Monday, 22nd October 2018  

Vijayavani

ರಾಮನಗರ ಅಖಾಡ ಜಯಿಸಲು ರಣತಂತ್ರ - ದೋಸ್ತಿಗಳ ಮಿಡ್​​​ನೈಟ್​​​ ಮೀಟಿಂಗ್​ - ಸಿಎಂ ಎಚ್​ಡಿಕೆ, ಡಿಕೆಶಿ ನೇತೃತ್ವದಲ್ಲಿ ರಣತಂತ್ರ        ಮಲೆನಾಡ ರಣಕಣದಲ್ಲಿ ಬಿಜೆಪಿ ಅಬ್ಬರ-ಮಧು ಬಂಗಾರಪ್ಪ ಪರ ದಿಗ್ಗಜರ ಪ್ರಚಾರ - ಮಂಡ್ಯದಲ್ಲಿ ಕೈಗೆ ತಲ್ಲಣ ತಂದಿಟ್ಟ ಪರಾಜಿತರು        ಗಣಿನಾಡಿನಲ್ಲಿಂದು ‘ಕೈ’ ದಿಗ್ಗಜರ ದಂಡು - ಸಿದ್ದು, ಡಿಕೆಶಿ, ಜಾರಕಿಹೊಳಿ ಬ್ರದರ್ಸ್​​​​​​ ಕ್ಯಾಂಪೇನ್​ - ಮಾತನಾಡ್ತಾರಾ ನಾಯಕರು..?        ಆದೇಶವಿದ್ರೂ ಮುಚ್ಚಲಿಲ್ಲ ಘಟಕಗಳು - ಹೈಕೋರ್ಟ್​​​​ ಆದೇಶ ಮೀರಿ ನಡೆಯುತ್ತಿವೆ  ಶುದ್ಧ ನೀರಿನ ಘಟಕದ ಹೆಸರಲ್ಲಿ ದಂಧೆ        ವಾಣಿವಿಲಾಸ್​ ಆಸ್ಪತ್ರೆಯಲ್ಲಿ ಲೇಡಿ ಡಾನ್ಸ್​ - ಹಣ ಕೊಟ್ರೆ ಮಾತ್ರ ಒಳಗೆ ಪರ್ಮಿಷನ್​ - ಲಂಚ ಕೊಡದಿದ್ರೆ ಇಲ್ಲಿ ಏನೂ ನಡಿಯಲ್ಲ..!        20 ಜನರ ಉಳಿಸಿ, ಜೀವ ತೊರೆದ ಯೋಧ - ಹುತಾತ್ಮ ಉಮೇಶ್​ ದೇಹ ಇಂದು ರಾಜ್ಯಕ್ಕೆ - ಗೋಕಾಕ್​ ಪಟ್ಟಣದಲ್ಲಿ ಅಂತ್ಯಕ್ರಿಯೆ       
Breaking News

ಕ್ರಾಂತಿತೀರ್ಥ ಆಯಿತು ಶ್ಯಾಮ್​ಜೀ ಸ್ಮಾರಕ

Thursday, 30.11.2017, 3:03 AM       No Comments

| ಡಾ. ಬಾಬು ಕೃಷ್ಣಮುರ್ತಿ

ಶ್ಯಾಮ್​ಜೀ ಬ್ರಿಟಿಷರ ವಿರುದ್ಧ ಸಂಘಟಿಸಿದ ಹೋರಾಟ ಹಲವು ಸ್ವರೂಪದ್ದು. ‘ಇಂಡಿಯಾ ಹೌಸ್’ನ್ನು ಹೋರಾಟದ ಕೇಂದ್ರವಾಗಿಸಿ, ‘ಇಂಡಿಯನ್ ಸೋಷಿಯಾಲಜಿಸ್ಟ್’ ಪತ್ರಿಕೆ ಮೂಲಕ ಕ್ರಾಂತಿಕಾರಿಗಳಿಗೆ ಸ್ಪೂರ್ತಿ ಒದಗಿಸಿ ರಾಷ್ಟ್ರಭಕ್ತಿಯನ್ನು ಪ್ರಖರವಾಗಿ ಬೆಳಗುವಂತೆ ಮಾಡಿದ ಶ್ಯಾಮ್​ಜೀ. ಇವನ ಹೋರಾಟದ ಪರಿಯನ್ನು ಕಂಡು ಬ್ರಿಟಿಷರೇ ಬೆಚ್ಚಿಬಿದ್ದಿದ್ದರು.

