Friday, 20th April 2018  

Vijayavani

ಬಾದಾಮಿಯಿಂದ ಸ್ಪರ್ಧೆ ವಿಚಾರದಲ್ಲಿ ದ್ವಂದ್ವ- ಸ್ಪರ್ಧೆ ಬಗ್ಗೆ ಸ್ಪಷ್ಟವಾಗಿ ಹೇಳದ ಸಿಎಂ- ಹೈಕಮಾಂಡ್​ ನಿರ್ಧಾರ ಅಂತಿಮ        ಉಲ್ಟಾ ಹೊಡೆದ ಸಿಎಂ ಪುತ್ರ ಯತೀಂದ್ರ- ತಂದೆಯ ಬಾದಾಮಿ ಸ್ಪರ್ಧೆ ಪೋಸ್ಟ್​​​ ಡಿಲೀಟ್​​ - ಏ.23 ಕ್ಕೆ ನಾಮಪತ್ರ ಎಂದಿದ್ದ ಯತೀಂದ್ರ        ಜಗಳೂರು ಟಿಕೆಟ್​ ವಂಚಿತೆ ಆಸ್ಪತ್ರೆಗೆ ದಾಖಲು- ಟಿಕೆಟ್​​ ಕೊಟ್ಟು ಕಸಿದಿದ್ದರಿಂದ ನೊಂದಿದ್ದ ಪುಷ್ಪಾ- ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ        ಕಾಂಗ್ರೆಸ್​ನಲ್ಲಿ ಆಗಿದೆಯಂತೇ ಕೋಟಿ ಕೋಟಿ ಡೀಲ್​- ಕೆಪಿಸಿಸಿ ಅಧ್ಯಕ್ಷರಿಂದಲೇ ಟಿಕೆಟ್​ ಸೇಲ್​- ಛಲವಾದಿ ನಾರಾಯಣಸ್ವಾಮಿ ಹೊಸ ಬಾಂಬ್​        ಕೋಲಾರದ ಮಾಲೂರಿನಲ್ಲಿ ವೈದ್ಯರ ಎಡವಟ್ಟು- ಮಗುವಿನ ದೇಹದಲ್ಲೇ ಸೂಜಿ ಬಿಟ್ಟ ಡಾಕ್ಟರ್​- ಏಳು ದಿನದ ಬಳಿಕ ಮಗು ಸಾವು        ನರೋಡಾ ಪಾಟೀಯಾ ಹತ್ಯಾಖಾಂಡ ಪ್ರಕರಣ- ಮಾಜಿ ಸಚಿವೆ ಮಾಯಾ ಕೊಡ್ನಾನಿ ನಿರ್ದೋಶಿ- ಗುಜರಾತ್​​ ಹೈಕೋರ್ಟ್​​ನಿಂದ ತೀರ್ಪು       
Breaking News

ಗಣಿನಾಡು ಬಳ್ಳಾರಿಗೆ ವಿಶ್ವ ಕನ್ನಡ ಸಮ್ಮೇಳನದ ಆತಿಥ್ಯ?

Monday, 28.11.2016, 12:31 PM       No Comments
  • ಅಶೋಕ ನೀಮಕರ್

ಬಳ್ಳಾರಿ: ಗಣಿನಾಡು, ಗಡಿ ಭಾಗದ ತೆಲುಗು ಭಾಷೆ ಪ್ರಾಬಲ್ಯ ಹೊಂದಿರುವ ಬಳ್ಳಾರಿಯಲ್ಲಿ ಅಖಿಲ ಭಾರತ ಮಟ್ಟದ ನಾಡುನುಡಿ ಹಬ್ಬ ನಡೆದು 58 ವರ್ಷಗಳೇ ಸಂದಿವೆ. ಇದೀಗ ಮತ್ತೊಂದು ಕನ್ನಡ ಸಮ್ಮೇಳನ ನಡೆಯುವ ಸಾಧ್ಯತೆ ಗರಿಗೆದರಿದೆ. ವಿಶ್ವ ಕನ್ನಡ ಸಮ್ಮೇಳನ ಆಯೋಜನೆಗೆ ಬಳ್ಳಾರಿಯನ್ನು ಪರಿಗಣಿಸಲಾಗಿದೆ ಮತ್ತು 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜಿಲ್ಲೆಯಲ್ಲಿ ನಡೆಸಬೇಕೆಂದು ಬೇಡಿಕೆ ಮಂಡಿಸಲಾಗುತ್ತದೆ ಎಂಬ ಮಾತೂ ಕೇಳಿಬಂದಿದೆ.

