Friday, 15th December 2017  

Vijayavani

1. ಸನ್ನಿ ನೈಟ್​ಗೆ ವ್ಯಾಪಕ ವಿರೋಧ ಹಿನ್ನೆಲೆ- ಕಾರ್ಯಕ್ರಮ ರದ್ದುಗೊಳಿಸಿದ ರಾಜ್ಯ ಸರ್ಕಾರ- ಸಾವಿರಾರು ಅಭಿಮಾನಿಗಳಿಗೆ ನಿರಾಸೆ 2. ಆಟೋ ಮತ್ತು ಕಾರಿನ ಮೇಲೆ ಟಿಪ್ಪರ್ ಪಲ್ಟಿ- ಸ್ಥಳದಲ್ಲೇ ಮೂವರ ದುರ್ಮರಣ – ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ 3. ಶನಿಮುಖಿ ಸುನೀಲ್​ಗೆ ಸುಪಾರಿ ಕೇಡು- ವಾರದ ಅಚ್ಚರಿಯಲ್ಲಿ ಕ್ರೈಂ ವರದಿ ಕಿಂಗ್ ಲೇಖನ – ಇನ್ನೂ ಬರೆಯೋದು ಇದೆ ಎಂದ ಬೆಳಗೆರೆ 4. ಜಿಲ್ಲಾಧ್ಯಕ್ಷರ ಬದಲಾವಣೆಗೆ ಪಟ್ಟು- ಜೆಡಿಎಸ್ ಸಭೆಯಲ್ಲಿ ಮಾರಾಮಾರಿ- ಬಾಗಲಕೋಟೆಯಲ್ಲಿ ಕೈ ಕೈ ಮಿಲಾಯಿಸಿದ ಕಾರ್ಯಕರ್ತರು 5. ಗುಜರಾತ್ ವಿಧಾನಸಭೆಯಲ್ಲಿ ಯಾರು ಗೆಲ್ತಾರೆ- ನಾಯಿ ಬೊಗಳುತೈತೆ ಭವಿಷ್ಯ – ವೈರಲ್ ಆಯ್ತು ಬೌಬೌ ವಿಡಿಯೋ
Breaking News :

‘ಕ್ಯಾಂಪಸ್ ಸೆಲ್ಫಿ’, ಇದು ನಿಮ್ಮ ಅಲ್ಬಂ

Sunday, 07.05.2017, 3:00 AM       No Comments

ಕ್ಯಾಂಪಸ್ ಸೆಲ್ಫಿಗೆ ನೀವೂ ನಿಮ್ಮ ಕಾಲೇಜಿನಲ್ಲಿ ತೆಗೆದ ಸೆಲ್ಫಿ ಕಳಿಸಬಹುದು. ಜತೆಗೆ ನಿಮ್ಮ ಪೂರ್ಣ ಹೆಸರು, ವ್ಯಾಸಂಗ, ಕಾಲೇಜಿನ ಮಾಹಿತಿ ಕಡ್ಡಾಯ…

 

ಸ್ನೇಹದ ನಂಟು

‘ನನಗೂ ನಿನಗೂ ಅಂಟಿದ ನಂಟಿನ ಕೊನೆ ಬಲ್ಲವರಾರು’- ಹೀಗೆ ಮನದನ್ನೆಗೆ ಪ್ರಶ್ನಿಸಿ ‘ಸಖಿಗೀತ’ ಕಾವ್ಯ ಕಟ್ಟಿದವರು ವರಕವಿ ಬೇಂದ್ರೆ. ಸ್ನೇಹವೂ ಅಂಥದ್ದೇ ಮತ್ತೊಂದು ನಂಟು. ಗೆಳೆಯರೆಲ್ಲ ಮೈಗೆ ಮೈ ಅಂಟಿಸಿಕೊಂಡು ಆಪ್ತವಾಗಿ ಕುಳಿತರೆ ಸೆಲ್ಪಿ ಕೂಡ ಕ್ಲೀನ್​ಬೌಲ್ಡ್ ಆಗಿಬಿಡುತ್ತೆ! ಈ ಚಿತ್ರ ಕಳಿಸಿದವರು ಜಯನಗರದ ಎಸ್​ಎಸ್​ಎಂಆರ್​ವಿ ಪಿಯು ಕಾಲೇಜಿನ ಸಿಂಧು ನಾಯಕ್.


ಇದ್ದದ್ದು ಇದ್ಹಾಂಗ…

ರೆಡಿ.. ಸ್ಟೆಡಿ.. ಗೋ.. ಎಂದು ಮನಸ್ಸಿನಲ್ಲೇ ಹೇಳಿಕೊಂಡು, ಹಿನ್ನೆಲೆ ಪರಿಸರ ಚೆನ್ನಾಗಿರುವಂತೆ ನೋಡಿಕೊಂಡು ವ್ಯವಸ್ಥಿತವಾಗಿ ಸೆಲ್ಪಿ ತೆಗೆದುಕೊಳ್ಳುವುದು ಹೆಚ್ಚಿನ ವಿದ್ಯಾರ್ಥಿಗಳ ಗುಣ. ಯಲಹಂಕದ ಬೃಂದಾವನ ಇಂಜಿನಿಯರಿಂಗ್ ಕಾಲೇಜಿನ ಬಿಇ ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿ ಲಕ್ಷ್ಮೀಸಾಗರ ಗೆಳೆಯರ ಗ್ಯಾಂಗ್ ಅಂಥ ಯಾವುದೇ ಔಪಚಾರಿಕತೆ ಅನುಸರಿಸದೇ ಇದ್ದದ್ದು ಇದ್ಹಾಂಗ ಎಂಬಂತೆ ಚಿತ್ರದಲ್ಲಿ ಸೆರೆಯಾಗಿದ್ದಾರೆ.


ಬ್ಯಾಲೆನ್ಸ್ ಫಸ್ಟ್!

ಸ್ಟಿಕ್ ಹಿಡಿದುಕೊಂಡು ಸೆಲ್ಪಿ ಕ್ಲಿಕ್ಕಿಸುತ್ತ ಮೊಬೈಲ್​ನ ವ್ಯೂ ಫೈಂಡರ್​ನತ್ತ ದೃಷ್ಟಿ ನೆಡುವಾಗ ನಿಂತವರು ಆಯತಪ್ಪಿ ಬೀಳುವ ಸಾಧ್ಯತೆ ಇರುತ್ತಾ? ಯೂನಿವರ್ಸಲ್ ಕಾಲೇಜಿನ ಎಂಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳು ಬೀಳುವ ಭಯದಿಂದ ಒಬ್ಬರನ್ನೊಬ್ಬರು ಹೇಗೆ ಹಿಡಿದುಕೊಂಡಿದ್ದಾರೆ ನೋಡಿ!

Leave a Reply

Your email address will not be published. Required fields are marked *

Back To Top