 

ಎಲ್ಲ ದೃಷ್ಟಿಯಿಂದಲೂ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ತಿರುವು ನೀಡಿದ ವರ್ಷವೆಂದರೆ 1905. ಶ್ಯಾಮ್​ಜೀ ಕೂಡ ಈ ಬದಲಾವಣೆಯ ಪ್ರಭಾವಕ್ಕೆ ಸಿಲುಕಿಕೊಂಡವನೇ. ಭಾರತದಲ್ಲಿ ಗೋಪಾಲಕೃಷ್ಣ ಗೋಖಲೆ, ಫಿರೋಜ್ ಷಾ ಮೆಹ್ತಾ ಮುಂತಾದವರ ಮಂದಗಾಮಿ ಅಥವಾ ಬ್ರಿಟಿಷ್ ಪರ ನಿಲುವುಗಳು ಅದಮ್ಯ ಸ್ವಾತಂತ್ರೆ್ಯೕಚ್ಛೆಯಿಂದ ಸ್ಪೂರ್ತಿಪ್ರದರಾಗಿದ್ದಂತಹವರಿಗೆ ಅಸಹ್ಯವೆನಿಸಿದ್ದವು. ತಿಲಕ್, ಬಿಪಿನ್ ಚಂದ್ರಪಾಲ್, ಲಜಪತರಾಯರ ಸ್ವಾತಂತ್ರ್ಯದ ಕೂಗು ಹಾಗೂ ಬ್ರಿಟಿಷ್ ದ್ವೇಷ ಮೇಲುಗೈ ಪಡೆದಿತ್ತು. ಬಂಗಾಳ, ಮಹಾರಾಷ್ಟ್ರ, ಪಂಜಾಬ್​ಗಳಲ್ಲಿ ಬಲಿದಾನಕ್ಕೆ ಸಿದ್ಧರಾಗಿದ್ದ ಕ್ರಾಂತಿಕಾರಿ ಯುವಕರ ಚಟುವಟಿಕೆಗೆ ವೇಗ ದೊರೆತಿದ್ದ ಸಮಯ. ಶ್ಯಾಮ್​ಜೀಯೂ ಇಂಗ್ಲೆಂಡಿನಲ್ಲಿ ತನ್ನದೇ ಆದ ಮಾರ್ಗದಲ್ಲಿ ಭಾರತದಲ್ಲಿನ ಸ್ವಾತಂತ್ರ್ಯ ಹೋರಾಟಕ್ಕೆ ತನ್ನ ಶಕ್ತಿ ಮೀರಿ ಕೊಡುಗೆ ನೀಡಲುಪಕ್ರಮಿಸಿದ. ಭಾರತ ಸ್ವಾತಂತ್ರ್ಯ ಹೋರಾಟದ ಪರ ಇಂಗ್ಲೆಂಡ್ ಮತ್ತು ಐರೋಪ್ಯ ದೇಶಗಳಲ್ಲೂ ಜನಾಭಿಪ್ರಾಯ ಮೂಡಿಸಲು ಕಾರ್ಯಕ್ರಮ ಹಮ್ಮಿಕೊಂಡ.

ಇಂಡಿಯಾ ಹೌಸ್ ಎಂಬ ಕ್ರಾಂತಿ ಕೇಂದ್ರ: 1905 ಜನವರಿಯಲ್ಲಿ ಲಂಡನ್ನಿನ ಹೈಗೇಟ್ ಎಂಬ ಪ್ರದೇಶದಲ್ಲಿದ್ದ ತನ್ನ ಮನೆಯಿಂದ ‘ದಿ ಇಂಡಿಯನ್ ಸೋಷಿಯಾಲಜಿಸ್ಟ್’ ಎಂಬ ಪತ್ರಿಕೆ ಪ್ರಾರಂಭಿಸಿದ. ಅಧ್ಯಯನಶೀಲನೂ ಚಿಂತಕನೂ ಹಾಗೂ ಆ ಕಾಲದ ರಾಷ್ಟ್ರೀಯ, ಅಂತಾರಾಷ್ಟ್ರೀಯ ಬೆಳವಣಿಗೆಗಳ ಬಗ್ಗೆ ಉತ್ತಮ ಮಾಹಿತಿಯುಳ್ಳವನೂ ಆದ ಶ್ಯಾಮ್ೕ ಜನಾಭಿಪ್ರಾಯ ಉಂಟು ಮಾಡುತ್ತ ಸ್ವಾತಂತ್ರ್ಯ ಹೋರಾಟಗಾರರ ಚಿಂತನೆಗೆ ಆಹಾರ ನೀಡುತ್ತಿದ್ದ. ಅವರನ್ನು ಹೋರಾಟದ ದಿಕ್ಕಿನಲ್ಲಿ ಮುಂದುವರಿಯಲು ಪ್ರೇರೇಪಿಸುತ್ತಿದ್ದ.

ಅದೇ ವರ್ಷ ಒಂದು ತಿಂಗಳ ಅನಂತರ- ಫೆಬ್ರವರಿ ಮಾಸದಲ್ಲಿ ‘ದಿ ಇಂಡಿಯನ್ ಹೋಮ್ ರೂಲ್ ಸೊಸೈಟಿ’ ಎಂಬ ಸಂಸ್ಥೆಯನ್ನು ತನ್ನ ಹೈಗೇಟ್​ನ ಮನೆಯಲ್ಲಿಯೇ ಆರಂಭಿಸಿದ. ಭಾರತಕ್ಕೆ ಸ್ವರಾಜ್ಯ ತಂದುಕೊಡುವುದು, ಅದನ್ನು ಸಾಧಿಸಲು ಇಂಗ್ಲೆಂಡಿನಲ್ಲಿ ಎಲ್ಲ ಸಾಧ್ಯತೆಗಳನ್ನು ಪೂರ್ಣ ಬಳಸಿಕೊಂಡು ಪ್ರಚಾರ ಮಾಡುವುದು, ಭಾರತದ ಜನರಲ್ಲಿ ಸ್ವರಾಜ್ಯದ ಪರಿಪೂರ್ಣ ಕಲ್ಪನೆಯನ್ನು ನೀಡಿ ರಾಷ್ಟ್ರೀಯ ಐಕ್ಯತೆ ಸಾಧಿಸುವುದು ಈ ಸೊಸೈಟಿಯ ಗುರಿ ಎಂದು ಸ್ಪಷ್ಟಪಡಿಸಿದ.

