Thursday, 18th October 2018  

Vijayavani

ಅಭಿಮಾನಿಗಳ ಪಾಲಿಗೆ ಮಳೆರಾಯನೇ ವಿಲನ್​​​​​​​​​-ದಾವಣಗೆರೆಲಿ ಮುಂಜಾನೆಯ ಚಿತ್ರ ಪ್ರದರ್ಶನ ರದ್ದು- ಆಯುಧಪೂಜಾ ಸಂಭ್ರಮ ಮಂಕು        ಶಿವಮೊಗ್ಗದಲ್ಲೂ ವಿಲನ್​​ ಚಿತ್ರಕ್ಕೆ ಬ್ರೇಕ್​-ಮಧ್ಯರಾತ್ರಿ ಪ್ರದರ್ಶನಕ್ಕೆ ಪೊಲೀಸರ ಅಡ್ಡಿ-ಥಿಯೇಟರ್​​​​​ ಬಳಿ ಅಭಿಮಾನಿಗಳ ಜಾಗರಣೆ        ನಾಡಿನಾದ್ಯಂತ ನವರಾತ್ರಿ ವೈಭವ-ಇಂದು ಆಯುಧಪೂಜೆ ಸಂಭ್ರಮ-ಅತ್ತ ಅರಮನೆಯಲ್ಲಿ ಶಸ್ತ್ರಾಸ್ತ್ರ ಪೂಜೆಗೆ ಕ್ಷಣಗಣನೆ        ಯುವದಸರಾಗೆ ಬಿತ್ತು ಅದ್ಧೂರಿ ತೆರೆ-ರಾಕಿಂಗ್​​ ಸ್ಟಾರ್​ ಡೈಲಾಗ್​​ಗೆ ಫುಲ್​​​ ಖುಷ್​-ಕೊನೆ ದಿನ ಕುಣಿದು ಕುಪ್ಪಳಿಸಿದ ಯುವಕರು        ಲಿಂಗಾಯತ ಪ್ರತ್ಯೇಕ ಧರ್ಮ ತಪ್ಪು-ಧರ್ಮ, ಜಾತಿ ವಿಚಾರಕ್ಕೆ ಸರ್ಕಾರ ಕೈ ಹಾಕಬಾರದು-ತಪ್ಪೊಪ್ಪಿಕೊಂಡ ಸಚಿವ ಡಿಕೆಶಿ        ಅಂಬಿ ಮನೆಗೆ ಮಂಡ್ಯ ಜೆಡಿಎಸ್​​​​ ಕ್ಯಾಂಡಿಡೇಟ್​-ಕ್ಯಾಂಪೇನ್​​​​ಗೆ ಬರುವಂತೆ ರೆಬಲ್​ಗೆ​​​​​​ ಇನ್ವೇಟ್​-ಅಶೀರ್ವಾದ ಪಡೆದ ಶಿವರಾಮೇಗೌಡ       
Breaking News

ಕ್ರಾಂತಿಮಾತೆ ಮೇಡಂ ಭಿಖೈಜಿ ರುಸ್ತುಂ ಕಾಮಾ

Thursday, 07.12.2017, 3:03 AM       No Comments

ಮೇಡಂ ಕಾಮಾ ಜಾಗತಿಕ ವೇದಿಕೆಗಳಲ್ಲಿ ಭಾರತದ ಸ್ವಾತಂತ್ರ್ಯಕ್ಕಾಗಿ ದನಿಯನ್ನು ಗಟ್ಟಿಗೊಳಿಸಿದಳು. ಜರ್ಮನಿಯಲ್ಲಿ ನಡೆದ ಅಂತಾರಾಷ್ಟ್ರೀಯ ಸಮಾಜವಾದಿ ಸಮ್ಮೇಳನದಲ್ಲಿ ಧ್ವಜದ ನಮೂನೆ ಅನಾವರಣಗೊಳಿಸಿದಳು. ಅಲ್ಲದೆ, ‘ಇಂಡಿಯಾ ಹೌಸ್’ನಲ್ಲಿ ಒಂದುಗೂಡುತ್ತಿದ್ದ ಪ್ರಚಂಡ ಯುವಕರ ಪಾಲಿಗೆ ಇವಳ ಮಾತುಗಳು ಸ್ಪೂರ್ತಿಯ ನುಡಿಗಳಾಗಿದ್ದವು.

