Wednesday, 18th July 2018  

Vijayavani

ಬಜೆಟ್​​ನಲ್ಲಿ ಅನ್ನಭಾಗ್ಯ ಅಕ್ಕಿ ಕಡಿತ ವಿಚಾರ - 5 ಕೆಜಿ ಅಲ್ಲ, ನಾವು 7 ಕೆಜಿ ಕೊಡುತ್ತೇವೆ - ಆಹಾರ ಸಚಿವ ಜಮೀರ್ ಅಹಮ್ಮದ್ ಹೇಳಿಕೆ        ಲೋಕಸಭೆ ಅಧಿವೇಶನ, ಬಿಜೆಪಿ ಸಭೆ ಹಿನ್ನೆಲೆ- ಜುಲೈ 28ರಂದು ರಾಜ್ಯಕ್ಕೆ ಅಮಿತ್ ಷಾ ಬರೋದು ಡೌಟ್- ದಿಲ್ಲಿಯಲ್ಲೇ ಉಳೀತಾರಾ ಬಿಜೆಪಿ ರಾಷ್ಟ್ರಾಧ್ಯಕ್ಷ?        ಸಚಿವ ಡಿಕೆಶಿ ಒಬ್ಬ ಹುಚ್ಚು ದೊರೆ - ಮೊಹಮ್ಮದ್ ಬಿನ್ ತುಘಲಕ್ ರೀತಿ ಆಡ್ತಿದ್ದಾರೆ - ಮಿನಿಸ್ಟರ್ ವಿರುದ್ಧ ಗುಡುಗಿದ ಮಾಜಿ ಸಂಸದ ಬಸವರಾಜು        ಮಡಿಕೇರಿಯಲ್ಲಿ ಮುಂದುವರಿದ ವರುಣನ ಆರ್ಭಟ - ಹಾರಂಗಿಯಿಂದ ಭಾರಿ ಪ್ರಮಾಣದಲ್ಲಿ ನದಿಗೆ ನೀರು - ಶಾಲಾ ಕಾಲೇಜ್‌ಗಳಿಗೆ ರಜೆ ಮುಂದುವರಿಕೆ        ನಾಳೆಯಿಂದ ಸಂಸತ್ ಮುಂಗಾರು ಅಧಿವೇಶನ - ಪಾರ್ಲಿಮೆಂಟ್​ನಲ್ಲಿ ಪ್ರಧಾನಿ ಸರ್ವ ಪಕ್ಷ ಸಭೆ - ಸುಗಮ ಕಲಾಪಕ್ಕೆ ಸಹಕರಿಸುವಂತೆ ಮನವಿ        ಯುವತಿಗೆ ಕಿರುಕುಳ ನೀಡಿದ ಹೋಮ್‌ಗಾರ್ಡ್‌ - ಆರೋಪಿಯನ್ನ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿತ - ಯುವತಿ ಹೊಡಿತಕ್ಕೆ ಹೋಮ್‌ಗಾರ್ಡ್‌ ಹಣ್ಣುಗಾಯಿ ನೀರ್‌ಗಾಯಿ       
Breaking News

ಗುಜರಾತಿನಲ್ಲಿ ಮೋದಿ, ಹಿಮಾಚಲದಲ್ಲಿ ರಾಹುಲ್

Sunday, 08.10.2017, 3:03 AM       No Comments

ಒಂದೆಡೆ ಹಿಮಾಚಲ ಪ್ರದೇಶದಲ್ಲಿ ತನ್ನ ಅಧಿಪತ್ಯ ಕಾಯ್ದುಕೊಳ್ಳಲು ಕಾಂಗ್ರೆಸ್ ಪ್ರಯತ್ನದಲ್ಲಿದ್ದರೆ ಮತ್ತೊಂದೆಡೆ ತವರು ರಾಜ್ಯ ಗುಜರಾತ್​ನಲ್ಲಿ ಅಂದಾಜು 19 ವರ್ಷಗಳ ತಮ್ಮ ಭದ್ರಕೋಟೆ ಕಾಪಾಡಿಕೊಳ್ಳಲು ಪ್ರಧಾನಿ ಮೋದಿ ಶತಾಯಗತಾಯ ಪಣತೊಟ್ಟಿದ್ದಾರೆ. ಇದರ ರಣಕಹಳೆಯಂತೆ ಶನಿವಾರ ಇಬ್ಬರು ನಾಯಕರು ಮತದಾರರ ಓಲೈಕೆಗೆ ನಡೆಸಿದ ಯೋಜನೆಗಳ ಅನಾವರಣ, ಎದುರಾಳಿಯ ವಿರುದ್ಧ ವಾಗ್ದಾಳಿ ಕುರಿತ ಚಿತ್ರಣ ಇಲ್ಲಿದೆ.

 ಗಾಂಧಿನಗರ: ಬಡತನದಲ್ಲಿ ತಮ್ಮ ಮಕ್ಕಳು ನರಳುವುದನ್ನು ಯಾರೂ ಬಯಸಲ್ಲ. ದೇಶದ ಅಭಿವೃದ್ಧಿಯ ಫಲಾನುಭವಿಯಾಗಲು ಜನಸಾಮಾನ್ಯ ಇಚ್ಛಿಸುತ್ತಾನೆ. ನಾವು ಅವರ ಕನಸು ಈಡೇರಿಸಲು ನೆರವಾಗುತ್ತೇವೆ ಎಂದು ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ. ಇನ್ನೆರಡು ತಿಂಗಳಲ್ಲಿ ಗುಜರಾತ್ ವಿಧಾನಸಭೆ ಮಹಾಸಮರ ಎದುರಾಗುತ್ತಿರುವ ಬೆನ್ನಲ್ಲೇ 10 ಸಾವಿರ ಕೋಟಿ ರೂಪಾಯಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಪ್ರಧಾನಿ ಶನಿವಾರದಿಂದ ಎರಡು ದಿನಗಳ ಗುಜರಾತ್ ಪ್ರವಾಸ ಕೈಗೊಂಡಿದ್ದಾರೆ.