ಶ್ಯಾಮ್ೕಯ ಇನ್ನೊಂದು ಐತಿಹಾಸಿಕ ಮಹತ್ತ್ವದ ಹೆಜ್ಜೆ ಎಂದರೆ ‘ಇಂಡಿಯಾ ಹೌಸ್’ ಸ್ಥಾಪನೆ. ಭಾರತದಿಂದ ಇಂಗ್ಲೆಂಡಿಗೆ ಉಚ್ಚ ಶಿಕ್ಷಣಕ್ಕಾಗಿ ಇಂಗ್ಲೆಂಡಿಗೆ ಹೋಗುತ್ತಿದ್ದವರಿಗೆ ಹಲವು ಹತ್ತು ಸಮಸ್ಯೆಗಳು. ಜನಾಂಗೀಯ ವಿದ್ವೇಷದ ಕಾರಣ ಅವರಿಗೆ ನಿಲ್ಲಲು ನೆಲೆಯೇ ಸಿಗುತ್ತಿರಲಿಲ್ಲ. ಅಂಥ ಯುವಕರಿಗೆ ತಾನೇ ತನ್ನ ದುಡ್ಡಿನಿಂದ ಆಶ್ರಯವನ್ನು ಕಲ್ಪಿಸಲು ಮುಂದಾಗಿ ಹೈಗೇಟ್ ಪ್ರದೇಶದಲ್ಲಿಯೇ ಕ್ರಾಮ್ೆಲ್ ಅವೆನ್ಯೂ ಎಂಬ ರಸ್ತೆಯಲ್ಲಿ ದೊಡ್ಡ ಕಟ್ಟಡ ಕೊಂಡು ಅಲ್ಲಿ ‘ಇಂಡಿಯಾ ಹೌಸ್’ ಎಂಬ ಹೆಸರಿನಲ್ಲಿ ವಸತಿ ನಿಲಯ ಆರಂಭಿಸಿದ. 25 ಮಂದಿಗೆ ತಂಗಲು ವ್ಯವಸ್ಥೆ ಇದ್ದ ಈ ಸ್ಥಳಕ್ಕೆ ಬಂದವರಲ್ಲ ದೇಶಪ್ರೇಮವನ್ನು ಉಂಟು ಮಾಡಿ ಸ್ವಾಭಿಮಾನಿಗಳೂ ಸಾಹಸಿಗಳೂ ಆಗುವಂತೆ ರೂಪಿಸುವುದು ಪರೋಕ್ಷವಾಗಿ ಶ್ಯಾಮ್ೕಗಿದ್ದ ಉದ್ದೇಶ್ಯ.

‘ಇಂಡಿಯಾ ಹೌಸ್’ ಆರಂಭೋತ್ಸವ ಒಂದು ಅದ್ದೂರಿಯ ಸಮಾರಂಭ. ಇಂಗ್ಲೆಂಡಿನ ಸೋಷಿಯಲ್ ಡೆಮಾಕ್ರಟಿಕ್ ಫೆಡರೇಷನ್ ಎಂಬ ಸಂಸ್ಥೆಯ ನಾಯಕ ಎಚ್.ಎಮ್ ಹಿಂಡ್​ವುನ್ ಉದ್ಘಾಟನೆ ಭಾಷಣ ನೆರೆದಿದ್ದವರಿಗೆ ರೋಮಾಂಚನ ಉಂಟು ಮಾಡಿತು. ಒಬ್ಬ ಬ್ರಿಟಿಷನ ಬಾಯಿಂದ ಬಂದ ಈ ಮಾತುಗಳು ಮಹತ್ತ್ವವನ್ನು ಪಡೆದುಕೊಂಡವು:

