Monday, 22nd January 2018  

Vijayavani

ಸರಹದ್ದು ಮೀರಿ ವರ್ತಿಸ್ತಿದೆ ಪಾಪಿ ಪಾಕ್​- ಐದು ದಿನಗಳಿಂದ ಗುಂಡಿನ ದಾಳಿಗೆ ಪರಿಸ್ಥಿತಿ ಉಲ್ಭಣ- ಗಡಿಯಲ್ಲಿ ಯುದ್ಧ ಸ್ಥಿತಿ ನಿರ್ಮಾಣ        ದಾವೋಸ್​ನಲ್ಲಿ 48ನೇ ವಿಶ್ವ ಆರ್ಥಿಕ ವೇದಿಕೆ ಸಮಾವೇಶ- ಸ್ವಿಸ್​ಗೆ ಹಾರಿದ ಪ್ರಧಾನಿ ಮೋದಿ- ವಿದೇಶಿ ಬಂಡವಾಳ ಸೆಳೆಯುವತ್ತ ಹಲವುಸೂತ್ರ        ಗ್ಯಾಸ್​ ರೀಫಿಲ್ಲಿಂಗ್ ವೇಳೆ ಲೀಕ್​ಆಗಿ ಹೊತ್ತಿಕೊಂಡ ಬೆಂಕಿ- ಆರು ಜನರಿಗೆ ಗಂಭೀರ ಗಾಯ- ಬೆಂಗಳೂರಿನಲ್ಲಿ ತಪ್ಪಿದ ಭಾರಿ ದುರಂತ        ಬೀದರ್​ನಲ್ಲಿ ವೀರಭದ್ರನ ಪಲ್ಲಕ್ಕಿ ಉತ್ಸವ- ಶಸ್ತ್ರಧಾರಣೆ ಮೂಲಕ ಭಕ್ತಿಯ ಪರಾಕಷ್ಠೆ- ಅತ್ತ ಮಂಗಳೂರಿನಲ್ಲಿ ಕಲವರದ ಪುತ್ತೂರು ಕಂಬಳ        ರಿಲೀಸ್​ ಡೇಟ್ ಫಿಕ್ಸ್​ ಆದ್ರೂ ಪದ್ಮಾವತ್​​ಗೆ ಸಂಕಷ್ಟ- 25ಕ್ಕೆ ಬಿಡುಗಡೆಯಾದ್ರೆ ದೇಶಾದ್ಯಂತ ಬಂದ್​- ಕರ್ಣಿಸೇನಾ ರಕ್ತಪಾತದ ಡೈಲಾಗ್​ಗೆ ಬೆವರಿದ ಬನ್ಸಾಲಿ       
Breaking News :

ಗಣೇಶೋತ್ಸವ ನಿರ್ವಿಘ್ನ

Sunday, 13.08.2017, 3:06 AM       No Comments

ಸುಪ್ರೀಂಕೋರ್ಟ್ ಆದೇಶವನ್ನೇ ನೆಪವಾಗಿಸಿಕೊಂಡು ಸಾರ್ವಜನಿಕ ಗಣೇಶೋತ್ಸವಕ್ಕೆ ಒಂದೊಂದು ಕಡೆ ಒಂದೊಂದು ನಿರ್ಬಂಧಗಳನ್ನು ಹೇರುವ ಮೂಲಕ ಜನರ ಧಾರ್ವಿುಕ ಭಾವನೆಗಳಿಗೆ ಧಕ್ಕೆ ತರಲು ಹೊರಟಿದ್ದ ರಾಜ್ಯ ಸರ್ಕಾರ ವಿಜಯವಾಣಿ ಸರಣಿ ವರದಿ ಬಳಿಕ ಎಚ್ಚೆತ್ತುಕೊಂಡಿದೆ. ಸುಗಮ ಗಣೇಶೋತ್ಸವ ಆಚರಣೆಗೆ ಪೂರಕವಾಗಿ ಕೆಲವು ಭದ್ರತಾ ನಿಯಮ ಅನುಸರಿಸುವುದನ್ನು ಬಿಟ್ಟರೆ, ಯಾವುದೇ ನಿರ್ಬಂಧ ವಿಧಿಸುವುದಿಲ್ಲ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕರೇ ಸ್ಪಷ್ಟ ಪಡಿಸಿದ್ದಾರೆ. ಇದರೊಂದಿಗೆ ವಿಘ್ನ ನಿವಾರಕನ ಹಬ್ಬದ ಆಚರಣೆಗೆ ಎದುರಾಗಿದ್ದ ವಿಘ್ನ ದೂರವಾದಂತಾಗಿದೆ.