ಲಂಡನ್ನಿನ ಹೈಡ್ ಪಾರ್ಕ್ ವಿಶಾಲವಾದ ಉದ್ಯಾನ. ಲಂಡನ್ನಿನ ಮಧ್ಯಭಾಗದಲ್ಲಿರುವ ಹೈಡ್ ಪಾರ್ಕ್​ನಲ್ಲಿ ಸ್ಪೀಕರ್ಸ್ ಕಾರ್ನರ್ ಎಂಬ ಮೂಲೆ ಬಹು ಪ್ರಸಿದ್ಧ. ಈ ಮೂಲೆಯಲ್ಲಿ ಯಾವುದೇ ನಿರ್ಬಂಧವಿಲ್ಲದೆ ಯಾರು ಏನು ಬೇಕಾದರೂ ಮಾತನಾಡಬಹುದಿತ್ತು.

1900ರ ಸುಮಾರಿನಲ್ಲಿ ಭಾರತದ ಸ್ವಾತಂತ್ರ್ಯದ ಪರವಾಗಿ ಹೋರಾಡುತ್ತಿದ್ದವರಿಗೆ ಹೈಡ್ ಪಾರ್ಕ್​ನ ಸ್ಪೀಕರ್ಸ್ ಕಾರ್ನರ್ ಒಂದು ಪ್ರಶಸ್ತವಾದ ಸ್ಥಳ. ಅಲ್ಲಿಯೇ ಪಂಡಿತ್ ಶ್ಯಾಮ್ೕ ಕೃಷ್ಣವರ್ಮ ಭಾರತಕ್ಕೆ ಹೋಮ್ೂಲ್ ಬೇಕೆಂದು ನಿರಂತರವಾಗಿ ಭಾಷಣ ಮಾಡುತ್ತಿದ್ದುದು.

ಅಲ್ಲಿ ಒಬ್ಬ ಭಾರತೀಯ ಮಹಿಳೆಯೂ ಅದೇ ಬಗೆಯ ಭಾರತ ಸ್ವಾತಂತ್ರ್ಯ ಕುರಿತ ಆಕ್ರಮಣಕಾರಿ ಭಾಷಣ ಮಾಡುತ್ತ ಜನರ ಗಮನ ಸೆಳೆದಿದ್ದಳು. ಅವಳಿಗೆ ತನ್ನಂತೆಯೇ ಭಾರತದ ಸ್ವಾತಂತ್ರ್ಯದ ಪರವಾಗಿ ಇನ್ನೊಬ್ಬರು ಭಾಷಣ ಮಾಡುತ್ತಿದ್ದಾರೆಂದು ತಿಳಿದು ಬಂದು ಅವರನ್ನು ನೋಡಬೇಕೆಂಬ ಕುತೂಹಲ ಮೂಡಿತ್ತು.

ಒಂದು ದಿನ ಅವರು ಭಾಷಣ ಮಾಡುವ ವೇಳೆಗೆ ಅಲ್ಲಿ ಹೋದ ಆ ಮಹಿಳೆಗೆ ತನ್ನಂತೆಯೇ ತೀವ್ರ ಕಳಕಳಿಯಿಂದ ಭಾಷಣ ಮಾಡುತ್ತಿದ್ದ ಧೀರ ಗಂಭೀರ ವ್ಯಕ್ತಿತ್ವದ ಆ ಭಾಷಣಕಾರನನ್ನು ಕಂಡು ಹಿಡಿಸಲಾರದಷ್ಟು ಸಂತೋಷವಾಯಿತು. ಅವರ ಭಾಷಣಾನಂತರ ಅವರ ಬಳಿ ಹೋದ ಆ ಮಹಿಳೆ ತನ್ನನ್ನು ತಾನು ಪರಿಚಯಿಸಿಕೊಂಡಳು.

ಬ್ರಿಟಿಷರ ಪಾಲಿನ ಬೆಂಕಿ-ಬಿರುಗಾಳಿಗಳ ಸಮ್ಮಿಲನ ಅದಾಗಿತ್ತು! ಶ್ಯಾಮ್ೕಯನ್ನು ಸಂಧಿಸಿದ ಆ ಮಹಿಳೆಯೇ ಭಾರತದ ಸ್ವಾತಂತ್ರ್ಯ ಸಂಗ್ರಾಮದ ‘ಕ್ರಾಂತಿಮಾತೆ’ ಎಂಬ ಕೀರ್ತಿಗೆ ಭಾಜನಳಾದ ಮೇಡಂ ಭಿಖೈಜಿ ರುಸ್ತುಂ ಕಾಮಾ!

