Tuesday, 20th February 2018  

Vijayavani

ಹ್ಯಾರಿಸ್ ಪುತ್ರ ಆಯ್ತು ಮತ್ತೊಬ್ಬ ಕೈ ಮುಖಂಡನ ದರ್ಪ- ಸರ್ಕಾರಿ ಕಚೇರಿಗೆ ನುಗ್ಗಿ ಅಧಿಕಾರಿಗೆ ಧಮ್ಕಿ- ಜಲಮಂಡಳಿ ಸದಸ್ಯ ನಾರಾಯಣಸ್ವಾಮಿ ಗೂಂಡಾಗಿರಿ        ನಾನು ಎರಚಿದ್ದು ಪೆಟ್ರೋಲ್ ಅಲ್ಲ, ನೀರು- ಕಿವಿಗೆ ಕಲರ್ ಕಲರ್ ಹೂವಿಟ್ಟ ನಾರಾಯಣಸ್ವಾಮಿ- ನಿಮ್ಮ ಏರಿಯಾದಲ್ಲಿ ನೀರಿಗೆ ಬಣ್ಣ ಇರುತ್ತಾ...?        ಸಿದ್ದರಾಮಯ್ಯ ಆಪ್ತನ ದರ್ಪ ಕಾಂಗ್ರೆಸ್‌ಗೆ ಕಾಣಿಸಲ್ವಾ- ಪರಮೇಶ್ವರ್‌ ಅವರೇ ಗೂಂಡಾನ ವಿರುದ್ಧ ಕ್ರಮ ಇಲ್ವಾ..?- ಕಾಂಗ್ರೆಸ್‌ ಸರ್ಕಾರದಲ್ಲಿ ಅಧಿಕಾರಿಗಳಿಷ್ಟು ಸೇಫ್..?        ದಕ್ಷಿಣ ಕರ್ನಾಟಕದಲ್ಲಿ ಅಮಿತ್ ಷಾ ದಂಡಯಾತ್ರೆ- ಕುಕ್ಕೆ ಸನ್ನಿಧಿಯಲ್ಲಿ ವಿಶೇಷ ಪೂಜೆ- ಜ್ವರದ ನಡುವೆಯೂ ಹತ್ತು ಹಲವು ಕಾರ್ಯಕ್ರಮದಲ್ಲಿ ಭಾಗಿ        ಮೇಯ್ತಿದ್ದ ಮದಗಜ ಕೆಣಕಿದ ಶ್ವಾನ- ನಾಯಿ ತುಂಟಾಟಕ್ಕೆ ತಿರುಗಿ ಬಿದ್ದ ಆನೆ- ಮಡಿಕೇರಿಯ ಕಾಫಿತೋಟದಲ್ಲಿ ಆನೆ, ನಾಯಿ ಕಾಳಗ       
Breaking News

ಕ್ಯಾಂಪಸ್ ಸೆಲ್ಫಿ

Wednesday, 06.12.2017, 9:53 PM       No Comments

ಕ್ಯಾಂಪಸ್ ಸೆಲ್ಫಿ ನೀವೂ ನಿಮ್ಮ ಕಾಲೇಜಿನಲ್ಲಿ ತೆಗೆದ ಸೆಲ್ಪಿ ಕಳಿಸಬಹುದು. ಜತೆಗೆ ನಿಮ್ಮ ಪೂರ್ಣ ಹೆಸರು, ವ್ಯಾಸಂಗ, ಕಾಲೇಜಿನ ಮಾಹಿತಿ ಕಡ್ಡಾಯ.

ರಾಷ್ಟ್ರಪಿತನ ಆಸರೆ…

ಹಸಿರು ವಾತಾವರಣದ ಮಧ್ಯೆ ‘ಸಬ್ ಕೋ ಸನ್ಮತಿ ದೇ ಭಗವಾನ್…’ ಎಂಬ ಸಾಲುಗಳನ್ನೇ ಧ್ಯಾನಿಸುತ್ತಿರುವ ರಾಷ್ಟ್ರಪಿತ ಮಹಾತ್ಮಾ ಗಾಂಧಿಜೀ ಬೃಹತ್ ಪ್ರತಿಮೆ ಎದುರು ಹೆಮ್ಮೆಯಿಂದ ಪೋಸ್ ಕೊಟ್ಟಿರುವವರು ಕನಕಪುರ ರಸ್ತೆಯ ಐಎಎಂಇ ಕಾಲೇಜಿನ ಚೇತನಾ ಮತ್ತು ಬಳಗ.

ಮಾಸ್ ಲುಕ್

ಬಟ್ಟೆ ಅಂಗಡಿಗೆ ಹೋಗಿ ಬಗೆಬಗೆಯ ಶರ್ಟು, ಜರ್ಕಿನ್, ಸ್ವೆಟರ್​ಗಳಲ್ಲಿ ಇಷ್ಟವಾದುದನ್ನು ಹೆಕ್ಕಿಕೊಂಡು, ಟ್ರಯಲ್ ರೂಮಿನಿಂದಲೇ ಧರಿಸಿದಂತೆ ಭಾಸವಾಗಿ ಪೋಸ್ ಕೊಟ್ಟಿದ್ದಾರೆ ಜಯನಗರದ ವಿಜಯ ಕಾಲೇಜಿನ ಬಿಕಾಂ ದ್ವಿತೀಯ ವರ್ಷದ ವಿದ್ಯಾರ್ಥಿಗಳು. ಚಿತ್ರ ಕಳುಹಿಸಿದವರು ಪವನ್​ಕುಮಾರ್.

ನಮ್ಮ ಒಳನೋಟಗಳು

ಪ್ರಾಚೀನ ಕಾಲದ ದೇವಸ್ಥಾನಗಳು ಆಯಾ ಕಾಲದ ಅರಸರು ಹಾಗೂ ಕಲಾವಿದರ ಅದ್ಭುತ ಒಳನೋಟಗಳಿಂದ ನಿರ್ವಣವಾಗಿರುತ್ತವೆ. ‘ಅವುಗಳನ್ನು ಸಹಜ ಕಣ್ಣುಗಳಿಂದ, ಸೌಜನ್ಯದ ಮನೋಧರ್ಮದಿಂದ ವೀಕ್ಷಿಸಬೇಕು’ ಎಂಬಂತಿರುವವರ ಮಧ್ಯೆ, ಕನ್ನಡಕ ಧರಿಸಿ ಸ್ಟೈಲ್ ಪ್ರದರ್ಶಿಸಿದವರೂ ಇಲ್ಲಿದ್ದಾರೆ. ಬನ್ನೇರುಘಟ್ಟ ರಸ್ತೆಯ ಎಎಂಸಿ ಇಂಜಿನಿಯರಿಂಗ್ ಕಾಲೇಜಿನ ಬಿ.ಎಂ. ಧಮೇಶ್ ರವಾನಿಸಿದ ಚಿತ್ರ ಇದು.

Leave a Reply

Your email address will not be published. Required fields are marked *

Back To Top