Wednesday, 13th December 2017  

Vijayavani

1. ನನ್ನ ಮಗನದ್ದು ವ್ಯವಸ್ಥಿತ ಕೊಲೆ- ನ್ಯಾಯ ಸಿಗದಿದ್ರೆ ಕುಟುಂಬದೊಂದಿಗೆ ಆತ್ಮಹತ್ಯೆ- ಪರೇಶ್​ ಮೇಸ್ತಾ ಹೆತ್ತವರ ಕಣ್ಣೀರು 2. ರವಿ ಬೆಳಗೆರೆ ಆರೋಗ್ಯದಲ್ಲಿ ಏರುಪೇರು ಹಿನ್ನೆಲೆ- ಪರಪ್ಪನ ಅಗ್ರಹಾರದಿಂದ ಆಸ್ಪತ್ರೆಗೆ ಶಿಫ್ಟ್​- ಜಯದೇವ ಹಾಸ್ಪಿಟೆಲ್​ಗೆ ಕರೆಯೊಯ್ದ ಸಿಬ್ಬಂದಿ 3. ಸಿಎಂ ಸಿದ್ದರಾಮಯ್ಯ ನಕಲಿ ಕಾಂಗ್ರೆಸಿಗ- ರಾಜ್ಯದಲ್ಲಿರೋದು ಮಾರ್ಕೆಟಿಂಗ್ ಸರ್ಕಾರ- ಜೆಡಿಎಸ್​ ಸಮಾವೇಶದಲ್ಲಿ ದೇವೇಗೌಡರ ಗುಡುಗು 4. ಸೂಪರ್​​ ಸ್ಟಾರ್ ಬರ್ತಡೇಗೆ ಬಿಎಸ್​ವೈ ವಿಶ್- ಧನ್ಯವಾದ ತಿಳಿಸಿದ ತಲೈವಾ- ಥ್ಯಾಂಕ್ಯೂ ಯಡಿಯೂರಪ್ಪ ಜೀ ಎಂದು ರಜನಿ ಟ್ವೀಟ್ 5. ಅಬ್ಬರಿಸಿ ಬೊಬ್ಬಿರಿದ ರೋಹಿತ್ ಶರ್ಮಾ- ಮೊಹಾಲಿಯಲ್ಲಿ ವಿಶ್ವ ಕ್ರಿಕೆಟ್​ ದಾಖಲೆಗಳೆಲ್ಲಾ ಪೀಸ್​​​ಪೀಸ್​- 3ನೇ ದ್ವಿಶತಕ ಸಿಡಿಸಿದ ರೋಹಿತ್​
Breaking News :

ಗಾಯಾಳು ಯೋಧರಿಗೆ -ರೂ 20 ಲಕ್ಷ ಪರಿಹಾರ

Monday, 19.06.2017, 3:01 AM       No Comments

ನವದೆಹಲಿ: ಏಳನೇ ವೇತನ ಆಯೋಗದ ಶಿಫಾರಸಿನ ಅನ್ವಯ, ಕರ್ತವ್ಯದ ಸಂದರ್ಭದಲ್ಲಿ ಶೇ.100 ಊನತೆಗೊಳಗಾಗುವ ಅರೆಸೇನಾ ಪಡೆ ಸಿಬ್ಬಂದಿಗೆ ನೀಡುವ ಪರಿಹಾರದ ಮೊತ್ತವನ್ನು 9 ಲಕ್ಷರೂ.ನಿಂದ 20 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ.

2016ರ ಜನವರಿ 1ರಿಂದ ಈ ಆದೇಶ ಪೂರ್ವಾನ್ವಯವಾಗಲಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ. ಸಿಆರ್​ಪಿಎಫ್, ಬಿಎಸ್​ಎಫ್, ಸಿಐಎಸ್​ಎಫ್, ಐಟಿಬಿಪಿ, ಎಆರ್, ಎನ್​ಎಸ್​ಜಿ, ಎಸ್​ಎಸ್​ಬಿ, ಎನ್​ಡಿಆರ್​ಎಫ್ ಪಡೆಗಳು ಗೃಹ ಸಚಿವಾಲಯದಡಿ ಬರಲಿವೆ. ಅಂದಾಜು 10 ಲಕ್ಷ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಂಡೊ-ಪಾಕ್ ಗಡಿ, ಇಂಡೊ-ಚೀನಾ ಗಡಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರು, ಈಶಾನ್ಯ ಪ್ರಾಂತ್ಯದಲ್ಲಿ ಬಂಡುಕೋರರು ಹಾಗೂ ನಕ್ಸಲರ ದಮನ ಹಾಗೂ ಕಾನೂನು ಸುವ್ಯವಸ್ಥೆ ತಹಬಂದಿಗೆ ತರಲು ಈ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. -ಏಜೆನ್ಸೀಸ್

 

Leave a Reply

Your email address will not be published. Required fields are marked *

Back To Top