Sunday, 19th August 2018  

Vijayavani

ರಣಚಂಡಿ ಮಳೆಗೆ ಕುಸಿಯುತ್ತಿದೆ ಕೊಡಗು - ಮತ್ತೆ ಜೋರಾಯ್ತು ಮಳೆ ಅಬ್ಬರ - ಮುಕ್ಕೋಡ್ಲು ಗ್ರಾಮದಲ್ಲಿ 80 ಜನರ ರಕ್ಷಣೆ        ಕ್ಷಣ ಕ್ಷಣಕ್ಕೂ ಆತಂಕ, ಬಿರುಕು ಬಿಟ್ಟ ಧರೆ - ಪ್ರವಾಹದಲ್ಲಿ ಕೊಚ್ಚಿ ಹೋಗ್ತಿದೆ ಬೆಟ್ಟ,ಗುಡ್ಡ - ಕಣ್ಮುಂದೆಯೇ ನೆಲಸಮ ವಾಗ್ತಿದೆ ಬದುಕು        ಕೊಡಗಲ್ಲಿ ಇಂದು ಸಿಎಂ ಎಚ್​ಡಿಕೆ ಪ್ರವಾಸ - ಸಂತ್ರಸ್ಥರ ನೋವು ಆಲಿಸಲಿರುವ ಬಿಎಸ್​ವೈ - ನಿರಾಶ್ರಿತರಿಗೆ ನೆರವು ಅಂದ್ರು ರೇವಣ್ಣ        ಸಂತ್ರಸ್ಥರಿಗೆ ಸ್ಯಾಂಡಲ್​ವುಡ್​​​​​​​​​ ನೆರವಿನ ಹಸ್ತ - ಅಗತ್ಯವಸ್ತುಗಳ ಪೂರೈಸಿದ ಸ್ಟಾರ್ಸ್​​​​​​​​​​​ - ಕೈಲಾದ ಸಹಾಯ ಮಾಡ್ತಿದ್ದಾರೆ ಕರುನಾಡ ಜನರು        ಕೇರಳದಲ್ಲಿ ಕಡಿಮೆಯಾಗ್ತಿಲ್ಲ ನೆರೆ ಅಬ್ಬರ - ಸಾವಿನ ಸಂಖ್ಯೆ 357ಕ್ಕೇ ಏರಿಕೆ - ದೇವರನಾಡಿಗೆ ಹರಿದು ಬರ್ತಿದೆ ನೆರವಿನ ಮಹಾಪೂರ        ಭಾರತ - ಇಂಗ್ಲೆಂಡ್​ ನಡುವಿನ 3ನೇ ಟೆಸ್ಟ್​​​​ ಪಂದ್ಯ - ಬೃಹತ್ ಮೊತ್ತದತ್ತ ಟೀಂ ಇಂಡಿಯಾ - ಶತಕದ ಗಡಿಯಲ್ಲಿ ಎಡವಿದ ಕೊಹ್ಲಿ       
Breaking News

ಕ್ಯಾಪಿಟಲ್ ಗೇನ್ಸ್​ಗೆ ಹೊಸ ಸೂಚ್ಯಂಕ

Tuesday, 26.09.2017, 3:00 AM       No Comments

| ಸಿಎ ನಾರಾಯಣ ಭಟ್

ಕ್ಯಾಪಿಟಲ್ ಸ್ಥಿರಾಸ್ತಿ ಮಾರಾಟ ಮಾಡಿದಾಗ ಬರುವ ಲಾಭವನ್ನು ಕಂಡುಹಿಡಿಯುವುದಕ್ಕಾಗಿರುವ ಲೆಕ್ಕವಿಧಾನ ಈಗ ಬದಲಾಗಿದೆ. ಈ ಬಗ್ಗೆ ಕಳೆದ ಮುಂಗಡಪತ್ರದಲ್ಲಿ ಕೇಂದ್ರ ಸರ್ಕಾರ ಪ್ರಸ್ತಾಪ ಮಾಡಿತ್ತು. ಅಲ್ಪಾವಧಿ ಮತ್ತು ದೀರ್ಘಾವಧಿ ಆಸ್ತಿಗಳು ಎಂದರೇನು ಎಂಬುದನ್ನು ಕಳೆದ ಕಂತಿನಲ್ಲಿ ತಿಳಿದುಕೊಂಡೆವು. ಈ ಕಂತಿನಲ್ಲಿ ಕ್ಯಾಪಿಟಲ್ ಗೇನ್ಸ್ ಸೂಚ್ಯಂಕದ ಬಗ್ಗೆ ತಿಳಿದುಕೊಳ್ಳೋಣ.

