Monday, 11th December 2017  

Vijayavani

1. ಮತ್ತಷ್ಟು ಹದಗೆಟ್ಟ ರವಿ ಬೆಳಗೆರೆ ಆರೋಗ್ಯ – ಕಾಲು ನೋವು, ನಿಶ್ಯಕ್ತಿಯಿಂದ ಪತ್ರಕರ್ತನ ನರಳಾಟ – ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ 2. ಮಧ್ಯಾಹ್ನ 12ಕ್ಕೆ ಕೋರ್ಟ್​ಗೆ ಹಾಜರ್ – ರವಿ ಬೆಳಗೆರೆ ವಿರುದ್ಧ ಮತ್ತೊಂದು ಕೇಸ್‌ – ಪತ್ರಕರ್ತನಿಗೆ ಜೈಲಾ..? ಬೇಲಾ..? 3. ಬಳ್ಳಾರಿಯಲ್ಲಿ ಗಣಿಗಾರಿಕೆ ವಿರುದ್ಧ ಕೂಗು – ಕುಮಾರಸ್ವಾಮಿ ಬೆಟ್ಟ ಉಳಿವಿಗೆ ಸಂಡೂರು ಬಂದ್ – ಅಂಗಡಿ, ಮುಂಗಟ್ಟುಗಳಿಗೆ ಬೀಗ, ಶಾಲಾ-ಕಾಲೇಜಿಗೆ ರಜೆ 4. ರಾಜ್ಯ ಸರ್ಕಾರದಿಂದ ಬಿಜೆಪಿ ಹತ್ತಿಕ್ಕುವ ಕೆಲಸ – ರ‍್ಯಾಲಿಯಲ್ಲಿ ಭಾಗಿಯಾದವ್ರ ವಿರುದ್ಧ ಟ್ರಾಫಿಕ್‌ ಪೊಲೀಸ್‌ ಕೇಸ್ – ಕಲಬುರಗಿಯಲ್ಲಿ ಖಾಕಿ, ಕೇಸರಿ ಕದನ 5. ಪ್ರಧಾನಿ ಮೋದಿ ರ‍್ಯಾಲಿಗೆ ಅವಕಾಶವಿಲ್ಲ – ಮೆಗಾ ರೋಡ್​ ಶೋಗೆ ಅನುಮತಿ ನಿರಾಕರಣೆ – ರಾಹುಲ್ ಸಮಾವೇಶಕ್ಕೂ ಗುಜರಾತ್ ಪೊಲೀಸರ ತಡೆ
Breaking News :

ಗಿನ್ನೆಸ್ ದಾಖಲೆಯ ಬೆಕ್ಕು

Friday, 19.05.2017, 3:00 AM       No Comments

 

ದಂಪತಿ ಒಂದು ಮರಿ ಬೆಕ್ಕನ್ನು ತಂದು ಪ್ರೀತಿಯಿಂದ ಸಾಕಿದ್ದರು. ಅದಕ್ಕೆ ಓಮರ್ ಎಂದು ಹೆಸರಿಟ್ಟಿದ್ದರು. ಆದರೆ, ದಿನ ಕಳೆದಂತೆಲ್ಲ ಅದು ದೊಡ್ಡದಾಗಿ ಬೆಳೆಯುತ್ತಲೇ ಹೋಯಿತು. ಅವರೇನು ಆ ಕುರಿತು ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ. ಆದರೆ, ಅದರ ಮಹತ್ವ ತಿಳಿದದ್ದು ಗಿನ್ನೆಸ್ ದಾಖಲೆಯ ಸಿಬ್ಬಂದಿ ಸಂರ್ಪಸಿದಾಗಲೇ. ಬಹುಶಃ ನೀವು ಜಗತ್ತಿನ ಅತಿ ಉದ್ದದ ಬೆಕ್ಕನ್ನು ಸಾಕಿದ್ದೀರಿ ಎಂದು ಅವರು ಹೇಳಿದಾಗಲೇ ಅವರಿಗೆ ತಮ್ಮ ಮುದ್ದಿನ ಬೆಕ್ಕು ಇಷ್ಟೊಂದು ಮಹತ್ವದ್ದು ಎಂದು ಗೊತ್ತಾಗಿದ್ದು. ಇದು ಆಸ್ಟ್ರೇಲಿಯಾದ ಸ್ಟೀಫಿ ಹರ್ಷ್ಟ್

ಎಂಬುವರ ಮನೆಯ ಮುದ್ದಿನ ಬೆಕ್ಕಿನ ವೈಶಿಷ್ಟ್ಯ ಒಂದು ವರ್ಷದ ಹಿಂದೆ ತಂದಿದ್ದ ಬೆಕ್ಕು ಈಗ 3.93 ಅಡಿ ಉದ್ದಕ್ಕೆ ಬೆಳೆದಿದೆ. ಇಲ್ಲಿಯವರೆಗೆ ರಷ್ಯಾದ ಮೈನೇ ಕೂನ್ ಲೂಡೋ ಎಂಬ 3.88 ಅಡಿ ಉದ್ದದ ಬೆಕ್ಕು ದಾಖಲೆ ಹೊಂದಿತ್ತು. ಈ ಚಿತ್ರಗಳನ್ನು ಇನ್​ಸ್ಟಾಗ್ರಾಮ್ಲ್ಲಿ ಅಪ್​ಲೋಡ್ ಮಾಡಿದ ಮೇಲೆ ಓಮರ್ ಜನಪ್ರಿಯತೆ ಮುಗಿಲು ಮುಟ್ಟಿದೆ. ಪ್ರತಿದಿನ ಮುಂಜಾನೆ 5ಕ್ಕೆ ಏಳುವ ಓಮರ್, ತಿಂಡಿ ತಿಂದು ಮತ್ತೆ ನಿದ್ರೆಗೆ ಜಾರುತ್ತದೆ. ರಾತ್ರಿ ಊಟಕ್ಕೆ ಇದಕ್ಕೆ ಕಾಂಗರೂ ಪ್ರಾಣಿಯ ಹಸಿ ಮಾಂಸವೇ ಬೇಕಂತೆ. ಇದರ ಮಾಲೀಕರ ಪ್ರಕಾರ, ರಾತ್ರಿಯ ವೇಳೆ ಹಾಸಿಗೆ ಮೇಲೆ ಮಲಗಿಸಿಕೊಂಡರೆ, ಉಳಿದವರಿಗೆ ಸ್ಥಳವೇ ಉಳಿಯುವುದಿಲ್ಲವಾದ್ದರಿಂದ ಅದನ್ನು ಸೋಫಾದಲ್ಲಿ ಮಲಗಿಸಲಾಗುತ್ತದೆ. ಆದರೆ, ಅದು ಸಣ್ಣ ಮಗುವಿನಂತೆ, ರಾತ್ರಿಯಿಡೀ ಮುದ್ದುಮಾಡಬೇಕು ಎಂದು ಬಯಸುತ್ತದಂತೆ.

-ಏಜೆನ್ಸೀಸ್

 

Leave a Reply

Your email address will not be published. Required fields are marked *

Back To Top