ಸಕ್ಕರೆ ಹಾಲಿನಲ್ಲಿ ಸೇರಿಹೋದಂತೆ ಸೇರಿ ಹೋದವರು: ಇರಾನ್ ದೇಶದಿಂದ ಇಸ್ಲಾಂ ಜಿಹಾದಿ ಆಕ್ರಮಣ ಹಾಗೂ ಪೀಡನೆಗಳಿಂದ ಪಾರಾಗಲು ಮತ್ತು ತಮ್ಮ ಮತವನ್ನು ಉಳಿಸಿಕೊಳ್ಳಲು ಕ್ರಿ.ಶ. 785ರಲ್ಲಿ ಭಾರತದ ಆಶ್ರಯವನ್ನು ಬಯಸಿ ಗುಜರಾತ್ ಸಮುದ್ರ ತೀರಕ್ಕೆ ಬಂದಿದ್ದ ಪಾರ್ಸಿ ಜನಾಂಗಕ್ಕೆ ಸೇರಿದವಳು ಆಕೆ. ಆ ಪಾರ್ಸಿಗಳ ಗುಂಪು ಗುಜರಾತ್​ನ ಸಂಜಾನ್ ಎಂಬ ಸಂಸ್ಥಾನವನ್ನು ತಲುಪಿತ್ತು. ಜಾಧವ್ ರಾಣಾ ಎಂಬುವವನು ಆಗಿನ ಸಂಜಾನ್​ನ ದೊರೆ. ಅವನನ್ನು ಜಡಿ ರಾಣಾ ಎಂದೂ ಕರೆಯುತ್ತಿದ್ದರು.

ಜಡಿ ರಾಣಾನ ಬಳಿ ಬಂದ ಪಾರಸಿಗಳಿಗೆ ಜಡಿ ರಾಣಾ ತನ್ನ ರಾಜ್ಯ ತುಂಬಿ ಹೋಗಿದೆ ಎಂದೂ ಅವರಿಗೆ ಸ್ಥಳವಿಲ್ಲವೆಂದು ಹೇಳಿದಾಗ ಪಾರಸಿಗಳ ವೃದ್ಧ ಪ್ರಧಾನ ಅರ್ಚಕನಿಗೂ ರಾಜನಿಗೂ ನಡೆದ ಸಂಭಾಷಣೆ ಸುಂದರ, ಅರ್ಥಗರ್ಭಿತ. ಅದನ್ನು ಪಾರಸಿಗಳ ಗುಜರಾತಿ ಭಾಷೆಯ ಸಮೂಹಗಾನದಲ್ಲಿ ವಿವರಿಸಲಾಗಿದೆ.

ರಾಜಾ ಕೇಳುತ್ತಾನೆ,/‘ಹೇ ದೂರದಿಂದ ಬಂದ ಆಗಂತುಕರೇ! ಕೇಳಿ ನನ್ನಿಂದೇನಾಗಬೇಕು?’/ ‘ಆರಾಧನಾ ಸ್ವಾತಂತ್ರ್ಯ, ಮಹಾಪ್ರಭೂ’/ ‘ಒಪ್ಪಿದೆ ನಾನು. ಕೇಳಿ ಬೇಕಿನ್ನೇನು?’/ ‘ಬಾಳಲು ಹೊರೆಯಾಗದೆ ನಿಮ್ಮಯ ಜನರ ನಡುವೆ ಇರುವುವೈ ಈ ನಿಮ್ಮ ನಾಡೊಳಗೆ ನೀಡೆಮಗೆ ಓ ಮಹಾಸ್ವಾಮಿ ಒಂದು ತುಂಡು ಭೂಮಿ’/‘ನಾ ಕೊಡುವೆನು ನೀವು ಕೇಳಿದ್ದೆಲ್ಲವನು ಪ್ರತಿಯಾಗಿ ಈ ನಾಡಿಗೆ ನೀಡುವಿರೇನನ್ನು?’/ ಅದಕ್ಕೆ ಪ್ರತಿಯಾಗಿ ಆ ವೃದ್ಧ ಒಂದು ಹಿತ್ತಾಳೆಯ ಬಟ್ಟಲಿನಲ್ಲಿ ಹಾಲನ್ನು ತರಿಸುವಂತೆ ರಾಜನನ್ನು ವಿನಂತಿಸಿಕೊಂಡ. ತನ್ನ ಚೀಲದಿಂದ ಒಂದು ಚಮಚೆ ಸಕ್ಕರೆಯನ್ನು ತೆಗೆದುಕೊಂಡು ಹಾಲಿಗೆ ಹಾಕಿ ಬೆರೆಸಿದ. ನೆರೆದಿದ್ದ ಸಭಿಕರನ್ನು ಕೇಳಿದ, ‘ನೋಡಬಲ್ಲರೇ ನೀವಾರಾದರೂ ಈ ಹಾಲಿನಲ್ಲಿರುವ ಸಕ್ಕರೆಯನ್ನು?’/ಜನ ಇಲ್ಲವೆಂದರು. ‘ಹಾಲಿನ ಒಡಲಲಿ ಕರಗುವ ಸಕ್ಕರೆಯಂದದಿ ನಿಮ್ಮೀ ನಾಡಿನ ಕರುಣೆಯ ನೆರಳಲಿ ಬೆರೆತು ಬಾಳುವೆವು ಒಂದಾಗಿ’.