‘‘ಗ್ರೇಟ್ ಬ್ರಿಟನ್​ಗೆ ರಾಜನಿಷ್ಠೆ ತೋರುವುದೆಂದರೆ ಇಂಡಿಯಾಕ್ಕೆ ದ್ರೋಹ ಬಗೆದಂತೆ! ಇಂಡಿಯಾದ ಬೆಳವಣಿಗೆ ಹಾಗೂ ಬಂಧ ವಿಮೋಚನೆಯ ನಿಟ್ಟಿನಲ್ಲಿ ಈ ‘ಇಂಡಿಯಾ ಹೌಸ್’ ಒಂದು ದೊಡ್ಡ ಹೆಜ್ಜೆಯಾಗಿದೆ. ಈ ಮಧ್ಯಾಹ್ನ ಇಲ್ಲಿ ನೆರೆದಿರುವವರು ಈ ಸಂಸ್ಥೆಯ ಅದ್ಭುತ ಯಶಸ್ಸಿನ ಫಲವನ್ನು ನೋಡುವವರಲ್ಲಿ ಕೆಲವರಾಗಿರುತ್ತೀರಿ!’ ಹಿಂಡ್​ವುನ್ನನ ಮಾತುಗಳು ಅಪೂರ್ವ ಐತಿಹಾಸಿಕ ಮಹತ್ತ್ವದ ಮುನ್ಸೂಚನೆ ನೀಡಿತ್ತು. ‘ಇಂಡಿಯಾ ಹೌಸ್’ ಭಾರತ ಸ್ವಾತಂತ್ರ್ಯ ಹೋರಾಟದ ಕೇಂದ್ರವೂ ಸ್ಪೂರ್ತಿಯ ಚಿಲುಮೆಯೂ ಆಗಬೇಕೆಂಬುದು ಶ್ಯಾಮ್ೕಯ ಆಶಯ. ಆ ಕನಸು ನನಸೂ ಆಯಿತು. ಅವನ ಬಯಕೆಯಂತೆ ಇದು ಮೇಡಮ್ ಕಾಮಾ, ಸರ್ದಾರ್​ಸಿಂಗ್ ರಾಣಾ, ವಿ.ವಿ.ಎಸ್. ಅಯ್ಯರ್, ಎಂ.ಪಿ.ಟಿ. ಆಚಾರ್ಯ, ವಿನಾಯಕ ದಾಮೋದರ ಸಾವರ್ಕರ್, ಮದನ್​ಲಾಲ್ ಧಿಂಗ್ರಾ, ಲಾಲಾ ಹರದಯಾಳ್, ವೀರೇಂದ್ರನಾಥ ಚಟ್ಟೋಪಾಧ್ಯಾಯ ಮೊದಲಾದ ಕ್ರಾಂತಿವೀರರ ನೆಲೆಯಾಯಿತು. ಅಂತೆಯೇ ತ್ವರಿತದಲ್ಲಿಯೇ ಬ್ರಿಟನ್ ಸರ್ಕಾರದ ಕೆಂಗಣ್ಣೂ ಇದರ ಮೇಲೆ ಬಿತ್ತು.

ಶ್ಯಾಮ್ೕಯ ಪ್ರತಿಯೊಂದು ಚಲನವಲನವೂ ಬ್ರಿಟಿಷ್ ಗುಪ್ತಚರ ಸಂಸ್ಥೆ ಸ್ಕಾಟ್​ಲ್ಯಾಂಡ್ ಯಾರ್ಡ್​ನ ಎಕ್ಸ್​ರೇ ದೃಷ್ಟಿಗೆ ಬಿದ್ದು ಸರ್ಕಾರಕ್ಕೆ ವರದಿ ಮುಟ್ಟುತ್ತಿತ್ತು. ಬ್ರಿಟಿಷ್ ವಿರೋಧಿ ಲೇಖನಗಳನ್ನು ಶ್ಯಾಮ್ೕ ತನ್ನ ‘ಇಂಡಿಯನ್ ಸೋಷಿಯಲಜಿಸ್ಟ್’ನಲ್ಲಿ ಬರೆದನೆಂದು ‘ಇನ್ನರ್​ಟೆಂಪಲ್’ ಸದಸ್ಯತ್ವವನ್ನು 1909ರ ಮೇ ತಿಂಗಳಲ್ಲಿ ಕಸಿದುಕೊಳ್ಳಲಾಯಿತು.

1906ರಲ್ಲಿ ವಿನಾಯಕ ದಾಮೋದರ ಸಾವರ್ಕರ್, ತಿಲಕರ ಸ್ವಂತ ಆಸಕ್ತಿಯ ಮೇರೆಗೆ ಶ್ಯಾಮ್ೕ ಸ್ಕಾಲರ್​ಷಿಪ್ ಪಡೆದು ಲಂಡನ್ನಿನಲ್ಲಿ ಪದಾರ್ಪಣ ಮಾಡಿ ಲಂಡನ್ನಿನಲ್ಲಿ ಭಾರತ ಸ್ವಾತಂತ್ರೊ್ಯೕದ್ಯಮದ ಒಂದು ಅಗ್ನಿಪರ್ವಕ್ಕೆ ನಾಂದಿ ಹಾಡಿದರು. ಹೊಸ ಅಧ್ಯಾಯ ತೆರೆದುಕೊಂಡಿತು. ಸಾವರ್ಕರ್​ರನ್ನು ಕಂಡಕೂಡಲೇ ಒಮ್ಮೆಲೆ ಅವರಲ್ಲಿ ಶ್ಯಾಮ್ೕಗೆ ಭರವಸೆ ಮೂಡಿತು.

