Friday, 19th October 2018  

Vijayavani

 ಹಾಲು, ತುಪ್ಪ ಮಾರೋ ನೆಪದಲ್ಲಿ ಬರ್ತಾನೆ -ಒಂಟಿ ಮನೆಗಳಲ್ಲಿ ಚಿನ್ನ ಎಗರಿಸ್ತಾನೆ - ಸಿಕ್ಕಿಬಿದ್ದ ಚೋರ ಈಗ ಕಂಬಿ ಎಣಿಸ್ತಾನೆ         ಗೃಹಿಣಿ ಜತೆ ಅಂಕಲ್ ಸ್ನೇಹ ‘ಸಂಬಂಧ’ -ಬೇಡ ಅಂದಿದ್ದಕ್ಕೆ 18 ಬಾರಿ ಇರಿದ -ಚಾಕು ಹಿಡಿದೇ ಪೊಲೀಸರಿಗೆ ಶರಣಾದ        ಬಸ್ಸಲ್ಲಿ ಹೋಗೋ ಮಹಿಳೆಯರೇ ಹುಷಾರು -ನಿಮ್ಮ ಕೂದಲನ್ನೇ ಕತ್ತರಿಸ್ತಾರೆ ಚೋರರು - ಖದೀಮನಿಗೆ ಗ್ರಹಚಾರ ಬಿಡಿಸಿದ ಜನರು         ಸರ್ಕಾರಿ ವೈದ್ಯರ ಅಟೆಂಡೆನ್ಸ್ ಮೇಲೆ ಕಣ್ಣು -ಹಾಜರಾತಿಗೆ ಆಧಾರ್ ಕಡ್ಡಾಯ- ರೂಲ್ಸ್ ತರಲು ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ಧಾರ        ರಾಜಧಾನಿಯಲ್ಲಿ ಆಯುಧ ಪೂಜೆ ಸಡಗರ -ಮಾರುಕಟ್ಟೆಗಳಲ್ಲಿ ಜೋರಾಯ್ತು ಹೂವು, ಹಣ್ಣು ವ್ಯಾಪಾರ -ಪೊಲೀಸ್ ಠಾಣೆಗಳಲ್ಲೂ ಪೂಜೆ       
Breaking News

ಗಾಂಧಿನಗರದಲ್ಲಿ ದಿನೇಶ್ ಸಿನಿಮಾ ರನ್ನಿಂಗ್?

Friday, 20.04.2018, 3:03 AM       No Comments

|ರಮೇಶ ದೊಡ್ಡಪುರ

ಬೆಂಗಳೂರು: ರಾಜಧಾನಿಯ ಗಾಂಧಿನಗರ ಎಂದೊಡನೆಯೇ ನೆನಪಿಗೆ ಬರುವುದು ಸ್ಯಾಂಡಲ್​ವುಡ್. ರಾಜಕೀಯ ಚಿಂತನೆಯುಳ್ಳವರಿಗೆ ಗಾಂಧಿನಗರ ಎಂದೊಡನೆ ಥಟ್ಟನೆ ನೆನಪಾಗುವುದು ನಾಲ್ಕು ಬಾರಿ ಶಾಸಕರಾಗಿರುವ ದಿನೇಶ್ ಗುಂಡೂರಾವ್.

ಜನರ ಜತೆಗೆ ಸತತ ಸಂಪರ್ಕ, ಸುಸಜ್ಜಿತ ಶಾಸಕರ ಕಚೇರಿ ಮೂಲಕ ಕಾರ್ಯಾಚರಣೆಯೇ ದಿನೇಶ್ ಗುಂಡೂರಾವ್ ಕೈಹಿಡಿಯುತ್ತಿದೆ ಎಂಬುದು ಸತ್ಯ. ಪೂರ್ಣ ಪ್ರಮಾಣದಲ್ಲಿ ಜತೆಗಿರುವ ಅಭ್ಯರ್ಥಿಯನ್ನು ಬಿಜೆಪಿ ಕಣಕ್ಕಿಳಿಸದಿರುವುದೂ ದಿನೇಶ್ ನಾಗಾಲೋಟವನ್ನು ಅಬಾಧಿತವಾಗಿಸಿದೆ ಎಂಬ ಮಾತೂ ಕ್ಷೇತ್ರದಲ್ಲಿದೆ.

ಬೆಂಗಳೂರಿನ ಅತ್ಯಂತ ಹಳೆಯ ಪ್ರದೇಶಗಳಲ್ಲೊಂದಾದ ಗಾಂಧಿನಗರ ಸರ್ವಜನಾಂಗದ ಶಾಂತಿಯ ತೋಟ. ಇಲ್ಲಿ ಅಚ್ಚ ಕನ್ನಡಿಗರ ಜತೆಗೆ ತಮಿಳು, ತೆಲುಗು ಭಾಷಿಕರ ಪ್ರಾಬಲ್ಯವಿದೆ. ಉದ್ಯಮ ಕೇಂದ್ರಿತ ಚಿಕ್ಕಪೇಟೆ, ಬಳೆಪೇಟೆಯಂತಹ ಪೇಟೆಗಳ ಸರಣಿಯೂ ಇರುವುದರಿಂದ ಮಾರ್ವಾಡಿ, ರಜಪೂತ ಸಮುದಾಯಗಳೂ ಪ್ರಮುಖ ಪಾತ್ರ ವಹಿಸುತ್ತವೆ. ಮುಸ್ಲಿಂ

