Wednesday, 21st February 2018  

Vijayavani

ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಗೂಂಡಾಗಿರಿ ಪ್ರಕರಣ - ಬೌರಿಂಗ್​ ಆಸ್ಪತ್ರೆಯಲ್ಲಿ ಮೆಡಿಕಲ್​ ಟೆಸ್ಟ್​ ಕಂಪ್ಲೀಟ್​​ - ಕೋರ್ಟ್​ಗೆ ಆರೋಪಿಗಳು ಹಾಜರ್​​​        ನಲಪಾಡ್ ಜಾಮೀನು ಅರ್ಜಿ ವಿಚಾರಣೆ ಆರಂಭ - ವಾದ ಮಂಡನೆಗೆ ಅವಕಾಶ ಕೋರಿ ಮಧ್ಯಂತರ ಅರ್ಜಿ - ಸರ್ಕಾರದ ಮೇಲೆ ನಂಬಿಕೆಯಿಲ್ಲ ಎಂದು ಆಲಂ ಪಾಷ ಅರ್ಜಿ        ಇಂದಿನಿಂದ ಬಾಹುಬಲಿ ಹೆಲಿ ಟೂರಿಸಂ - ಜಸ್ಟ್​​​ 2,100 ರೂಪಾಯಿಗೆ 8 ನಿಮಿಷ ಹಾರಾಟ - ಫೆಬ್ರವರಿ 25 ಬರ್ತಿದ್ದಾರೆ ಕೇಂದ್ರ ಗೃಹ ಸಚಿವರು        ಮುಗಿಯದ ಭೈರತಿ ಬಸವರಾಜ್ ಬೆಂಬಲಿಗರ ದರ್ಪ - ಪೇದೆ ಮೇಲೆ ಗೂಂಡಾಗಳ ಹಲ್ಲೆ - ಆರೋಪ ತಳ್ಳಿ ಹಾಕಿದ ಕಾಂಗ್ರೆಸ್​​​​​ ಶಾಸಕ        ಹೋಂ ಮಿನಿಸ್ಟರ್‌ ಹೆಸರಲ್ಲಿ ಭಾರಿ ಆಸ್ತಿ ಆರೋಪ - ದಿಗ್ವಿಜಯ ನ್ಯೂಸ್‌ನಲ್ಲಿ ದಾಖಲೆ ಬಯಲು - ಆರೋಪ ನಿರಾಕರಿಸಿದ ರಾಮಲಿಂಗಾರೆಡ್ಡಿ       
Breaking News

ಕ್ರಿಕೆಟಿಗರ ಅತ್ಯುತ್ತಮ ಫಿಟ್ನೆಸ್​ಗಾಗಿ ಡಿಎನ್​ಎ ಟೆಸ್ಟ್!

Monday, 13.11.2017, 3:00 AM       No Comments

ನವದೆಹಲಿ: ವಿರಾಟ್ ಕೊಹ್ಲಿ ಸಾರಥ್ಯದ ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಗಬೇಕಾದರೆ ಪ್ರತಿಭೆಯೊಂದೇ ಸಾಲದು, ಫಿಟ್ನೆಸ್ ಕೂಡ ಮುಖ್ಯವೆನಿಸಿದೆ. ಈ ವಿಚಾರದಲ್ಲಿ ಇತ್ತೀಚೆಗೆ ಯೋ-ಯೋ ಟೆಸ್ಟ್ ಮೂಲಕ ಅಪ್​ಡೇಟ್ ಆಗಿದ್ದ ಭಾರತ ತಂಡ ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ತಂಡದ ಪ್ರತಿಯೊಬ್ಬ ಆಟಗಾರರನ್ನೂ ಡಿಎನ್​ಎ ಅಥವಾ ಜೆನೆಟಿಕ್ ಟೆಸ್ಟ್​ಗೆ

ಒಳಪಡಿಸಲಾಗುತ್ತಿದೆ. ಇದು ಆಟಗಾರರ ಫಿಟ್ನೆಸ್ ಸುಧಾರಣೆ ಭಾರಿ ನೆರವಾಗುತ್ತದೆ ಎಂಬುದು ಟೀಮ್ ಇಂಡಿಯಾ ಟ್ರೇನರ್ ಶಂಕರ್ ಬಸು ವಾದವಾಗಿದೆ.

