Wednesday, 18th July 2018  

Vijayavani

ಬಜೆಟ್​​ನಲ್ಲಿ ಅನ್ನಭಾಗ್ಯ ಅಕ್ಕಿ ಕಡಿತ ವಿಚಾರ - 5 ಕೆಜಿ ಅಲ್ಲ, ನಾವು 7 ಕೆಜಿ ಕೊಡುತ್ತೇವೆ - ಆಹಾರ ಸಚಿವ ಜಮೀರ್ ಅಹಮ್ಮದ್ ಹೇಳಿಕೆ        ಲೋಕಸಭೆ ಅಧಿವೇಶನ, ಬಿಜೆಪಿ ಸಭೆ ಹಿನ್ನೆಲೆ- ಜುಲೈ 28ರಂದು ರಾಜ್ಯಕ್ಕೆ ಅಮಿತ್ ಷಾ ಬರೋದು ಡೌಟ್- ದಿಲ್ಲಿಯಲ್ಲೇ ಉಳೀತಾರಾ ಬಿಜೆಪಿ ರಾಷ್ಟ್ರಾಧ್ಯಕ್ಷ?        ಸಚಿವ ಡಿಕೆಶಿ ಒಬ್ಬ ಹುಚ್ಚು ದೊರೆ - ಮೊಹಮ್ಮದ್ ಬಿನ್ ತುಘಲಕ್ ರೀತಿ ಆಡ್ತಿದ್ದಾರೆ - ಮಿನಿಸ್ಟರ್ ವಿರುದ್ಧ ಗುಡುಗಿದ ಮಾಜಿ ಸಂಸದ ಬಸವರಾಜು        ಮಡಿಕೇರಿಯಲ್ಲಿ ಮುಂದುವರಿದ ವರುಣನ ಆರ್ಭಟ - ಹಾರಂಗಿಯಿಂದ ಭಾರಿ ಪ್ರಮಾಣದಲ್ಲಿ ನದಿಗೆ ನೀರು - ಶಾಲಾ ಕಾಲೇಜ್‌ಗಳಿಗೆ ರಜೆ ಮುಂದುವರಿಕೆ        ನಾಳೆಯಿಂದ ಸಂಸತ್ ಮುಂಗಾರು ಅಧಿವೇಶನ - ಪಾರ್ಲಿಮೆಂಟ್​ನಲ್ಲಿ ಪ್ರಧಾನಿ ಸರ್ವ ಪಕ್ಷ ಸಭೆ - ಸುಗಮ ಕಲಾಪಕ್ಕೆ ಸಹಕರಿಸುವಂತೆ ಮನವಿ        ಯುವತಿಗೆ ಕಿರುಕುಳ ನೀಡಿದ ಹೋಮ್‌ಗಾರ್ಡ್‌ - ಆರೋಪಿಯನ್ನ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿತ - ಯುವತಿ ಹೊಡಿತಕ್ಕೆ ಹೋಮ್‌ಗಾರ್ಡ್‌ ಹಣ್ಣುಗಾಯಿ ನೀರ್‌ಗಾಯಿ       
Breaking News

ಗಲೀಜು ಮಾಡಬಹುದು..!

Tuesday, 14.11.2017, 3:02 AM       No Comments

50 ಲಕ್ಷ ರೂಪಾಯಿ ವೆಚ್ಚದ ಚಿನ್ನಲೇಪಿತ, ವೈಭವೋಪೇತ ರಾಯಲ್ ಟಾಯ್ಲೆಟ್ ಇದು. ಕುತೂಹಲದ ಸಂಗತಿಯೆಂದರೆ ಇದನ್ನು ಜನರು ಬಳಸಬಹುದು. ಆದರೆ, ಯಾರಿಗೂ ಇದರ ಮೇಲೆ ಕುಳಿತು ‘ಗಲೀಜು’ ಮಾಡಲು ಮನಸ್ಸು ಬರುತ್ತಿಲ್ಲವಂತೆ..!

ಅದೆಲ್ಲಾ ಒತ್ತಟ್ಟಿಗಿರಲಿ … ಅದರ ನಿರ್ಮಾಣ ವೃತ್ತಾಂತವನ್ನೊಮ್ಮೆ ನೋಡುವುದಾದರೆ, ಲಾಸ್​ಏಂಜಲೀಸ್ ಕಲಾವಿದೆ ಇಲ್ಮಾ ಗೋರೆ ಎಂಬುವವರು ಇದನ್ನು ತಯಾರಿಸಿದ್ದಾರೆ. ಜಗತ್ಪ್ರಸಿದ್ಧ ಲೂಯಿಸ್ ವಿಟನ್​ನ ದುಬಾರಿ 24 ಹ್ಯಾಂಡ್​ಬ್ಯಾಗ್​ಗಳಿಂದ ಇದನ್ನು ನಿರ್ವಿುಸಿದ್ದು, ಇದಕ್ಕಾಗಿ 3 ತಿಂಗಳು ವ್ಯಯಿಸಿದ್ದಾರೆ.

ಗೋರೆ ಅವರು ಒಂದಷ್ಟು ಲಾಭ ಇಟ್ಟುಕೊಂಡು, 66 ಲಕ್ಷ ರೂಪಾಯಿಗೆ ಇದನ್ನು ಮಾರಾಟಕ್ಕೆ ಇಟ್ಟಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿ ಟ್ರೆಡೆಸಿ ಎಂಬ ಷೋರೂಮ್ಲ್ಲಿ ಇದು ನೋಡುಗರ ಕಣ್ಣು ಕುಕ್ಕುತ್ತಿದೆ. ಬಳಸಿ ನೋಡಿ ಎಂದರೂ ಯಾರೂ ಮುಂದಾಗಿಲ್ಲ ಎನ್ನುವುದು ಗೋರೆ ಮಾತು.

ಅಂದಹಾಗೆ ಇಲ್ಮಾ ಗೋರೆ ಹಲವು ಸಾಹಸಗಳಿಂದ ಅಮೆರಿಕದಲ್ಲಿ ಖ್ಯಾತರಾಗಿದ್ದಾರೆ. ಚುನಾವಣೆಗೂ ಮುನ್ನ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ರ ನಗ್ನ ಆಕೃತಿ ರಚಿಸಿದ್ದರು. ಇದಕ್ಕೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಮಿಸ್ ಗೋರೆ ಇಂಗ್ಲೆಂಡ್​ನಲ್ಲಿ ಮಾರಾಟಕ್ಕಿಟ್ಟಿದ್ದರು. ಅಲ್ಲಿನ ಮೇಫೇರ್​ನಲ್ಲಿ ಪ್ರಖ್ಯಾತ ಮ್ಯಾಡಾಕ್ಸ್ ಗ್ಯಾಲರಿಯಲ್ಲಿ 8 ಕೋಟಿ 55 ಲಕ್ಷ ರೂ. ಪ್ರೖೆಸ್​ಟ್ಯಾಗ್ ಹೊತ್ತು ಮಾರಾಟವಾಗದೆ ಹಾಗೆಯೇ ಉಳಿದಿದೆ. -ಏಜೆನ್ಸೀಸ್

Leave a Reply

Your email address will not be published. Required fields are marked *

Back To Top