ಬಾಹುಳ್ಯದ ಅನೇಕ ಪ್ರದೇಶಗಳನ್ನೂ ಹೊಂದಿದ್ದು, ವಿವಿ ಗಿರಿ ಕಾಲನಿ, ಪೌರ ಕಾರ್ವಿುಕರು, ಕೂಲಿ ಕಾರ್ವಿುಕರಿಗೇನೂ ಕಡಿಮೆಯಿಲ್ಲ. ದಿನೇಶ್ ವಿರುದ್ಧ ಜೆಡಿಎಸ್​ನಿಂದ ನಾರಾಯಣಸ್ವಾಮಿ ಈಗಾಗಲೇ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಆದರೆ, ಬಿಜೆಪಿ ಟಿಕೆಟ್ ನೀಡಿಕೆ ಗೊಂದಲ ಮುಂದುವರಿದಿದ್ದು, ಪರಿಷತ್ ಸದಸ್ಯ ರಾಮಚಂದ್ರ ಗೌಡ ಪುತ್ರ

ಮತ್ತು ಬೆಂಗಳೂರು ಯುವ ಮೋರ್ಚಾ ಅಧ್ಯಕ್ಷ ಸಪ್ತಗಿರಿ ಗೌಡ, ಚಿಕ್ಕಪೇಟೆ ಮಾಜಿ ಕಾರ್ಪೆರೇಟರ್ ಹಾಗೂ ಹಿರಿಯ ಕಾರ್ಯಕರ್ತ ಎ.ಎಲ್. ಶಿವಕುಮಾರ್, ಎಂ.ಬಿ. ಶಿವಪ್ಪ, ಎಸ್. ನರೇಶ್ ಕುಮಾರ್ ಟಿಕೆಟ್ ಆಕಾಂಕ್ಷಿಗಳು.

ತಮಿಳರ ಮತ ನಿರ್ಣಾಯಕ

ಕ್ಷೇತ್ರದಲ್ಲಿ ಬೃಹತ್ ಪ್ರಮಾಣದ ತಮಿಳು ಸಮುದಾಯದ ಮತಗಳಿವೆ. ತಮಿಳು ಹಾಗೂ ತೆಲುಗು ಭಾಷಿಕ ದಲಿತ ಸಮುದಾಯ, ಒಕ್ಕಲಿಗ ಮತಗಳು ಕಾಂಗ್ರೆಸ್ ಕೈ ಹಿಡಿಯುತ್ತಿವೆ. ಈ ಬಾರಿ ಜೆಡಿಎಸ್ ದಲಿತ ಸಮುದಾಯದ ನಾರಾಯಣಸ್ವಾಮಿ ಅವರನ್ನು ಕಣಕ್ಕಿಳಿಸಿರುವುದು ಆ ಸಮುದಾಯದ ಮತ ಪಡೆಯುವ ಸಾಧ್ಯತೆ ಹೆಚ್ಚಿದೆ. ದಿನೇಶ್ ಗುಂಡೂರಾವ್​ಗೆ ಅತಿ ಹೆಚ್ಚು ಮತ ತಂದುಕೊಡುವ ಬನ್ನಿಪೇಟೆ, ಕಾಟನ್​ಪೇಟೆ ವಾರ್ಡ್​ಗಳಲ್ಲಿ ಈ ಬಾರಿ ರಸ್ತೆಗಳ ಸ್ಥಿತಿ ಹದಗೆಟ್ಟಿದೆ. ರಿಪೇರಿಗೆ ಅಗೆದಿದ್ದ ರಸ್ತೆಗಳು ಹಾಗೆಯೇ ಇದ್ದು, ಈ ವಿಚಾರವನ್ನು ಪ್ರಮುಖ ಚುನಾವಣೆ ಅಸ್ತ್ರ ಮಾಡಿಕೊಳ್ಳಲಾಗುವುದು ಎಂದು ಬಿಜೆಪಿ ಮುಖಂಡರು ಮುನ್ಸೂಚನೆ ನೀಡಿದ್ದಾರೆ.

ಮೋದಿ ಅಲೆ

ಇತ್ತೀಚಿನ ವರ್ಷಗಳಲ್ಲಿ ಉತ್ತರ ಭಾರತೀಯರ ಸಂಖ್ಯೆ ಕ್ಷೇತ್ರದಲ್ಲಿ ಹೆಚ್ಚಾಗುತ್ತಿದೆ. ಉತ್ತರದ ಚುನಾವಣೆ ಪರಿಣಾಮ ಇಲ್ಲೂ ಮೋದಿ ಅಲೆ ಅಲ್ಲಗಳೆಯುವಂತಿಲ್ಲ. ಹೀಗಾಗಿ ಕಾಂಗ್ರೆಸ್ ಎಚ್ಚರಿಕೆಯಿಂದ ಪ್ರಚಾರದಲ್ಲಿ ತೊಡಗಿದೆ. ಕಳೆದ ಬಾರಿ ಕೆಜೆಪಿ-ಬಿಜೆಪಿ ಒಡಕಿನಿಂದ ಗೆಲುವಿನ ಅಂತರ ಹೆಚ್ಚಾಗಿತ್ತು, ಈ ಬಾರಿ ಅಂತರ ಸ್ವಲ್ಪ ಕಡಿಮೆಯಾಗಬಹುದು. ಆದರೆ ದಿನೇಶ್ ಗೆಲುವಿಗಂತೂ ತೊಂದರೆಯಿಲ್ಲ ಎಂದು ಹಿರಿಯ ಕಾಂಗ್ರೆಸಿಗರೊಬ್ಬರ ಅಭಿಪ್ರಾಯ.

Leave a Reply

Your email address will not be published. Required fields are marked *

Back To Top