ಸರ್ಕಾರ 2017ರ ಜೂನ್ನಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಸಲು ನಿರ್ಧರಿಸಿದೆ. ಬಳ್ಳಾರಿ ಅಥವಾ ದಾವಣಗೆರೆಯಲ್ಲಿ ಮೂರು ದಿನಗಳ ಕಾಲ ಸಮ್ಮೇಳನ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ. ಇದಕ್ಕಾಗಿ 30 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಈ ಕುರಿತು ಕನ್ನಡ-ಸಂಸ್ಕೃತಿ ಸಚಿವಾಲಯದಿಂದ ಶೀಘ್ರ ಸಮಾಲೋಚನೆ ನಡೆದು ನಿರ್ಧಾರ ಪ್ರಕಟವಾಗುವ ಸಾಧ್ಯತೆಯಿದೆ. ಜಿಲ್ಲೆಯಲ್ಲಿ 1926, 1938, 1947, 1958ರಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿವೆ. 1958ರ ಸಮ್ಮೇಳನದ ಬಳಿಕ ಜಿಲ್ಲೆಯಲ್ಲಿ ಈವರೆಗೆ ಸಮ್ಮೇಳನ ನಡೆದಿಲ್ಲ. ಈ ಅವಧಿಯಲ್ಲಿ ಶಿವಮೊಗ್ಗ, ಶ್ರವಣಬೆಳಗೊಳ, ಮಡಿಕೇರಿ, ಗದಗ, ಬೀದರ್ನಲ್ಲಿ ತಲಾ ಎರಡು ಬಾರಿ ಸಮ್ಮೇಳನ ನಡೆದಿರುವುದು ವಿಶೇಷ. ಪ್ರಸ್ತುತ ವರ್ಷ ನೆರೆಯ ರಾಯಚೂರು ಜಿಲ್ಲೆಯಲ್ಲಿ ಸಮ್ಮೇಳನ ನಡೆಯುತ್ತಿದೆ. ಸಮ್ಮೇಳನ ಸಮಾರೋಪಗೊಂಡ ಬಳಿಕ ಪರಿಷತ್ ಕೇಂದ್ರ ಸಮಿತಿ ಸಭೆ ಸೇರಿ ಮುಂದಿನ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಸ್ಥಳ ಘೊಷಣೆ ಮಾಡುವ ಸಾಧ್ಯತೆಗಳಿವೆ. ಈ ವೇಳೆ ಬಳ್ಳಾರಿ ಹೆಸರನ್ನು ಪ್ರಸ್ತಾಪಿಸಲಾಗುತ್ತದೆ. ಆದರೆ, ಹೈದರಾಬಾದ್ ಕರ್ನಾಟಕ ಭಾಗದ ರಾಯಚೂರು ಜಿಲ್ಲೆಯಲ್ಲಿ ಪ್ರಸಕ್ತ ಸಮ್ಮೇಳನ ನಡೆಯುತ್ತಿರುವುದರಿಂದ ಬಳ್ಳಾರಿ ಹೆಸರನ್ನು ಪರಿಗಣಿಸುವ ಸಾಧ್ಯತೆಗಳಿಲ್ಲ. ಮುಂಬೈ ಕರ್ನಾಟಕ, ಕರಾವಳಿ ಜಿಲ್ಲೆಗಳು ಅಥವಾ ಹಳೆಯ ಮೈಸೂರು ಭಾಗದಲ್ಲಿ ಮುಂದಿನ ಸಮ್ಮೇಳನ ನಡೆಯುವ ಸಾಧ್ಯತೆಗಳಿವೆ ಎಂಬುದು ಕಸಾಪ ಮೂಲಗಳ ಹೇಳಿಕೆಯಾಗಿದೆ.

