿದ ಖದೀಮರು        ಕಾಫಿನಾಡಲ್ಲಿ ರಾಹುಲ್‌ ಯಾತ್ರೆ - ಶೃಂಗೇರಿಗೆ ಎಐಸಿಸಿ ಅಧ್ಯಕ್ಷರ ಭೇಟಿ - ಸಂಜೆ ಹಾಸನದಲ್ಲಿ ಕಾಂಗ್ರೆಸ್ ರಣಕಹಳೆ       
Breaking News

ಗುಡ್ಡ ಕೊರೆದು ರಸ್ತೆ ಮಾಡಿದ ಜಲಂಧರ್

Saturday, 13.01.2018, 3:02 AM       No Comments

ಫೂಲ್​ಬನಿ: ಪ್ರಸವ ವೇದನೆಯಿಂದ ಬಳಲುತ್ತಿದ್ದ ಪತ್ನಿಯನ್ನು ಶೀಘ್ರ ಆಸ್ಪತ್ರೆಗೆ ಕರೆದೊಯ್ಯಲು ಬೆಟ್ಟದ ಮಾರ್ಗ ಅಡ್ಡವಾದ ಕಾರಣ ಆಕೆ ತೋಳ ತೆಕ್ಕೆಯಲ್ಲೇ ಪ್ರಾಣಬಿಟ್ಟ ದಾರುಣ ಘಟನೆಯಿಂದ ನೊಂದು ಬೆಟ್ಟವನ್ನು ಕೊರೆದು ರಸ್ತೆ ನಿರ್ವಿುಸಿದ ಬಿಹಾರದ ದಶರಥ್ ಮಾಂಜಿಯಂತೆಯೇ ಒಡಿಶಾದ ಕಂದಮಾಲ್ ಜಿಲ್ಲೆಯ ಗಮ್ಸಾಹಿ ಗ್ರಾಮದ ಜಲಂಧರ್ ನಾಯಕ್ ತನ್ನ ಮಕ್ಕಳು ಶಾಲೆಗೆ ಹೋಗಲು ಅನುಕೂಲವಾಗುವಂತೆ ಗುಡ್ಡವನ್ನೇ ಕಡಿದು 15 ಕಿ.ಮೀ. ರಸ್ತೆ ನಿರ್ವಿುಸುತ್ತಿದ್ದಾರೆೆ.

ನಾಯಕ್ ಗಮ್ಸಾಹಿ ಗ್ರಾಮದಿಂದ ಫೂಲ್​ಬನಿವರಗೆ ಈ ರಸ್ತೆ ನಿರ್ವಿುಸುತ್ತಿದ್ದು, 2 ವರ್ಷಗಳಿಂದ ಏಕಾಂಗಿಯಾಗಿ ಗುಡ್ಡವನ್ನು ಕಡಿದು 8 ಕಿ.ಮೀ. ರಸ್ತೆ ನಿರ್ವಿುಸಿದ್ದಾರೆ. ಪ್ರತಿದಿನ 8 ಗಂಟೆ ಕಾಲ ದುಡಿಯುತ್ತಿರುವ ನಾಯಕ್, ಉಳಿದ 7 ಕಿ.ಮೀ. ರಸ್ತೆಯನ್ನು ಮೂರು ವರ್ಷದಲ್ಲಿ ಪೂರ್ಣಗೊಳಿಸುವುದಾಗಿ ಹೇಳಿದ್ದಾರೆ.

ಇವರ ಈ ಕಾರ್ಯವನ್ನು ಗಮನಿಸಿದ ಜಿಲ್ಲಾಧಿಕಾರಿ ಡಿ.ಬೃಂದಾ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ಎಂಜಿಎನ್​ಆರ್​ಇಜಿಎಸ್) ಯೋಜನೆ ಅಡಿಯಲ್ಲಿ ಕೂಲಿ ನೀಡಲು ಮುಂದಾಗಿದ್ದು, ರಸ್ತೆ ಪೂರ್ಣಗೊಳಿಸಲು ಸಂಪೂರ್ಣ ಸಹಕಾರ ನೀಡುವುದಾಗಿಯೂ ಹೇಳಿದ್ದಾರೆ.

ವಿಶೇಷವೆಂದರೆ ಗಮ್ಸಾಹಿ ಗ್ರಾಮದಲ್ಲಿ ನಾಯಕ್ ಅವರ ಒಂದೇ ಕುಟುಂಬ ವಾಸಿಸುತ್ತಿದೆ. ಗ್ರಾಮದಲ್ಲಿ ಮೂಲಸೌಕರ್ಯವಿಲ್ಲದ ಕಾರಣ ಉಳಿದವರೆಲ್ಲ ಬಹಳ ವರ್ಷಗಳ ಹಿಂದೆಯೇ ಊರು ತೊರೆದಿದ್ದಾರೆ. ಅನಕ್ಷರಸ್ಥರಾಗಿ ತಾವು ಎದುರಿಸಿರುವ ತೊಂದರೆಗಳನ್ನು ಅರಿತ ನಾಯಕ್, ತಮ್ಮ ಮೂವರು ಮಕ್ಕಳಿಗೆ ಈ ಗತಿ ಬರಬಾರದು ಎಂದು ಶಾಲೆಗೆ ಸೇರಿಸಿದರು. ಆದರೆ ಮಕ್ಕಳು ಗುಡ್ಡ ಹತ್ತಿ ಇಳಿಯುವಾಗ ಪಡುತ್ತಿದ್ದ ಕಷ್ಟ ನೋಡಿ ಗುಡ್ಡವನ್ನು ಕೊರೆಯುವ ನಿರ್ಧಾರ ಮಾಡಿದರು. ಜೀವನೋಪಾಯಕ್ಕೆ ತರಕಾರಿ ಮಾರಾಟ ಮಾಡುವ ನಾಯಕ್​ರ ಧ್ಯೇಯ, ಗುರಿ, ಸಾಧನೆಗೆ ಜಿಲ್ಲಾಡಳಿತ ‘ಕಂದಮಾಲ್ ಉತ್ಸವ’ದಲ್ಲಿ ಗೌರವ ಸಲ್ಲಿಸಲಿದೆ.

Leave a Reply

Your email address will not be published. Required fields are marked *

Back To Top