***

ಬೆಂಗಳೂರು: ಕೆಲವೊಂದು ಭದ್ರತಾ ನಿಯಮಗಳನ್ನು ಹೊರತು ಪಡಿಸಿದರೆ, ರಾಜ್ಯಾದ್ಯಂತ ಗಣೇಶೋತ್ಸವ ಆಚರಣೆಗೆ ಯಾವುದೇ ನಿರ್ಬಂಧ ವಿಧಿಸುವುದಿಲ್ಲ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಆರ್.ಕೆ. ದತ್ತ ಸ್ಪಷ್ಟಪಡಿಸಿದ್ದಾರೆ.

ಸಾರ್ವಜನಿಕ ಗಣೇಶೋತ್ಸವ ಆಚರಣೆ ವಿಚಾರವಾಗಿ ಒಂದೊಂದು ಜಿಲ್ಲೆಗಳಲ್ಲಿ ಒಂದೊಂದು ಹೊಸ ನಿಯಮಗಳ ಜಾರಿಗೆ ಜಿಲ್ಲಾಡಳಿತಗಳು ಮುಂದಾದ ಪರಿಣಾಮ ಗೊಂದಲ ಉಂಟಾಗಿ ಸಾರ್ವಜನಿಕರ ಆಕ್ರೋಶ ಭುಗಿಲೆದ್ದಿತ್ತು. ಈ ಕುರಿತು ವಿಜಯವಾಣಿ ಸರಣಿ ವರದಿ ಪ್ರಕಟಿಸಿದ ಬೆನ್ನಲ್ಲೇ ಶನಿವಾರ ಸುದ್ದಿಗೋಷ್ಠಿ ನಡೆಸಿದ ಆರ್.ಕೆ.ದತ್ತ ಅವರು ಎಲ್ಲ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಗಣೇಶ ವಿಗ್ರಹ ಪ್ರತಿಷ್ಠಾಪನೆ ಮಾಡಲು 10 ಲಕ್ಷ ರೂ.ಬಾಂಡ್ ಇಡಬೇಕೆಂಬುದೂ ಸೇರಿದಂತೆ ಸರ್ಕಾರ ಅಥವಾ ಪೊಲೀಸ್ ಇಲಾಖೆ ಯಾವುದೇ ನಿರ್ಬಂಧ ವಿಧಿಸಿಲ್ಲ. ಪ್ರತಿವರ್ಷದಂತೆ ಈ ವರ್ಷವೂ ಸಾಮಾನ್ಯ ಸೂಚನೆಗಳಷ್ಟೇ ಇರಲಿದೆ. ಹೊಸದಾಗಿ ನಿರ್ಬಂಧ ವಿಧಿಸುವ ಯೋಚನೆಯೂ ಇಲ್ಲ. ಗಣೇಶ ಹಬ್ಬದ ಆಚರಣೆಯ ಬಂದೋಬಸ್ತ್ ಆಯಾ ಜಿಲ್ಲಾಡಳಿತದ ಜವಾಬ್ದಾರಿ ಆಗಿದೆ ಎಂದರು.

ಹಾಗೆಯೇ ಜಿಲ್ಲಾ ಪೊಲೀಸ್ ಅಧೀಕ್ಷಕರು, ಪೊಲೀಸ್ ಆಯುಕ್ತರು ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಸೂಕ್ತ ಬಂದೋಬಸ್ತ್ ಮಾಡಿಕೊಳ್ಳುತ್ತಾರೆಂದು ಮಾಹಿತಿ ನೀಡಿದರು.

ವದಂತಿ ಹರಡಿದರೆ ಕ್ರಮ: ಸಾರ್ವಜನಿಕರಿಗೆ ಸೂಕ್ತ ರಕ್ಷಣೆ ಒದಗಿಸುವುದೇ ಪೊಲೀಸ್ ಇಲಾಖೆಯ ಮುಖ್ಯ ಉದ್ದೇಶ. ಗಣೇಶ ವಿಗ್ರಹ ಪ್ರತಿಷ್ಠಾಪನೆ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ರೀತಿಯ ವದಂತಿ ಹರಿಬಿಡು ವುದನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದೂ ದತ್ತ ಎಚ್ಚರಿಸಿದರು.

