Wednesday, 22nd November 2017  

Vijayavani

1. ಉಗ್ರನ ವಿರುದ್ಧ ಕೊಡಲಿಲ್ಲ ಪಾಕ್ ಸಾಕ್ಷ್ಯ – LET ಕ್ರಿಮಿ ಹಫೀಜ್ ಸಯೀದ್​ಗೆ ಕ್ಲೀನ್​ಚಿಟ್ – ಮನೆಯಿಂದ ಹೊರಬರ್ತಾನೆ ಮುಂಬೈ ದಾಳಿ ಮಾಸ್ಟರ್ ಮೈಂಡ್ 2. ಅಲೆಮಾರಿಗಳ ಮನೆ ತೆರವು ವೇಳೆ ಅಮಾನವೀಯ ವರ್ತನೆ – ನಡುರಸ್ತೆಯಲ್ಲಿ ಮಹಿಳೆಗೆ ಹೆರಿಗೆ – ದಿಗ್ವಿಜಯ ನ್ಯೂಸ್​ ವರದಿಗೆ ಡಿಸಿ ಸ್ಪಂದನೆ 3. ಹೆರಿಗೆ ವೇಳೆ ಮೃತಪಟ್ಟಿದ್ದಾಳೆ ಅಂದ್ರು ಡಾಕ್ಟರ್ಸ್​ – ಅಂತ್ಯ ಸಂಸ್ಕಾರದ ವೇಳೆ ಕಣ್ಣು ಬಿಟ್ಲಂತೆ ಬಾಣಂತಿ – ಮನೆಗೆ ತರೋವಷ್ಟರಲ್ಲಿ ಮತ್ತೆ ಸಾವಿನ ದರ್ಶನ 4. ಕೊಪ್ಪಳ ಜಿಲ್ಲಾಪ್ರವಾಸದಲ್ಲಿ ಎಚ್​ಡಿಡಿ – ಗವಿಮಠಕ್ಕೆ ಮಾಜಿ ಪ್ರಧಾನಿ ಭೇಟಿ – ಇಳಿವಯಸ್ಸಿನಲ್ಲೂ ಕಿಂಡಿಯಲ್ಲೆ ತೆರಳಿ ದರ್ಶನ 5. ಯೂರ್ಟನ್​ ವೇಳೆ ಕಾರಿಗೆ ಲಾರಿ ಡಿಕ್ಕಿ – ಡಿಕ್ಕಿ ಹೊಡೆದ ಲಾರಿಗೆ ಟ್ರಕ್ ಡ್ಯಾಶ್ – ಸೌದಿ ಹೈವೇಯಲ್ಲಿ ಹಾರಿಬಲ್ ಆಕ್ಸಿಡೆಂಟ್
Breaking News :

ಗುಜರಾತ್​ನಲ್ಲಿ ಗೆಲ್ಲಲು ಬಿಜೆಪಿ ಮಿಷನ್ 150

Tuesday, 21.03.2017, 7:43 AM       No Comments

ನವದೆಹಲಿ: ಪಂಚರಾಜ್ಯಗಳ ಚುನಾವಣೆಯಲ್ಲಿನ ಗೆಲುವಿನ ಬಳಿಕ ಬಿಜೆಪಿ ಚಿತ್ತ ಗುಜರಾತ್​ನತ್ತ ನೆಟ್ಟಿದೆ. ಇಲ್ಲಿ ವರ್ಷಾಂತ್ಯದಲ್ಲಿ ಚುನಾವಣೆ ನಡೆಯಲಿದೆ. ಗುಜರಾತ್ ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ತವರು ರಾಜ್ಯವಾಗಿದ್ದು, ಇಲ್ಲಿನ ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸುವುದು ಮಹತ್ವದ್ದಾಗಿದೆ. ಇಲ್ಲಿನ ಗೆಲುವು ಹಾಗೂ ಜನಪ್ರಿಯತೆಯಿಂದಲೇ ನರೇಂದ್ರ ಮೋದಿ ಪ್ರಧಾನಿ ಸ್ಥಾನ ಅಲಂಕರಿಸಿದ್ದರು. ಗುಜರಾತ್ ಅಭಿವೃದ್ಧಿ ಮಾದರಿಯೇ ಉತ್ತರಪ್ರದೇಶದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವಂತೆ ಮಾಡಿತ್ತು.