ಅಂದು ಪಾರಸಿಗಳು ನೀಡಿದ ವಚನದಂತೆ ಇಂದಿನ ಈ ಕ್ಷಣದವರೆಗೂ ಭಾರತಕ್ಕೆ ಅಮೂಲ್ಯ ಕೊಡುಗೆ ನೀಡಿ ಅದನ್ನು ಸಮೃದ್ಧಿ ಪಡಿಸಿದ್ದಾರೆ. ತಮ್ಮ ಜನಾಂಗದ ವಚನದಂತೆ ತನ್ನ ಸರ್ವಸ್ವವನ್ನೂ ಭಾರತಕ್ಕೆ ಸಮರ್ಪಿಸಿದ ಅಪೂರ್ವ ಪಾರಸಿ ಮಹಿಳೆ ಈ ಮೇಡಂ ಭಿಖೈಜಿ ಕಾಮಾ.

ಸ್ವಾತಂತ್ರ್ಯದ ಕಲಿಗಳಿಂದ ಸ್ಪೂರ್ತಿ: ಅವಳು ಹುಟ್ಟಿದ್ದು ಮುಂಬೈನ ಶ್ರೀಮಂತ ಪಾರ್ಸಿ ಕುಟುಂಬದಲ್ಲಿ. ತಂದೆ ಸೋರಬ್​ಜೀ ಫ್ರಾಮ್ೕ ಪಟೇಲ್ ಮುಂಬೈನ ಪ್ರತಿಷ್ಠಿತ ವ್ಯಕ್ತಿಗಳಲ್ಲಿ ಒಬ್ಬ. ಶಿಕ್ಷಣದಿಂದ ವಕೀಲನಾಗಿದ್ದರೂ ವ್ಯಾಪಾರದಿಂದ ಅಪಾರ ಹಣ ಗಳಿಸುತ್ತಿದ್ದವನು. ತಾಯಿ ಜೈಜಿಬಾಯ್ ಪಟೇಲ್. ಗಂಡನಿಗೆ ತಕ್ಕ ಹೆಂಡತಿಯಾಗಿದ್ದಳು. ಈ ದಂಪತಿಗೆ ಒಟ್ಟು ಒಂಭತ್ತು ಮಕ್ಕಳು. 1861ರ ಸೆಪ್ಟೆಂಬರ್ 24ರಂದು ಮುಂಬೈಯಲ್ಲಿ ಭಿಖೂ ಈ ದಂಪತಿಗೆ ಮಗಳಾಗಿ ಹುಟ್ಟಿದಳು. ಚಿಕ್ಕಂದಿನಿಂದ ಎಲ್ಲರೂ ಭಿಖೂ ಎಂದೇ ಅವಳನ್ನು ಕರೆಯುತ್ತಿದ್ದರು.

ಮುಂಬೈಯಲ್ಲಿ ಪಾರಸಿ ಬಾಲಕಿಯರ ವಿದ್ಯಾಭ್ಯಾಸದ ಸಲುವಾಗಿ ‘ಅಲೆಕ್ಷಾಂಡ್ರಾ ನೇಟೀವ್ ಗರ್ಲ್ಸ್ ಎಜುಕೇಷನ್ ಇನ್​ಸ್ಟಿಟ್ಯೂಷನ್’ ಎಂಬ ಶಾಲೆಯಿತ್ತು. ಅದೇ ಶಾಲೆಯಲ್ಲಿ ವಿದ್ಯಾಭ್ಯಾಸ ಪ್ರಾರಂಭಿಸಿದ ಭಿಖೂ ಚೂಟಿ ಹುಡುಗಿ ಎನ್ನಿಸಿಕೊಂಡಳು.

ತಮ್ಮ ಮನೆಗೆ ಬರುತ್ತಿದ್ದ ತಂದೆಯ ಸ್ನೇಹಿತರು ಸ್ವಾತಂತ್ರ್ಯ ಸಂಗ್ರಾಮದ ಆಗುಹೋಗುಗಳ ಕುರಿತು ರ್ಚಚಿಸುತ್ತಿದ್ದಾಗ ಅವಳು ತಂದೆಯ ತೊಡೆ ಮೇಲೆ ಕುಳಿತು ಅದನ್ನು ಕೇಳಿಸಿಕೊಳ್ಳುತ್ತಿದ್ದಳು. ಝಾನ್ಸಿ ರಾಣಿ, ತಾತ್ಯಾಟೋಪೆ, ನಾನಾ ಸಾಹೇಬ್ ಮುಂತಾದವರ ಹೆಸರುಗಳು ಆಗಲೇ ಅವಳ ಕಿವಿಗೆ ಬಿದ್ದಿದ್ದವು.