***

ಹೀಗಿದೆ ಮಾರ್ಗಸೂಚಿ

 • ಪ್ರತಿಷ್ಠಾಪನೆಗೆ ಸ್ಥಳೀಯ ಪೊಲೀಸರ ಅನುಮತಿ ಕಡ್ಡಾಯ, ವಾಹನ, ಜನಸಂದಣಿ ಹೆಚ್ಚಿರುವ ರಸ್ತೆಗಳಲ್ಲಿ ಮೂರ್ತಿ ಪ್ರತಿಷ್ಠಾಪಿಸುವಂತಿಲ್ಲ.
 • ಚಪ್ಪರ, ಶಾಮಿಯಾನ ನಿರ್ವಣಕ್ಕೆ ಸ್ಥಳೀಯ ಸಂಸ್ಥೆಗಳ ಅನುಮತಿ ಪಡೆಯಬೇಕು.
 • ಸಿಸಿ ಕ್ಯಾಮರಾ ಅಳವಡಿಸಬೇಕು.
 • ಗಣೇಶಮೂರ್ತಿ ಪ್ರತಿಷ್ಠಾಪನೆ ಸ್ಥಳದಲ್ಲಿ ಬೆಂಕಿ ನಂದಿಸುವ ಸಾಮಗ್ರಿಗಳಿರಬೇಕು.
 • ವಿದ್ಯುತ್ ಸಂಪರ್ಕ ಮತ್ತು ವಿದ್ಯುತ್ ಅಲಂಕಾರ ಏರ್ಪಡಿಸಲು ಬೆಸ್ಕಾಂ ಇಲಾಖೆ ಅನುಮತಿ ಪಡೆಯಬೇಕು, ಅಗ್ನಿಶಾಮಕ ದಳ ಮತ್ತು ಸಂಚಾರ ಪೊಲೀಸರಿಂದ ನಿರಾಕ್ಷೇಪಣಾ ಪತ್ರ ಪಡೆಯಬೇಕು.
 • ಬ್ಯಾರಿಕೇಡ್ ನಿರ್ವಿುಸಿ ಜನಜಂಗುಳಿ ಆಗದಂತೆ ನೋಡಿಕೊಳ್ಳಬೇಕು, ಧ್ವನಿವರ್ಧಕಗಳನ್ನು ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆವರೆಗಷ್ಟೇ ಬಳಸಬೇಕು.
 • ಗಣೇಶ ಪ್ರತಿಷ್ಠಾಪನೆ ಮಂಡಳಿಯ ಅಧ್ಯಕ್ಷ, ಕಾರ್ಯದರ್ಶಿ ಮತ್ತು ಪದಾಧಿಕಾರಿಗಳು ಹೆಸರು, ವಿಳಾಸ, ದೂರವಾಣಿ ಸಂಖ್ಯೆಯನ್ನು ಸ್ಥಳೀಯ ಪೊಲೀಸ್ ಠಾಣೆಗೆ ನೀಡಬೇಕು.

***

ನಿರ್ಬಂಧದ ಕಿರುಕುಳ ಇಲ್ಲ

 • ಗಣೇಶ ವಿಗ್ರಹ ಪ್ರತಿಷ್ಠಾಪಿಸಲು 10 ಲಕ್ಷ ರೂ.ಬಾಂಡ್ ಇಡಬೇಕು, ವಿಗ್ರಹ ಇಷ್ಟೇ ಎತ್ತರ ಇರಬೇಕು.
 • ಇದೇ ಸ್ಥಳದಲ್ಲಿ ಇಂತಿಷ್ಟು ಸಮಯದಲ್ಲೇ ವಿಸರ್ಜಿಸಬೇಕು, ಇಂತಹುದೇ ಬಣ್ಣ ಬಳಸಬೇಕು, ಇಷ್ಟೇ ದಿನ ಪ್ರತಿಷ್ಠಾಪಿಸಬೇಕು.
 • ಅನ್ಯಮತದ ಪ್ರಾರ್ಥನಾ ಸ್ಥಳಗಳಿರುವ ರಸ್ತೆಗಳಲ್ಲಿ ಮೆರವಣಿಗೆ ನಿಷಿದ್ಧ
 • ಮೆರವಣಿಗೆ ವೇಳೆ ಪಟಾಕಿ ಸಿಡಿಸಬಾರದು, ಬಣ್ಣ ಎರಚಬಾರದು, ಡಿಜೆ ಬಳಸಬಾರದು, 10 ಲಕ್ಷಕ್ಕಿಂತ ಹೆಚ್ಚು ಜನ ಸೇರಬಾರದು.

Leave a Reply

Your email address will not be published. Required fields are marked *

Back To Top