ಡಿಎನ್​ಎ ಪರೀಕ್ಷೆ ಕ್ರೀಡಾಪಟುವಿನ ದೈಹಿಕ ಚಲನೆ-ಸಹಿಷ್ಣುತೆ ಸುಧಾರಣೆ, ಬೊಜ್ಜು ಕರಗುವಿಕೆ, ಚೇತರಿಕೆ ಸಮಯ ಮತ್ತು ಸ್ನಾಯು ಸದೃಢಗೊಳಿಸಲು ನೆರವಾಗುತ್ತದೆ ಎಂದು ಬಸು ಹೇಳಿದ್ದು, ಅವರ ಮಾರ್ಗದರ್ಶನದಲ್ಲಿ ಬಿಸಿಸಿಐ ಈ ಪರೀಕ್ಷೆ ನಡೆಸುತ್ತಿದೆ.

ಜೆನೆಟಿಕ್ ಟೆಸ್ಟ್ ವರದಿ ಆಟಗಾರನೊಬ್ಬನಿಗೆ ಯಾವ ಆಹಾರ ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು, ದೇಹವನ್ನು ಎಷ್ಟು ಫಿಟ್ ಆಗಿ ಇಡಬೇಕು ಎಂಬಿತ್ಯಾದಿ ಅಂಶಗಳನ್ನು ನಿರ್ಧರಿಸಲು ನೆರವಾಗುತ್ತದೆ. ಪ್ರತಿಯೊಬ್ಬ ಆಟಗಾರನ ಡಿಎನ್​ಎ ಡೇಟಾ ಸೇರಿಸಿ ನೈಸರ್ಗಿಕವಾಗಿ ಇರಬೇಕಾದ ಫಿಟ್, ಆರೋಗ್ಯ ಪ್ರಮಾಣದೊಂದಿಗೆ ಪರಿಶೀಲಿಸಲಾಗುತ್ತದೆ. ಆ ಬಳಿಕ ಆಯಾ ಆಟಗಾರರಿಗೆ ದೇಹತೂಕ ಇಳಿಸುವಿಕೆ, ಡಯೆಟಿಂಗ್ ಬಗ್ಗೆ ಸೂಚನೆ ನೀಡಲಾಗುತ್ತದೆ. ಟೀಮ್ ಇಂಡಿಯಾ ಇದಕ್ಕೂ ಮುನ್ನ ಆಟಗಾರರಿಗೆ ಸ್ಕಿನ್​ಫೋಲ್ಡ್ ಪರೀಕ್ಷೆ ಮಾಡುತ್ತಿತ್ತು. ದೇಹ ಹೊಟ್ಟೆ, ಎದೆ, ಬೆನ್ನಿದ ಚರ್ಮದ ಮೇಲೆ ಸ್ಕಿನ್ ಫೋಲ್ಡ್ ಕ್ಯಾಲಿಪರ್ ಅನ್ನು ಬಳಸಿ ಬೊಜ್ಜು ಪ್ರಮಾಣ ಪರಿಶೀಲಿಸಿ ಡೆಕ್ಸಾ ಟೆಸ್ಟ್ ನಡೆಸಲಾಗುತ್ತಿತ್ತು. ಸ್ಕಿನ್​ಫೋಲ್ಡ್ ಪರೀಕ್ಷೆ ಕಳೆದ ಹಲವು ವರ್ಷಗಳಿಂದ ಮಾಡಲಾಗುತ್ತಿದ್ದರೂ ಅದರಲ್ಲಿ ಬೊಜ್ಜು ಪ್ರಮಾಣದ ಸ್ಪಷ್ಟತೆಯಿರಲಿಲ್ಲ. ಆ ಬಳಿಕ ಡೆಕ್ಸಾ ಪರೀಕ್ಷೆ ಮಾಡಲಾಗುತ್ತಿತ್ತು. ಡಿಎನ್​ಎ ಪರೀಕ್ಷೆ ನಡೆಸಿದ ಬಳಿಕ ಆಟಗಾರನೊಬ್ಬನ ದೇಹ ಎಷ್ಟು ಫಿಟ್ ಆಗಿರಬೇಕೆಂಬ ನಿರ್ದಿಷ್ಟ ಪ್ರಮಾಣ ತೋರಿಸುತ್ತದೆ.