ಅವಳಿಗೆ 22-23 ವರ್ಷವಾದಾಗ ಪುಣೆಯ ಸುತ್ತಮುತ್ತ ವಾಸುದೇವ ಬಲವಂತ ಫಡಕೆ ಎಬ್ಬಿಸಿದ ಕ್ರಾಂತಿಯನ್ನು ಕುರಿತು ‘ದಿ ಟೈಮ್್ಸ’, ‘ಡೇಲಿ ಟೆಲಿಗ್ರಾಫ್’ ಮತ್ತು ‘ರಾಸ್ಟ್ ಗೋಫ್ತಾರ್’ (ಗುಜರಾತಿ ಪತ್ರಿಕೆ) ಮುಂತಾದ ಪತ್ರಿಕೆಗಳಲ್ಲಿ ಓದುತ್ತಿದ್ದ ಭಿಖೂ ಒಮ್ಮೆಲೆ ಆವೇಶಗೊಳ್ಳುತ್ತಿದ್ದಳು. ಪರಕೀಯರು ತಮ್ಮನ್ನು ಆಳುತ್ತಿದ್ದಾರೆಂಬ ವಿಷಯವೇ ಅವಳಲ್ಲಿ ಅಶಾಂತಿ ಉಂಟು ಮಾಡಿತ್ತು. ಝಾನ್ಸಿ ರಾಣಿಯಂತೆ ತಾನೂ ಸ್ವಾತಂತ್ರ್ಯಕ್ಕೆ ಹೋರಾಡಬೇಕೆಂಬ ಭಾವನೆ ದಿನೇದಿನೇ ಬಲಗೊಳ್ಳುತ್ತ ಹೋಯಿತು. ಮದುವೆ ವಯಸ್ಸಿಗೆ ಬಂದಿದ್ದ ಹುಡುಗಿಗೆ ಮದುವೆ ಮಾಡಿದರೆ ಸರಿಹೋಗಬಹುದೆಂದು ನಿಶ್ಚಯಿಸಿ ಮುಂಬೈಯ ಆಗರ್ಭ ಶ್ರೀಮಂತ ರುಸ್ತುಂ ಕಾಮಾ ಜೊತೆ ಮದುವೆ ಮಾಡಿದರು. ಅವಳು ಮೇಡಂ ಭಿಖೈಜಿ ರುಸ್ತುಂ ಕಾಮಾ ಆದಳು. ಆದರೆ ಬ್ರಿಟಿಷ್ ಸರ್ಕಾರದ ಪರಮ ನಿಷ್ಠರಾಗಿದ್ದ ರುಸ್ತುಂ ಕಾಮಾಗೂ ಭಿಖೂಗೂ ಆರಂಭದಿಂದಲೇ ಹೊಂದಾಣಿಕೆ ಸಾಧ್ಯವಾಗಲಿಲ್ಲ. ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯಿತು ಎಂಬಂಥ ಪರಿಸ್ಥಿತಿ!

ಲಂಡನ್ ಹಡಗು ಹತ್ತಿದಳು: 1896ರ ಅಕ್ಟೋಬರ್ ಬಾಂಬೆ ಪ್ರೆಸಿಡೆನ್ಸಿಯಲ್ಲಿ ಪ್ಲೇಗ್ ಬಡಿದಾಗ ಜನ ಹುಳಹುಪ್ಪಟಗಳಂತೆ ಸಾಯಲಾರಂಭಿಸಿದರು. ಮೇಡಂ ಕಾಮಾ ಗ್ರಾಂಟ್ ಮೆಡಿಕಲ್ ಕಾಲೇಜಿನ ತಂಡದೊಂದಿಗೆ ಪ್ಲೇಗ್ ರೋಗಿಗಳ ಶುಶ್ರೂಷೆಗೆ ತೊಡಗಿಸಿಕೊಂಡು ಕೊನೆಗೆ ತಾನೇ ಪ್ಲೇಗ್​ಗೆ ತುತ್ತಾದಳು. ಅದರಿಂದ ಚೇತರಿಸಿಕೊಳ್ಳಬೇಕಾದರೆ ಬಹುಕಾಲ ಹಿಡಿಯಿತು. ಬದುಕುಳಿದರೂ ಸೊರಗಿ ದುರ್ಬಲಗೊಂಡಿದ್ದಳು. ಗಂಡ ರುಸ್ತುಂ ಕಾಮಾ ಸಹ ಅವಳಿಂದ ದೂರವಾಗಿದ್ದ. ಇಂಥ ಸ್ಥಿತಿಯಲ್ಲಿ ಉತ್ತಮ ವೈದ್ಯಕೀಯ ಸಹಾಯ ಪಡೆಯಲೆಂದು ಇಂಗ್ಲೆಂಡಿಗೆ ತೆರಳಿದಳು.