ಶ್ಯಾಮ್ೕಯ ‘ಇಂಡಿಯನ್ ಸೋಷಿಯಾಲಜಿಸ್ಟ್’ ಲೇಖನಗಳು, ಭಾಷಣಗಳು, ವಿಚಾರಗಳು ಬ್ರಿಟನ್ ಸರ್ಕಾರದ ಪಿತ್ತ ನೆತ್ತಿಗೇರಿಸಿತ್ತು. ಅವನ ವಿರುದ್ಧ ಸ್ಕಾಟ್​ಲ್ಯಾಂಡ್ ವರದಿಗಳು ಹೇರಳವಾಗಿದ್ದವು. ಅದೂ ಅಲ್ಲದೆ ಅದೇ ವರ್ಷ ಲಂಡನ್ನಿನಲ್ಲಿ ನಡೆದ ಯುನೈಟೆಡ್ ಕಾಂಗ್ರೆಸ್ ಆಫ್ ಡೆಮಾಕ್ರಟ್ಸ್ ಎಂಬ ಸಂಘಟನೆ ನಡೆಸಿದ ಪರಿಷತ್ತಿನಲ್ಲಿ- ‘ಭಾರತಕ್ಕೆ ಬ್ರಿಟಿಷರು ಸ್ವಾತಂತ್ರ್ಯ ನೀಡಬೇಕು’ ಎಂದು ತರ್ಕಬದ್ಧವಾಗಿ ಮಂಡಿಸಿದ ವಿಚಾರಗಳಿಗೆ ಇಡೀ ಸಭೆ ಎದ್ದು ನಿಂತು ಚಪ್ಪಾಳೆ ಮೂಲಕ ಬೆಂಬಲ ಸೂಚಿಸಿದ ವರದಿ ಕೂಡ ಸರ್ಕಾರಕ್ಕೆ ತಲಪಿತು. ಲಂಡನ್ನಿನ ಪ್ರಸಿದ್ಧ ‘ದಿ ಟೈಮ್್ಸ’ ಪತ್ರಿಕೆ ಅವನನ್ನು ‘ಕುಪ್ರಸಿದ್ಧ ಕೃಷ್ಣ ವರ್ಮ’ ಎಂದು ಕರೆದು ಆ ಲೇಖನದಲ್ಲಿ ಅವನನ್ನು ಖಳನಾಯಕನಂತೆ ಪ್ರತಿಬಿಂಬಿಸಿತು. ಹೀಗೆ ಲಂಡನ್ನಿನಲ್ಲಿ ಮುಂದುವರಿಯುವುದು ದುಸ್ಸಾಧ್ಯವೆನ್ನುವ ಸ್ಥಿತಿಗೆ ಬಂದಾಗ 1907ರಲ್ಲಿ ಶ್ಯಾಮ್ೕ ‘ಇಂಡಿಯಾ ಹೌಸ್’ ಹೊಣೆಗಾರಿಕೆಯನ್ನು ಸಾವರ್ಕರ್​ಗೆ ವರ್ಗಾಯಿಸಿ ಪ್ಯಾರಿಸ್ಸಿಗೆ ತನ್ನ ನಿವಾಸವನ್ನು ಬದಲಾಯಿಸಿಕೊಂಡ. ಈ ಬದಲಾವಣೆ ಗುಪ್ತವಾಗಿಯೇ ನಡೆಯಬೇಕಾಗಿ ಬಂತು. ಬ್ರಿಟಿಷ್ ಸರ್ಕಾರ ಸುಮ್ಮನೆ ಕೂರಲಿಲ್ಲ. ಫ್ರಾನ್ಸ್ ಸರ್ಕಾರದೊಂದಿಗೆ ವ್ಯವಹಾರ ನಡೆಸಿ ಶ್ಯಾಮ್ೕಯನ್ನು ತನಗೊಪ್ಪಿಸುವಂತೆ ಅರ್ಜಿ ಸಲ್ಲಿಸಿತು. ಆವೇಳೆಗೆ ಫ್ರಾನ್ಸ್​ನ ಉಚ್ಚ ಸ್ಥಾನದಲ್ಲಿದ್ದ ಅನೇಕರು ಶ್ಯಾಮ್ೕಯ ಸ್ನೇಹಿತರಾಗಿದ್ದರಿಂದ ಬ್ರಿಟಿಷರ ಪ್ರಯತ್ನ ವಿಫಲವಾಯಿತು.