150 ಸೀಟು ಗೆಲ್ಲುವ ಗುರಿ: ಉತ್ತರಪ್ರದೇಶದ 403 ಸೀಟುಗಳಲ್ಲಿ 325ರಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಇದೀಗ ಗುಜರಾತ್​ನಲ್ಲಿ 150 ಸೀಟುಗಳನ್ನು ಗೆಲ್ಲುವ ಟಾರ್ಗೆಟ್ ಇರಿಸಲಾಗಿದೆ. ಗುಜರಾತ್ ವಿಧಾನಸಭೆಯಲ್ಲಿ ಒಟ್ಟು 182 ಸೀಟುಗಳಿವೆ. ಸದ್ಯ ಬಿಜೆಪಿ ಕೈಯಲ್ಲಿ 121 ಸೀಟುಗಳಿದ್ದರೆ ಕಾಂಗ್ರೆಸ್ 57 ಸೀಟುಗಳನ್ನು ಹೊಂದಿದೆ. ಆದರೆ ಗುಜರಾತ್​ನಲ್ಲಿ ಗೆಲುವು ತೀರಾ ಸರಳ ಎನ್ನುವ ಹಾಗಿಲ್ಲ. ಮೋದಿ ಪ್ರಧಾನಿಯಾಗಿ ದೆಹಲಿಗೆ ಆಗಮಿಸಿದ ಬಳಿಕ ಗುಜರಾತ್​ನಲ್ಲಿ ಬಿಜೆಪಿ ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿತ್ತು. ಪಟೇಲ್​ರ ಪ್ರತಿಭಟನೆ, ಹಾರ್ದಿಕ್ ಪಟೇಲ್ ಖ್ಯಾತಿ, ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ರಾಜ್ಯದೊಳಕ್ಕೆ ಕಾಲಿರಿಸಿದ್ದು, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಹಾದಿ ಕಠಿಣವಾಗುವಂತೆ ಮಾಡಿದೆ. – ಏಜೆನ್ಸೀಸ್

ಫಲಿತಾಂಶಕ್ಕೆ ಮಹತ್ವ ಏಕೆ?

ಗುಜರಾತ್ ಚುನಾವಣೆಯ ಫಲಿತಾಂಶ 2019ರ ಲೋಕಸಭಾ ಚುನಾವಣೆಯ ಮೇಲೂ ಪ್ರಭಾವ ಬೀರಲಿದೆ. ಕಳೆದ 20 ವರ್ಷಗಳಿಂದ ಗುಜರಾತ್​ನಲ್ಲಿ ಬಿಜೆಪಿ ಅಧಿಕಾರವಿದೆ. ಗುಜರಾತ್​ನಲ್ಲಿ ಈ ವರ್ಷ ನಡೆಯಲಿರುವ ಚುನಾವಣೆಯೂ ಮಹತ್ವದ ಪಾತ್ರವಹಿಸಲಿದ್ದು, ಒಂದು ವೇಳೆ ಚುನಾವಣೆಯಲ್ಲಿ ಬಿಜೆಪಿ ಸೋತರೆ ಅದರ ಪ್ರಭಾವ ನೇರವಾಗಿ ಮೋದಿ ಬ್ರ್ಯಾಂಡ್ ಮೇಲೆ ಬೀಳಲಿದೆ.

ಪ್ರಶಾಂತ್ ಕಿಶೋರ್ ಹುಡುಕಿ ಕೊಟ್ರೆ 5 ಲಕ್ಷ ರೂ. ಇನಾಮು!

ಉತ್ತರ ಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲಿನ ಬಳಿಕ, ಆ ಪಕ್ಷದ ಚುನಾವಣಾ ರಣತಂತ್ರ ರೂಪಿಸಿದ ಪ್ರಶಾಂತ್ ಕಿಶೋರ್ ನಾಪತ್ತೆಯಾಗಿದ್ದಾರೆ. ಅವರನ್ನು ಹುಡುಕಿಕೊಟ್ಟರೆ 5 ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು ಎಂಬ ವಿವರವುಳ್ಳ ಫಲಕಗಳನ್ನು ಲಖನೌ ಕಾಂಗ್ರೆಸ್ ಕಚೇರಿ ಎದುರು ಸ್ಥಾಪಿಸಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ರಾಜೇಶ್ ಸಿಂಗ್, ಕಳೆದೊಂದು ವರ್ಷದಿಂದ ಮೂರ್ಖರಂತೆ ಪ್ರಶಾಂತ್ ಕಿಶೋರ್ ಹೇಳಿದ್ದನ್ನೆಲ್ಲ ಮರುಪ್ರಶ್ನಿಸದೇ ಪಾಲಿಸಿದ್ದೇವೆ. ಅವರು ಹೇಳಿದಂತೆ ಕೆಲಸ ಮಾಡಿದ್ದೇವೆ. ಅವರು ಪಕ್ಷದ ಸುಧಾರಣೆಗೆ ಯೋಜನೆ ರೂಪಿಸುತ್ತಿದ್ದಾರೆ ಎಂದೇ ಭಾವಿಸಿದ್ದೆವು. ಆದರೆ, ಈಗ ನಮ್ಮ ಪ್ರಶ್ನೆಗಳಿಗೆ ಅವರಿಂದ ಉತ್ತರ ಬೇಕು ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

Back To Top