ರಾಜಕೀಯ ಇಚ್ಛಾಶಕ್ತಿ ಅಗತ್ಯ

ಸಮ್ಮೇಳನಗಳ ಆಯೋಜಿಸಲು ಕಸಾಪ ಜತೆಗೆ ರಾಜಕೀಯ ಇಚ್ಛಾಶಕ್ತಿಯೂ ಅಗತ್ಯ. ಸರ್ಕಾರ ಹಾಗೂ ಜನಪ್ರತಿನಿಧಿಗಳ ನೆರವು, ಸಹಕಾರ ಇಲ್ಲದಿದ್ದರೆ ಸಮ್ಮೇಳನ ನಡೆಸಲು ಸಾಧ್ಯವಿಲ್ಲ ಎಂಬ ವಾತಾವರಣವಿದೆ. ಇದರಿಂದಾಗಿ ಜಿಲ್ಲೆಯ ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಬೇಕಿದೆ. ವಿಶೇಷವಾಗಿ ಹಂಪಿ ಉತ್ಸವವನ್ನು ಅದ್ದೂರಿ ಹಾಗೂ ಯಶಸ್ವಿಯಾಗಿ ನೆರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್, ಈ ಬಗ್ಗೆ ಚಿಂತನೆ ನಡೆಸಿದರೆ ಜಿಲ್ಲೆಯಲ್ಲಿ ವಿಶ್ವ ಕನ್ನಡ ಇಲ್ಲವೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಯುವುದು ಖಚಿತ.

 ಬಳ್ಳಾರಿ ಜಿಲ್ಲೆಯಲ್ಲಿ ಅಖಿಲ ಭಾರತ ಸಮ್ಮೇಳನ ನಡೆಯದೆ 58 ವರ್ಷಗಳಾಗಿವೆ. ಇದರಿಂದಾಗಿ ಮುಂದಿನ ಸಮ್ಮೇಳನ ಗಡಿ ಭಾಗ ಬಳ್ಳಾರಿ ಜಿಲ್ಲೆಯಲ್ಲಿ ನಡೆದರೆ ಸೂಕ್ತ ಎಂಬ ಭಾವನೆ ಇದೆ. ನಾವು ಸಮ್ಮೇಳನ ನಡೆಸಲು ಸಂಪೂರ್ಣ ಸಿದ್ಧರಿದ್ದೇವೆ. ಬಳ್ಳಾರಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಯುವ ಆಶಾಭಾವನೆಯೂ ಇದೆ.

| ಸಿದ್ದರಾಮ ಕಲ್ಮಠ ಕಸಾಪ ಜಿಲ್ಲಾ ಅಧ್ಯಕ್ಷ, ಬಳ್ಳಾರಿ

ಸಮ್ಮೇಳನದಲ್ಲಿ ಗ್ರಾಮೀಣ ಶೈಲಿಯ ಭೋಜನ

ರಾಯಚೂರು: ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವ ಲಕ್ಷಾಂತರ ಜನರಿಗೆ ಗ್ರಾಮೀಣ ಶೈಲಿಯ ಭೋಜನ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಭರದ ಸಿದ್ಧತೆ ನಡೆದಿದೆ. ಮೊದಲ ದಿನ (ಡಿ.2) ಸುಮಾರು 25 ಸಾವಿರ ಜನರಿಗೆ ಭೋಜನದ ವ್ಯವಸ್ಥೆಗೆ ಸಿದ್ಧತೆ ನಡೆದಿದ್ದು, ಮಧ್ಯಾಹ್ನ ಗೋಧಿ ಹುಗ್ಗಿ, ಅನ್ನ ಸಾಂಬಾರ್, ಚಟ್ನಿ ಒಳಗೊಂಡ ಊಟ ಉಣಬಡಿಸಲಾಗುತ್ತಿದೆ. ಡಿ.3ರ ಮಧ್ಯಾಹ್ನ 10 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದ್ದು, ಗ್ರಾಮೀಣ ಶೈಲಿಯ ಸಿಹಿ ತಿಂಡಿ ಮಾದ್ಲಿ ಜತೆಗೆ ತುಪ್ಪ, ಬಿಸಿಬೇಳೆ ಬಾತ್, ರೈತಾ ರುಚಿ ಸವಿಯಬಹುದಾಗಿದೆ. ಡಿ.4ರಂದು 25 ಸಾವಿರ ಜನರಿಗೆ ಭೋಜನದ ವ್ಯವಸ್ಥೆ ಮಾಡಲಾಗುತ್ತಿದ್ದು, ಮೋತಿಚೂರ್ ಲಡ್ಡು, ಪಲಾವ್, ತರಕಾರಿ ಗ್ರೇವಿ ಒಳಗೊಂಡ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಕೃಷಿ ವಿವಿಯ ವಸತಿಗೃಹದ ಹಿಂಭಾಗದಲ್ಲಿ ಭೋಜನಕ್ಕೆ ವ್ಯವಸ್ಥೆ ಮಾಡಲಾಗಿದ್ದು, 30ಕ್ಕೂ ಹೆಚ್ಚು ಕೌಂಟರ್ಗಳನ್ನು ತೆರೆಯಲಾಗುತ್ತಿದೆ.

 

Leave a Reply

Your email address will not be published. Required fields are marked *

Back To Top