ಇತ್ತ ‘ಇಂಡಿಯನ್ ಹೌಸ್’ ಸಾವರ್ಕರರ ಸುಪರ್ದಿಗೆ ಬಂದ ಮೇಲೆ ಅಲ್ಲಿನ ರಾಷ್ಟ್ರೀಯ ಚಟುವಟಿಕೆಗಳು ತೀವ್ರಗೊಂಡವು. 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಸ್ವರ್ಣ ಮಹೋತ್ಸವ ನಡೆಯಿತು. 1909ರಲ್ಲಿ ಭಾರತದಲ್ಲಿ ಸಾವರ್ಕರ್ ಅಣ್ಣ ಗಣೇಶ್ ಸಾವರ್ಕರ್ ಬಂಧನದ ವಿರುದ್ಧ ಕುಪಿತನಾದ ಮದನ್​ಲಾಲ್ ಧಿಂಗ್ರಾ ಕರ್ಜನ್ ವಾಯಲಿಯನ್ನು ಒಂದು ಸಂತೋಷಕೂಟದಲ್ಲಿ ಗುಂಡು ಹಾರಿಸಿ ಮುಗಿಸಿಹಾಕಿದ. ಧಿಂಗ್ರಾನ ದೇಶಭಕ್ತಿ ಮತ್ತು ಧೈರ್ಯ ಸಾಹಸವನ್ನು ಶ್ಯಾಮ್ೕ ಶ್ಲಾಘಿಸಿದರೂ ಇಂಥ ಹತ್ಯೆಗಳು ಸಾಧುವಲ್ಲವೆಂದು ಟಿಪ್ಪಣಿ ಮಾಡಿದ. ಇಂಗ್ಲೆಂಡಿನಲ್ಲಾಗಲಿ ಇತರ ಐರೋಪ್ಯ ದೇಶಗಳಲ್ಲಾಗಲಿ ಇಂಥ ಹತ್ಯೆಗಳು ಭಾರತೀಯರು ಮಾಡುವುದು ಸರಿಯಲ್ಲವೆಂದೂ ಭಾರತದಲ್ಲಿ ನಡೆದರೆ ಅದು ಪರಕೀಯ ಆಕ್ರಮಕರ ವಿರುದ್ಧ ಯುದ್ಧ ಆಗುವುದೆಂದೂ ನೀಡಿದ ಹೇಳಿಕೆ ಕೆಲ ಉಗ್ರ ಕ್ರಾಂತಿಕಾರಿಗಳಿಗೆ ಅಸಮಾಧಾನ ಉಂಟುಮಾಡಿತ್ತು. ಧಿಂಗ್ರಾನ ಮೇಲಿನ ಅಭಿಮಾನಕ್ಕೆ ದ್ಯೋತಕವಾಗಿ ಅವನ ಹೆಸರಿನಲ್ಲಿ ನಾಲ್ಕು ಸ್ಕಾಲರ್​ಷಿಪ್​ಗಳನ್ನು ಘೊಷಣೆ ಮಾಡಿದ. ಕರ್ಜನ್ ವಾಯಲಿ ಹತ್ಯೆ, ಧಿಂಗ್ರಾನ ಮರಣದಂಡನೆಯ ಅನಂತರ ಸಾವರ್ಕರರ ಮೇಲೆ ಬ್ರಿಟನ್ ಸರ್ಕಾರದ ಕಾಕದೃಷ್ಟಿ ಬಿದ್ದುದರಿಂದ ಲಂಡನ್ನಿನಲ್ಲಿ ಅವರಿರುವುದು ಕ್ಷೇಮವಲ್ಲವೆಂದು ಪ್ಯಾರಿಸಿಗೆ ಅವರನ್ನು ಶ್ಯಾಮ್ೕ ಕರೆಸಿಕೊಂಡ. ಆದರೆ ಹೆಚ್ಚು ಕಾಲ ಅಲ್ಲಿ ನಿಲ್ಲದ ಸಾವರ್ಕರ್ ಲಂಡನ್ನಿಗೆ ಹಿಂದಿರುಗಿದಾಗ ರೈಲು ನಿಲ್ದಾಣದಲ್ಲಿಯೇ ಬಂಧನವಾಗಿ ವಿಚಾರಣೆಗಾಗಿ ಭಾರತಕ್ಕೆ ರವಾನೆ ಮಾಡುತ್ತಿದ್ದಾಗ ಫ್ರಾನ್ಸ್ ಬಳಿ ಸಮುದ್ರದಲ್ಲಿ ಹಡಗಿನಿಂದ ಹಾರಿ, ಈಜಿ ತಪ್ಪಿಸಿಕೊಂಡು ಹೋಗಲು ಯತ್ನಿಸಿ ಮತ್ತೆ ಬ್ರಿಟಿಷ್ ಪೊಲೀಸರಿಗೆ ಸಿಕ್ಕಿಹಾಕಿಕೊಂಡರು.

ಈ ಘಟನೆ ಶ್ಯಾಮ್ೕಗೆ ತಿಳಿದ ಕೂಡಲೆ ಮೇಡಮ್ ಕಾಮಾಳನ್ನು ಜೊತೆ ಮಾಡಿಕೊಂಡು ಫ್ರಾನ್ಸ್​ನ ಪ್ರಸಿದ್ಧ ಸಮಾಜವಾದಿ ನಾಯಕ ಮೋಸೆ ಜೋರಂನನ್ನು ಭೇಟಿ ಮಾಡಿ ಫ್ರಾನ್ಸ್ ಸರ್ಕಾರ ಈ ಮೊಕದ್ದಮೆಯನ್ನು ಅಂತಾರಾಷ್ಟ್ರೀಯ ಹೇಗ್ ನ್ಯಾಯಾಲಯದವರೆಗೂ ಕೊಂಡೊಯ್ಯುವಂತೆ ಪ್ರಯತ್ನಿಸಿದರು. ಅದು ಸಫಲವಾಗದಿದ್ದುದು ಬೇರೆ ಮಾತು. ಪ್ಯಾರಿಸ್ಸಿನಿಂದ ‘ಇಂಡಿಯನ್ ಸೋಷಿಯಾಲಜಿಸ್ಟ್’ ಪತ್ರಿಕೆಯನ್ನು ಪ್ರಕಟಿಸುತ್ತ ಭಾರತ ಸ್ವಾತಂತ್ರ್ಯ ಚಳವಳಿಗೆ ಸಂಬಂಧಿಸಿದಂತೆ ಗಂಡುಶೈಲಿಯ ಲೇಖನಗಳನ್ನು ಬರೆಯುತ್ತ ಭಾರತದ ಕ್ರಾಂತಿಕಾರಿಗಳಿಗೂ ಆತ್ಮವಿಶ್ವಾಸ, ಸ್ಪೂರ್ತಿಯನ್ನು ತುಂಬುವ ಕೆಲಸ ಮಾಡಿದ.