ಅಲ್ಲಿ ಅವಳು ಚೇತರಿಸಿಕೊಳ್ಳುತ್ತಿದ್ದಂತೆ ಏನಾದರೂ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಇಚ್ಛೆ ಪಟ್ಟಳು. ನವರೋಜಿಯವರ ಬಳಿ ಅವರ ಅನಧಿಕೃತ ಕಾರ್ಯದರ್ಶಿಯಾಗಿ ಸೇವೆಗೆ ಸೇರಿಕೊಂಡಳು. ನವರೋಜಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್​ನ ನೇತಾರರು. ಹೀಗಾಗಿ ಅವಳಿಗೆ ಕಾಂಗ್ರೆಸ್ ಚಟುವಟಿಕೆ ಹಾಗೂ ಇತರ ಸ್ವಾತಂತ್ರ್ಯ ಹೋರಾಟದ ಬೆಳವಣಿಗಗಳನ್ನು ಸನಿಹದಿಂದ ತಿಳಿಯಲು ಸದವಕಾಶ ದೊರೆತಂತಾಯಿತು. ನವರೋಜಿಯವರೊಂದಿಗೆ ದುಡಿಯುವಾಗ ಕಾಂಗ್ರೆಸ್​ನ ಬ್ರಿಟಿಷ್​ಪರ ಚಿಂತನೆಗಳಿಂದ ಅವಳಿಗೆ ಅದರ ಮೇಲೆ ಅಸಹ್ಯ ಉಂಟಾಯಿತೇ ಹೊರತು ಒಲವು ಮೂಡಲಿಲ್ಲ. ಆ ದಿನಗಳಲ್ಲೇ ಅವಳಿಗೆ ಸರ್ದಾರ್ ಸಿಂಗ್ ರಾಣಾನ ಪರಿಚಯೂ ಆಯಿತು. ಶ್ಯಾಮ್ೕ ಸಂಪರ್ಕಕವೂ ಬಂತು. ಅವರ ಪರಿಚಯ ಬಂದ ಮೇಲೆ ಅವರು ನಡೆಸುತ್ತಿದ್ದ ‘ಇಂಡಿಯಾ ಹೌಸ್’ ಸಮೀಪಕ್ಕೂ ಬಂದಳು.

ಭಿಖೈಜಿ ಕಾಮಾ ‘ಇಂಡಿಯಾ ಹೌಸ್’ನೊಳಕ್ಕೆ ಕಾಲಿಟ್ಟಾಗ ಅದು ಪ್ರಖರ ದೇಶಭಕ್ತ ಕ್ರಾಂತಿಕಾರಿಗಳ ಕೇಂದ್ರಸ್ಥಾನವಾಗಿತ್ತು. ವಿ.ಡಿ. ಸಾವರ್​ಕರ್, ಲಾಲಾ ಹರದಯಾಳ್, ಭಾಯಿ ಪರಮಾನಂದ್, ವಿ.ವಿ.ಎಸ್. ಅಯ್ಯರ್, ಎಂ.ಪಿ.ಟಿ. ಆಚಾರ್ಯ, ಮದನ್​ಲಾಲ್ ಧಿಂಗ್ರ, ಗ್ಯಾನ್ ಚಂದ್ ವರ್ಮ, ಸರೋಜಿನಿ ನಾಯ್ಡುರವರ ಸೋದರ ವೀರೇಂದ್ರನಾಥ ಚಟ್ಟೋಪಾಧ್ಯಾಯ ಮುಂತಾದ ಕ್ರಾಂತಿಯ ಕಿಡಿಗಳ ಆಡುಂಬೋಲವಾಗಿತ್ತು ‘ಇಂಡಿಯಾ ಹೌಸ್’. ಈ ಹೌಸ್​ನಲ್ಲಿ ಒಂದುಗೂಡುತ್ತಿದ್ದ ಪ್ರಚಂಡ ಯುವಕರ ಪಾಲಿಗೆ ಇವಳು ಕ್ರಾಂತಿಮಾತೆ! ಇವಳ ಮಾತುಗಳು ಸ್ಪೂರ್ತಿಯ ನುಡಿಗಳು. ಅವಳಿದ್ದ ಕಡೆ ಮಿಂಚಿನ ಸಂಚಾರವಾಗುತ್ತಿತ್ತು.