ಭುವನೇಶ್ವರ್​ಗೆ ಲಾಭ

ಪ್ರಸ್ತುತ ಸ್ಥಿರ ನಿರ್ವಹಣೆ ತೋರುತ್ತಿರುವ ವೇಗಿ ಭುವನೇಶ್ವರ್ ಕುಮಾರ್​ಗೆ ಜೆನೆಟಿಕ್ ಟೆಸ್ಟ್ ನಡೆಸಿರು ವುದು ಯಶಸ್ಸು ಕಂಡಿದೆ ಎಂದು ಬಿಸಿಸಿಐ ತಿಳಿಸಿದೆ. ಭುವನೇಶ್ವರ್ ಕ್ಷಮತೆ ಈಗ ಬಹಳಷ್ಟು ಸುಧಾರಿಸಿದೆ. ಭುವಿ ಕಳೆದ ಚಾಂಪಿಯನ್ಸ್ ಟ್ರೋಫಿಯಿಂದ ಸ್ಥಿರ ನಿರ್ವಹಣೆಯೊಂದಿಗೆ 19 ಏಕದಿನ ಹಾಗೂ 7 ಟಿ20 ಪಂದ್ಯಗಳನ್ನಾಡಿದ್ದಾರೆ ಮತ್ತು ಒಮ್ಮೆಯೂ ಗಾಯದ ಸಮಸ್ಯೆ ಎದುರಿಸಲಿಲ್ಲ.

ಅಮೆರಿಕನ್ ಫುಟ್​ಬಾಲ್​ನಲ್ಲಿದೆ ಈ ಟೆಸ್ಟ್

ಭಾರತದ ಕ್ರಿಕೆಟಿಗರಿಗೆ ನಾವೀಗ ಡಿಎನ್​ಎ ಪರೀಕ್ಷೆ ವಿಧಾನ ಆರಂಭಿಸಿದ್ದೇವೆ. ಟೀಮ್ ಮ್ಯಾನೇಜ್​ವೆುಂಟ್ ನಿರ್ಧಾರದಂತೆ ಈ ಹೊಸ ಮಾದರಿಯ ಫಿಟ್​ನೆಸ್ ಇತಿಮಿತಿಯನ್ನು ನಿಗದಿಪಡಿಸಲಾಗಿದೆ. ಇಂಥ ಪರೀಕ್ಷೆ ಮೊದಲಿಗೆ ಎನ್​ಬಿಎ(ಬಾಸ್ಕೆಟ್​ಬಾಲ್) ಮತ್ತು ಅಮೆರಿಕನ್ ಫುಟ್​ಬಾಲ್ ಎನ್​ಎಫ್​ಎಲ್​ನಲ್ಲಿ ಅಳವಡಿಸಲಾಗಿತ್ತು. ಈಗಾಗಲೆ ಈ ಪ್ರಯೋಗ ಯಶಸ್ವಿಯಾಗಿರುವುದರಿಂದ ಶಂಕರ್ ಬಸು ಅವರ ಸಲಹೆಯಂತೆ ಜೆನೆಟಿಕ್ ಟೆಸ್ಟ್ ಆರಂಭಿಸಲಾಗಿದೆ. ಈ ಪರೀಕ್ಷೆಗೆ ಮಂಡಳಿ ಪ್ರತಿಯೊಬ್ಬ ಆಟಗಾರನಿಗೆ 25ರಿಂದ 30 ಸಾವಿರ ರೂ. ವೆಚ್ಚ ಮಾಡುತ್ತಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Back To Top