ಸಾವರ್ಕರ್​ಗೆ ಕರಿನೀರು ಶಿಕ್ಷೆಯಾದದ್ದು ಕೇಳಿ ವಿಶ್ವದ ಅನೇಕ ರಾಷ್ಟ್ರಗಳು ಅದನ್ನು ಖಂಡಿಸಿದವು. ಈ ರಾಷ್ಟ್ರಗಳು ಇಂಥ ನಿಲುವು ತಳೆಯುವುದಕ್ಕೆ ಶ್ಯಾಮ್ೕ ಆವೇಳೆಗೆ ಆ ರಾಷ್ಟ್ರಗಳಲ್ಲಿ ಭಾರತೀಯ ಸ್ವಾತಂತ್ರ್ಯ ಚಳವಳಿ ಹಾಗೂ ಅದರಲ್ಲಿ ಭಾಗವಹಿಸುವವರ ಬಗ್ಗೆ ಸದಭಿಪ್ರಾಯ ಮೂಡಿಸಿದ್ದೇ ಕಾರಣವಾಗಿತ್ತು.

1913ರಲ್ಲೇ ಪ್ರಥಮ ಮಹಾಯುದ್ಧದ ಕಾಮೋಡಗಳು ಕವಿಯಲಾರಂಭಿಸಿದ್ದವು. ‘ಎಂಟೆಂಟೆ ಕಾರ್ಡಿಯೇಲೆ’ ಎಂಬ ಒಪ್ಪಂದದ ಪ್ರಕಾರ ಬ್ರಿಟನ್ನಿನ ಚಕ್ರವರ್ತಿ ಪಂಚಮ ಜಾರ್ಜ್ ಪ್ಯಾರಿಸ್​ಗೆ ಬರುವವನಿದ್ದ. ಗ್ರೇಟ್ ಬ್ರಿಟನ್ ಮತ್ತು ಫ್ರಾನ್ಸ್ ದೇಶಗಳ ನಡುವೆ ಸಮಸ್ಯೆ ಉದ್ಭವಿಸಿದಾಗ ಪರಸ್ಪರ ವಿಚಾರ ವಿನಿಮಯದ ಮೂಲಕ ಸೌಹಾರ್ದತೆ ಬೆಳೆಸಿಕೊಳ್ಳುವುದಕ್ಕೆ 1904ರಲ್ಲಿ ಮಾಡಿಕೊಂಡಿದ್ದ ‘ಎಂಟೆಂಟೆ ಕಾರ್ಡಿಯೇಲೆ’ ಒಪ್ಪಂದ ಸಹಾಯಕವಾಗಿತ್ತು. 1914ರ ಪ್ರಥಮ ಮಹಾಯುದ್ಧದ ವಾತಾವರಣದ ಹಿನ್ನೆಲೆಯಲ್ಲಿ ಪ್ಯಾರಿಸ್ಸಿಗೆ ಪಂಚಮ ಜಾರ್ಜ್​ನ ಆಗಮನವಾಗಲಿತ್ತು. ಶ್ಯಾಮ್ೕ ಬ್ರಿಟಿಷ್ ವಿರೋಧಿ ಚಟುವಟಿಕೆಗಳ ಅಗ್ರಗಣ್ಯನಾಗಿದ್ದುದರಿಂದ, ಅವನು ಪ್ಯಾರಿಸ್ಸಿನಲ್ಲಿರುವುದು ಫ್ರೆಂಚ್ ಸರ್ಕಾರಕ್ಕೆ ಮುಜುಗರ ಉಂಟಾಗುವ ಹಾಗಿದ್ದುದರಿಂದ ಆತಿಥೇಯ ರಾಷ್ಟ್ರಕ್ಕೆ ತೊಂದರೆ ಕೊಡುವುದು ಬೇಡವೆಂದು ಶ್ಯಾಮ್ೕ ತನ್ನ ಕೇಂದ್ರವನ್ನು ಪ್ಯಾರಿಸ್ಸಿನಿಂದ ಸ್ವಿಟ್ಜರ್​ಲ್ಯಾಂಡ್​ನ ಜಿನೀವಾಕ್ಕೆ ಬದಲಾಯಿಸಿದ.

