Monday, 20th August 2018  

Vijayavani

ಕೊಡಗಿನ ಸಂತ್ರಸ್ತರಿಗೆ ಗಾಯದ ಮೇಲೆ ಬರೆ - ಫೈನಾನ್ಸ್​ ಕಂಪನಿಗಳಿಂದ ಕಿರುಕುಳ - ಕೊಟ್ಟ ಸಾಲ ವಾಪಸ್​ ಕೊಡುವಂತೆ ಪಟ್ಟು        ಮಣಿಪಾಲ್ ಆಸ್ಪತ್ರೆ ವೈದ್ಯನ ಹುಚ್ಚಾಟ - ಕುಡಿದ ಮತ್ತಿನಲ್ಲಿ ಬಿಎಂಡಬ್ಲ್ಯೂ ಕಾರು ಚಾಲನೆ - ಪಾದಾಚಾರಿ ಬಲಿ ಪಡೆದ ಡಾಕ್ಟರ್        ಹೋಪ್ ಫಾರಂ ಬಳಿ ಕುಸಿದ ಲೈಟ್ ಕಂಬ - ಸ್ಥಳದಲ್ಲೇ ವಿದ್ಯಾರ್ಥಿನಿ ದುರ್ಮರಣ - ಬಿಬಿಎಂಪಿ, ಬೆಸ್ಕಾಂ ನಿರ್ಲಕ್ಷ್ಯಕ್ಕೆ ಮತ್ತೊಂದು ಬಲಿ        ವೈಮಾನಿಕ ಸಮೀಕ್ಷೆಯಲ್ಲಿ ಸಿಎಂ ಪೇಪರ್ ರೀಡಿಂಗ್ - ಸಂತ್ರಸ್ತರಿಗೆ ಬಿಎಸ್ಕೆಟ್ ಎಸೆದ ರೇವಣ್ಣ - ಸಾರ್ವಜನಿಕರಿಂದ ಆಕ್ರೋಶ        ಮಹಾರಾಷ್ಟ್ರದಲ್ಲಿ ಮಹಾ ಮಳೆಯ ಅಬ್ಬರ - ಚಿಕ್ಕೋಡಿಯಲ್ಲಿ 6 ಸೇತುವೆಗಳು ಮತ್ತೆ ಮುಳುಗಡೆ - ಜನರಿಗೆ ಸಂಕಷ್ಟ        ಮರಿಗೆ ತೊಂದರೆ ನೀಡ್ತಿದ್ದಾರೆಂದು ರೊಚ್ಚಿಗೆದ್ದ ಆನೆ - ಫೋಟೋ ತೆಗೆದ ಪ್ರವಾಸಿರ ಮೇಲೆ ಅಟ್ಯಾಕ್       
Breaking News

ಗಗನಯಾತ್ರಿಯಾಗಲು ವರುಣ್ ತಯಾರಿ!

Tuesday, 13.02.2018, 3:00 AM       No Comments

ಪ್ರೀತಿ-ಪ್ರೇಮ, ಆಕ್ಷನ್ ಇವುಗಳನ್ನೆಲ್ಲ ಬದಿಗೊತ್ತಿ ನಟ ವರುಣ್ ತೇಜ್ ಗಗನಯಾತ್ರಿ ಪಾತ್ರ ಮಾಡಲು ಹೊರಟಿರುವುದು ಗೊತ್ತಿರುವ ವಿಚಾರವೇ. ಟಾಲಿವುಡ್​ನಲ್ಲಿ ಈ ಮಾದರಿಯ ಚಿತ್ರ ತೆರೆಕಾಣುತ್ತಿರುವುದು ಇದೇ ಮೊದಲು ಎಂಬುದು ವಿಶೇಷ. ಈಗ ಚಿತ್ರತಂಡ ಹರಿಬಿಟ್ಟಿರುವ ಮಾಹಿತಿ ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಏನದು? ಗಗನಯಾತ್ರಿ ಪಾತ್ರ ಎಂದರೆ ಅದಕ್ಕೊಂದಷ್ಟು ತಯಾರಿ ಬೇಕೇಬೇಕು. ಹೀಗಾಗಿ ವರುಣ್ ಈಗ ಒಂದು ತಿಂಗಳ ಕಾಲ ಜಿರೋ ಗ್ರ್ಯಾವಿಟಿಯಲ್ಲಿದ್ದುಕೊಂಡು ತರಬೇತಿ ಪಡೆಯಲಿದ್ದಾರಂತೆ!

ಚಿತ್ರದ ಬಹುತೇಕ ಶೂಟಿಂಗ್ ಬಾಹ್ಯಾಕಾಶ ಮಾದರಿಯ ಸೆಟ್​ನಲ್ಲಿ ನಡೆಯಲಿದೆ. ಬಾಹ್ಯಾಕಾಶ ಎಂದರೆ ಗುರುತ್ವಾಕರ್ಷಣೆ ಇರುವುದಿಲ್ಲ. ಅಲ್ಲಿ ಉಳಿದ ಚಿತ್ರಗಳಂತೆ ನಟಿಸಲು ಸಾಧ್ಯವಿಲ್ಲ. ಹೀಗಾಗಿ ವರುಣ್ ಕಜಕಿಸ್ತಾನಕ್ಕೆ ತೆರೆಳಿ ಅಲ್ಲಿ ಒಂದು ತಿಂಗಳುಗಳ ಕಾಲ ತರಬೇತಿ ಪಡೆಯಲಿದ್ದಾರಂತೆ.

ಈ ಕುರಿತಂತೆ ಮಾಹಿತಿ ನೀಡಿರುವ ಚಿತ್ರದ ನಿರ್ವಪಕ ರಾಜೀವ್ ರೆಡ್ಡಿ, ‘ಪಾತ್ರವರ್ಗ ಇನ್ನಷ್ಟೇ ಅಂತಿಮವಾಗಬೇಕಿದೆ. ಚಿತ್ರಕ್ಕೆ ಆಯ್ಕೆ ಆಗುವವರು ಒಂದು ತಿಂಗಳು ತರಬೇತಿ ಪಡೆಯುವುದು ಕಡ್ಡಾಯ. ತಾಂತ್ರಿಕವರ್ಗದಲ್ಲಿ ಹಾಲಿವುಡ್​ನವರು ಕೆಲಸ ಮಾಡಲಿದ್ದಾರೆ. ಏಪ್ರಿಲ್ ವೇಳೆಗೆ ಚಿತ್ರ ಸೆಟ್ಟೇರಲಿದೆ’ ಎಂದು ಮಾಹಿತಿ ನೀಡಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರಕ್ಕೆ ಸಂಕಲ್ಪ ರೆಡ್ಡಿ ಆಕ್ಷನ್​ಕಟ್ ಹೇಳುತ್ತಿದ್ದಾರೆ. ವರುಣ್ ತೇಜ್ ನಟನೆಯ ‘ತೊಲಿ ಪ್ರೇಮ’ ಚಿತ್ರ ಶನಿವಾರ (ಫೆ.10)ರಂದು ತೆರೆಕಂಡಿತ್ತು. ಈ ಚಿತ್ರಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಬರುತ್ತಿದೆ.-ಏಜೆನ್ಸೀಸ್

Leave a Reply

Your email address will not be published. Required fields are marked *

Back To Top