ದ್ವಾರಕಾ ಕ್ಷೇತ್ರದಲ್ಲಿ ದ್ವಾರಕಾನಾಥನ ದರ್ಶನದಿಂದ ಪ್ರವಾಸ ಆರಂಭಿಸಿದ ಮೋದಿ, ನಂತರ ಒಖಾ-ಬೆಟ್ ದ್ವಾರಕಾ ನಡುವಿನ ಸೇತುವೆ ನಿರ್ವಣಕ್ಕೆ ಶಂಕಸ್ಥಾಪನೆ ನೆರವೇರಿಸಿ ಮಾತನಾಡಿದರು. ನಂತರ ಅವರು ರಾಜಕೋಟ್​ಬಳಿಯ ಚೊಟಿಲಾದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ವಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಸಂಜೆ ವೇಳೆಗೆ ಗಾಂಧಿನಗರದ ಐಐಟಿಯಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದರು.

 ಮಂಡಿ (ಹಿಮಾಚಲಪ್ರದೇಶ): ನಿರುದ್ಯೋಗವೇ ದೇಶವನ್ನು ದುರ್ಬಲವಾಗಿಸುತ್ತಿರುವ ಪ್ರಮುಖ ಸಮಸ್ಯೆ. ಕಾಂಗ್ರೆಸ್ ಅಧಿಕಾರ ದಿಂದಾಗಿ ಉದ್ಯೋಗ ಸೃಷ್ಟಿಯಲ್ಲಿ ಹಿಮಾಚಲ ಪ್ರದೇಶ ಗುಜರಾತ್ಕ್ಕಿಂತ ಮುಂದಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದರು. ‘ವಿಕಾಸ್ ಸೇ ವಿಜಯ್ ಕಿ ಓರ್’ ಪ್ರಚಾರ ರ್ಯಾಲಿಗೆ ಮಂಡಿಯಲ್ಲಿ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

ಮೋದಿ ಅಸ್ತ್ರ

# ಗುಜರಾತ್​ನಲ್ಲಿ 5.8 ಸಾವಿರ ಕೋಟಿ ರೂ. ಅಭಿವೃದ್ಧಿ ಕಾರ್ಯಕ್ಕೆ ಪ್ರಧಾನಿ ಚಾಲನೆ

# ದ್ವಾರಕಾದಲ್ಲಿ ದೇಶದ ಮೊದಲ ನೌಕಾಪಡೆ ಪೊಲೀಸ್ ತರಬೇತಿ ಸಂಸ್ಥೆ ಸ್ಥಾಪನೆ

#  ಡಿಜಿಟಲ್ ಇಂಡಿಯಾ, ಡಿಜಿಟಲ್ ತಂತ್ರಜ್ಞಾನ, ಡಿಜಿಟಲ್ ಸಾಕ್ಷರತೆ ಪ್ರಾಮಾಣಿಕ ಸರ್ಕಾರದ ಉದ್ದೇಶವಾಗಿರಬೇಕು.

# 6 ಕೋಟಿ ಜನರಿಗೆ ಡಿಜಿಟಲ್ ಸಾಕ್ಷರತೆ ಮೂಲಕ ಉದ್ಯೋಗ.

# ದೇಶದ 20 ಟಾಪ್ ವಿವಿಗಳಿಗೆ 1000 ಕೋಟಿ ರೂ. ಅನುದಾನ, ಡಿಜಿಟಲ್ ಸಂಶೋಧನೆಗೆ ಮುಕ್ತ ಅಧಿಕಾರ.

# ಪರೀಕ್ಷೆ ಆಧಾರಿತ ಶಿಕ್ಷಣಕ್ಕಿಂತ ಸಂಶೋಧನೆ ಬುನಾದಿ ಅವಶ್ಯ

 ರಾಹುಲ್ ಪ್ರತ್ಯಸ್ತ್ರ

# ಹಿಮಾಚಲದಲ್ಲಿ ಚುನಾವಣೆಗೆ ಸಿಎಂ ವೀರಭದ್ರ ಸಿಂಗ್ ನೇತೃತ್ವ ಎಂದ ರಾಹುಲ್ ಗಾಂಧಿ

# 2 ಕೋಟಿ ಉದ್ಯೋಗ ಸೃಷ್ಟಿಯಲ್ಲಿ ವಿಫಲವಾದ ಮೋದಿ ಸರ್ಕಾರ

# ಜಿಎಸ್​ಟಿಯಿಂದ 30 ಲಕ್ಷ ಗುಜರಾತಿ ಯುವಕರ ನೌಕರಿಗೆ ಕತ್ತರಿ

# ಗುಜರಾತ್​ನಲ್ಲಿ 13 ಸಾವಿರ ಶಾಲೆಗೆ ಬೀಗ ಹಾಕಿದ ರಾಜ್ಯ ಸರ್ಕಾರ, ಹಿಮಾಚಲದಲ್ಲಿ ಒಂದೂ ಇಲ್ಲ

# ಚೀನಾ ಸರ್ಕಾರದಿಂದ ಪ್ರತಿನಿತ್ಯ 50 ಸಾವಿರ ಉದ್ಯೋಗ ಸೃಷ್ಟಿ, ಆದರೆ ಮೋದಿ ಸರ್ಕಾರದಿಂದ ಕೇವಲ 450

Leave a Reply

Your email address will not be published. Required fields are marked *

Back To Top