ಆದರೆ ಇಲ್ಲಿ ಸ್ವಿಸ್ ಸರ್ಕಾರ ಪ್ರಥಮ ಮಹಾಯುದ್ಧ ಮುಗಿಯವವರೆಗೆ ಶ್ಯಾಮ್ೕ ಯಾವುದೇ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಬಾರದೆಂಬ ನಿರ್ಬಂಧ ಹೇರಿತ್ತು. ಶ್ಯಾಮ್ೕ ಆಗ ಜಿನೀವಾದಲ್ಲಿದ್ದ ‘ಪೊ› ಇಂಡಿಯಾ ಕಮಿಟಿ’ ಎಂಬ ಭಾರತ ಪರ ಸಂಸ್ಥೆಯ ಅಧ್ಯಕ್ಷ ಡಾ. ಬ್ರೀಸ್ ಎಂಬುವವನ ಮೂಲಕ ತನ್ನ ಕೆಲಸ ಮಾಡಲು ಯತ್ನಿಸಿದ. ಸ್ವಲ್ಪ ಸಮಯದ ಅನಂತರ ಅವನು ಬ್ರಿಟಿಷ್ ಏಜೆಂಟ್ ಎಂಬುದು ಶ್ಯಾಮ್ೕಗೆ ತಿಳಿದು ನೊಂದು ಸುಮ್ಮನಾಗಬೇಕಾಗಿ ಬಂತು.

ಅನಾರೋಗ್ಯ ಹಾಗೂ ವೃದ್ಧಾಪ್ಯದ ಕಾರಣ ಶ್ಯಾಮ್ೕಗೆ ಶಕ್ತಿ ಉಡುಗಿಹೋಗುತ್ತಿತ್ತು. 1922ರಲ್ಲಿ ‘ಇಂಡಿಯನ್ ಸೋಷಿಯಾಲಜಿಸ್ಟ್’ ಪತ್ರಿಕೆಯ ಕಡೆಯ ಎರಡು ಸಂಚಿಕೆಗಳನ್ನು ಪ್ರಕಟಿಸಿ ಮುಕ್ತಾಯ ಹಾಡಿದ. ಯಥೇಚ್ಚ ಹಣಕಾಸು ಬಳಿಯಲ್ಲಿದ್ದರೂ ಅನಾರೋಗ್ಯದ ಕಾರಣ ಕೊನೆಯ ದಿನಗಳು ಅಷ್ಟು ಸಮಾಧಾನಕರವಾಗಿರಲಿಲ್ಲ. 1930ರ ಮಾರ್ಚ್ 30ರಂದು ಮಧ್ಯಾಹ್ನ ಹನ್ನೊಂದೂವರೆ ಗಂಟೆಗೆ ಜಿನೀವಾದ ಆಸ್ಪತ್ರೆಯೊಂದರಲ್ಲಿ ಶ್ಯಾಮ್ೕ ಕೊನೆಯುಸಿರೆಳೆದ. 73 ವರ್ಷಗಳ ಜೀವನಕ್ಕೆ ಅಂತ್ಯ ಹಾಡಿದ. ಬ್ರಿಟಿಷ್ ಸರ್ಕಾರ ಅವನ ಸಾವಿನ ಸುದ್ದಿಯನ್ನು ಮುಚ್ಚಿಟ್ಟಿತು.

ಆದರೆ ಲಾಹೋರ್ ಜೈಲಿನಲ್ಲಿ ತಮ್ಮ ಹಕ್ಕುಗಳಿಗಾಗಿ ಉಗ್ರವಾಗಿ ಹೋರಾಡುತ್ತಿದ್ದ ಭಗತ್ ಸಿಂಗ್ ಮತ್ತು ಇತರ ಕ್ರಾಂತಿಕಾರಿಗಳು ಶ್ಯಾಮ್ೕ ನಿಧನಕ್ಕೆ ಜೈಲಿನಲ್ಲಿಯೇ ಸಭೆ ಸೇರಿ ಗೌರವಾದರಗಳೊಡನೆ ಶ್ರದ್ಧಾಂಜಲಿ ಸಲ್ಲಿಸಿದರು. ಇದಕ್ಕಿಂತಲೂ ಉತ್ತಮವಾದ ಶ್ರದ್ಧಾಂಜಲಿ ಬೇರಾವುದಿದ್ದೀತು!

ಈಗ ಮೋದಿಯವರ ಆಸಕ್ತಿಯಿಂದಾಗಿ ಶ್ಯಾಮ್ೕ ಹುಟ್ಟಿದ್ದ ಮಾಂಡವಿಯಲ್ಲಿ 2010ರಲ್ಲಿ ನಿರ್ವಿುತವಾದ ‘ಕ್ರಾಂತಿತೀರ್ಥ’ ಎಂಬ ಸ್ಮಾರಕ ಭಾರತೀಯರಿಗೆ ಈ ಶ್ರೇಷ್ಠ ಸ್ವಾತಂತ್ರ್ಯ ಹೋರಾಟಗಾರನ ನೆನಪನ್ನು ಸದಾ ಕಾಲ ನೀಡುತ್ತಿದೆ.

(ಲೇಖಕರು ಹಿರಿಯ ಪತ್ರಕರ್ತರು)

Leave a Reply

Your email address will not be published. Required fields are marked *

Back To Top