ವಿಶ್ವ ವೇದಿಕೆಯ ಮೇಲೆ ಅನಾವರಣಗೊಂಡ ಸ್ವಾತಂತ್ರ್ಯ ಧ್ವಜ: ಸಾವರ್​ಕರ್

ತಮ್ಮ ಬೃಹತ್ ಮತ್ತು ಮಹತ್ ಗ್ರಂಥ ‘1857-ಪ್ರಥಮ ಭಾರತೀಯ ಸ್ವಾತಂತ್ರ್ಯ ಸಂಗ್ರಾಮ’ ಮರಾಠಿ ಕೃತಿಯನ್ನು ಅವರಿಗೆ ಕೇವಲ ಇಪ್ಪತ್ತೊಂದು ವಯಸ್ಸಾಗಿದ್ದಾಗ ಲಂಡನ್ನಿನಲ್ಲಿ ರಚಿಸಿದ್ದು. ಅದನ್ನು ಮುದ್ರಿಸಿ ಪ್ರಕಟಿಸಿದ್ದೇ ಒಂದು ದೊಡ್ಡ ಕಥೆ. ಅದರಲ್ಲಿ ಪ್ರಮುಖ ಪಾತ್ರ ವಹಿಸಿದವಳು ಮೇಡಂ ಕಾಮಾ. ಆ ಗ್ರಂಥವನ್ನು ಫ್ರೆಂಚ್ ಭಾಷೆಗೆ ಅನುವಾದಿಸಿದವಳೂ ಅವಳೇ! ಅದರ ಮೂಲ ಮರಾಠಿ ಪ್ರತಿಯನ್ನು ಸುರಕ್ಷಿತವಾಗಿಡಲು ಅವಳಿಗೆ ತಲಪಿಸಲಾಗಿತ್ತು. ಅದನ್ನು ಅವಳು ‘ಬ್ಯಾಂಕ್ ಆಫ್ ಫ್ರಾನ್ಸ್’ ಲಾಕರ್​ನಲ್ಲಿ ಇರಿಸಿದ್ದಳು. ಆದರೆ ಮೊದಲನೆಯ ಮಹಾಯುದ್ಧದ ಗೊಂದಲದಲ್ಲಿ ಅದು ಶಾಶ್ವತವಾಗಿ ಕೈತಪ್ಪಿ ಹೋಯಿತು.

1905ರ ಮೇ 10ರಂದು ‘ಇಂಡಿಯಾ ಹೌಸ್’ನಲ್ಲಿ 1857ರ ಸಂಗ್ರಾಮದ ಸುವರ್ಣ ಮಹೋತ್ಸವವನ್ನು ಆಚರಿಸಲಾಯಿತು. ಅದರ ಅಧ್ಯಕ್ಷತೆ ಮೇಡಂ ಕಾಮಾಳದೇ.

ಹೀಗೆ ದಿನೇದಿನೇ ‘ಇಂಡಿಯಾ ಹೌಸ್’ ಚಟುವಟಿಕೆಗಳು ಗರಿಗೆದರಿಕೊಳ್ಳುತ್ತಿದ್ದಂತೆ ಜಾಗತಿಕ ವೇದಿಕೆಯೊಂದರಲ್ಲಿ ಭಾರತದ ಸ್ವಾತಂತ್ರೆ್ಯೕಚ್ಛೆಯ ಸಂದೇಶವನ್ನು ಸಾರುವ ಅವಕಾಶ ಪ್ರಾಪ್ತವಾಯಿತು. ಅದೇ ಜರ್ಮನಿಯ ಸ್ಟಟ್​ಗಾರ್ಟ್​ನಲ್ಲಿ ನಡೆಯಲಿದ್ದ ಎರಡನೆಯ ಅಂತಾರಾಷ್ಟ್ರೀಯ ಸಮಾಜವಾದಿ ಸಮ್ಮೇಳನ. ಸುಮಾರು ಒಂದು ಸಾವಿರ ಪ್ರತಿನಿಧಿಗಳು ನೆರೆಯಲಿದ್ದ ಸಮ್ಮೇಳನ. ವಿಶ್ವದ ನಾನಾ ರಾಷ್ಟ್ರಗಳಿಂದ ಆಗಮಿಸಲಿದ್ದ ಪ್ರತಿನಿಧಿಗಳ ಆ ಬೃಹತ್ ಸಮ್ಮೇಳನದಲ್ಲಿ ಭಾರತದ ಪರವಾಗಿ ಯಾರಾದರೂ ಹೋಗಿ ಅಲ್ಲಿ ತಮ್ಮ ವಿಚಾರವನ್ನು ಪ್ರಕಟಿಸಬೇಕೆಂಬ ಚರ್ಚೆ ‘ಇಂಡಿಯಾ ಹೌಸ್’ನಲ್ಲಿ ನಡೆಯಿತು. ಶ್ಯಾಮ್ೕ ಕೃಷ್ಣವರ್ಮ, ಸಾವರ್​ಕರ್, ಸರ್ದಾರ್​ಸಿಂಗ್ ರಾಣಾ ತಮ್ಮ ಪ್ರತಿನಿಧಿಯನ್ನಾಗಿ ಮೇಡಂ ಕಾಮಾಳನ್ನು ಕಳಿಸುವ ನಿರ್ಣಯ ತಳೆದರು. ಆಗ ಅವಳ ವಯಸ್ಸು ನಲವತ್ತಾರು.