ಬದಲಾದ ಕ್ಯಾಪಿಟಲ್ ಗೇನ್ಸ್ ಸೂಚ್ಯಂಕ (ಇಂಡೆಕ್ಸ್): 1981ನೇ ಇಸವಿಗಿಂತ ಮೊದಲು ಗಳಿಸಿದ ಆಸ್ತಿಯಾಗಿದ್ದರೆ, ಅದರ ಖರ್ಚು ಏನೇ ಇರಲಿ, 1981ರ ಏ.1ರಲ್ಲಿದ್ದ ಮಾರುಕಟ್ಟೆ ದರವನ್ನು ಅಳವಡಿಸಿ, ಲಾಭವನ್ನು ಲೆಕ್ಕ ಹಾಕುವ ಅವಕಾಶವಿತ್ತು. ಅಂದರೆ, 1981-82ರ ವರ್ಷವನ್ನು ತಳಹದಿಯಾಗಿಟ್ಟು ಪ್ರತಿವರ್ಷ ಸೂಚ್ಯಂಕವನ್ನು ಸರ್ಕಾರ ಬಿಡುಗಡೆ ಮಾಡುತ್ತಿತ್ತು. ಇದೀಗ, ತಳಹದಿಯ ವರ್ಷವನ್ನು 2000-01 ಎಂದು ಬದಲಾಯಿಸಿ ಹೊಸ ಸೂಚ್ಯಂಕ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಂದರೆ, 2001ರ ಏ.1ಕ್ಕಿಂತ ಮೊದಲು ಗಳಿಸಿದ ಸ್ಥಿರಾಸ್ತಿಯನ್ನು ಮಾರಾಟ ಮಾಡಿದಾಗ ನಮಗೆ 2001 ಏ.1ರಂದು ಇದ್ದ ಮಾರುಕಟ್ಟೆ ಬೆಲೆಯನ್ನೇ ನಮ್ಮ ಆಸ್ತಿಯ ಖರೀದಿ ಬೆಲೆಯೆಂದು ಪರಿಗಣಿಸುವ ಅವಕಾಶವಿದೆ. ಇದು ಮನೆ, ನಿವೇಶನ ಮಾರುವವರಿಗೆ ವರದಾನವಾಗುವುದೆಂದು ನಿರೀಕ್ಷಿಸಲಾಗಿದೆ. ಏಕೆಂದರೆ, 1981ರಿಂದ 2001ರ ನಡುವಿನ ಅವಧಿಯಲ್ಲಿ ರಿಯಲ್ ಎಸ್ಟೇಟ್ ದರಗಳು 5ರಿಂದ 10 ಪಟ್ಟು ಹೆಚ್ಚಾಗಿರುವುದರಿಂದ ಹಳೆಯ ಸ್ಥಿರಾಸ್ತಿಗಳ 2001ರ ದರಕ್ಕೆ ಅಳವಡಿಕೆ ದರಗಳು ತುಂಬಾ ಅನುಕೂಲಕರವಾಗಲಿದೆ. 2001-02ಕ್ಕೆ 100 ಇದ್ದ ಸೂಚ್ಯಂಕ ಈ ವರ್ಷ 272 ಎಂದು ಹೇಳಿದೆ. ಉದಾ: 10 ಲಕ್ಷ ರೂಪಾಯಿಗೆ 1995ರಲ್ಲಿ ಖರೀದಿಸಿದ್ದ ನಿವೇಶನ 150 ಲಕ್ಷ ರೂಪಾಯಿಗೆ ಮಾರಾಟವಾಗಲಿದೆ ಎಂದುಕೊಳ್ಳಿ. 2001ರ ಏ.1 ರಂದು ಇದರ ಮಾರುಕಟ್ಟೆ ಬೆಲೆ 50 ಲಕ್ಷ ರೂಪಾಯಿ ಇದ್ದಲ್ಲಿ ತಾವು ಈಗ ಇದನ್ನು ಗಳಿಸಿದ ವೆಚ್ಚವನ್ನು (50/100*272) 136 ಲಕ್ಷ ರೂಪಾಯಿ ಆಗಿದೆ ಎಂದುಕೊಳ್ಳಬಹುದು. ಆಗ ತಮ್ಮ ತೆರಿಗೆ ಬಾಧ್ಯತೆ ಆದಾಯವು ಕೇವಲ 14 ಲಕ್ಷ ರೂಪಾಯಿ ಆಗಿರುತ್ತದೆ. ಕೆಲವೊಂದು ಸ್ಥಿರಾಸ್ತಿಯು ಪಿತ್ರಾರ್ಜಿತವಾಗಿದ್ದಾಗ, ಅದರ ಮೂಲಬೆಲೆ ತುಂಬ ಕಡಿಮೆಯಿದ್ದು, 1981ರ ದರ ತೆಗೆದುಕೊಂಡು, ಸೂಚ್ಯಂಕ ಅಳವಡಿಸಿದರೂ ಬಹಳ ತೆರಿಗೆ ಕಟ್ಟಬೇಕಿತ್ತು. ಇದೀಗ ರಿಯಲ್ ಎಸ್ಟೇಟ್​ನಲ್ಲಾಗಿದ್ದ ದಿಢೀರ್ ಜಿಗಿತಕ್ಕೆ ಬರುತ್ತಿದ್ದ ತೆರಿಗೆಯ ಉಪದ್ರವ ಸ್ವಲ್ಪ ಮಟ್ಟಿಗೆ ಶಮನವಾದಂತಾಗಿದೆ. ಹಳೆಯ ಆಸ್ತಿ ಹಾಗೂ ಪಿತ್ರಾರ್ಜಿತ ಆಸ್ತಿಗಳನ್ನು ಮಾರಹೊರಟಾಗ ಆದಾಯ ತೆರಿಗೆಯಲ್ಲಿ ಸಾಕಷ್ಟು ಉಳಿತಾಯ ಆಗಲಿದೆ.

ನೀವೂ ಪ್ರಶ್ನೆ ಕೇಳಬಹುದು

ಮನಿ ಮಾತು ಅಂಕಣದಲ್ಲಿ ಆರ್ಥಿಕ ವಿಚಾರಗಳ ಬಗ್ಗೆ ಮಾಹಿತಿ-ವಿಶ್ಲೇಷಣೆಗಳನ್ನು ನೀಡುವುದು ಮಾತ್ರವಲ್ಲ, ಓದುಗರ ಪ್ರಶ್ನೆಗಳಿಗೆ ಉತ್ತರವನ್ನೂ ನೀಡಲಾಗುತ್ತದೆ. ಹೂಡಿಕೆ, ಉಳಿತಾಯ, ತೆರಿಗೆ, ವಿಮೆ, ಷೇರು ಮಾರುಕಟ್ಟೆ-ಹೀಗೆ ವಿತ್ತರಂಗಕ್ಕೆ ಸಂಬಂಧಪಟ್ಟ ಪ್ರಶ್ನೆಗಳನ್ನು ಕಳುಹಿಸಬಹುದು. ನಮ್ಮ ತಜ್ಞರ ತಂಡದವರು ಉತ್ತರ ನೀಡುತ್ತಾರೆ. ಪ್ರಶ್ನೆ ಕಳಿಸಬೇಕಾದ ಇಮೇಲ್: [email protected]

Leave a Reply

Your email address will not be published. Required fields are marked *

Back To Top