‘ಸ್ನೇಹಿತರೇ’ ಎಂದು ಆ ಬೃಹತ್ ಸಮ್ಮೇಳನ ಉದ್ದೇಶಿಸಿ ತನ್ನ ವಾಗ್ಝರಿ ಹರಿಸಲು ಪ್ರಾರಂಭಿಸಿದ ಮೇಡಂ ಕಾಮಾ ಅಂದು ತನ್ನ ತಾಯಿನಾಡನ್ನು ಪಾದಕ್ರಾಂತ ಮಾಡಿಕೊಂಡಿರುವ ನೃಶಂಸ ಬ್ರಿಟಿಷರು ಹೇಗೆ ದಬ್ಬಾಳಿಕೆ, ದೌರ್ಜನ್ಯಗಳನ್ನು ನಡೆಸುತ್ತಿದ್ದಾರೆಂದು ತರ್ಕಬದ್ಧವಾಗಿ, ಭಾವೋತ್ತೇಜಕವಾಗಿ ವಿವರಿಸುತ್ತಾ ಹೋದಾಗ ನೆರೆದಿದ್ದ ಪ್ರತಿನಿಧಿಗಳ ಕಣ್ಣುಗಳು ತೇವಗೊಂಡಿದ್ದವು. ತನ್ನ ಮಂತ್ರಮುಗ್ಧಗೊಳಿಸುವ ಭಾಷಣದಿಂದ ಪ್ರತಿನಿಧಿಗಳ ಮನಸ್ಸನ್ನು ತನ್ನೆಡೆಗೆ ಸೆಳೆದುಕೊಂಡಿದ್ದ ಅವಳು ಇದ್ದಕ್ಕಿದ್ದಂತೆ ಒಂದು ನಾಟಕೀಯ ದೃಶ್ಯವನ್ನು ತೆರೆದಿಟ್ಟಳು.

ತನ್ನ ಉಡುಪಿನಲ್ಲಿ ಎಲ್ಲೋ ಇರಿಸಿಕೊಂಡಿದ್ದ ಒಂದು ಧ್ವಜದ ನಮೂನೆಯನ್ನು ಹೊರ ತೆಗೆದು ಅದನ್ನು ಇಡೀ ಸಭೆಗೆ ತೋರಿಸುತ್ತಾ, ‘ಸ್ನೇಹಿತರೇ! ಇದೋ ನೋಡಿ ನಿಮ್ಮೆಲ್ಲರ ಕಣ್ಮುಂದೆ ಕಂಗೊಳಿಸುತ್ತಿದೆ ಭಾರತದ ಸ್ವಾತಂತ್ರ್ಯ ಧ್ವಜ! ಸಹಸ್ರಾರು ಭಾರತೀಯ ಯುವಕರ ಬಿಸಿ ನೆತ್ತರಿನಿಂದ ಅಭಿಷಿಕ್ತವಾಗಿರುವ ಮಹಾನ್ ಧ್ವಜ! ಪ್ರತಿನಿಧಿಗಳೇ ಎದ್ದು ನಿಂತು ಭಾರತ ನವೋದಯದ ಸಂಕೇತವಾಗಿರುವ ಈ ಪವಿತ್ರ ಧ್ವಜಕ್ಕೆ ಗೌರವ ವಂದನೆ ಸಲ್ಲಿಸಿ. ಭಾರತದ ಬಂಧ ವಿಮೋಚನೆಗೆ ಕೈ ಜೋಡಿಸಿ’ ಎಂದು ಆಹ್ವಾನಿಸಿದ್ದೇ ತಡ ಇಡೀ ಸಭೆ ಎದ್ದು ನಿಂತು ಹಷೋದ್ಗಾರ ಮಾಡುತ್ತ ಚಪ್ಪಾಳೆ ಸುರಿಮಳೆ ಸುರಿಸುತ್ತಾ ಸ್ವಾಗತ ಹಾಡಿತು.

(ಮುಂದುವರಿಯುವುದು)

(ಲೇಖಕರು ಹಿರಿಯ ಪತ್ರಕರ್ತರು)

Leave a Reply

Your email address will not be published. Required fields are marked *

Back To Top